ಪತ್ರಗಳು
ಸಮಾಜಕಾರ್ಯ ಕ್ಷೇತ್ರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಈ ವೃತ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಯುತ ರಮೇಶ್ ಮತ್ತು ಅವರ ತಂಡಕ್ಕೆ ಧನ್ಯವಾದಗಳು. ನಾನು ಜೂನ್ 2012ರ ಓಇಖಿ ಇಥಚಿಟ ನಲ್ಲಿ ಉತ್ತೀರ್ಣನಾಗಿದ್ದು, ಇದು ನಿರಾತಂಕದ ಸಹಾಯದಿಂದ ಸಾಧ್ಯವಾಯಿತು ಎಂದು ಹೆಮ್ಮೆಯಿಂದ ಹೇಳಲಿಚ್ಛಿಸುತ್ತೇನೆ. ಇಂಥ ಸಹಾಯ ನಾಡಿನಾದ್ಯಂತ ಇರುವ ಸಮಾಜಕಾರ್ಯ ವೃತ್ತಿಪರರಿಗೆ ಪ್ರತ್ಯಕ್ಷವಾಗಿ/ ಪರೋಕ್ಷವಾಗಿ ಸಹಾಯ ಮಾಡುತ್ತಿರುವ ನಿಮಗೆ ಮತ್ತು ಸ್ಫೂತರ್ಿಯಾಗಿರುವ ಡಾ.ಎಚ್.ಎಂ. ಮರುಳಸಿದ್ಧಯ್ಯನವರಿಗೆ ಧನ್ಯವಾದಗಳು. ಪತ್ರಿಕೆಯಲ್ಲಿ ಬರುತ್ತಿರುವ ಸಂಶೋಧನಾತ್ಮಕ ಲೇಖನಗಳು ತುಂಬ ಅಗತ್ಯಗಳನ್ನು ಸೃಷ್ಟಿಸುತ್ತಿವೆ.
ಮಂಜುನಾಥ
ಹೇರೋಹಳ್ಳಿ, ಬೆಂಗಳೂರು.
ಕನರ್ಾಟಕ ಹಾಗೂ ದೇಶಾದ್ಯಂತ ತಲೆದೂರುತ್ತಿರುವ ಅನೇಕ ಸಾಮಾಜಿಕ ಸಮಸ್ಯೆಗಳಲ್ಲಿ ಬಹುಮುಖ್ಯವಾದ ನಿರುದ್ಯೋಗ ಸಮಸ್ಯೆಯ ನಿವಾರಣೆಯ ಮುಖಾಂತರ ಹೇಗೆ ಜನಸಂಪನ್ಮೂಲಗಳನ್ನು ಉಪಯುಕ್ತವಾಗಿ ಬಳಸಿಕೊಳ್ಳಬಹುದು ಹಾಗೂ ಆ ಮುಖಾಂತರ ಸಮಾಜದ ಅತ್ಯಂತ ಕೆಳವರ್ಗದವರನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂಬುದರ ಸಾರಾಂಶವಾದ ಏಚಿಡಿಟಿಚಿಣಚಿಞಚಿ ಅಠಟಟಣಟಿಣಥಿ ಃಚಿಜಜ ಖಿಚಿಟಿಞ ಒಚಿಟಿಚಿರಜಟಜಟಿಣ ಕಡಿಠರಿಜಛಿಣ ಲೇಖನವು ಸಮಾಜಕಾರ್ಯ ವಿದ್ಯಾಥರ್ಿಗಳಿಗೆ, ವೃತ್ತಿಪರರಿಗೆ ಉಪಯುಕ್ತ ಲೇಖನವಾಗಿದೆ.
ಜ್ಯೋತಿ
ಅಆಕಔ, ಗುಲಬಗರ್ಾ
ಪ್ರಿಯ ಸಂಪಾದಕರಿಗೆ,
ಸಕರ್ಾರದಿಂದ ಬಿಡುಗಡೆಯಾಗುತ್ತಿರುವ ಹಣದಿಂದ ಉಪಯೋಗವಿಲ್ಲದ ಕಾರ್ಯಗಾರದಿಂದ ತಮ್ಮ ಪ್ರತಿಷ್ಠೆ ಹೆಚ್ಚಾಗುತ್ತಿದೆ ಎಂಬ ಭ್ರಮೆಯಲ್ಲಿರುವ ವಿವಿಧ ವಿಶ್ವವಿದ್ಯಾಲಯಗಳ ಅಧ್ಯಾಪಕ ವರ್ಗಗಳಿಗೆ ಸಮಾಜಕಾರ್ಯದ ಹೆಜ್ಜೆಗಳು ಮಾಸ ಪತ್ರಿಕೆಯ ಮಾದರಿಯಾಗಲಿ. ಇನ್ನು ಮುಂದಾದರೂ ವಿದ್ಯಾಥರ್ಿಗಳಿಗೆ ಅನುಕೂಲವಾಗುವಂತಹ ಕಾರ್ಯ ಕ್ರಮಗಳನ್ನು ಸ್ಥಳೀಯ ಭಾಷೆಯಲ್ಲಿ ಹಮ್ಮಿಕೊಂಡು ಜ್ಞಾನ ಪ್ರಸಾರಕ್ಕೆ ನಾಂದಿಯಾಡಲಿ.
ನೊಂದ ವಿದ್ಯಾಥರ್ಿಗಳು
ಡಿಸೆಂಬರ್ ತಿಂಗಳ ಪತ್ರಿಕೆಯು ತುಂಬ ಮೌಲ್ಯಯುತವಾದ ಲೇಖನಗಳನ್ನು ಒಳಗೊಂಡಿದೆ. ವರದಕ್ಷಿಣೆ ಪದ್ದತಿಯ ನಿಷೇಧ ಕಾಯ್ದೆ ಇದ್ದರೂ ಶಿಕ್ಷಿತ ವರ್ಗ ಹೇಗೆ ವರದಕ್ಷಿಣೆಗೆ ಜೋತು ಬೀಳುತ್ತಿದೆ ಎಂಬುದನ್ನ ತಮ್ಮದೇ ಅಭಿಪ್ರಾಯದಲ್ಲಿ ವ್ಯಕ್ತಪಡಿಸಿರುವ ಲೇಖಕರಿಗೆ ಧನ್ಯವಾದಗಳು.
ರಾಮಚಂದ್ರ
ವಿದ್ಯಾಥರ್ಿ
ಸಮಾಜಕಾರ್ಯ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ,
ಬೆಂಗಳೂರು.
ಡಾ. ಎಚ್.ಎಂ. ಮರುಳಸಿದ್ಧಯ್ಯನವರು ಅನುವಾದಿಸಿರುವ ಮುಖಜರ್ಿ ಮತ್ತು ಸಾಮಾಜಿಕ ಮೌಲ್ಯಗಳು ಲೇಖನವು ತುಂಬ ಸಂದರ್ಭದಲ್ಲಿ ಮೂಡಿಬಂದ ಲೇಖನವಾಗಿದ್ದು. ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ ಎಂಬ ಗಾದೆ ಮಾತಿನಂತೆ ಇತ್ತು. ಪ್ರಸ್ತುತ ಸಮಾಜಕ್ಕೆ ಬೇಕಾಗಿರುವ ಮೌಲ್ಯಗಳ ಬಗ್ಗೆ ಮತ್ತು ಅವುಗಳ ಪ್ರಾದೇಶಿಕ ನೆಲೆಗಳು ಮತ್ತು ಸಂಕೇತಗಳ ಬಗ್ಗೆ ಎಳೆ ಎಳೆಯಾಗಿ ಚಿತ್ರಿಸಿದ್ದಾರೆ. ವ್ಯಕ್ತಿತ್ವ ಮತ್ತು ಮೌಲ್ಯಗಳು ಹೇಗೆ ಸಮಾಜದ ಅಭಿವೃದ್ಧಿಗೆ ಸಹಾಯಕವಾಗಿ ಸಮಾಜದ ಸಾಮಾನ್ಯ ಸಿದ್ಧಾಂತವಾಗಿ ಮಾರ್ಪಡಬೇಕು ಎಂಬುದನ್ನು ವಿವರಿಸುವ ಅವರಿಗೆ ನನ್ನ ಧನ್ಯವಾದಗಳು ಹಾಗೂ ಪತ್ರಿಕೆಗೆ ಶುಭ ಹಾರೈಕೆಗಳು.
ಮಹೇಶ್ ಕುಮಾರ್
ಸಮಾಜಶಾಸ್ತ್ರ ಉಪನ್ಯಾಸಕರು,
ಮದ್ದೂರು
ಹೆಣ್ಣು ಭ್ರೂಣ ಹತ್ಯೆಯ ಸಂಖ್ಯಾ ಪ್ರಮಾಣವು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದು ಅದಕ್ಕೆ ಕಾರಣಗಳನ್ನು 'ಈಜಟಚಿಟಜ ಜಿಠಜಣಛಿಜಜ' ಲೇಖನದಲ್ಲಿ ಸವಿಸ್ತಾರವಾಗಿ ವಿವರಿಸಲಾಗಿದೆ. ಇದು ಭಾರತದ ಸಾಮಾಜಿಕ ಸ್ಥಿತಿಯನ್ನು ಪ್ರತಿಬಿಂಬಿಸುವಂತಿದೆ, ಈ ಅಪರಾಧಗಳಿಗಿರುವ ಕಾನೂನು ಕ್ರಮಗಳ ಬಗ್ಗೆ ವಿವರವಾಗಿ ಹೇಳಿದ್ದು ಅದರ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ತಿಳಿಸಿಕೊಟ್ಟಿರುವ ಲೇಖಕರಿಗೆ ಧನ್ಯವಾದಗಳು.
ರೂಪ
ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜು, ಬೆಂಗಳೂರು.
No comments:
Post a Comment