Showing posts with label KANNADA ARTICLE. Show all posts
Showing posts with label KANNADA ARTICLE. Show all posts

Friday, August 23, 2013

ಸ್ವಾಮಿ ವಿವೇಕಾನಂದ ಎಂಬ ಮನುಷ್ಯ ಹೀಗಿದ್ದರು....

ಸ್ವಾಮಿ ವಿವೇಕಾನಂದ ಎಂಬ ಮನುಷ್ಯ ಹೀಗಿದ್ದರು....

ದಿನೇಶ್ ಅಮೀನ್ ಮಟ್ಟು



ಸ್ವಾಮಿ ವಿವೇಕಾನಂದರು ಒಬ್ಬ `ದಡ್ಡ` ವಿದ್ಯಾರ್ಥಿಯಾಗಿದ್ದರು. `ವಿದ್ಯಾರ್ಥಿಗಳಿಗೆ ಬೋಧಿಸಲು ಬರುವುದಿಲ್ಲ` ಎಂಬ ಕಾರಣಕ್ಕೆ ಶಿಕ್ಷಕನ ಉದ್ಯೋಗ ಕಳೆದುಕೊಂಡಿದ್ದರು.

ಹುಟ್ಟಿನಿಂದಲೇ ರೋಗಿಷ್ಠರಾಗಿದ್ದ ಅವರು ಸಾಯುವ ಹೊತ್ತಿಗೆ ಒಂದೆರಡಲ್ಲ, ಮೂವತ್ತೊಂದು ಬಗೆಯ ರೋಗಗಳಿಂದ ಬಳಲಿ ಹೋಗಿದ್ದರು. ಎಲ್ಲ ಬಂಗಾಳಿಗಳಂತೆ ಅವರೊಬ್ಬ ಮಹಾ ತಿಂಡಿಪೋತರಾಗಿದ್ದರು.

ಜೀವನದ ಕೊನೆಯ ದಿನದವರೆಗೂ ಅವರು ಮಾಂಸಾಹಾರಿ ಆಗಿದ್ದರು. ಜತೆಗೆ ದೇಶ-ವಿದೇಶದ ಮಾಂಸಾಹಾರಿ ಅಡುಗೆಯನ್ನು ಮಾಡುವ ಪಾಕಪ್ರಾವೀಣ್ಯತೆ ಹೊಂದಿದ್ದರು. ವ್ಯಸನಿಯಂತೆ ಸಿಗರೇಟ್-ಹುಕ್ಕಾ ಸೇದುವ ಧೂಮಪಾನಿಯಾಗಿದ್ದರು. ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಎಲ್ಲರ ಮನೆಯಲ್ಲಿ ಭೇದ ಇಲ್ಲದೆ ಊಟ ಮಾಡುತ್ತಿದ್ದರು.

ಸನ್ಯಾಸಿಯಾಗಿದ್ದುಕೊಂಡೇ ಅವರು ಅಮೆರಿಕದ ಪ್ರಖ್ಯಾತ ಹೋಟೆಲ್‌ಗಳಲ್ಲಿ ರಾತ್ರಿಯಿಂದ ಬೆಳಗಿನ ಜಾವದವರೆಗೆ ನಡೆಯುವ ಔತಣಕೂಟಗಳಲ್ಲಿ ಭಾಗವಹಿಸುತ್ತಿದ್ದರು....ಹೀಗೆ ಹೇಳುತ್ತಾ ಹೋದರೆ ಸ್ವಾಮಿ ವಿವೇಕಾನಂದರನ್ನು `ಹಿಂದೂ ಧರ್ಮದ ವೀರ ಸನ್ಯಾಸಿ` ಎಂದು ಕೊಂಡಾಡುತ್ತಾ ಅವರ 150ನೇ ಜಯಂತಿ ಆಚರಣೆಯ ಸಂಭ್ರಮದಲ್ಲಿ ಮುಳುಗಿರುವವರಿಗೆ ಆಘಾತವಾದೀತು! ಆದರೆ ಇದು ಸತ್ಯ.


ಒಬ್ಬ ಶೂದ್ರನಾಗಿ ಹಿಂದೂ ಧರ್ಮದ ಪರಂಪರೆಗೆ ವಿರುದ್ಧವಾಗಿ ಸನ್ಯಾಸಿ ದೀಕ್ಷೆ ಪಡೆದ ವಿವೇಕಾನಂದರು, ಅದೇ ಪರಂಪರೆಯನ್ನು ಧಿಕ್ಕರಿಸಿ ಸಮುದ್ರ ಲಂಘನ ಮಾಡಿದ್ದರು.

ಸನಾತನಿಗಳು ದ್ವೇಷಿಸುತ್ತಿದ್ದ `ಮ್ಲೇಚ್ಛರ` ಮನೆಗಳಲ್ಲಿಯೇ ಉಳಿದು ಉಂಡು ದಿನ ಕಳೆದಿದ್ದರು. ಇದಕ್ಕಾಗಿಯೇ ಚಿಕಾಗೋ ಧರ್ಮ ಸಮ್ಮೇಳನಕ್ಕೆ ಹೋಗಿ ಹಿಂದಿರುಗಿದ ಅವರನ್ನು ಸ್ವಾಗತಿಸಲು ರಚಿಸಿದ ಸಮಿತಿಗೆ ಅಧ್ಯಕ್ಷರಾಗಲು ಹೈಕೋರ್ಟ್ ನ್ಯಾಯಮೂರ್ತಿ ಗುರುದಾಸ್ ಮುಖರ್ಜಿ ನಿರಾಕರಿಸಿದ್ದರು.

ಸನ್ಯಾಸಿಯಾದ ನಂತರವೂ ಬಹಳಷ್ಟು ಮೇಲ್ಜಾತಿ ಗಣ್ಯರು ಅವರನ್ನು `ಸೋದರ`ನೆಂದು ಕರೆಯುತ್ತಿದ್ದರೇ ಹೊರತು `ಸ್ವಾಮಿ` ಎನ್ನುತ್ತಿರಲಿಲ್ಲ. ಹಿಂದೂ ಧರ್ಮದ ಜಾತೀಯತೆ, ಅಸ್ಪೃಶ್ಯತೆ, ಅಂಧ ಸಂಪ್ರದಾಯಗಳು, ದೇವಾಲಯಗಳಲ್ಲಿ ನಡೆಯುತ್ತಿರುವ ಡಾಂಭಿಕತನ, ಮತಾಂತರದ ಬಗ್ಗೆ ಅವರು ಬರೆದುದನ್ನು ಓದಿದರೆ ಅವರೊಬ್ಬ ಹಿಂದು ವಿರೋಧಿ ಎಂದು ಹಿಂದುತ್ವದ ಉಗ್ರ ಪ್ರತಿಪಾದಕರು ಸುಲಭದಲ್ಲಿ ಆರೋಪಿಸಬಹುದು.

`ತಲೆ ಮೇಲು, ಕಾಲು ಕೀಳು` ಎಂದೆಲ್ಲ ಮನುಷ್ಯನ ಅಂಗಾಂಗಳಲ್ಲಿಯೇ ತಾರತಮ್ಯ ಕಾಣುತ್ತಿದ್ದ ಹಿಂದುಗಳ ನಡವಳಿಕೆಯಿಂದ ರೋಸಿಹೋಗಿದ್ದ ಅವರು, ಮನುಷ್ಯನಿಗೆ `ಮುಸ್ಲಿಂ ದೇಹ ಮತ್ತು ವೇದಾಂತದ ಮೆದುಳು` ಇರಬೇಕೆಂದು ಹೇಳುತ್ತಿದ್ದರು.

ಮುಸ್ಲಿಂ ಮನೆಯಲ್ಲಿ ಊಟಮಾಡಿದ್ದಕ್ಕಾಗಿ ಆಕ್ಷೇಪ ವ್ಯಕ್ತಪಡಿಸಿದ್ದ ಅವರ ಅಭಿಮಾನಿ ಖೇತ್ರಿಯ ಮಹಾರಾಜನಿಗೆ ವಿವೇಕಾನಂದರು `ನಾನು ಭಂಗಿಗಳ ಜತೆ ಕೂತು ಕೂಡಾ ಊಟಮಾಡಬಲ್ಲೆ. ನಿಮ್ಮಂತಹವರ ಬಗ್ಗೆ ನಾನು ಹೆದರಲಾರೆ. ನಿಮಗೆ ದೇವರು ಇಲ್ಲವೇ ಧರ್ಮದ ಬಗ್ಗೆ ಗೊತ್ತಿಲ್ಲ` ಎಂದು ತಿರುಗೇಟು ನೀಡಿದ್ದರು.

`ಜೀಸಸ್ ಬದುಕಿದ್ದ ದಿನಗಳಲ್ಲಿ ನಾನೇನಾದರೂ ಪ್ಯಾಲೆಸ್ತೀನ್‌ನಲ್ಲಿದ್ದಿದ್ದರೆ ಕಣ್ಣಿರಿನಿಂದಲ್ಲ, ನನ್ನ ಹೃದಯದಿಂದ ರಕ್ತಬಸಿದು ಆತನ ಪಾದ ತೊಳೆಯುತ್ತಿದ್ದೆ..` ಎಂದು ಭಾವುಕರಾಗಿ ಅವರು ಬರೆದುಕೊಂಡಿದ್ದಾರೆ.

ಹಿಂದೂಗಳು ಮುಸ್ಲಿಂ ದೊರೆಗಳ ಪ್ರಭಾವ ಮತ್ತು ಬಲವಂತದಿಂದಾಗಿ ಮತಾಂತರಗೊಂಡರು ಎನ್ನುವುದನ್ನು ಅವರು ಒಪ್ಪುತ್ತಿರಲಿಲ್ಲ.

ಹಿಂದೂ ಧರ್ಮದ ಒಳಗಿನ ಜಾತೀಯತೆ, ಅಸ್ಪೃಶ್ಯತೆ, ಶೋಷಣೆ ಇದಕ್ಕೆ ಕಾರಣ. ಮೂಲಭೂತವಾದ ಮಾನವಹಕ್ಕುಗಳು ಮತ್ತು ವ್ಯಕ್ತಿ ಘನತೆಯನ್ನು ಗೌರವಿಸದೆ ಇರುವ ಧರ್ಮ ಅಲ್ಲವೇ ಅಲ್ಲ, ಅದು `ಪ್ರೇತ ನೃತ್ಯ`, ಅದು ನಡೆಯುವ ಸ್ಥಳ ನರಕ` ಎಂದು ಹೇಳಿದ್ದರು.

`ಧರ್ಮ-ಧರ್ಮಗಳ ನಡುವೆ ಸಹನೆಯಷ್ಟೇ ಇದ್ದರಷ್ಟೇ ಸಲ್ಲದು, ಅವುಗಳನ್ನು ಸತ್ಯ ಎಂದು ಒಪ್ಪಿಕೊಳ್ಳಬೇಕು, ಗುರು ರಾಮಕೃಷ್ಣ ಪರಮಹಂಸರಿಂದ ನಾನು ಇದನ್ನೇ ಕಲಿತದ್ದು` ಎಂದು ಅವರು ಬರೆದಿದ್ದಾರೆ.

ವಿವೇಕಾನಂದರ ಬಗ್ಗೆ ನಮ್ಮಲ್ಲಿ ಇನ್ನಷ್ಟು ಗೌರವ-ಅಭಿಮಾನ ಹುಟ್ಟಿಸುವ ಈ `ಮನುಷ್ಯ ಮುಖ`ವನ್ನು ಅವರ 150ನೇ ಜಯಂತಿ ಆಚರಣೆಯಲ್ಲಿ ಬಿಂಬಿಸಲಾಗುತ್ತಿರುವ `ಉತ್ಸವಮೂರ್ತಿ`ಯಲ್ಲಿ ಕಾಣಲು ಹೋದರೆ ನಿರಾಶೆಯಾಗುತ್ತದೆ.

ಕೇವಲ 39 ವರ್ಷ, ಐದು ತಿಂಗಳು ಮತ್ತು 24 ದಿನ ಬದುಕಿದ್ದ ಮತ್ತು 24ರ ಹರಯದಲ್ಲಿಯೇ ಸನ್ಯಾಸ ಸ್ವೀಕರಿಸಿದ್ದ ವಿವೇಕಾನಂದರನ್ನು ಅವರ ಸಾವಿನ 110 ವರ್ಷಗಳ ನಂತರವೂ ನಮಗೆ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲವೇನೋ ಎಂದು ಅನಿಸತೊಡಗುತ್ತದೆ.

ಇತ್ತೀಚಿನ ವರ್ಷಗಳಲ್ಲಿ ವಿವೇಕಾನಂದರನ್ನು ಹಿಂದೂ ಧರ್ಮದ `ಬ್ರಾಂಡ್ ಅಂಬಾಸಿಡರ್` ಆಗಿ ಬಿಂಬಿಸುವ ಭರದಲ್ಲಿ ಅವರ ಮೇಲೆ ಇಲ್ಲಸಲ್ಲದ ಗುಣ-ವಿಶೇಷ, ಶಕ್ತಿ -ಸಾಮರ್ಥ್ಯಗಳನ್ನು ಆರೋಪಿಸಿ ದೇವರ ಪಟ್ಟಕ್ಕೆ ಏರಿಸಲಾಗುತ್ತಿದೆ.

ಇದೇನು ಹೊಸದಲ್ಲ. ಧಾರ್ಮಿಕ ಸುಧಾರಣೆಯ ಮೂಲಕವೇ ಸಮಾಜವನ್ನು ಸುಧಾರಿಸಲು ಹೊರಟವರನ್ನೆಲ್ಲ ನಾವು `ದೇವರು` ಮಾಡಿ ನಮ್ಮ ಕೈಗೆ ಎಟುಕದಷ್ಟು ದೂರದಲ್ಲಿರಿಸಿದ್ದೇವೆ.

ದೇವರ ಅವತಾರವಾಗದೆ ಕೇವಲ ಮನುಷ್ಯನಾಗಿ ಹುಟ್ಟಿ ಅಷ್ಟೊಂದು ಎತ್ತರಕ್ಕೆ ಬೆಳೆಯಲು ಸಾಧ್ಯ ಇಲ್ಲ ಎಂಬ ನಂಬಿಕೆಯನ್ನು ನಮ್ಮ ಅನೇಕ ಧಾರ್ಮಿಕ ನಾಯಕರು ಮತ್ತು ಧಾರ್ಮಿಕ ನಾಯಕರ ಸೋಗಿನ ರಾಜಕಾರಣಿಗಳು ಬಿತ್ತುತ್ತಾ, ಬೆಳೆಸುತ್ತಾ ಸಾಗಿದ್ದಾರೆ.

ಬುದ್ಧ-ಬಸವನಿಂದ ಹಿಡಿದು ವಿವೇಕಾನಂದ-ನಾರಾಯಣ ಗುರುಗಳವರೆಗೆ ಎಲ್ಲರನ್ನೂ ಅವರವರ ಭಕ್ತ ಸಮೂಹ ದೇವರುಗಳಾಗಿ ಮಾಡಿ ಪೂಜೆ-ಭಜನೆಗಳಲ್ಲಿ ಮುಳುಗಿಸಿ ಬಿಟ್ಟಿದ್ದಾರೆ. ಈ ಆರಾಧನೆಯ ಭರದಲ್ಲಿ ಆ ಮಹನೀಯರ ನಿಜವಾದ ಬದುಕು ಮತ್ತು ಚಿಂತನೆಯ ವಿವರಗಳೆಲ್ಲ ಇತಿಹಾಸದ ಪುಟಗಳಲ್ಲಿ ಎಲ್ಲೋ ಹೂತುಹೋಗಿರುತ್ತವೆ.

ಪ್ರಖ್ಯಾತ ಬಂಗಾಳಿ ಸಾಹಿತಿ ಮಣಿ ಸಂಕರ್ ಮುಖರ್ಜಿ ಅವರ `ದಿ ಮಾಂಕ್ ಆ್ಯಸ್ ಮ್ಯಾನ್` ಎನ್ನುವ ಪುಸ್ತಕವನ್ನು ಕಳೆದ ವರ್ಷ ಪೆಂಗ್ವಿನ್ ಪ್ರಕಾಶನ ಪ್ರಕಟಿಸಿದೆ. ಇದು ಎಂಟು ವರ್ಷಗಳ ಹಿಂದೆ ಪ್ರಕಟವಾದ ಸಂಶೋಧನೆ ಆಧಾರಿತ ಬಂಗಾಳಿ ಭಾಷೆಯ ಪುಸ್ತಕದ ಇಂಗ್ಲಿಷ್ ಅನುವಾದ (ಸಂಕರ್ ಅವರ `ಸೀಮಾಬದ್ದ` ಮತ್ತು `ಜನ ಅರಣ್ಯ` ಕಾದಂಬರಿಗಳನ್ನು ಸತ್ಯಜಿತ್ ರೇ ಚಲನಚಿತ್ರ ಮಾಡಿದ್ದರು).

ವಿವೇಕಾನಂದರ ತತ್ವ-ಸಿದ್ಧಾಂತಗಳ ಜತೆ ಅವರ ಖಾಸಗಿ ಬದುಕಿನ ಅಪರಿಚಿತ ಮುಖವನ್ನು ಸಂಕರ್ ಅವರ ಪುಸ್ತಕ, ತಮ್ಮಂದಿರಾದ ಮಹೇಂದ್ರನಾಥ ದತ್ತಾ ಮತ್ತು ಡಾ. ಭೂಪೇಂದ್ರನಾಥ ದತ್ತಾ ಅವರು ಅಣ್ಣನ ಬಗ್ಗೆ ಬರೆದ ಪುಸ್ತಕಗಳು ಹಾಗೂ ಸೋದರಿ ನಿವೇದಿತಾ ಅವರ ಲೇಖನಗಳು ತೆರೆದಿಡುತ್ತದೆ.

ಮುಂದೊಂದು ದಿನ ವಿದೇಶಿ ನೆಲದಲ್ಲಿ ನಿಂತು ತನ್ನಲ್ಲಿರುವ ಜ್ಞಾನ ಮತ್ತು ಇಂಗ್ಲಿಷ್ ಭಾಷಾ ಪಾಂಡಿತ್ಯದಿಂದ ಅಲ್ಲಿನ ಇಂಗ್ಲಿಷ್ ಭಾಷಿಕರ ಮಂತ್ರಮುಗ್ಧಗೊಳಿಸಿದ್ದ ವಿವೇಕಾನಂದರು ಇಂಟರ್‌ಮಿಡಿಯೇಟ್ ಮತ್ತು ಬಿಎ ಪದವಿಯ ಇಂಗ್ಲಿಷ್ ಪರೀಕ್ಷೆಗಳಲ್ಲಿ ಗಳಿಸಿದ್ದ ಅಂಕ ಕ್ರಮವಾಗಿ ಶೇಕಡಾ 46 ಮತ್ತು ಶೇಕಡಾ 56. ಬಿಎ ಪರೀಕ್ಷೆಯ ಒಟ್ಟು 500 ಅಂಕಗಳಲ್ಲಿ ಗಳಿಸಿದ್ದು ಕೇವಲ 261. (ಸಂಸ್ಕೃತದಲ್ಲಿ 43 ಮತ್ತು ತತ್ವಶಾಸ್ತ್ರದಲ್ಲಿ 45).

ತಂದೆಯ ಸಾವಿನ ನಂತರ ಅನಿವಾರ‌್ಯವಾಗಿ ಉದ್ಯೋಗ ಮಾಡಬೇಕಾಗಿ ಬಂದ ವಿವೇಕಾನಂದರು ಮೊದಲು ಕೆಲಸಕ್ಕೆ ಸೇರಿದ್ದು ಈಶ್ವರಚಂದ್ರ ವಿದ್ಯಾಸಾಗರ ಅವರು ನಡೆಸುತ್ತಿದ್ದ ಶಿಕ್ಷಣ ಸಂಸ್ಥೆಯಲ್ಲಿ. ಅಲ್ಲಿ ಇವರನ್ನು ಮಕ್ಕಳಿಗೆ ಪಾಠ ಹೇಳಲು ಬರುವುದಿಲ್ಲ ಎನ್ನುವ ಕಾರಣ ನೀಡಿ ಸ್ವತಃ ಈಶ್ವರಚಂದ್ರರೇ ಕೆಲಸದಿಂದ ವಜಾಗೊಳಿಸಿದ್ದರು.

ಭುವನೇಶ್ವರಿ ದೇವಿ ಎಂಬ ತಾಯಿ ಇಲ್ಲದೆ ಹೋಗಿದ್ದರೆ ಜಗತ್ತಿಗೆ ವಿವೇಕಾನಂದರು ಸಿಗುತ್ತಿರಲಿಲ್ಲವೇನೋ? ಕೋಲ್ಕತ್ತಾದ ಸಾವಿರಾರು ನರೇಂದ್ರನಾಥರಲ್ಲಿ ಒಬ್ಬರಾಗಿ ಅವರು ಹುಟ್ಟಿ ಸಾಯುತ್ತಿದ್ದರು.

ವಿವೇಕಾನಂದರು ಮೂಲತಃ ಶ್ರಿಮಂತ ಕುಟುಂಬಕ್ಕೆ ಸೇರಿದವರಾಗಿದ್ದರೂ ತಂದೆಯ ಅಕಾಲಮೃತ್ಯುವಿನ ನಂತರ ಆಸ್ತಿಯನ್ನೆಲ್ಲ ದಾಯಾದಿಗಳು ಕಬಳಿಸಿದ ಕಾರಣ ಇಡೀ ಕುಟುಂಬ ಬೀದಿ ಪಾಲಾಗುತ್ತದೆ. ಹನ್ನೊಂದು ಮಕ್ಕಳಲ್ಲಿ ಇವರೇ ದೊಡ್ಡ ಗಂಡುಮಗನಾದ ಕಾರಣ ಸಂಸಾರ ನಿರ್ವಹಣೆ ನರೇಂದ್ರನಾಥನ ಪುಟ್ಟ ಹೆಗಲಮೇಲೆ ಬೀಳುತ್ತದೆ.

ನಿರುದ್ಯೋಗಿಯಾಗಿ ಹರಕಲು ಅಂಗಿ-ಪೈಜಾಮ ಹಾಕಿ ಬೀದಿ ಸುತ್ತುತ್ತಿದ್ದ ಅವರು ಎಷ್ಟೋ ಬಾರಿ ಉಪವಾಸ ಇರುತ್ತಿದ್ದರಂತೆ. ಕುಟುಂಬದ ಆಸ್ತಿಗಾಗಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಹೋರಾಟ ಸತತ ಹದಿನೇಳು ವರ್ಷ ನಡೆದು ವಿವೇಕಾನಂದರ ಸಾವಿನ ಹಿಂದಿನ ತಿಂಗಳಷ್ಟೇ ಇತ್ಯರ್ಥವಾಗಿತ್ತು.

ಕುಟುಂಬದ ಕಷ್ಟಗಳನ್ನು ತಾಯಿಯ ಹೆಗಲ ಮೇಲೆ ಹಾಕಿ ವಿವೇಕಾನಂದರು ಸಂಸಾರ ತೊರೆದು ಸನ್ಯಾಸಿಯಾಗುತ್ತಾರೆ. ಕಷ್ಟ ಕಾಲದಲ್ಲಿ ಕೈಬಿಟ್ಟು ಹೋದ ಎಂದು ಮಗನನ್ನು ತಾಯಿ ಭುವನೇಶ್ವರಿದೇವಿ ದ್ವೇಷಿಸಲಿಲ್ಲ, `ನನ್ನ ಮಗ 24ನೇ ವರ್ಷಕ್ಕೆ ಸನ್ಯಾಸಿಯಾದ` ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾ ಇದ್ದರು.

ಮಗ ಸತ್ತನಂತರ ಎಂಟು ವರ್ಷ ಬದುಕಿದ್ದ ತಾಯಿ ಖೇತ್ರಿ ಮಹಾರಾಜ ಕೊಡುತ್ತಿದ್ದ ಮಾಸಿಕ ನೂರು ರೂಪಾಯಿಯಲ್ಲಿ ಕಡು ಕಷ್ಟದಲ್ಲಿಯೇ ಜೀವನ ಸಾಗಿಸಿದ್ದರು.

ಈಗ ವಿವೇಕಾನಂದರನ್ನು ತಲೆಮೇಲಿಟ್ಟು ಮೆರೆದಾಡಲಾಗುತ್ತಿದ್ದರೂ ಬದುಕಿದ್ದಾಗ ಭಾರತೀಯರು ಅವರಿಗೆ ಹೆಚ್ಚು ನೆರವಾಗಿರಲಿಲ್ಲ. `ಪ್ರತಿ ಬಾರಿ ವಿದೇಶಿಯರಲ್ಲಿಯೇ ಭಿಕ್ಷೆ ಕೇಳಲೇನು` ಎಂದು ಅವರೊಮ್ಮೆ ಬೇಸರದಿಂದ ಪ್ರಶ್ನಿಸಿದ್ದರು.

`ವಿಶಾಲವಾದ ಎದೆ, ಬಲಿಷ್ಠವಾದ ತೋಳುಗಳು, ಕಾಂತಿಯುತ ಕಣ್ಣುಗಳು...` ಎಂದೆಲ್ಲ ವಿವೇಕಾನಂದರನ್ನು ಹಿಂದೂ ಧರ್ಮದ `ಹೀ ಮ್ಯಾನ್` ಎಂಬಂತೆ ಬಣ್ಣಿಸುವವರಿಗೆ ಅವರು ಹುಟ್ಟುರೋಗಿಯಾಗಿದ್ದರೆಂದು ಗೊತ್ತಿದೆಯೋ ಇಲ್ಲವೋ? ತೀವ್ರ ತಲೆನೋವಿನಿಂದ ಹಿಡಿದು ಹೃದಯದ ಕಾಯಿಲೆವರೆಗೆ ಅವರಿಗೆ 31 ಬಗೆಯ ರೋಗಗಳಿದ್ದವು.

ಮೂತ್ರಕೋಶ, ಲಿವರ್, ಗಂಟಲು ಸಂಬಂಧಿ ರೋಗಗಳಲ್ಲದೆ ರಕ್ತದೊತ್ತಡ, ಮಧುಮೇಹ, ಆಸ್ತಮಾ, ಅಜೀರ್ಣ, ಮಲಬದ್ಧತೆ, ಭೇದಿ, ನರದೌರ್ಬಲ್ಯ, ಮಂಡಿನೋವು, ಕಾಲುಬಾವು ಎಲ್ಲವೂ ಅವರನ್ನು ಕಾಡುತ್ತಿತ್ತು. ಪ್ರಾರಂಭದಿಂದಲೇ ನಿದ್ರಾಹೀನತೆಯಿಂದ ಬಳಲುತ್ತಿದ್ದ ಅವರು ಕೊನೆಯ ದಿನಗಳಲ್ಲಿ, ದಿನದಲ್ಲಿ ಒಂದೆರಡು ಗಂಟೆಗಳ ಕಾಲವೂ ನಿದ್ದೆ ಮಾಡಲಾಗುತ್ತಿರಲಿಲ್ಲ.

ಯಾರಾದರೂ ಮುಟ್ಟಿದರೆ ಮೈಯೆಲ್ಲ ನೋಯುತ್ತಿತ್ತು. `ನನ್ನ ಕೂದಲು-ಗಡ್ಡಗಳೆಲ್ಲ ವಯಸ್ಸಿಗೆ ಮೊದಲೇ ಬೆಳ್ಳಗಾಗಿ ಹೋಗಿದೆ, ಮುಖದ ಚರ್ಮ ಸುಕ್ಕುಗಟ್ಟಿ ನೆರಿಗೆಗಳು ಮೂಡಿವೆ` ಎಂದು ತನ್ನ 34ನೇ ವಯಸ್ಸಿನಲ್ಲಿ ಶಿಷ್ಯೆ ಮೇರಿ ಹೇಲ್‌ಗೆ ಬರೆದ ಪತ್ರದಲ್ಲಿ ಅವರು ಹೇಳಿಕೊಂಡಿದ್ದಾರೆ.

ಅನಾರೋಗ್ಯದಿಂದ ಬೇಸತ್ತು ಹೋಗಿದ್ದ ಅವರು, ಒಂದು ದಿನ `ದಯಾಮರಣದ ಮೂಲಕವಾದರೂ ನನಗೆ ಸಾವು ನೀಡಿ, ರೇಸ್‌ನಲ್ಲಿ ಓಡಲಾಗದ ಕುಂಟು ಕುದುರೆಯಂತಾಗಿದ್ದೇನೆ ನಾನು. ಈ ನೋವು-ಸಂಕಟ ಸಹಿಸಲಾರೆ` ಎಂದು ಹತಾಶೆಯಿಂದ ಹೇಳಿದ್ದನ್ನು ಸೋದರಿ ನಿವೇದಿತಾ ದಾಖಲಿಸಿದ್ದಾರೆ..

ಈ ಎಲ್ಲ ರೋಗಗಳ ನಡುವೆಯೂ ಅವರ ನಾಲಗೆಯ ಚಪಲ ಮಾತ್ರ ಕಡಿಮೆಯಾಗಿರಲಿಲ್ಲ. ಎಲ್ಲ ಬಂಗಾಳಿಗಳಂತೆ ಅವರೊಬ್ಬ ತಿಂಡಿಪೋತರಾಗಿದ್ದರು. `ನಾನು ಠಾಕೂರ್ (ಪರಮಹಂಸ) ಅವರಿಗೆ ಬಿಸಿನೀರಿನಲ್ಲಿ ಮಸಾಲೆಯ ಜತೆ ಮಾಂಸದ ತುಂಡುಗಳನ್ನು ಹಾಕಿ ಬೇಯಿಸಿ ಪಲ್ಯ ಮಾಡಿಕೊಡುತ್ತಿದ್ದೆ. ಆದರೆ ನರೇನ್ (ವಿವೇಕಾನಂದ) ಮಾತ್ರ ಮಾಂಸದ ಅಡುಗೆಯನ್ನು ಬಗೆಬಗೆಯಲ್ಲಿ ಮಾಡುತ್ತಿದ್ದ` ಎಂದು ಶಾರದಾದೇವಿ ಬರೆದಿದ್ದಾರೆ.

ದೇಶ-ವಿದೇಶಗಳ ಮಾಂಸಾಹಾರಿ ಅಡುಗೆಯನ್ನು ಮಾಡುವ ಅವರ ಪಾಕಪ್ರಾವೀಣ್ಯತೆ ಬಗ್ಗೆ ಸೋದರಿ ನಿವೇದಿತಾ ವಿವರವಾಗಿ ದಾಖಲಿಸಿದ್ದಾರೆ. ಅವರ ಸಾವಿನ ದಿನವೇ ಮಳೆಗಾಲದ ಮೊದಲ ಅತಿಥಿಗಳಾಗಿ `ಹಿಲ್ಸಾ` ಮೀನುಗಳು ಹೂಗ್ಲಿ ನದಿ ಪ್ರವೇಶಿಸಿದ್ದವು. ಅದನ್ನು ತಂದು ಪಲ್ಯಮಾಡಿ ಮಧ್ಯಾಹ್ಮ ಊಟ ಮಾಡಿ ವಿರಮಿಸಿದ್ದ ಅವರು ರಾತ್ರಿ ಕೊನೆಯುಸಿರೆಳೆದಿದ್ದರು.

ಅಕಾಡೆಮಿಕ್ ಮಾನದಂಡಗಳ ಪ್ರಕಾರ ದಡ್ಡರಾಗಿರುವ, ಹತ್ತಾರು ಬಗೆಯ ಕಾಯಿಲೆಗಳಿಂದ ನರಳುತ್ತಿರುವ, ಕುಟುಂಬದ ಕಷ್ಟಗಳಿಂದ ಜರ್ಝರಿತರಾಗಿರುವ, ತಿಂಡಿಪೋತರಾಗಿರುವ ಸಾಮಾನ್ಯ ವ್ಯಕ್ತಿಗಳು ಕೂಡಾ `ವಿವೇಕಾನಂದ`ನಾಗಿ ಬೆಳೆಯಲು ಸಾಧ್ಯ ಎಂಬುದನ್ನು ನರೇಂದ್ರನಾಥ ತನ್ನ ಸಾಧನೆ ಮೂಲಕ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.

ಇಷ್ಟೆಲ್ಲ ಕಷ್ಟ-ಕಾಯಿಲೆಗಳ ನಡುವೆಯೂ ಹಿಂದೂ ಧರ್ಮವೂ ಸೇರಿದಂತೆ ಜಗತ್ತಿನ ಎಲ್ಲ ಧರ್ಮಗಳ ಗ್ರಂಥಗಳು ಮತ್ತು ತತ್ವಜ್ಞಾನವನ್ನು ಅವರು ಅಧ್ಯಯನ ಮಾಡಿದ್ದರು. ದೇಶ-ವಿದೇಶಗಳಿಗೆ ಭೇಟಿ ನೀಡಿ ಭಾಷಣ ಮಾಡುತ್ತಿದ್ದರು, ನಿರಂತರವಾಗಿ ಪುಸ್ತಕ ಮತ್ತು ಪತ್ರಗಳನ್ನು ಬರೆಯುತ್ತಿದ್ದರು.

ಸಾವಿರಾರು ಶಿಷ್ಯರನ್ನು, ಕೋಟ್ಯಂತರ ಅನುಯಾಯಿಗಳನ್ನು ಹೊಂದಿದ್ದರು. ತಮ್ಮ ಗುರುವಿನ ಹೆಸರಲ್ಲಿ ಜಗತ್ತಿನಾದ್ಯಂತ ರಾಮಕೃಷ್ಣ ಮಿಷನ್ ಹೆಸರಿನ ಸಂಘಟನೆಯನ್ನು ಕಟ್ಟಿ ಬೆಳೆಸಿದ್ದರು.
ಇವೆಲ್ಲವನ್ನು ಅವರು ಮಾಡಿದ್ದು ಕೇವಲ ಹದಿನೈದು ವರ್ಷಗಳ ಅವಧಿಯಲ್ಲಿ. ಯಃಕಶ್ಚಿತ್ ಮನುಷ್ಯನೊಬ್ಬ ಇಂತಹ ಸಾಧನೆ ಮಾಡಲು ಸಾಧ್ಯವೇ? ಖಂಡಿತ ಸಾಧ್ಯ, ಅದಕ್ಕಾಗಿ ಆತ `ವಿವೇಕಾನಂದ` ಆಗಿರಬೇಕು.

-ಪ್ರಜಾವಾಣಿ ಕೃಪೆ

Sunday, March 3, 2013

ಅತ್ಯಾಚಾರ - ಒಂದು ವಿಷ್ಲೇಷಣೆ- Dr M Basavanna Rtd Professor


                               ಅತ್ಯಾಚಾರ - ಒಂದು ವಿಷ್ಲೇಷಣೆ


ಡಿಸೆಂಬರ್ 16, 2012 ರಂದು ರಾತ್ರಿ ರಾಜಧಾನಿ ದೆಹಲಿಯಲ್ಲಿ ನಡೆದ ಒಂದು ಲೈಂಗಿಕ ಅತ್ಯಾಚಾರ ಭಾರತದ ಇತಿಹಾಸದಲ್ಲಿ ಒಂದು ದುರ್ಭರ ಘಟನೆ. ಅಂದು, 23 ವರ್ಷದ ಮೆಡಿಕಲ್ ಕಾಲೇಜ್ ಫಿಜಿಯೊತೆರಪಿ ವಿದ್ಯಾಥರ್ಿನಿಯೊಬ್ಬಳ ಮೇಲೆ ಆರು ಜನ ದುರುಳರು ಚಲಿಸುತ್ತಿರುವ ಬಸ್ಸಿನಲ್ಲಿ ಅತ್ಯಾಚಾರವೆಸಗಿದರು, ಬರೆಯಬಾರದಷ್ಟು ಅಸಹ್ಯವಾಗಿ ಅವಳನ್ನು ಗಾಯಗೊಳಿಸಿದರು, ಸಹಾಯಕ್ಕೆ ಬಂದ ಅವಳ ಮಿತ್ರನನ್ನು ಗಾಯಗೊಳಿಸಿದರು. ನಂತರ ಯುವತಿ ಮತ್ತು ಅವಳ ಮಿತ್ರನನ್ನು ನಗ್ನಗೋಳಿಸಿ ರಸ್ತೆಯಲ್ಲಿ ಎಸೆದು ಪರಾರಿಯಾದರು. ಯುವತಿಯ ಮಿತ್ರನ ಹೇಳಿಕೆಯ ಪ್ರಕಾರ, ಅಲ್ಲಿದ್ದ ಯಾರೂ ಅವರಿಗೆ ಸಹಾಯ ಮಾಡಲು ಮುಂದೆ ಬರಲಿಲ್ಲ. ಸುಮಾರು ಎರಡು ಗಂಟೆಗಳ ನಂತರ ಪೋಲೀಸರು ಬಂದರು, ಬಂದವರು ಈ ಕೇಸ್ ಯಾರ ವ್ಯಾಪ್ತಿಗೆ ಸೇರುತ್ತದೆಂಬುದನ್ನು ತೀಮರ್ಾನಿಸಲು ಕಾಲ ತೆಗೆದುಕೊಂಡರೇ ಹೊರತು ನೊಂದವರಿಗೆ ಸಹಾಯ ಮಾಡಲು ಮುಂದಾಗಲಿಲ್ಲ.  ಅವಳ ಮಿತ್ರನ ಹೇಳಿಕೆಗಳು ಮತ್ತು ಮಾಧ್ಯಮಗಳು ಘಟನೆಗೆ ಕೊಟ್ಟ ಪ್ರಾಮುಖ್ಯತೆ, ದೆಹಲಿಯ ನಾಗರಿಕರ ಮನಸಿನಮೇಲೆ ಬಹಳ ಪರಿಣಾಮ ಬೀರಿತು. ಜನರು, ಪ್ರಮುಖವಾಗಿ ಯುವಜನರು, ಬೀದಿಗಿಳಿದು ಪ್ರತಿಭಟಿಸಿದರು. ಪ್ರತಿಭಟನೆ ದೇಶದ ಉದ್ದಗಲಕ್ಕೂ ಹರಡಿತು. ಇರುಕಲಿಗೆ ಸಿಕ್ಕಿದ ದೇಶದ ಆಡಳಿತ ಕಾಯರ್ೊನ್ಮುಖವಾಗಬೇಕಾಯಿತು. ನಿಧಾನವಾಗಿ ವಿಚಾರಣೆ ಆರಂಭವಾಗಿದೆ. ಅದು ಎಲ್ಲಿಗೆ ಹೋಗುವುದೋ ತಿಳಿಯದು. ಇದೆಲ್ಲ ನಡೆಯುತ್ತಿರುವಾಗಲೇ ಆ ಯುವತಿಯನ್ನು     ವಿಶೇಷ ಚಿಕಿತ್ಸೆಗೆಂದು ಸಿಂಗಪುರಕ್ಕೆ ಕಳಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಅಲ್ಲಿ ಅವಳು ಮರಣಹೊಂದಿದಳು. ಇಂಥ ಘಟನೆ ಇದೇ ಮೊದಲನೆಯದೇನಲ್ಲ. ಇಂಥವು ಹಲವಾರು ಜರುಗಿವೆ. ಏನು ಕಾರಣವೋ ಅವೆಲ್ಲಕ್ಕೂ ಜನ ಈ ಮಟ್ಟದಲ್ಲಿ ಪ್ರತಿಭಟಿಸಿರಲಿಲ್ಲ. ಅದೃಷ್ಟವಶಾತ್ ಡಿಸೆಂಬರ್ ಘಟನೆ ನಿಧಾನವಾಗಿಯಾದರೂ ಜನರ ಕಣ್ಣು ತೆರಸಿತು. ಆಡಳಿತಗಾರರನ್ನು ಎಚ್ಚರಿಸಿತು.



   ಇಂಥ ಘಟನೆಗಳು ಅಪರೂಪವೇನಲ್ಲ. ಇಂದಿನದು ದೇಶದ ರಾಜಧಾನಿ ದೆಹಲಿಯಲ್ಲಿ ನಡೆದುದರಿಂದ ದೊಡ್ಡ ಸುದ್ದಿಯಾಯ್ತು. ಜಗತ್ತಿನಾದ್ಯಂತ ಇಷ್ಟೆ ಅಥವಾ ಇದಕ್ಕಿಂತ ದಾರುಣ ಹಿಂಸಾಚಾರಕ್ಕೆ ಸ್ತ್ರೀಯರು ಪ್ರತಿ ನಿಮಿಷವೂ ಒಳಗಾಗುತ್ತಿದ್ದಾರೆ.  ದೆಹಲಿಯಲ್ಲಿ ಕಳೆದ ವರ್ಷ ಮೊದಲ 11 ತಿಂಗಳಲ್ಲಿ ಸ್ತ್ರೀಯರ ಮೇಲೆ 635 ಅತ್ಯಾಚಾರದ ಪ್ರಕರಣಗಳು  ನಡೆದಿರುವಂತೆ ವರದಿಯಾಗಿದೆ. ಆದರೆ ಅಪರಾಧಿಗಳ ಪೈಕಿ ಒಬ್ಬನಿಗೆ ಮಾತ್ರ ಶಿಕ್ಷೆಯಾಗಿದೆಯಂತೆ. ಹಿಂದೆ ಬೆಂಗಳೂರಿನಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳನ್ನು ಅವಳನ್ನು ಕರೆದೊಯ್ಯುತ್ತಿದ್ದ ಟ್ಯಾಕ್ಸಿ ಡ್ರೈವರ್ ರೇಪ್ ಮಾಡಿ ಕೊಂದ ವಿಷಯವನ್ನು ಜನರು ಮರೆತಿರಲಿಕ್ಕಿಲ್ಲ. ಅದೇ ಬೆಂಗಳೂರಿನಲ್ಲಿ ಲಾ ಯೂನಿವಸರ್ಿಟಿ ವಿದ್ಯಾಥರ್ಿನಿಯ ಮೇಲೆ ಅತ್ಯಾಚಾರ ನಡೆದ ವಿಷಯ ನಮ್ಮ ಮನಸ್ಸಿನಲ್ಲಿ ಇನ್ನೂ ಹಸಿರಾಗಿದೆ. ಕೆಲವು ವರ್ಷಗಳ ಹಿಂದೆ, ಪುಣೆಯಲ್ಲಿ ಒಬ್ಬಳು ಮಹಿಳೆಯನ್ನು ರೇಪ್ ಮಾಡಿ ಕೊಲೆ ಮಾಡಿದ ಪ್ರಕರಣ ಇನ್ನೂ ನಮ್ಮನಿಮ್ಮ ಮನಸ್ಸಿನಿಂದ ಮರೆಯಾಗಿರಲಿಕ್ಕಿಲ್ಲ. ಇತ್ತಿಚೆಗಂತೂ ಪ್ರತಿದಿನ ಒಂದಲ್ಲ ಒಂದು ಕಡೆ ಇಂಥ ಘಟನೆಗಳು ನಡೆಯುತ್ತಿರುವುದನ್ನು ಮಾಧ್ಯಮಗಳು ಪ್ರಕಟಿಸುತ್ತಲೇ ಇವೆ  ಭಾರತದಲ್ಲಿ ಸ್ತ್ರೀಯರ ನಿಷಿದ್ಧ ವ್ಯಾಪಾರ-ವ್ಯವಹಾರ ನಡೆಯುವಷ್ಟು ಇನ್ನೆಲ್ಲೂ ಇಲ್ಲವೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

   ಸ್ತ್ರೀಯರ ಮೇಲಿನ ದುರಾಕ್ರಮಣ ಅನಾದಿ ಕಾಲದಿಂದಲೂ ಅವ್ಯಾಹತವಾಗಿ ನಡೆದು ಬಂದಿದೆ, ನಮ್ಮ ಪುರಾಣಗಳಲ್ಲಿ ಕೂಡ ಬಹಳಷ್ಟು ಹೃದಯವಿದ್ರಾವಕ ವಿಚಾರಗಳು ಉಲ್ಲೇಖವಾಗಿವೆ. ಶೂರ್ಪಣಕಿಯನ್ನು ವಿರೂಪಗೊಳಿಸಿದ್ದು ರಾಮಾಯಣ ಮಹಾಕಾವ್ಯದ ಕೇಂದ್ರ ವಸ್ತು (ರಾಕ್ಷಸಿಯಾದರೇನು ಅವಳೂ ಒಂದು ಹೆಣ್ಣು ತಾನೆ? ರಾಕ್ಷಸರಿಗೂ ದೇವತೆಗಳಿಗೂ ತಂದೆ ಒಬ್ಬನೆ (ಕಶ್ಯಪ); ತಾಯಿಯರು (ದಿತಿ ಮತ್ತು ಅದಿತಿ) ಮಾತ್ರ ಬೇರೆ ಬೇರೆ ಅಷ್ಟೆ). ಅನಂತರ ರಾವಣನಿಂದ ಸೀತೆಯ ಅಪಹರಣ ಮತ್ತು ಇಂದ್ರ ಅಹಲ್ಯೆಯನ್ನು ಮೋಸಗೊಳಿಸಿ ಅತ್ಯಾಚಾರವೆಸಗಿದ್ದು ಎಲ್ಲರಿಗೂ ತಿಳಿದ ವಿಷಯ. ಅಷ್ಟೇ ಅಲ್ಲ. ಶಿಲೆಯಾಗಿದ್ದ ಅಹಲ್ಯೆಯ ಶಾಪವಿಮೋಚನೆ ಮಾಡಿದ ಕರುಣಾಳು ಶ್ರೀರಾಮ ಗರ್ಭವತಿ ಪತ್ನಿ ಸೀತೆಯನ್ನು ಕಾಡಿಗಟ್ಟಿದ ಘಟನೆಯನ್ನು ಮರೆಯಲಾದೀತೆ? ಧರ್ಮರಾಜ ಹೆಂಡತಿಯನ್ನು ಜೂಜಿನಲ್ಲಿ ಪಣವಾಗಿ ಒಡ್ಡಿದ್ದು, ತುಂಬಿದ ಸಭೆಯಲ್ಲಿ ದ್ರೌಪದಿಯ ವಸ್ತ್ರಾಪರಣ ಮಾಡಲು ಯತ್ನಿಸಿದ್ದು, ಮತ್ತು ಕೀಚಕ ದ್ರೌಪದಿಯ ಮೇಲೆ ಬಲಾತ್ಕಾರ ಮಾಡಲು ಪ್ರಯತ್ನಿಸಿದ್ದು ಮುಂತಾದ ಘಟನೆಗಳು ಮಾಹಾಭಾರತದಲ್ಲಿ ನಿರೂಪಿತವಾಗಿವೆ. ಪುರುಷಪ್ರಧಾನ ಸಮಾಜದಲ್ಲಿ ಗಂಡು ಹೆಣ್ಣಿನ್ನು ತನ್ನ ಭೋಗ ವಸ್ತುವೆಂದು ತಿಳಿದು ಅವಳ ಮೇಲೆ ನಿರಂತರವಾಗಿ ಆಕ್ರಮಣ ಮಾಡುತ್ತಲೇ ಬಂದಿದ್ದಾನೆ. ಗಂಡಿನ ನೀತಿಗೆಟ್ಟ ನಡೆಯನ್ನು ಸಮಾಜ ಸತತವಾಗಿ ಕ್ಷಮಿಸುತ್ತಲೇ ಬಂದಿದೆ (ಇಲ್ಲಿ ನನ್ನ ಮಿತ್ರ ಹೆಚ್. ಎಮ್. ಮರುಳಸಿದ್ದಯ್ಯನವರು 60 ವರ್ಷಗಳ ಹಿಂದೆ ರಚಿಸಿದ್ದ ಒಂದು ಕವನದ ಮೊದಲ ಸಾಲು ನೆನಪಿಗೆ ಬರುತ್ತದೆ: ಗಂಡಸಿನ ನೀತಿ ಆರಡಿಯ ರೀತಿ; ಅವಗಿಲ್ಲ ನೀತಿ ನಿಯಮ).

   ಭಾರತದ ಪುರಾಣಗಳಷ್ಟೇ ಅಲ್ಲ, ವಿಶ್ವದ ಯಾವುದೇ ಪುರಾಣವನ್ನು ನೋಡಿ, ಇದೇ ಕತೆ.  ಹೆಲನ್ಳನ್ನು ಪಾರಿಸ್ ಹಾರಿಸಿಕೊಂಡು ಹೋದದ್ದು, ಯೂಲಿಸಿಸ್ನ ಪತ್ನಿ ಪೆನಲೊಪೆಗೆ ಜನ ಕಿರುಕುಳ ಕೊಟ್ಟದ್ದು, ಗ್ರೀಕ್ ಪುರಾಣ ಇಲಿಯಡ್ ಮತ್ತು ಒಡೆಸ್ಸಿಯಲ್ಲಿದೆ. ಇಂಥ ಘಟನೆಗಳು ಎಲ್ಲಾ ದೇಶಗಳ ಪುರಾಣಗಳಲ್ಲೂ ದಾಖಲಾಗಿದೆ. ಪುರಾಣದಲ್ಲಿ ಹೇಳಿರುವುದು ಕತೆ, ನಿಜವಲ್ಲ ಎಂದು ನೀವು ಭಾವಿಸಬಹುದು. ಆದರೆ, ಅಂಥ ಘಟನೆಗಳು ಸಮಾಜದಲ್ಲಿ ನಡೆಯಬಹುದೆಂಬ ಕಲ್ಪನೆ ಬರೆದವನ ಮನಸ್ಸಿನಲ್ಲಿತ್ತು ಎಂಬುದನ್ನು ನೀವು ಒಪ್ಪಲೇ ಬೇಕು.

ಅತ್ಯಾಚಾರವೆಂದರೇನು?

ಇಂಥದೇ ಲೈಂಗಿಕ ಅತ್ಯಾಚಾರವೆಂದು ನಿಖರವಾಗಿ ಹೇಳುವುದು ಕಷ್ಟ. ಅದು ದೇಶ, ಕಾಲ, ಸಂಸ್ಕೃತಿ, ಮತ್ತು ಸಾಮಾಜಿಕ ಕಾಯಿದೆಗಳು, ಮುಂತಾದುವನ್ನು ಅವಲಂಬಿಸಿರುತ್ತದೆ. ಆದರೂ ಸಾಮಾನ್ಯವಾಗಿ, ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು (ಹೆಚ್ಚಾಗಿ ಸ್ತ್ರೀಯರನ್ನು) ಹೆದರಿಸಿ, ಬೆದರಿಸಿ, ಹಿಂಸಿಸಿ, ಬಲಾತ್ಕಾರವಾಗಿ, ಅವಳ ಇಷ್ಟಕ್ಕೆ ವಿರೋಧವಾಗಿ, ನಡೆಸುವ ಲೈಂಗಿಕ ಆಕ್ರಮಣವನ್ನು ಅತ್ಯಾಚಾರವೆಂದು ಕರೆಯಲಾಗಿದೆ. ಅದು ಸಂಭೋಗವೇ ಆಗಿರಬೇಕೆಂಬುದೇನಿಲ್ಲ. ಹೆಣ್ಣಿನ ವಿಚಾರವಾಗಿ ಅಸಭ್ಯವಾಗಿ ವತರ್ಿಸುವುದು, ಅವಳನ್ನು ಕೆಣಕುವುದು,  ಪೀಡಿಸುವುದು, ಚುಡಾಯಿಸುವುದು, ಅನವಶ್ಯಕವಾಗಿ ಅವಳ ಮೇಲೆ ಕೈಯ್ಯಾಡಿಸುವುದು (ರಡಿಠಠಿಟಿರ) ಅಥವಾ ಮುಟ್ಟುವುದು (ಣಠಣಛಿಟಿರ), ಇವೆಲ್ಲಾ ಅತ್ಯಾಚಾರದ ಪರಿಧಿಯೊಳಗೆ ಬರುತ್ತವೆ.  ಒಪ್ಪಿಗೆ ಕೊಡಲಾರದ ವಯಸ್ಸಿನ ಹುಡುಗಯರೊಡನೆ (18 ವರ್ಷದೊಳಗಿನವರು) ದೌರ್ಜನ್ಯ ನಡೆದರೆ, ಅದನ್ನು ಶಾಸನಬದ್ಧ ಅತ್ಯಾಚಾರ (ಣಚಿಣಣಣಠಡಿಥಿ ಡಿಚಿಠಿಜ) ಎಂದು ಕರೆಯಲಾಗುತ್ತದೆ. ಒಂದುವೇಳೆ 18 ವರ್ಷ ವಯಸ್ಸಿನೊಳಗಿನವರು ಲೈಂಗಿಕ ಕ್ರಿಯೆಗೆ ಒಪ್ಪಿಗೆ ಕೊಟ್ಟರೂ, ಅದು ಅತ್ಯಾಚಾರವೆಂದೇ ಪರಿಗಣಿಸಲಾಗುತ್ತದೆ. ಅತ್ಯಾಚಾರ ಹೆಚ್ಚಾಗಿ ಗಂಡಸರು ಹೆಂಗಸರ ಮೇಲೆ ನಡೆಸುವ ಅಪರಾಧವಾದರೂ. ಜೈಲಿನಲ್ಲಿ ಗಂಡಸರು ಗಂಡಸರ ಮೇಲೆ ಅತ್ಯಾಚಾರ ನಡೆಸುವುದು ಕಂಡು ಬಂದಿದೆ.

   ಲೈಂಗಿಕ ಬಲಾತ್ಕಾರ ಮಾನವರಿಗೆ ಮಾತ್ರ ಸೀಮಿತವಾಗಿಲ್ಲ. ಅದು ಪ್ರಾಣಿಗಳಲ್ಲೂ ಜರಗುತ್ತಿರುತ್ತದೆ. ವಿಕಾಸವಾದದ ಪ್ರಕಾರ, ಲೈಂಗಿಕ ಕ್ರಿಯೆಯ ಪ್ರಮುಖ ಉದ್ದೇಶ ಸಂತಾನೋತ್ಪತ್ತಿ. ಜೀವೋತ್ಪತ್ತಿ ಪ್ರಾಕೃತಿಕ ನಿಯಮ. ಅದು ನಡೆಯಲೇಬೇಕು. ಸಾಮಾಜಿಕ ಕಟ್ಟುಪಾಡುಗಳು ನಿಮರ್ಾಣವಾಗುವವರೆಗೆ ಮಾನವರಲ್ಲೂ ಲೈಂಗಿಕ ಕ್ರಿಯೆ ಅನಿಯಂತ್ರಿತವಾಗಿ, ಅವ್ಯಾಹತವಾಗಿ ನಡೆಯುತ್ತಿತ್ತು. ಯುದ್ಧಕಾಲದಲ್ಲಿ, ಸೋತ ದೇಶದ ಸ್ತ್ರೀಯರ ಮೇಲೆ ಗೆದ್ದ ದೇಶದ ಸೈನಿಕರು ಅತ್ಯಾಚಾರ ಮಾಡುವುದು ಸವರ್ೆಸಾಧಾರಣ. ಹಾಗೆ ಮಾಡುವುದನ್ನು ಅಪರಾಧವೆಂದು ಪರಿಗಣಿಸದಿರುವುದೇ ಅದು ನಡೆಯುವುದಕ್ಕೆ ಮುಖ್ಯ ಕಾರಣ. ಕೆಲವು ಸಂದರ್ಭಗಳಲ್ಲಿ ಅಂಥ ಕ್ರಿಯೆಗಳನ್ನು ಶತ್ರು ದೇಶದವರ ಮೇಲಿನ ತಿರಾಸ್ಕಾರದ ಮತ್ತು ದ್ವೇಷದ ಅಭಿವ್ಯ್ಯಕ್ತಿಯೆಂದು ಪರಿಗಣಿಸಿ ಪ್ರೋತ್ಸಾಹಿಸಲಾಗುತ್ತದೆ.

ಅತ್ಯಾಚಾರದ ವ್ಯಾಪ್ತಿ

ಅತ್ಯಾಚಾರ ಎಲ್ಲೆಲ್ಲಿ ಎಷ್ಟೆಷ್ಟು ನಡೆಯುತ್ತದೆ ಎಂದು ಹೇಳುವುದು ಕಷ್ಟ. ಸಾಮಾನ್ಯವಾಗಿ, ಇಂಥ ಘಟನೆ ತೆರೆಯ ಮರೆಯಲ್ಲಿ, ಏಕಾಂತದಲ್ಲಿ, ಕತ್ತಲೆಯಲ್ಲಿ ನಡೆಯುತ್ತದೆ; ನಡೆದುದ್ದನ್ನು ಹೇಳಿಕೊಳ್ಳುವುದು ಅವಮಾನಕರವೆಂದು ಪರಿಗಣಿಸಲಾಗುವುದರಿಂದ ಅದು ಬೆಳಕಿಗೆ ಬರುವುದಿಲ್ಲ. ಸುಮಾರು ಶೇಕಡ 15 ರಿಂದ 20 ಪ್ರಕರಣಗಳು ಪ್ರಕಟಗೊಳ್ಳುತ್ತವೆ. ಬೆಳಕಿಗೆ ಬಂದ ಪ್ರಕರಣಗಳನ್ನಷ್ಟೇ ಲೆಕ್ಕಕ್ಕೆ ತೆಗೆದುಕೊಂಡರೂ, ಇತ್ತೀಚಿನ ದಿನಗಳಲ್ಲಿ ಈ ಅಪರಾಧದ ಸಂಖ್ಯೆ ಏರುತ್ತಲೇ ಇರುವಂತೆ ಕಂಡುಬರುತ್ತದೆ. ಈ ಏರಿಕೆ ಯಾವ ಮಟ್ಟಕ್ಕೆ ಬಂದಿದೆ ಎನ್ನುವುದು ಪ್ರಕಟವಾಗಿರುವ ಕೆಲವು ಅಂಕಿ ಅಂಶಗಳಿಂದ ತಿಳಿದುಬರುತ್ತದೆ. ಒಂದು ಮೂಲದ ಪ್ರಕಾರ (ಓಚಿಣಠಟಿಚಿಟ ಅಡಿಟಜ ಖಜಛಿಠಡಿಜ ಃಣಡಿಜಚಿಣ), 2010 ರಲ್ಲಿ 2,13,585 ಮಂದಿ ಸ್ತ್ರೀಯರ ಮೇಲೆ ದೌರ್ಜನ್ಯ ನಡೆದಿದೆ. 22,172 ಲೈಂಗಿಕ ಆಕ್ರಮಣ (ಡಿಚಿಠಿಜ) ಮತ್ತು 40,613 ಅಸಭ್ಯ ವರ್ತನೆ (ಟಠಟಜಣಚಿಣಠಟಿ) ದಾಖಲಾಗಿದೆ, 2,97,795 ಅಪಹರಣ ಪ್ರಕರಣಗಳು (ಞಜಟಿಚಿಠಿ ಚಿಟಿಜ ಚಿಛಜಣಛಿಣಠಟಿ) ನಡೆದಿವೆ. ಕುಟುಂಬದಲ್ಲಿ ಗಂಡಂದಿರಿಂದ 94,041 ಕ್ರೌರ್ಯವೇ (ಜಠಟಜಣಛಿ ತಠಟಜಟಿಛಿಜ) ಮೊದಲಾದ ಪ್ರಕರಣಗಳು ಜರುಗಿವೆಯೆಂದು ದಾಖಲಾಗಿದೆ. 2011ರ ಅಂಕಿ ಅಂಶಗಳ ಪ್ರಕಾರ, ಪ್ರತಿ 54 ನಿಮಿಷಗಳಿಗೊಂದು ರೇಪ್. 51 ನಿಮಿಷಗಳಿಗೊಮ್ಮೆ ಲೈಂಗಿಕ ಕಿರುಕುಳ (ಜಥಣಚಿಟ ಚಿಡಿಚಿಟಜಟಿಣ)  26 ನಿಮಿಷಗಳಿಗೊಮ್ಮೆ   ಹೆಂಗಸರನ್ನು ಚುಡಾಯಿಸುವುದು (ಜತಜ ಣಡಿಚಿಟಿರ), 192 ನಿಮಿಷಗಳಿಗೊಂದು ವರದಕ್ಷಿಣೆ ಕೊಲೆ (ಜಠತಿಡಿಥಿ ಜಜಚಿಣ) ನಡೆದಿದೆ. ಇಂದು ಒಂದು ಅಂದಾಜಿನ ಪ್ರಕಾರ ಪ್ರತಿ 30 ನಿಮಿಷಗಳಿಗೊಂದು ರೇಪ್ ನಡೆಯುತ್ತಿದೆಯಂತೆ. 1971 ರೊಡನೆ ಹೋಲಿಸಿದರೆ ಇಂದು ರೇಪ್ ಪ್ರಕರಣಗಳಲ್ಲಿ ಶೇಕಡ 700 ರಷ್ಟು ಹೆಚ್ಚಳ ಕಂಡು ಬಂದಿದೆ. ವೇಶ್ಯಾವಾಟಿಕೆಗಳಲ್ಲಿ ಗುಲಾಮರಂತೆ ಬದುಕುತ್ತಾ, ತಮ್ಮಿಚ್ಚೆಗೆ ವಿರೋಧವಾಗಿ ಲೈಂಗಿಕ ಆಕ್ರಮಣಕ್ಕೆ ದಿನನಿತ್ಯ ಒಳಗಾಗುವ ಹೆಂಗಳೆಯರ ಸಂಖ್ಯೆ ಇಲ್ಲಿ ಸೇರಿಲ್ಲ. ಚೀನಾದಲ್ಲಿ ವೇಶ್ಯೆಯರು ಹೆಚ್ಚಾಗಿದ್ದಾರೆ; ಆದರೆ ಅವರಿಗೆ ಯಾರೊಡನೆ ಕೂಡಬೇಕೆನ್ನುವ ಆಯ್ಕೆಯ ಸ್ವಾತಂತ್ರ್ಯ ಇದೆಯಂತೆ. ಧರ್ಮನಿಷ್ಠರೆಂದು ಹೇಳಿಕೊಳ್ಳುವ ಭಾರತೀಯರಲ್ಲಿ, ತಂದೆ ಮಗಳು ಮತ್ತು ಸೋದರ ಸೋದರಿಯರ ನಡುವೆ ನಡೆಯುವ ನಿಷಿದ್ಧ ಸಂಭೋಗಗಳ (ಟಿಛಿಜಣ) ಸಂಖ್ಯೆ ದಿನ ದಿನಕ್ಕೆ ಹೆಚ್ಚುತ್ತಿರುವುದು ದುರಾದೃಷ್ಟಕರ.

   ಹೆದರಬೇಡಿ, ಇದು ಭಾರತಕ್ಕಷ್ಟೇ ಸಂಬಂಧಿಸಿದ ವಿಷಯವಲ್ಲ. ಅಮೆರಿಕಾದ ಸಂಯುಕ್ತ ಸಂಸ್ಥಾನಗಳಲ್ಲಿ ಸುಮಾರು ಪ್ರತಿ ಐದರಲ್ಲೊಬ್ಬಳು (20%) ಸ್ತ್ರೀ ಅವಳ ಜೀವಿತ ಕಾಲದಲ್ಲಿ ಒಂದು ಸಾರಿಯಾದರೂ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ ಎಂದು ವರದಿಯಾಗಿದೆ (ಅಜಟಿಣಜಡಿ ಜಿಠಡಿ ಆಜಚಿಜ ಅಠಟಿಣಡಿಠಟ ಚಿಟಿಜ ಕಡಿಜತಜಟಿಣಠಟಿ). ಅತ್ಯಾಚಾರಕ್ಕೆ ಒಳಗಾದವರಲ್ಲಿ ಸುಮಾರು ಶೇಕಡ 80ರಷ್ಟು ಮಂದಿ 25 ವರ್ಷವಯಸ್ಸಿನೊಳಗಿನವರು. ಅತ್ಯಾಚಾರವೆಸಗಿದವರು ಪರಿಚಯಸ್ಥರು, ಆತ್ಮೀಯರು, ಸ್ನೇಹಿತರು ಅಥವಾ ಕುಟುಂಬದವರು. ಅಲಾಸ್ಕ, ಒರೆಗಾನ್ ಮತ್ತು ನೆವೇದ ಸಂಸ್ಥಾನಗಳಲ್ಲಿ ಅತಿ ಹೆಚ್ಚಿನ ರೇಪ್ ಪ್ರಕರಣಗಳು ನಡೆದಿರುವಂತೆ ವರಧಿಯಾಗಿದೆ. ಇಂಗ್ಲೆಂಡ್ನಲ್ಲಿ 2012ರಲ್ಲಿ 3,000 ರೇಪ್, ಮತ್ತು 6,000 ಲೈಂಗಿಕ ಹಿಂಸಾಚಾರದ ಪ್ರಕರಣಗಳು ನಡೆದಿರುವುದಾಗಿ ಹೇಳಲಾಗಿದೆ; ವರದಿಯಾಗದ ಘಟನೆಗಳು ಇನ್ನೆಷ್ಟೊ! ಯೂರೋಪ್ ರಾಜ್ಯಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.

   ಕೆಲ ದಿನಗಳ ಹಿಂದೆ ನ್ಯೂ ಯಾಕರ್್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಲೇಖನ ಡೆಕ್ಕನ್ ಹೆರಾಲ್ಡ್ನಲ್ಲಿ (18-1-2013) ಪುನಮರ್ುದ್ರಿತವಾಗಿತ್ತು. ಅದರಲ್ಲಿ ಹೇಳಿರುವ ಕೆಲವು ವಿಚಾರಗಳು ಗಮನಾರ್ಹ: 1. ಒಹಾಯೊ ಸ್ಟೇಟ್ನಲ್ಲಿ ಪ್ರಜ್ಞಾಶೂನ್ಯವಾಗಿ ಬಿದ್ದಿದ್ದ 16 ವರ್ಷದ ಯುವತಿಯ ಮೇಲೆ ಹೈಸ್ಕೂಲ್ ವಿದ್ಯಾಥರ್ಿಗಳು ನಿರಂತರವಾಗಿ ರೇಪ್ ಮಾಡಿದರು. 2. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರಪಂಚದಲ್ಲಿ ಶೇಕಡ 30 ರಿಂದ 60 ಮಂದಿ ಸ್ತ್ರೀಯರು ಲೈಂಗಿಕವಾಗಿ ಹಿಂಸೆಗೊಳಗಾಗಿದ್ದಾರೆ. 3. ದಕ್ಷಿಣ ಆಫ್ರಿಕದಲ್ಲಿ ಶೇಕಡ 37 ಮಂದಿ ಗಂಡಸರು ತಾವು ರೇಪ್ ಮಾಡಿದುದಾಗಿ ಒಪ್ಪಿಕೊಂಡಿದ್ದಾರೆ. 4. ಅಮೆರಿಕಾದಲ್ಲಿನ ಪಾಲರ್ಿಮೆಂಟ್ 1994ರಲ್ಲಿ ಅಂಗೀಕರಿಸಿದ್ದ (ಈಗ ಅವಧಿ ಮುಗಿದಿರುವ) ಸ್ತ್ರೀಯರ ಮೇಲಿನ ಹಿಂಸಾಚಾರ ವಿರೋಧಿ ಶಾಸನವನ್ನು ನವೀಕರಿಸಲಿಲ್ಲ. 5. ಹೆಂಗಳೆಯರ ಅಕ್ರಮ ವ್ಯಾಪಾರ ಅಮೆರಿಕಾದಲ್ಲಿ ದೊಡ್ಡ ಸಮಸ್ಯೆಯಾಗಿದೆ.

   ಮೇಲೆ ಹೇಳಿದ ಲೇಖನವನ್ನು ಬರೆದ ನಿಖೊಲಾಸ್ ಕ್ರಿಸ್ಟೋಫ್ (ಓಛಿಠಟಚಿ ಏಡಿಣಠಜಿ) ಅವರಿಗೆ ಪಾಕಿಸ್ಥಾನದ ಸ್ತ್ರೀರೋಗ ತಜ್ಞ ಡಾಕ್ಟರ್ ಶೇರ್ಷಾ ಸೈಯದ್ (ಖಜಡಿಚಿ ಖಥಿಜಜ) ಹೇಳಿರುವ ಒಂದು ಮಾತು ಇನ್ನೂ ಗಮನಾರ್ಹ. ಅದು ಹೀಗಿದೆ: ಅತ್ಯಾಚಾರಕ್ಕೊಳಗಾಗಿ ನನ್ನ ಬಳಿಗೆ ಚಿಕಿತ್ಸೆಗೆ ಬರುವ ಸ್ತ್ರೀಯರಿಗೆ ನಾನು ಪೋಲೀಸರ ಬಳಿಗೆ ಹೋಗಲು ಹೇಳುವುದಿಲ್ಲ; ಯಾಕೆಂದರೆ ಅಲ್ಲಿಗೆ ಹೋದಾಗ ಅವರು ಮತ್ತೆ ಅತ್ಯಾಚಾರಕ್ಕೊಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

   ಪತ್ರಿಕೆಗಳಲ್ಲಿ ಇನ್ನೊಂದು ಸುದ್ದಿ ಬಂದಿತ್ತು. ಜರ್ಮನಿಯ ಹೆಸರಾಂತ ಸಿನಿಮ ತಾರೆ ಕ್ಲಾಸ್ ಕಿನ್ಸ್ಕಿ (ಏಟಚಿಣ ಏಟಿಞ) ಎಂಬುವವನು ತನ್ನ ಮಗಳು ಪೋಲ ಕಿನ್ಸ್ಕಿಯ ಮೇಲೆ, ಅವಳು 5 ವರ್ಷದವಳಾಗಿದ್ದನಿಂದ 19 ವರ್ಷಗಳವರೆಗೆ, ನಿರಂತರವಾಗಿ ಲೈಂಗಿಕ ಅತ್ಯಾಚಾರ ನಡೆಸಿದ್ದನಂತೆ. ಕ್ಲಾಸ್ 1991 ರಲ್ಲಿ ಮರಣಹೊಂದಿದ ಮೇಲೆ, ಜನರು ಅವನನ್ನು ಒಬ್ಬ ಮಹಾನ್ ಕಲಾವಿದ ಹಾಗು ಜೀನಿಯಸ್ ಎಂದು ಹೊಗಳುತ್ತಿರುವುದನ್ನು ಸಹಿಸಲಾರದೆ, ಪೋಲ ಅವನು ನಡೆಸಿದ್ದ ದೌರ್ಜನ್ಯವನ್ನು ಹೊರಗೆಡವಿದ್ದಾಳೆ. ಪೋಲ ಅವನ ಮೊದಲ ಹೆಂಡತಿಯ ಮಗಳು; ಈಗ ಅವಳಿಗೆ 60 ವರ್ಷ ವಯಸ್ಸು. ಅವಳ ಮಾತಿನಲ್ಲೇ ಹೇಳುವುದಾದರೆ: ಅವನಿಗೆ ಏನು ಬೇಕಿತ್ತೊ ಅದನ್ನು ಅವನು ತೆಗೆದುಕೊಂಡ (ಊಜ ರಿಣಣ ಣಠಠಞ ತಿಚಿಣ ಜ ತಿಚಿಟಿಣಜಜ); ಎಂಥ ಮನ ಕರಗುವ ಮಾತು.

   ಇತ್ತೀಚೆಗೆ ಪ್ರಕಟವಾದ ಇನ್ನೊಂದು ಸುದ್ದಿ ಮೈ ನಡಗಿಸಿತು. ದಕ್ಷಿಣ ಆಫ್ರಿಕದಲ್ಲಿ ಸ್ತ್ರೀಯೊಬ್ಬಳ ಮೇಲೆ ಅತ್ಯಾಚಾರ ಮಾಡಿ, ಅವಳ ಹೊಕ್ಕಳಿನಿಂದ ಗುಪ್ತಾಂಗದವರೆಗೆ ಚಾಕುವಿನಿಂದ ಸೀಳಿ, ರಸ್ತೆ ಬದಿಯಲ್ಲಿ ಎಸೆಯಲಾಗಿತ್ತಂತೆ. ಇತ್ತೀಚೆಗೆ ಬೆಳಕಿಗೆ ಬಂದ ಇನ್ನೊಂದು ವರದಿಯ ಪ್ರಕಾರ, ಸುಮಾರು 50 ಮಂದಿ ಯೆಮಾನಿ ಮಹಿಳೆಯರು ಅವರ ಗಂಡಂದಿರ ಕೊಲೆ ಮಾಡಿದುದಕ್ಕಾಗಿ ಸೆರೆ ಹಿಡಿಯಲ್ಪಟ್ಟಿದ್ದಾರೆ. ಕೊಲೆ ಮಾಡಲು ಅವರು ಕೊಟ್ಟ ಕಾರಣಗಳು ಅವರು ಅನುಭವಿಸಿದ್ದ ಕೌಟುಂಬಿಕ ಹಿಂಸಾಚಾರ, ಸಾಮಾಜಿಕ ಅಸಮಾನತೆ, ಹಾಗು ಮಾನಸಿಕ ರೋಷ.

   ಅದೇಕೆ ಹೀಗೆ? ಗಂಡಸರೆಲ್ಲಾ ವಿಕೃತ ಕಾಮಿಗಳೆ? ಕ್ರೂರಿಗಳೆ? ಸ್ತ್ರೀಯರ ಮೇಲಿನ ಅತ್ಯಾಚಾರ ಇತ್ತೀಚೆಗೆ ಹೆಚ್ಚುತ್ತಿದೆಯೆ? ಹಾಗಿದ್ದರೆ ಅದಕ್ಕೆ ಕಾರಣಗಳೇನು? ಅದನ್ನು ತಡೆಯುವುದು ಸಾಧ್ಯವೆ? ಇಂಥ ಪ್ರಶ್ನೆಗಳಿಗೆ ನಿಖರವಾಗಿ ಉತ್ತರ ಹೇಳುವುದು ಇಂದಿನವರೆಗೂ ಸಾಧ್ಯವಾಗಿಲ್ಲ.

ಅತ್ಯಾಚಾರಕ್ಕೆ ಕಾರಣಗಳು

ಸುದ್ದಿಮಾಧ್ಯಮಗಳು ಮತ್ತು ಜನಸಾಮಾನ್ಯರು ಅತ್ಯಾಚಾರಕ್ಕೆ ಕೊಡುವ ಕಾರಣಗಳು ಇವು:

ಗಂಡಸಿನ ಶಕ್ತಿ ಪ್ರದರ್ಶನ
ಗಂಡಸಿನ ಮೇಲ್ಮೆಯ (ಸುಪೀರಿಯಾರಿಟಿ) ಅಭಿವ್ಯಕ್ತಿ
ಹೆಣ್ಣಿನ ಬಗ್ಗೆ ಗಂಡಸಿಗಿರುವ ಕೀಳು ಮನೋಭಾವ
ಹೆಣ್ಣಿನ ತೇಜೋವಧೆ (ಮಾನಭಂಗ) ಮಾಡಬೇಕೆಂಬ ಆಂತರಿಕ ಬಯಕೆ
ಹೆಣ್ಣನು ವಸ್ತುವಾಗಿ ಪರಿಗಣಿಸಿ ಅವಳನ್ನು ವಿನಿಮಯ ಮಾಡಿಕೊಳ್ಳಬಹುದು ಎಂಬ ಧೋರಣೆ
ಸಮಾಜದಲ್ಲಿ ಇನ್ನೂ ಅಲ್ಲಲ್ಲಿ ಅಸ್ಥಿತ್ವದಲ್ಲಿರುವ ಊಳಿಗಮಾನ್ಯ ಪದ್ಧತಿ (ಜಿಜಣಜಚಿಟಟ)
ಮಾಧ್ಯಮಗಳು ಹೆಣ್ಣನ್ನು ನಿರೂಪಿಸುವ ರೀತಿ
ಮೈ ಪ್ರದರ್ಶನ ಮಾಡುವ ಉಡುಗೆ ತೊಡುಗೆಗಳು

   ಮೇಲೆ ಹೇಳಿರುವವೆಲ್ಲ ಅತ್ಯಾಚಾರಕ್ಕೆ ಕಾರಣಗಳಿರಬಹುದು. ಆದರೆ, ಅವು ಎಷ್ಟರ ಮಟ್ಟಿಗೆ ಕಾರಣಗಳೆಂದು ಹೇಳುವುದಕ್ಕೆ ಸಾಕಾದಷ್ಟು ವಸ್ತುನಿಷ್ಠ ಪುರಾವೆಗಳಿಲ್ಲ. ಅವು ಜನಸಾಮಾನ್ಯರ ಮಾತುಗಳು, ಅಭಿಪ್ರಾಯಗಳು. ಅವು ನಿಜವೋ ಸುಳ್ಳೋ ಖಚಿತವಾಗಿ ಹೇಳಲಾಗುವುದಿಲ್ಲ.

   ಅತ್ಯಾಚಾರ ಗುರುತರವಾದ ಅಪರಾದ ಎನ್ನುವುದನ್ನು ಎಲ್ಲರೂ ಒಪ್ಪುತ್ತಾರೆ; ಪುರುಷರ ಅತಿಯಾದ, ಅನಿಯಂತ್ರಿತ ಕಾಮುಕತನವೇ ಆದಕ್ಕೆ ಪ್ರಮುಖ ಕಾರಣವೆಂಬುದು ಜನಸಾಮಾನ್ಯರ ಅಭಿಪ್ರಾಯ ಆದರೆ, ಬಹಳಷ್ಟು ಸ್ತ್ರೀವಾದಿಗಳು (ಜಿಜಟಟಿಣ) ಈ ಮಾತನ್ನು ಒಪ್ಪುವುದಿಲ್ಲ. ಅವರ ಪ್ರಕಾರ, ಗಂಡು ಅತ್ಯಾಚಾರಕ್ಕೆ ತೊಡಗಲು ಪ್ರಮುಖ ಕಾರಣ, ಅವನಿಗೆ ಸ್ತ್ರೀಯರ ಮೇಲೆ ತನ್ನ ಅಧಿಕಾರ ಸ್ಥಾಪಿಸಿ, ಅವರ ಮೇಲೆ ಆಳ್ವಿಕೆ ನಡೆಸಬೇಕೆನ್ನುವ  ಆಂತರಿಕ ಬಯಕೆ; ಸ್ತ್ರೀಯರನ್ನು ಹಿಂಸಿಸಿ ತಾನೆಷ್ಟು ಬಲಶಾಲಿ ಎಂಬುದನ್ನು ಪ್ರದರ್ಶನ ಮಾಡುವ ತೀವ್ರ ಆಕಾಂಕ್ಷೆ; ಅವರ ತೇಜೋವಧೆ (ಮಾನಭಂಗ) ಮಾಡಿ, ಅವಮಾನಿಸುವ ಪ್ರಬಲ ಅಪೇಕ್ಷೆ. ಅಂದರೆ, ಅತ್ಯಾಚಾರಕ್ಕೆ ಪ್ರೇರಣೆ ಗಂಡಸಿನ ಕಾಮಾತುರತೆಯಲ್ಲ; ಅವನಲ್ಲಿ ಆಳವಾಗಿ ಬೇರುಬಿಟ್ಟಿರುವ ಮೇಲರಿಮೆ ಮತ್ತು ಹಿಂಸಾಚಾರ ಪ್ರವೃತ್ತಿ. ಇರಬಹುದೋ ಏನೊ; ಹೆಣ್ಣು ಬಹಳವಾಗಿ ಹೆದರುವ ಘಟನೆಗಳಲ್ಲಿ ಲೈಂಗಿಕ ಆಕ್ರಮಣ ಪ್ರಮುಖವಾದುದು, ಅವಳು ಭಯಪಡುವುದು ಅತ್ಯಾಚಾರದ ಹಿಂದಿರುವ ಹಿಂಸೆಗೆ. ಅತ್ಯಾಚಾರ ನಡೆಯುವುದು ತನ್ನನ್ನು ಹಿಂಸಿಸುವುದಕ್ಕಾಗಿಯೇ ಹೊರತು ಲೈಂಗಿಕ ಸುಖಕ್ಕಾಗಿಯಲ್ಲ ಎಂಬುದು ಅವಳ ಅಭಿಪ್ರಾಯ

   ಅಂದಮಾತ್ರಕ್ಕೆ ಅತ್ಯಾಚಾರದ ಹಿಂದಿರುವ ಕಾಮುಕ ಭಾವನೆಗಳ ಪ್ರಭಾವವನ್ನು ಸಂಪೂರ್ಣವಾಗಿ ಅಲ್ಲಗಳೆಯಲಾಗುವುದಿಲ್ಲ. ಹಾಗೆ ಹೇಳುವುದಕ್ಕೆ ಅನೇಕ ಕಾರಣಗಳಿವೆ. ಉದಾಹರಣೆಗೆ, ಲೈಂಗಿಕ ಆಕ್ರಮಣ ಎಲ್ಲಾ ವಯಸ್ಸಿನ ಹೆಂಗಸರ ಮೇಲೆ ನಡೆಯುತ್ತದಾದರೂ, ಅದು ಹೆಚ್ಚಿಗೆ ಜರಗುವುದು ಆರೋಗ್ಯವಂತರಾಗಿ, ನೋಡಲು ಆಕರ್ಷಕವಾಗಿರುವ, 12 ರಿಂದ 24 ವರ್ಷ ವಯಸ್ಸಿನ ಯುವತಿಯರ ಮೇಲೆ; ರೇಪ್ ಮಾಡಿರುವರ ಹೇಳಿಕೆಯ ಪ್ರಕಾರ ಲೈಂಗಿಕ ಬಯಕೆಯೇ ಅವರ ವರ್ತನೆಗೆ ಪ್ರಮುಖ ಕಾರಣ. ಅತ್ಯಾಚಾರಿಗಳಲ್ಲಿ ವಿಕೃತ ಕಾಮಿಗಳಿರುವುದು ಕಂಡುಬಂದಿದೆ. ಆದುದರಿಂದ, ಅತ್ಯಾಚಾರದ ಘಟನೆಗಳಲ್ಲಿ ಕಾಮದ ಪ್ರಭಾವವನ್ನು ಕಡೆಗಣಿಸಲಾಗುವುದಿಲ್ಲ. ಗಂಡಸಿನ ಆಂತರಿಕ (ಲೈಂಗಿಕ) ದೌರ್ಭಲ್ಯವೂ  (ಟಿಚಿಜಜಡಣಚಿಛಿಥಿ) ಅತ್ಯಾಚಾರಕ್ಕೆ ಪ್ರೇರೇಪಿಸುವುದೆಂಬ ಮಾತೂ ಅಲ್ಲಲ್ಲಿ ಕೇಳಿಬರುತ್ತಿದೆ.
   ಇತ್ತೀಚೆಗೆ ಅತ್ಯಾಚಾರಿಗಳ ಮೇಲೆ ನಡೆಸಿರುವ ಸಂಶೋಧನೆಗಳಲ್ಲಿ ದುರಾಕ್ರಮಣ (ಚಿರರಡಿಜಠಟಿ) ಮತ್ತು ಲೈಂಗಿಕತೆ (ಜಥಣಚಿಟಣಥಿ) ಇವೆರಡೂ ಅತ್ಯಾಚಾರಕ್ಕೆ ಪ್ರೇರಣೆ ಎಂಬುದು ತಿಳಿದುಬಂದಿದೆ. ಕೆಲವು ವೇಳೆ ಆಕ್ರಮಣ ಹೆಚ್ಚಾಗಿರಬಹುದು, ಮತ್ತೆ ಕೆಲವು ವೇಳೆ ಲೈಂಗಿಕ ಅಪೇಕ್ಶೆ. ಒಟ್ಟಿನಲ್ಲಿ ಎರಡು ಒಂದರೊಡನೊಂದು ಮೇಳೈಸಿರುತ್ತವೆ. ಸಂಭೋಗ ಕ್ರಿಯೆಯಲ್ಲಿ ಕೊಂಚಮಟ್ಟಿನ ಹಿಂಸಾಚಾರ ಅನಿವಾರ್ಯ ಎನ್ನುವ ಅಭಿಪ್ರಾಯವೂ ಇದೆ. ಸ್ಸಾಧಾರಾಣ (ಟಿಠಡಿಟಚಿಟ) ಲೈಂಗಿಕ ಕ್ರಿಯೆಯ ಕಾಲದಲ್ಲಿ ನಡೆದಷ್ಟು ಹಿಂಸಾಚಾರ ಬೇರೆ ಸಂದರ್ಭಗಳಲ್ಲಿ ನಡೆದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ತಜ್ಞರೊಬ್ಬರು ಹೇಳಿದ್ದಾರೆ. ಇಲ್ಲಿ ಕೊಂಚ ಉತ್ಪ್ರೇಕ್ಷೆ ಇದ್ದರೂ ಅದು ಸಂಪೂರ್ಣ ಸುಳ್ಳಲ್ಲ.
ಅತ್ಯಾಚಾರದ ಬಗೆಗಳು
ಅತ್ಯಾಚಾರಗಳು ಇದ್ದಕ್ಕಿದ್ದಹಾಗೆ ನಡೆದುಬಿಡುವುದಿಲ್ಲ; ಸಾಮಾನ್ಯವಾಗಿ ಅವು ಪೂರ್ವ ನಿಯೋಜಿತವಾಗಿರುತ್ತವೆ. ಶೇಕಡ 80 ರಷ್ಟು ಪ್ರಕರಣಗಳು ನೆರೆಹೊರೆಯವರ ಮೇಲೆ ಜರುಗುತ್ತವೆ. ಘಟನೆಗಳು ಪುನರಾವತರ್ಿತಗೊಳ್ಳುವ ಸಾಧ್ಯತೆಗಳು ಹೆಚ್ಚು. ಒಬ್ಬರೇ ಇರುವ ಮನೆಗಳಲ್ಲಿ, ಕಾಡು, ಹೊಲ, ಗದ್ದೆಗಳಂತಹ ನಿರ್ಜನ ಪ್ರದೇಶಗಳಲ್ಲಿ ಈ ಘಟನೆಗಳು ಜರಗುತ್ತವೆ. ಮೂರರಲ್ಲೊಂದು ಪ್ರಕರಣಗಳಲ್ಲಿ ಒಬ್ಬನಿಗಿಂತ ಹೆಚ್ಚು ಮಂದಿ ಈ ಕೃತ್ಯದಲ್ಲಿ ಪಾಲ್ಗೊಂಡಿರುವುದು ಕಂಡುಬಂದಿದೆ.
   ಇಬ್ಬರು ಸಂಶೋಧಕರು (ಕಡಿಜಟಿಣಞಥಿ & ಏಟಿರಣ, 1991) ಅತ್ಯಾಚಾರಗಳನ್ನು ಪವರ್ ರೇಪ್ (ಠಿಠತಿಜಡಿ ಡಿಚಿಠಿಜ), ಆಂಗರ್ ರೇಪ್ (ಚಿಟಿರಜಡಿ ಡಿಚಿಠಿಜ). ಸ್ಯಾಡಿಸ್ಟಿಕ್ ರೇಪ್ (ಚಿಜಣಛಿ ಡಿಚಿಠಿಜ) ಎಂದು ಮೂರು ವಿಧವಾಗಿ ವಿಂಗಡಿಸಿದ್ದಾರೆ:. ಮೊದಲದರಲ್ಲಿ ತೊಡಗುವ ವ್ಯಕ್ತಿಗೆ ತನ್ನ ಶಕ್ತಿಯ ಮೇಲೆ ತನಗೆ ವಿಶ್ವಾಸವಿರುವುದಿಲ್ಲ. ಅವನಿಗೆ ಮಾನವೀಯ ಸಂಬಂಧಗಳನ್ನು ಬೆಳೆಸಿಕೊಳ್ಳುವುದು, ಉಳಿಸಿಕೊಳ್ಳುವುದು ತಿಳಿಯದು. ತನ್ನ ದೌರ್ಬಲ್ಯವನ್ನು ಮುಚ್ಚಿಕೊಳ್ಳಲು ಇತರರಿಗೆ ನೋವು ಉಂಟು ಮಾಡಿ, ಹಿಂಸಿಸಿ ತೃಪ್ತಿಪಟ್ಟಿಕೊಳ್ಳುತ್ತಾನೆ. ಎರಡನೆಯದರಲ್ಲಿ ವ್ಯಕ್ತಿ ಇಡೀ ಸ್ತ್ರೀ ಸಮೂಹವನ್ನು ದ್ವೇಷಿಸುತ್ತಾ, ಅವರ ಮೇಲೆ ಹಗೆ ತೀರಿಸಿಕೊಳ್ಳಲು ಅವರಿಗೆ ನೋವುಂಟು ಮಾಡುತ್ತಾನೆ. ಅವನ ಕ್ರಿಯೆಯಲ್ಲಿ ಲೈಂಗಿಕ ಸುಖದ ಅಂಶ ಕಡಮೆ. ಮೂರನೆಯದರಲ್ಲಿ ಲೈಂಗಿಕತೆ ಮತ್ತು ಹಿಂಸೆ ಎರಡೂ ಮಿಳಿತಗೊಂಡಿರುವಂತೆ ತೋರಿದರೂ ಅಲ್ಲಿ ಹೆಣ್ಣನ್ನು ನೋಯಿಸುವುದೇ ಪ್ರಮುಖ ಉದ್ದೇಶ.
   ಪಾಶ್ಚಿಮಾತ್ಯ ದೇಶಗಳಲ್ಲಿ ಡೇಟ್ ರೇಪ್ (ಜಚಿಣಜ ಡಿಚಿಠಿಜ) ಎಂಬ ಪ್ರಕರಣ ಬಹಳವಾಗಿ ನಡೆಯುತ್ತಿರುತ್ತದೆ. ಕಾಲೇಜು ವಯಸ್ಸಿನ ಯುವಕ ಯುವತಿಯರು (ಅವರು ಸ್ನೇಹಿತರಿರಬಹುದು, ಸ್ನೇಹವನ್ನು ನಿರೀಕ್ಷಿಸುವವರಿರಬಹುದು, ಅಥವಾ ಪ್ರಣಯಿಗಳಾಗಿರಬಹುದು) ಹೊರಗೆ ಹೋಗಿ ಕಾಲ ಕಳೆಯುವುದನ್ನು ಡೇಟಿಂಗ್ (ಜಚಿಣಟಿರ) ಎಂದು ಕರೆಯುತ್ತಾರೆ. ಡೇಟಿಂಗ್ ಪಾಶ್ಚಿಮಾತ್ಯ ದೇಶಗಳಲ್ಲಿ ಸವರ್ೆಸಾಮಾನ್ಯವಾಗಿ ಜರುಗುವ ಸಾಮಾಜಿಕ ಕ್ರಿಯೆ. ಡೇಟಿಂಗ್ ಮಾಡುವಾಗ ಅತ್ಯಾಚಾರ ಆಗಾಗ್ಗೆ ನಡೆಯುವುದು ಸಾಮಾನ್ಯ. ಅಲ್ಲಿ ನಡೆಯುವ ಕ್ರಿಯೆಯನ್ನು ರೇಪ್ ಎಂದು ನಿರ್ಧರಿಸುವುದು ತುಂಬ ಕಷ್ಟದ ಕೆಲಸ. ಸುಮಾರು ಶೇಕಡ 16 ರಿಂದ 20 ಮಂದಿ ಕಾಲೇಜ್ ಯುವತಿಯರು ಡೇಟ್ ರೇಪ್ ಗೊಳಗಾಗಿರುವುದು ಸಂಶೋಧನೆಗಳಿಂದ ತಿಳಿದುಬಂದಿದೆ.
   ಮಕ್ಕಳ ಮೇಲಿನ ಲೈಂಗಿಕ ಅತ್ಯಾಚಾರ ಒಂದು ಘೋರ ಅಪರಾದ, ಅದರಲ್ಲಿ ತೊಡಗುವವರಲ್ಲಿ ಮಾನಸಿಕ ಅಸ್ವಸ್ಥರೂ ಇದ್ದೂ, ಅಂಥವರನ್ನು ಪೀಡೊಫೈಲ್ (ಠಿಜಜಠಠಿಟಜ) ಎಂದು ಕರೆಯಲಾಗಿದೆ. ಪೀಡೊಫೈಲ್ ಅಲ್ಲದವರೇ ಹೆಚ್ಚು ಈ ಕೃತ್ಯದಲ್ಲಿ ತೊಡಗುತ್ತಾರೆ. ಮಕ್ಕಳ ಮೇಲೆ ನಡೆಯುವ ಅತ್ಯಾಚಾರಕ್ಕೆ ಮುಖ್ಯ ಕಾರಣ ಅವರು ಸುಲಭವಾಗಿ ದೊರಕುವುದೇ ಆಗಿರುತ್ತದೆ. ಅಮೇರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಪ್ರತಿ ವರ್ಷ 1,00,000 ದಿಂದ 5,00,000 ಮಕ್ಕಳು ಲೈಂಗಿಕ ದುರುಪಯೋಗಕ್ಕೆ ಒಳಗಾಗುತ್ತಾರೆ ಎಂದು ತಿಳಿದುಬಂದಿದೆ. ಮಲಮಕ್ಕಳು, ಅನಾಥಾಲಯದ ಮಕ್ಕಳು, ದತ್ತುಮಕ್ಕಳು, ಇಂಥವರ ಮೇಲೆ ಅತ್ಯಾಚಾರ ಹೆಚ್ಚಾಗಿ ನಡೆಯುತ್ತಿದೆ. ಸಾಮಾನ್ಯವಾಗಿ ತಮಗಾದ ಕೃತ್ಯವನ್ನು ಮಕ್ಕಳು ಯಾರಿಗೂ ಹೇಳುವುದಿಲ್ಲ; ಹೇಳಲು ಭಯ, ನಾಚಿಕೆ. ಎಷ್ಟೋ ವೇಳೆ ಕುಟುಂಬದವರೇ ಇಂಥ ಹೇಯ ಕೃತ್ಯಗಳಲ್ಲಿ ತೊಡಗುವುದರಿಂದ ವಿಷಯ ಗುಟ್ಟಾಗಿಯೇ ಉಳಿದುಬಿಡುತ್ತದೆ. ಇತ್ತೀಚೆಗೆ ಅಪ್ರಾಪ್ತ ವಯಸ್ಸಿನವರ ಮೇಲಿನ ಆಕ್ರಮಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿರುವುದರಿಂದ, ಅವುಗಳನ್ನು ಕುರಿತು ಅಧ್ಯಯನ ಮಾಡುವುದು ಸುಲಭವಾಗುತ್ತಿದೆ. ಮುಂಬಯಿಯಲ್ಲಿ ಕೆಲವು ದಿನಗಳ ಹಿಂದೆಯಷ್ಟೆ ಒಂದೇ ಕುಟುಂಬದ ಮೂವರು ಮಕ್ಕಳ ಮೇಲೆ ಅತ್ಯಾಚಾರ ಮಾಡಿ, ಅವರನ್ನು ಕೊಂದು, ಬಾವಿಗೆ ಎಸೆದು ಹೋಗಿರುವ ವಿಷಯವನ್ನು ನೀವು ಮರೆತಿರಲಿಕ್ಕಿಲ್ಲ.
ಅತ್ಯಾಚಾರದ ಪರಿಣಾಮ
ಅತ್ಯಾಚಾರಕ್ಕೊಳಗಾದವರ ಜೀವನ ದುರ್ಭರವಾಗುತ್ತದೆ. ಅವರಿಗೆ ಭವಿಷ್ಯತ್ತು ಕರಾಳವಾಗಿ ಕಂಡುಬರುತ್ತದೆ. ಅವರಲ್ಲಿ ಕೆಲವರು ಗರ್ಭಧರಿಸಬಹುದು, ಲೈಂಗಿಕ ರೋಗಗಳಿಗೆ ತುತ್ತಾಗಬಹುದು. ಸಮಾಜ ಅವರನ್ನು ಕೀಳಾಗಿ ಕಂಡು, ಅವರಿಗೆ ವಿವಾಹವಾಗುವ ಸಾಧ್ಯತೆಗಳು ಕಡಮೆಯಾಗಬಹುದು. ವಿವಾಹವಾದವರು ಕೂಡ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಹಿಂಜರಿಯಬಹುದು. ಅತ್ಯಾಚಾರಕ್ಕೊಳಗಾದವರಿಗೆ ಅವರ ಶರೀರದ ಮೇಲೆ ನಡೆದ ಹಲ್ಲೆಗಿಂತ ಮನಸ್ಸಿನ ಮೇಲೆ ಆಗುವ ಆಘಾತ ದೊಡ್ಡದು. ಅವರಲ್ಲಿ ಕೆಲವರು ಮನೋರೋಗಿಗಳಾಗಬಹುದು.
   ಅತ್ಯಾಚಾರವನ್ನು ಸಾಮಾನ್ಯವಾಗಿ ಯುವಕರ ಅಪರಾಧವೆಂದು ಪರಿಗಣಿಸಲಾಗಿದೆ. ಅಮೆರಿಕದ ಪೋಲೀಸರ ಪ್ರಕಾರ ಅತ್ಯಾಚಾರಕ್ಕಾಗಿ ಅರೆಸ್ಟ್ ಆದವರ ಪೈಕಿ ಶೇಕಡ 60 ರಷ್ಟು ಮಂದಿ 25 ವರ್ಷ ವಯಸ್ಸಿನೊಳಗಿನವರು. ಶೇಕಡ 30 ರಿಂದ 50 ಮಂದಿ ವಿವಾಹಿತರು. ಹೆಚ್ಚಿನವರು ಸಮಾಜದ ಕೆಳಸ್ತರಕ್ಕೆ ಸೇರಿದವರು, ಈ ಮುಂಚೆ ಇಂಥದೇ ಅಪರಾಧ ಮಾಡಿರುವವರು. ತಾವೇ ಲೈಂಗಿಕ ಆಕ್ರಮಣಕ್ಕೆ ಒಳಗಾಗಿದ್ದವರು. ಅವರ ಬಾಲ್ಯ ತೃಪ್ತಿಕರವಾಗಿದ್ದಂತೆ ಕಂಡುಬರುವುದಿಲ್ಲ. ಹಲವರು ಕುಡುಕರು.
ಇದರಲ್ಲಿ ತೊಡಗುವವರಲ್ಲಿ ಹೆಚ್ಚಿಗೆ ಕೋಪಿಷ್ಟರಿರುವುದು ಕಂಡುಬಂದಿದೆ. ತಮ್ಮ ಉದ್ವೇಗಗಳ ಮೇಲೆ ಇವರಿಗೆ ಹತೋಟಿ ಇರುವುದಿಲ್ಲ. ತಮ್ಮ ವರ್ತನೆಗಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲಾರರು. ಬಹಳ ಬೇಗ ಲೈಂಗಿಕ ಉದ್ರೇಕಕ್ಕೆ ಒಳಗಾಗುವವರು. ಆತ್ಮೀಯ ಸಂಬಂಧಗಳನ್ನು ಬೆಳೆಸುವುದು ಇವರಿಗೆ ಕಷ್ಟ. ಸ್ತ್ರೀಯರ ಮನಸ್ಸನ್ನು, ಅವರ ಅನಿಸಿಕೆಗಳನ್ನು ಅರಿಯುವ ಮನೋಭಾವ ಇವರದಲ್ಲ. ಇವರಲ್ಲಿ ಕೆಲವರಿಗೆ ಇತರರನ್ನು ಹಿಂಸಿಸಿ ಸುಖಪಡುವ ಪ್ರವೃತ್ತಿ ಇರುವುದು ಕಂಡುಬಂದಿದೆ.

ಲೈಂಗಿಕತೆಯ ಜೈವಿಕ ಹಿನ್ನೆಲೆ

ವಿಕಾಸವಾದಿಗಳ ಪ್ರಕಾರ ವಿಶ್ವದ ಸಕಲ ಜೀವರಾಶಿಗಳೂ ಪ್ರದಶರ್ಿಸುವ ಲೈಂಗಿಕ ಕ್ರಿಯೆಗೆ ಪ್ರಮುಖ ಪ್ರೇರಣೆ ಜೈವಿಕ (ಛಠಟಠರಛಿಚಿಟ) ಮೂಲದ್ದು; ಲೈಂಗಿಕ ಬಯಕೆ ಮತ್ತು ಅದರ ಅಭಿವ್ಯಕ್ತಿ ಎಲ್ಲಾ ಜೀವಿಗಳಲ್ಲೂ ಅಸ್ಥಿತ್ವದಲ್ಲಿರುವ ಒಂದು ಪ್ರಬಲ ಮನೋದೈಹಿಕ ಪ್ರವೃತ್ತಿ (ಠಿಥಿಛಿಠಠಿಥಿಛಿಚಿಟ ಣಜಟಿಜಜಟಿಛಿಥಿ). ಇದನ್ನು ಕೊಂಚ ವಿವರವಾಗಿ ಹೇಳಬೇಕಾಗಿದೆ.

   ಪ್ರಪಂಚದಲ್ಲಿರುವ ಎಲ್ಲಾ ಜೀವಿಗಳಲ್ಲೂ ಕಂಡುಬರುವ ಮೂಲ ಪ್ರವೃತ್ತಿಗಳು ಎರಡು: ಮೊದಲನೆಯದು ಸ್ವಯಂ-ರಕ್ಷಣೆ (ಜಟಜಿ-ಠಿಡಿಜಜಡಿತಚಿಣಠಟಿ); ಎರಡನೆಯದು ಸಂತತಿ-ರಕ್ಷಣೆ (ಡಿಚಿಛಿಜ ಠಿಡಿಜಜಡಿತಚಿಣಠಟಿ). ಅಂದರೆ, ಪ್ರತಿ ಜೀವಿಯಲ್ಲೂ ತಾನು ಬದುಕಬೇಕು ಮತ್ತು ತನ್ನ ಸಂತತಿ ಬೆಳೆಯಬೇಕು, ವಂಶಾಭಿವೃದ್ಧಿಯಾಗಬೇಕು ಎನ್ನುವ ಉತ್ಕಟ ಬಯಕೆಗಳು ಅನಾದಿ ಕಾಲದಿಂದಲೂ ಶಾಶ್ವತವಾಗಿ ಉಳಿದುಬಂದು ಇಂದು ಕೂಡ ಕ್ರಿಯಾಶೀಲವಾಗಿರುತ್ತವೆ. ಈ ಪ್ರವೃತ್ತಿಗಳು ಮಾನವೇತರ ಪ್ರಾಣಿಗಳ ಹಂತದಲ್ಲಿ ಅನಿಯಂತ್ರಿತವಾಗಿ, ಅನಿರ್ಬಂಧಿತವಾಗಿ ಜರಗುತ್ತಿರುತ್ತವೆ. ಮಾನವನ ಹಂತದಲ್ಲಿ ಈ ಕ್ರಿಯೆಗಳು ಸಾಮಾಜಿಕ ನೀತಿನಿಯಮಗಳಿಗನುಸಾರವಾಗಿ ನಡೆಯಬೇಕು. ಸ್ವಯಂರಕ್ಷಣೆ, ಸ್ವಂತ ದುಡಿಮೆ ಮತ್ತು ಗಳಿಕೆಯಿಂದ ನಡೆಯಬೇಕು; ಸಂತತಿರಕ್ಷಣೆ, ವೈವಾಹಿಕ ಚೌಕಟ್ಟಿನೊಳಗೆ, ನಿಯಂತ್ರಿತ ಲೈಂಗಿಕ ಕ್ರಿಯೆಯ ಮೂಲಕ ನಡೆಯಬೇಕು. ಇವೆರಡು ಕ್ರಿಯೆಗಳು ನಿಯಮಬದ್ಧವಾಗಿ ನಡೆದರೆ ಯಾವ ಸಮಸ್ಯೆಗಳೂ ಏಳುವುದಿಲ್ಲ. ಪ್ರತಿಯೊಬ್ಬ ವ್ಯಕ್ರಿಯೂ ದುಡಿದು, ಸಂಪಾದಿಸಿ, ಉಂಡು ಬದುಕಬೇಕಾದುದು ಸ್ವಯಂರಕ್ಷಣೆಯ ನ್ಯಾಯಸಮ್ಮತವಾದ ಹಾದಿ. ವೈವಾಹಿಕ ಚೌಕಟ್ಟಿನಲ್ಲಿ ಸಂತಾನ ಪಡೆದು ವಂಶಾಭಿವೃದ್ಧಿ ಮಾಡುವುದು ನೀತಿಯುತವಾದ ವಿಧಾನ. ಈ ಎರಡು ಕ್ರಿಯೆಗಳು ನಿಯಮಾನುಸಾರವಾಗಿ ನಡೆಯುವಂತೆ ನೋಡಿಕೊಳ್ಳುವುದು ಸಮಾಜದ ಕರ್ತವ್ಯ; ಸಮಾಜ ನಿಮರ್ಾಣವಾಗಿರುವುದು ಅದಕ್ಕಾಗಿಯೇ. ಸಮಾಜದ ನೀತಿನಿಯಮಗಳು ಸಡಿಲವಾದರೆ, ಸ್ವರಕ್ಷಣೆ ಅಡ್ಡ ದಾರಿ ಹಿಡಿಯುತ್ತದೆ; ದುಡಿಯದೆ ಗಳಿಸುವ, ಇತರರನ್ನು ಶೋಷಣೆ ಮಾಡಿ ಬದುಕುವ, ಅನೈತಿಕ ಹಾದಿ ಹಿಡಿಯುತ್ತದೆ. ಇದು ಬ್ರಷ್ಟಾಚಾರಕ್ಕೆ ಎಡೆಮಾಡಿಕೊಡುತ್ತದೆ. ಅನಿಯಮಿತ ಲೈಂಗಿಕ ಪ್ರವೃತ್ತಿ, ಹಾದರ ಮತ್ತು ಅತ್ಯಾಚಾರಕ್ಕೆ ಎಡೆ ಮಾಡಿಕೊಡುತ್ತದೆ. ಇಂದು ಸಮಾಜವನ್ನು ಕಲುಷಿತಗೊಳಿಸುತ್ತಿರುವ  ಪ್ರಮುಖ ಅಪರಾಧಗಳು ಎರಡು: ಅತ್ಯಾಚಾರ ಮತ್ತು ಭ್ರಷ್ಟಾಚಾರ. ಸಮಾಜದ ನಿಯಂತ್ರಣ ಸಡಿಲವಾದಾಗ ಇವೆರಡೂ ಮೇಲುಗೈ ಸಾಧಿಸಲು ಕಾದಿರುತ್ತವೆ. ಇವೆರಡು ಪ್ರಬಲ ಬಯಕೆಗಳು; ಇವನ್ನು ನಿಯಂತ್ರಿಸಲು ಸಮಾಜದಲ್ಲಿ ಕಠಿಣ ಶಾಸನಗಳೇ ಬೇಕು.

   ವಿಕಾಸವಾದದ (ಣಜಠಡಿಥಿ ಠಜಿ ಜತಠಟಣಣಠಟಿ) ಪ್ರಕಾರ, ಸ್ವಯಂರಕ್ಷಣೆ ಮತ್ತು ಸಂತತಿರಕ್ಷಣೆ ಎಲ್ಲಾ ಜೀವಿಗಳಲ್ಲೂ ಸದಾ ಎಚ್ಚರವಾಗಿರುವ ಪ್ರಮುಖ ವರ್ತನಾಪ್ರಕಾರಗಳು. ಅವೆರಡೂ ನಿರಂತರವಾಗಿ ನಡೆಯಲೇ ಬೇಕು; ಇಲ್ಲದಿದ್ದರೆ ವಿಶ್ವದಲ್ಲಿ ಜೀವರಾಶಿ ನಾಶವಾಗುತ್ತದೆ. ಆದುದರಿಂದ ಈ ಪ್ರವೃತ್ತಿಗಳು ಸರಾಗವಾಗಿ ಜರುಗಲು ಬೇಕಾದ ಕೌಶಲ್ಯಗಳನ್ನು ಎಲ್ಲಾ ಪ್ರ್ರಾಣಿಗಳು ಆಯ್ದುಕೊಂಡು, ಬೆಳೆಸಿಕೊಂಡು, ಉಳಿಸಿಕೊಂಡಿವೆ (ಠಿಡಿಟಿಛಿಠಿಟಜ ಠಜಿ ಟಿಚಿಣಣಡಿಚಿಟ ಜಟಜಛಿಣಠಟಿ). ಮನುಷ್ಯರನ್ನು ಬಿಟ್ಟರೆ ಉಳಿದ ಎಲ್ಲಾ ಪ್ರಾಣಗಳಲ್ಲೂ ಸ್ವಯಂರಕ್ಷಣೆ ಮತ್ತು ಸಂತತಿರಕ್ಷಣೆ ಕ್ರಿಯೆಗಳು ಅನಿಯಂತ್ರಿತವಾಗಿ, ಅಡೆತಡೆಗಳಿಲ್ಲದೆ ನಡೆಯುತ್ತವೆ. ಮನುಷ್ಯರ ಹಂತದಲ್ಲಿ ಈ ವರ್ತನೆಗಳು ಸಾಮಾಜಿಕ ನಿಯಮಗಳಿಗೆ ಒಳಪಟ್ಟಿರುತ್ತವೆ. ಸಮಾಜವಿಲ್ಲದಿದ್ದರೆ ಮನುಷ್ಯರೂ ಪ್ರಾಣಿಗಳಂತೆ ಬದುಕುತ್ತಿದ್ದರು. ಹಾಗೆ ನೋಡಿದರೆ, ವಿಕಾಸದ ಹಾದಿಯಲ್ಲಿ ಲೈಂಗಿಕ ಸ್ವೇಚ್ಛಾಚಾರವನ್ನು ನಿಯಂತ್ರಿಸುವುದಕ್ಕಾಗಿಯೇ ಸಮಾಜ ನಿಮರ್ಾಣವಾಯಿತೆಂಬ ವಾದವೂ ಇದೆ. ಸಾಮಾಜಿಕ ನೀತಿ ನಿಯಮಗಳು ಅಸ್ಥಿತ್ವಕ್ಕೆ ಬಂದ ಮಾತ್ರಕ್ಕೆ ಆಂತರಿಕ ಬಯಕೆಗಳು ನಾಶವಾಗುವುದಿಲ್ಲ; ಅವು ತಡೆಹಿಡಿಯಲ್ಪಟ್ಟಿದ್ದ್ದು ಹೊರಬರಲು ಅವಕಾಶಕ್ಕಾಗಿ ಕಾಯುತ್ತಿರುತ್ತವೆ. ಸಾಮಾಜಿಕ ನಿಯಮಗಳು ಸಡಿಲವಾದಾಗ, ಆಡಳಿತದಲ್ಲಿ ಭ್ರಷ್ಟಾಚಾರ ಮಿತಿಮೀರಿದಾಗ, ಸಮಾಜದಲ್ಲಿ ಅನುಕರಣೀಯ ಮಾದರಿಗಳು ವಿರಳವಾದಾಗ, ಮಾನವರ ವರ್ರನೆಗೆ ಕಡಿವಾಣವಿಲ್ಲವಾಗಿ, ಸ್ವಯಂರಕ್ಷಣೆ ಮತ್ತು ಸಂತತಿ ರಕ್ಷಣೆಯಂಥ ಪ್ರವೃತ್ತಿಗಳು ಅನಿಯತವಾಗಿ ಪ್ರದರ್ಶನಗೊಳ್ಳುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಅವೆರಡರ ವಿಕೃತ ಪ್ರದರ್ಶನವೇ ಭ್ರಷ್ಟಾಚಾರ ಮತ್ತು ಅತ್ಯಾಚಾರ. ಮಾನವ ಮೂಲತಃ ಸುಖಾಪೇಕ್ಷಿ; ಲೈಂಗಿಕತೆ ಸುಖಪ್ರದಾಯಕ ಕ್ರಿಯೆಗಳಲ್ಲಿ ಪ್ರಮುಖವಾದುದು. ಅವಕಾಶಗಳು ಸುಲಭವಾಗಿ ಒದಗಿಬಂದಾಗ ಮಾನವನ ಪಾಶವೀಪ್ರವೃತ್ತಿಗಳು ಅಭಿವ್ಯಕ್ತಗೊಳ್ಳುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಬಲಿಷ್ಠವಾದ ಪ್ರವೃತ್ತಿಗಳನ್ನು ತಡೆ ಹಿಡಿಯಲು ಬಲಿಷ್ಠ ನಿಯಮಗಳೇ ಬೇಕು. ಇಲ್ಲದಿದ್ದರೆ ಸ್ವರಕ್ಷಣೆಗಾಗಿ ಇತರರ ಮೇಲೆ ಆಕ್ರಮಣ ಮಾಡುವ, ಕಿತ್ತು ತಿನ್ನುವ, ಶೋಷಣೆ ಮಾಡುವ, ಕಳ್ಳತನ ಮಾಡುವ ಪ್ರವೃತ್ತಿಗಳು ಬೆಳೆದು ಬರುತ್ತವೆ; ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡುತ್ತದೆ. ಅನಿಯಂತ್ರಿತ ಲೈಂಗಿಕ ಬಯಕೆ ಅತ್ಯಾಚಾರಕ್ಕೆ ಎಡೆಮಾಡಿಕೊಡಬಹುದು.

ಅತ್ಯಾಚಾರಕ್ಕೆ ಶಿಕ್ಷೆ

ಅತ್ಯಾಚಾರ ಗುರುತರವಾದ, ಅಮಾನವೀಯ ಅಪರಾಧ, ಅದಕ್ಕೆ ತಕ್ಕ ಶಿಕ್ಷೆಯಾಗಲೇಬೇಕು ಎಂಬುದು ಸಾರ್ವಜನಿಕ ಅಭಿಪ್ರಾಯ.
ಮೇಲೆ ತಿಳಿಸಿದಂತೆ ದೆಹಲಿಯಲ್ಲಿ ಕಳೆದ ವರ್ಷ 635 ಅತ್ಯಾಚಾರಗಳು ನಡೆದಿವೆ. ಆದರೆ ಶಿಕ್ಷೆಯಾದದ್ದು ಒಬ್ಬರಿಗೆ ಮಾತ್ರ. ಒಂದು ರೀತಿಯಲ್ಲಿ ಇದು ಅತ್ಯಾಚಾರಕ್ಕೆ ಸಮಾಜ ಕೊಡುತ್ತಿರುವ ಪ್ರೋತ್ಸಾಹದಂತೆ ಕಂಡುಬಂದರೆ ಆಶ್ಚರ್ಯವಿಲ್ಲ. ಶಿಕ್ಷೆ ಮುಗಿದು ಹೊರಬಂದಾಗ ಅತ್ಯಾಚಾರದಂತಹ ಕೃತ್ಯಗಳು ಮರುಕಳಿಸುವ ಸಾಧ್ಯತೆ ಹೆಚ್ಚಾಗುವುದೆನ್ನುವ ಅಭಿಪ್ರಾಯವೂ ಇದೆ.

   ಇತ್ತೀಚೆಗೆ ಅತ್ಯಾಚಾರವೆಸಗಿದ ಕೆಲವು ಅಪ್ರಾಪ್ತ ಯುವಕರನ್ನು ಬಾಲಾಪರಾಧಿಗಳೆಂದು ಪರಿಗಣಿಸಿ ಅವರನ್ನು ಶಿಕ್ಷೆಗೊಳಪಡಿಸುವುದಿಲ್ಲ ಅಥವಾ ಅವರಿಗೆ ಶಿಕ್ಷೆಯ ಪ್ರಮಾಣವನ್ನು ಕಡಮೆ ಮಾಡಲಾಗುತ್ತಿದೆ. ಕೇವಲ ವಯಸ್ಸನ್ನು ಆಧಾರವಾಗಿಟ್ಟುಕೊಂಡು ಅಪರಾಧವನ್ನು ಕ್ಷಮಿಸುವುದು ಸರಿಯೇ ಎಂಬುದು ಆಲೋಚಿಸಬೇಕಾದ ವಿಷಯ. ವಯಸ್ಸು ಚಿಕ್ಕದಾದರೂ ವ್ಯಕ್ತಿ ಮಾನಸಿಕವಾಗಿ, ಲೈಂಗಿಕವಾಗಿ ಬೆಳೆದಿರಬಹುದು. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಸಂಬಂಧಿಸಿದ ಶಾಸನಗಳಿಗೆ ತಿದ್ದುಪಡಿ ಮಾಡಬೇಕೆ ಎಂಬುದು ತೀಮರ್ಾನವಾಗಬೇಕು.

   ಅತ್ಯಾಚಾರಕ್ಕೆ ಮರಣದಂಡನೆ ಅಥವಾ ಜೀವಾವಧಿ ಸೆರೆವಾಸ ಸರಿಯಾದ ಶಿಕ್ಷೆ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ.  ಮತ್ತೆ ಕೆಲವರು ಶಿಕ್ಷೆಯ ರೂಪವೇ ಬದಲಾಗಬೇಕೆನ್ನುತ್ತಾರೆ. ಅವರ ಪ್ರಕಾರ  ಮರಣದಂಡನೆಗೆ ಒಳಗಾದವರು, ಜೈಲಿಗೆ ಹೋದವರು ಕಣ್ಮರೆಯಾಗುತ್ತಾರೆ; ಜನ ಅವರನ್ನು ಬೇಗ ಮರೆತುಬಿಡುತ್ತಾರೆ; ಹಾಗಾಗಬಾರದು. ಅಂಥ ದುಷ್ಕಮರ್ಿಗಳು ಸಮಾಜದಲ್ಲಿಯೇ ಇದ್ದು ಅವಹೇಳನಕ್ಕೆ ಗುರಿಯಾಗಬೇಕು. ಅವರ ಆಸ್ತಿಯನ್ನು ಸಕರ್ಾರ ಮುಟ್ಟುಗೋಲು ಹಾಕಿಕೊಳ್ಳಬೇಕು; ಸಮಾಜ ಅವರಿಗೆ ಬಹಿಷ್ಕಾರ ಹಾಕಬೇಕು; ಅವರಿಗೆ ಪೌರತ್ವವನ್ನು ನಿರಾಕರಿಸಬೇಕು, ಯಾವುದೇ ನಾಗರಿಕ ಸವಲತ್ತುಗಳಿಗೆ ಅವರು ಅನರ್ಹರೆಂದು ಘೋಷಿಸಬೇಕು. ಸಮಾಜದಲ್ಲಿ ಅವರಿಗೆ ಯಾವುದೇ ಉದ್ಯೋಗ ಕೊಡಬಾರದು. ಯಾರಾದರು ಅಂಥವರಿಗೆ ಸಹಾಯ ಮಾಡಿದರೆ ಅವರಿಗೆ ಶಿಕ್ಷೆಯಾಗಬೇಕು. ಅವರ ಮೇಲೆ ನಾನೊಬ್ಬ ಅತ್ಯಾಚಾರಿ ಎಂಬ ಅಣೆಪಟ್ಟಿ ಹಾಕುವುದು ಸಾಧ್ಯವಿದ್ದರೆ, ಹಾಗೂ ಮಾಡಬಹುದು. ಒಟ್ಟಿನಲ್ಲಿ ಜನ ಅವರನ್ನು ನೋಡಿ ಅಸಹ್ಯಪಡಬೇಕು, ನಗಬೇಕು. ಜನಕ್ಕೆ ಅವರು ದುಷ್ಕೃತ್ಯದ, ದುಮರ್ಾರ್ಗದ, ಅಪಾಯದ ಸಂಕೇತಗಳಂತೆ ಕಾಣಬೇಕು. ಇಂಥ ಶಿಕ್ಷೆ ಅತ್ಯಾಚಾರ ವರ್ತನೆಯನ್ನು ತಡೆಹಿಡಿಯುತ್ತದೆ ಎಂಬುದು ಕೆಲವರ ಅಭಿಪ್ರಾಯ. ಇನ್ನೂ ಕೆಲವರು ಅತ್ಯಾಚಾರವೆಸಗಿದವರನ್ನು ಶಸ್ತ್ರಚಿಕಿತ್ಸೆ ಅಥವಾ ರಸಾಯನಿಕಗಳನ್ನು ಉಪಯೋಗಿಸಿಕೊಂಡು ನಿವರ್ಿರ್ಯಗೊಳಿಸಬೇಕೆಂದು ಸೂಚಿಸಿದ್ದಾರೆ. ಇಂಥವು ಅಮಾನವೀಯ ಕ್ರಿಯೆಗಳು, ಇಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂಬುದು ಎನ್ನುವ ವಾದವೂಇದೆ. ಆದರೆ ಅತ್ಯಾಚಾರ ಇನ್ನೂ ಹೆಚ್ಚಿನ ಅಮಾನವೀಯ ಕ್ರಿಯೆ. ಅದನ್ನು ಮಾಡುವವರು ತಮ್ಮ ಹೇಯ ಕೃತ್ಯಗಳ ಮೂಲಕ ನಾಗರಿಕ ಹಕ್ಕುಗಳನ್ನು ಉಲ್ಲಂಘಿಸುತ್ತಿದ್ದಾರಲ್ಲವೆ? ಎಂದು ಕೇಳುವವರೂ ಇದ್ದಾರೆ. ಕಾಯ್ದೆಗಳಿಂದ ಅಥವಾ ಶಿಕ್ಷೆ ವಿಧಿಸುವುದರಿಂದ ಅತ್ಯಾಚಾರವನ್ನು ತಡೆಗಟ್ಟುವುದು ಸಾಧ್ಯವಿಲ್ಲ ಎಂಬ ವಾದವೂ ಇದೆ. ಇಂಥದೆ ಪರಿಸ್ಥಿತಿಯಲ್ಲಿ  ಅಮೇರಿಕದಲ್ಲಿ ಒಂದೆಡೆ ಜಾರಿಗೆ ಬಂದ ಕಾಯ್ದೆಯ ಕತೆಯನ್ನು ಈ ಕೆಳಗೆ ಕೊಟ್ಟಿದೆ.

                                 ಮೆಗಾನ್ ಲಾ (ಒಜರಚಿಟಿ' ಐಚಿತಿ)

ಅಮೇರಿಕದ ನ್ಯು ಜಸರ್ಿ ಸ್ಟೇಟ್ನ ಹ್ಯಾಮಿಲ್ಟನ್ ನಗರದಲ್ಲಿ ಜುಲೈ 29, 1994 ರಂದು, ಏಳು ವರ್ಷ ವಯಸ್ಸಿನ ಮೆಗಾನ್ ಕಾಂಕ (ಒಜರಚಿಟಿ ಏಚಿಟಿಞಚಿ) ಎಂಬ ಬಾಲಕಿಯ ಮೇಲೆ 33 ವರ್ಷ ವಯಸ್ಸಿನ ಜೆಸ್ಸಿ ಟಿಮ್ಮೆಂಡೆಕ್ವಾಸ್ (ಎಜಜ ಖಿಟಟಜಟಿಜಜಡಣಚಿ) ಎಂಬುವವನು ಅತ್ಯಾಚಾರ ಮಾಡಿದನು. ಮೆಗಾನ್ ತನ್ನ ಸ್ನೇಹಿತೆಯ ಮನೆಯಿಂದ ತನ್ನ ಮನೆಗೆ ಹಿಂತಿರುಗುತ್ತಿದ್ದಾಗ, ಅವಳ ನೆರೆಯಲ್ಲಿ ವಾಸವಾಗಿದ್ದ ಜೆಸ್ಸಿ, ಅವಳನ್ನು ತನ್ನ ಮನೆಯಲ್ಲಿರುವ ನಾಯಿ ಮರಿಯನ್ನು ನೋಡಲು ಕರೆಯುತ್ತಾನೆ. ಹಾಗೆ ಬಂದ ಅವಳನ್ನು ಮಹಡಿ ಮೇಲಿನ ತನ್ನ ರೂಮಿಗೆ ಕರೆದೊಯ್ದು, ಅಲ್ಲಿ ಅವಳಿಗೆ ಉಸಿರುಗಟ್ಟಿಸಿ, ಜ್ಞಾನ ತಪ್ಪಿಸಿ, ರೇಪ್ ಮಾಡಿ, ಅನಂತರ ಕೊಂದು, ಅವಳ ಶರೀರವನ್ನು ಮೂಟೆಕಟ್ಟಿ ಒಂದೆಡೆ ಎಸೆದು ಬರುತ್ತಾನೆ. ಒಂದು ವರ್ಷದಿಂದ ಅಲ್ಲಿ ವಾಸಿಸುತ್ತಿದ್ದ ಜೆಸ್ಸಿ ಮಕ್ಕಳಮೇಲೆ ಅತ್ಯಾಚಾರ ಮಾಡಿ ಎರಡು ಸಾರಿ ಸೆರೆವಾಸ ಅನುಭವಿಸಿದವನೆಂದು ಅಲ್ಲಿದ್ದ ಯಾರಿಗೂ ಗೊತ್ತಿರಲಿಲ್ಲ. ಕೊನೆಗೆ ಸಕರ್ಾರ ಅವನನ್ನು ಪತ್ತೆಹಚ್ಚಿ, ಅವನ ಅಪರಾಧ ದೃಡಪಟ್ಟು, ನ್ಯಾಯಾಲಯ ಅವನನ್ನು ಮರಣದಂಡನೆಗೆ ಒಳಪಅಡಿಸಿತು. ಈ ಸುದ್ದಿ ಜನರನ್ನು ಕೆರಳಿಸಿತು. ಎಚ್ಚೆತ್ತ ಸಕರ್ಾರ ಇಂಥ ಘಟನೆಗಳು ಮರುಕಳಿಸದಿರಲು ಮೆಗಾನ್ ಲಾ ವನ್ನು ಜಾರಿಗೆ ತಂದಿತು. ಆ ಕಾಯ್ದೆಯನ್ವಯ, ಇಂಥ ಅಪರಾಧಿಗಳು, ಸೆರೆಯಿಂದ ಹೊರಬಂದಾಗ ಅದನ್ನು ಜನರಿಗೆ ತಿಳಿಸಬೇಕು; ಅಪರಾಧಿಗಳು ಪೋಲೀಸ್ ಸ್ಟೇಷನ್ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಬೇಕು ಎಂದು ಆದೇಶಿಸಲಾಯ್ತು. ಇಂತದೇ ಕಾನೂನು ಬೇರೆ ಸ್ಟೇಟ್ಗಳಲ್ಲೂ ಜಾರಿಗೆ ತರಲಾಯ್ತು. ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂಬ ಕೂಗು ಕೂಡ ಕೇಳಿಬಂತು. ಮೆಗಾನ್ ಲಾ ಜಾರಿಗೆ ಬಂದಮೇಲೆ ಕೆಲವು ಅಹಿತಕರ ಘಟನೆಗಳು ನಡೆದವು ಕೂಡ. ಕೆಲವೆಡೆ ಜೈಲಿನಿಂದ ಹೊರಬಂದ ಅಪರಾಧಿಗಳನ್ನು ಜನರೇ ಕೊಂದು, ಅವರ ಮನೆಗೆ ಬೆಂಕಿ ಹಚ್ಚಿದ ಘಟನೆಗಳು ನಡೆದವು. ಉದಾಹರಣೆಗೆ, ಜಾನ್ ಬೆಸೆರ್ರ ಎಂಬ ಅಪರಾಧಿ ಹೊಸ ಜೀವನ ಆರಂಭಿಸಲು ಊರು ಬಿಟ್ಟು ನ್ಯೂ ಯಾಕರ್್ ನಗರಕ್ಕೆ ಬಂದನು. ಆದರೆ ನೆರೆಹೊರೆಯವರು ಅವನನ್ನು ಅಲ್ಲಿ ವಾಸಿಸಲು ಬಿಡಲಿಲ್ಲ. ಅವನ ಮನೆ ಮುಂದೆ ಅತ್ಯಾಚಾರಿಗಳಿದ್ದಾರೆ, ಎಚ್ಚರಿಕೆ ಎಂಬ ಬೋಡರ್್ ಬರೆದಿಟ್ಟರು. ಇನ್ನೂ ಮುಖ್ಯವಾದ ವಿಷಯವೆಂದರೆ, ಮೆಗಾನ್ ಕಾಯ್ದೆ ಜಾರಿಗೆ ಬಂದಕಡೆಗಳಲ್ಲಿ ಅತ್ಯಾಚಾರಗಳ ಸಂಖ್ಯೆ ಕಡಮೆಯಾದಂತೆ ಕಂಡುಬರಲಿಲ್ಲ.          


   ಅತ್ಯಾಚಾರವನ್ನು ಕಾನೂನು ಮತ್ತು ಕಠಿಣ ಶಿಕ್ಷೆಗಳಿಂದಲೇ ತೊಡೆದುಹಾಕುವುದು ಸಾಧ್ಯವಿಲ್ಲ. ಅದಕ್ಕಾಗಿ ಜನರ ಮನೋಭಾವದಲ್ಲಿ ಪರಿವರ್ತನೆಯಾಗಬೇಕು. ಜನರ ಮನಸ್ಸಿನಲ್ಲಿ ಸ್ತ್ರೀಯರ ಬಗ್ಗೆ ಗೌರವ ಹುಟ್ಟಬೇಕು. ಅದಕ್ಕೆ ಸಹಾಯವಾಗುವಂಥ ನೈತಿಕ ಶಿಕ್ಷಣವನ್ನು ನಮ್ಮ ಮಕ್ಕಳಿಗೆ ಕೊಡಬೇಕು. ಹೆಣ್ಣನ್ನು ಕುರಿತು ಜನರಾಡುವ ಭಾಷೆ ಸುಸಂಸ್ಕೃತವಾಗಿರಬೇಕು. ಹೆಣ್ಣು ಜಗನ್ಮಾತೆ, ಆದಿಶಕ್ತಿ, ದೇವತೆ, ಪೂಜ್ಯಳು, ಮಾತೃದೇವೋಭವ, ಎನ್ನುವ ಮಾತುಗಳು ನಮ್ಮ ಪುರಾಣ, ಇತಿಹಾಸಗಳಲ್ಲಿದ್ದರಷ್ಟೇ ಸಾಲದು. ಅವನ್ನು ಆಚರಣೆಗೆ ತರಬೇಕು. ನಾವಾಡುವ ಮಾತನ್ನು ಮಾತೃಭಾಷೆ ಎನ್ನುತ್ತೇವೆ; ನಾವು ವಾಸಿಸುವ ನೆಲವನ್ನು ಮಾತೃಭೂಮಿ ಎನ್ನುತ್ತೇವೆ. ಮಾತೃದ್ರೋಹ, ಮಾತೃಗಮನ ಪರಿಹಾರವಿಲ್ಲದ ಪಾಪಗಳು ಎಂದು ನಂಬುವವರು ನಾವು. ಹೆಣ್ಣು ಎಲ್ಲಿ ಪೂಜ್ಯಳೋ ಅಲ್ಲಿ ದೇವರು ವಾಸಿಸುತ್ತಾನೆ ಎಂದು ನಮ್ಮ ದರ್ಶನಗಳು ಹೇಳುತ್ತಿವೆ. ಅಂದಮೇಲೆ ನಾವು ಸ್ತ್ರೀಯರನ್ನು ಗೌರವಿಸದಿರುವುದು ಹೇಗೆ ಸಾಧ್ಯ? ಇನ್ನೊಂದು ಮಾತು; ಹೆಣ್ಣನ್ನು ಸಮಾಜ ಪೂಜ್ಯಳೆಂದು ಭಾವಿಸಿ ಗೌರವಿಸಿದರೆ, ಆ ಗೌರವವನ್ನು ಉಳಿಸಿಕೊಳ್ಳಲು ಅವಳೂ ಪ್ರಯತ್ನಿಸುತ್ತಿರಬೇಕು.

ಸ್ತ್ರೀಯರ ಸಬಲೀಕರಣ

ಅತ್ಯಾಚಾರವನ್ನು ತಡೆಯುವಲ್ಲಿ ಸ್ತ್ರೀಯರ ಪಾತ್ರವೂ ಇದೆ. ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳಬಲ್ಲೆವೆಂಬ ಮಾನಸಿಕ ಸ್ಥೈರ್ಯ ಬೆಳಸಿಕೊಳ್ಳಬೇಕು; ರಕ್ಷಿಸಿಕೊಳ್ಳುವ ವಿಧಾನಗಳನ್ನು ಕಲಿಯಬೇಕು. ಶಾಲಾ ಕಾಲೇಜುಗಳಲ್ಲಿ ಸ್ತ್ರೀಯರಿಗೆ ದೈಹಿಕ ಶಿಕ್ಷಣವನ್ನು ಕಡ್ಡಾಯವಾಗಿ ಕಲಿಸುವ ಏಪರ್ಾಡಾಗಬೇಕು. ಹೊರಗಡೆ ಕೂಡ ಸ್ವರಕ್ಷಣ ತಂತ್ರಗಳನ್ನು ಕಲಿಸುವ  ಸಂಸ್ಥೆಗಳನ್ನು ಹೆಚ್ಚು ಸಂಖ್ಯೆಯಲ್ಲಿ ಸ್ಥಾಪಿಸಬೇಕು. ಸ್ತ್ರೀಯರು ಶಾರೀರಿಕವಾಗಿ ಪುರುಷರಷ್ಟು ಶಕ್ತಿವಂತರಿಲ್ಲದಿರಬಹುದು. ಅಂದ ಮಾತ್ರಕ್ಕೆ ಅವರು ಶಕ್ತಿಹೀನರೆಂದು ಭಾವಿಸಬಾರದು. ಅವರಿಗೆ ತಮ್ಮನ್ನು ತಾವು ಕಾಪಾಡಿಕೊಳ್ಳಲು ಬೇಕಾಗುವಷ್ಟು ಶಾರೀರಿಕ ಶಕ್ತಿ ಇದೆ. ಅದು ಅವರಿಗೆ ಮನದಟ್ಟಾಗಬೇಕು. ತಮ್ಮಲ್ಲಿರುವ ಶಕ್ತಿಯನ್ನು ಉಪಯೋಗಿಸುವ ವಿಧಾನಗಳನ್ನು ಅವರು ಕಲಿಯಬೇಕು.

   ಆಧುನಿಕ ಸಮಾಜ ಆಥರ್ಿಕ ಮೌಲ್ಯಗಳ ಮೇಲೆ ನಿಂತಿದೆ. ಇಲ್ಲಿ ದುಡ್ಡಿಗೆ ಬೆಲೆ ಹೆಚ್ಚು; ದುಡ್ಡಿದ್ದವನೇ ದೊಡ್ಡಪ್ಪ. ಬಹಳ ಕಾಲದಿಂದಲೂ ಹೆಣ್ಣು ಆಥರ್ಿಕವಾಗಿ ಪರಾವಲಂಬಿಯಾಗಿ ಉಳಿದು ಬಂದಿದ್ದಾಳೆ; ಸಮಾಜದಲ್ಲಿ ಎರಡನೆ ದಜರ್ೆಯ ಪ್ರಜೆಯೆನಿಸಿಕೊಂಡಿದ್ದಾಳೆ. ಕೆಲವೆಡೆ ಹೆಣ್ಣಾಗಿ ಹುಟ್ಟುವುದೇ ಒಂದು ಅನಾನುಕೂಲವಾಗಿ (ಜಚಿಜತಚಿಟಿಣಚಿರಜ) ಪರಿಣಮಿಸಿದೆ. ಅವಳ ದೈನಂದಿನ ಎಲ್ಲ ಅವಶ್ಯಕತೆಗಳ ಪೂರೈಕೆ ಗಂಡಿನಿಂದಲೇ ಆಗಬೇಕು. ಇಂಥ ಪರಿಸ್ಥಿತಿಯಲ್ಲಿ ಸ್ತ್ರೀಸ್ವಾತಂತ್ರ್ಯ, ಸಮಾನತೆ, ಎಂಬ ಮಾತುಗಳಿಗೆ ಅರ್ಥವೇ ಇರುವುದಿಲ್ಲ. ಹೆಣ್ಣಿಗೆ ಮೊದಲು ಬೇಕಾಗಿರುವುದು ಆಥರ್ಿಕ ಸ್ವಾತಂತ್ರ್ಯ. ಆಥರ್ಿಕ ಸ್ವಾಯತ್ತತೆ ದೊರಕಬೇಕಾದರೆ ಅವಳಿಗೆ ಉನ್ನತ ಶಿಕ್ಶಣ ದೊರಕಬೇಕು. ಸಮಾಜದ ಎಲ್ಲಾ ಹಂತಗಳಲ್ಲಿ ಅವಳು ಉದ್ಯೋಗ ನಿರ್ವಹಿಸಬಹುದಾದ ಪರಿಸ್ಥಿತಿ ನಿಮರ್ಾಣವಾಗಬೇಕು. ದುಡಿದು ತನ್ನ ಕಾಲ ಮೇಲೆ ತಾನು ನಿಲ್ಲಬಲ್ಲೆನೆಂಬ ಮನಃಸ್ಥಿತಿ ಅವಳದಾಗಬೇಕು. ಸಾರ್ವಜನಿಕ ಸಂಸ್ಥೆಗಳಲ್ಲಿ, ಕೈಗಾರಿಕೆ, ಕಲೆ, ವಿಜ್ಞಾನ, ಸೈನ್ಯ, ಪೋಲೀಸ್, ಮೊದಲಾದ ಸಮಾಜದ ಎಲ್ಲಾ ಪ್ರಕಾರಗಳಲ್ಲಿ ಗಂಡಿನ ಸಮಕ್ಕೆ ನಿಂತು ಹೆಣ್ಣು ದುಡಿಯುವಂತಾಗಬೇಕು. ಒಬ್ಬ ಉತ್ತಮ ವರನನ್ನು ಹುಡುಕಿ ವಿವಾಹವಾಗುವುದೇ ಜೀವನದ ಪರಮ ಗುರಿ ಎಂಬ ಮನೋಭಾವದಿಂದ ಸ್ತ್ರೀಯರು ಹೊರಬರಬೇಕು. ವಿವಾಹವಿಲ್ಲದೆಯೂ ಬದುಕಬಲ್ಲೆನೆಂಬ ನಂಬಿಕೆ ಅವಳಲ್ಲಿ ಬೆಳೆಯಬೇಕು. ಅನುರೂಪನಾದ ವರನನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ಹೆಣ್ಣಿಗೂ ಇರಬೇಕು. ಹೆಣ್ಣು ಮದುವೆಯಾಗಿ ಗಂಡನ ಮನೆಗೆ ಹೋಗುವಂತೆಯೇ ಗಂಡು ಕೂಡ ಹೆಂಡತಿಯ ಮನೆಗೆ ಬಂದು ನೆಲೆಸುವ  ಸಂಪ್ರದಾಯ ಬೆಳೆದು ಬರಬೇಕು. ನಮ್ಮ ಹೆಣ್ಣುಮಕ್ಕಾಳು ವಿವಾಹಕ್ಕೆ ಮೊದಲು ತಮ್ಮ ಹೆಸರಿನೊಂದಿಗೆ ತಂದೆಯ ಹೆಸರನ್ನು, ವಿವಾಹಾನಂತರ ಗಂಡನ ಹೆಸರನ್ನು ಸೇರಿಸಿಕೊಳ್ಳುವ ಅಬ್ಯಾಸವನ್ನು ಬಿಡಬೇಕು. ಕೆಲವೆಡೆ ಮದುವೆಯಾಗಿ ಗಂಡನ ಮನೆಗೆ ಬಂದ ಹೆಣ್ಣಿಗೆ ಹೊಸ ಹೆಸನ್ನಿಡುವ  ಸಂಪ್ರದಾಯವಿದೆ; ಅದು ಹೋಗಬೇಕು. ಹೆಣ್ಣು ತನ್ನ ಹೆಸರನ್ನು ಅದಿರುವಂತೆ ಗೌರವಿಸಬೇಕು. ಮಗಳಿಗೊಂದು ವರನನ್ನು ಹುಡುಕಿ ಮದುವೆ ಮಾಡಿ ಕನ್ಯಾಸೆರೆ ಬಿಡಿಸುವುದೇ ತಮ್ಮ ಜೀವನದ ಪರಮೋದ್ದೇಶವೆಂದು ಹೆಣ್ಣನ್ನು ಹೆತ್ತವರು ತಿಳಿಯಬಾರದು. ಅವಳಲ್ಲಿ ತನ್ನ ಕಾಲ ಮೇಲೆ ತಾನು ನಿಲ್ಲಬಲ್ಲೆ, ಯಾರ ಹಂಗೂ ಇಲ್ಲದೆ ಜೀವಿಸಬಲ್ಲೆ ಎನ್ನುವ ಧೋರಣೆ ಬೆಳೆಯುವುದಕ್ಕೆ ತಕ್ಕ ಪರಿಸರವನ್ನು ನಿಮರ್ಿಸಬೇಕು. ಅದು ನಿಜವಾದ ಹೆಣ್ಣಿನ ಸಬಲೀಕರಣ. ಅದು ನಿಜವಾದ ಸ್ವಾತಂತ್ರ್ಯ. ಇತ್ತೇಚೆಗೆ ನಡೆದಿರುವ ಕೆಲವು ಅಧ್ಯಯನಗಳ ಪ್ರಕಾರ, ಹೆಣ್ಣು ಸಬಲೀಕರಣಗೊಂಡ ದೇಶಗಳಲ್ಲಿ ಅತ್ಯಾಚಾರದ ಪ್ರಕರಣಗಳು ಇಳಿಮುಖವಾಗಿರುವುದು ಕಂಡುಬಂದಿದೆ.

ಕೊನೆಯ ಮಾತು

ಮನೋವಿಜ್ಞಾನಿಗಳ ಪ್ರಕಾರ ಮನುಷ್ಯರ ವ್ಯಕ್ತಿತ್ವವನ್ನು ಪ್ರಮುಖವಾಗಿ ಜೈವಿಕ, ಮಾನಸಿಕ ಮತ್ತು ಸಾಮಾಜಿಕ ವ್ಯವಸ್ಥೆಗಳು ನಿರ್ಧರಿಸುತ್ತವೆ. ದೈಹಿಕ ಬಯಕೆಗಳು, ಮಾನಸಿಕ ಅಭೀಪ್ಸೆಗಳು ಸಾಮಾಜಿಕ ಚೌಕಟ್ಟಿನೊಳಗೆ ಪೂರೈಕೆಯಾಗಬೇಕು. ಇದಕ್ಕಾಗಿ, ಸಮಾಜ ಗಂಡಿಗೆ ಮತ್ತು ಹೆಣ್ಣಿಗೆ ಕೆಲವು ವಿಶಿಷ್ಟ ಪಾತ್ರಗಳನ್ನು ನಿರ್ವಹಿಸುವಂತೆ ಆಣತಿ ಮಾಡಿರುತ್ತದೆ. ಈ ಪಾತ್ರಗಳಲ್ಲಿ ಯಾವುದೂ ಮೇಲಲ್ಲ, ಯಾವುದೂ ಕೀಳಲ್ಲ.  ಪಾತ್ರಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ. ಅದಕ್ಕನುಗುಣವಾಗಿ ಹೆಣ್ಣುಗಂಡುಗಳಲ್ಲಿ ಬದಲಾವಣೆಯಾಗಬೇಕು. ಗಂಡು ದುಡಿಯಲು ಹೊರಗೆ ಹೋದರೆ ಹೆಣ್ಣು ಮನೆಗೆಲಸದಲ್ಲಿ ತೊಡಗುವುದರಲ್ಲಿ, ಅಡುಗೆ ಮಾಡಿ, ಮಕ್ಕಳನ್ನು ಸಾಕಿಸಲಹುದರಲ್ಲಿ ತಪ್ಪೇನು ಇಲ್ಲ. ಹಾಗೆಯೇ ಹೆಣ್ಣು ಹೊರಗೆ ದುಡಿಯುತ್ತಿದ್ದರೆ ಗಂಡು ಮನೆಗೆಲಸ ಮಾಡಬೇಕು. ಅನವಶ್ಯಕವಾಗಿ ಸ್ತ್ರೀಯರು ಒಂಟಿಯಾಗಿ ಹೊರಗೆ ಹೋಗಬಾರದು. ಹೋಗಲೇಬೇಕಾದಾಗ ವಿಪತ್ತನ್ನು ಎದುರಿಸಲು ಸಿದ್ಧವಿರಬೇಕು. ಸ್ತ್ರೀಯರು ಅತಿಯಾಗಿ ಮೈ ಪ್ರದರ್ಶನ ಮಾಡುವ ಉಡುಗೆಗಳನ್ನು ಧರಿಸಬಾರದು. ಗಂಡಿಗೆ ಹೆಚ್ಚಿಗೆ ಲೈಂಗಿಕ  ಪ್ರಚೋದನೆಯಾಗುವುದು ನೋಟದಿಂದ (ಹೆಣ್ಣಿಗೆ ಮಾತಿನಿಂದ) ಎಂದು ತಿಳಿದುಬಂದಿದೆ. ಅನಗತ್ಯವಾಗಿ ಅಂಥದಕ್ಕೆ ಅವಕಾಶ ಕೊಡಬಾರದು. ಸಮಾಜ ಹೆಣ್ಣುಗಂಡುಗಳು ಎಲ್ಲೆಲ್ಲಿ ಹೇಗೆ ವತರ್ಿಸಬೇಕು, ಎಂಥ ಉಡುಪು ಧರಿಸಬೇಕು, ಯಾರೊಡನೆ ಹೇಗೆ ಸಂವಹನ ನಡೆಸಬೇಕು ಎಂಬುದನ್ನು ನಿರ್ಧರಿಸಿರುತ್ತದೆ. ಅದರಲ್ಲಿ ತಪ್ಪು ಸರಿಗಳನ್ನು ಹುಡುಕಬಾರದು. ಸಮಾಜ ನಮ್ಮದೇ ನಿಮರ್ಾಣ. ಅದರ ನೀತಿನಿಯಮಗಳನ್ನು ರೂಪಿಸಿರುವವರು ನಾವೇ. ನಾವು ಅವನ್ನು ಪಾಲಿಸಬೇಕು; ಇಲ್ಲದಿದ್ದರೆ ತೊಂದರೆಯಾಗುತ್ತದೆ

   ಇಷ್ಟೆಲ್ಲಾ ಹೇಳಿಯಾದ ಮೇಲೂ ಒಂದು ವಿಷಯವನ್ನು ನಾವು ಮರೆಯಬಾರದು. ವಿಶ್ವದ ಜನಸಂಖ್ಯೆಗೆ ಹೋಲಿಸಿದರೆ ಅತ್ಯಾಚಾರ ಮಾಡುವವರ ಸಂಖ್ಯೆ ಬಹಳ ಕಡಮೆ; ಸುಮಾರು ಶೇಕಡ ಎರಡರಿಂದ ರಿಂದ ಐದು. ಸಮಾಜದಲ್ಲಿ ನಡೆಯುವ ದರೋಡೆ, ಕೊಲೆ, ಕಳ್ಳತನಗಳಂತೆ ಅತ್ಯಾಚಾರವೂ ಒಂದು ಅಪರಾಧ. ಅವುಗಳಿಗೆ ಶಿಕ್ಷೆಯಾದಂತೆ ಇದಕ್ಕೂ ತಕ್ಕ ಶಿಕ್ಷೆಯಾಗಬೇಕು. ನನಗನ್ನಿಸುವಂತೆ ಸಮಾಜದಲ್ಲಿ ಲೈಂಗಿಕ ದುಷ್ಕೃತ್ಯಗಳ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುವುದು ನಿಜವಿಲ್ಲದಿರಬಹುದು. ಇಂದು ಅವು ಹೆಚ್ಚಾಗುತ್ತಿರುವಂತೆ ಕಾಣುವುದಕ್ಕೆ ಕಾರಣ ಅವನ್ನು ನಾವು ಹೆಚ್ಚಾಗಿ ಗಮನಿಸುತ್ತಿದ್ದೇವೆ. ಮೊದಲು ನಮ್ಮಲ್ಲಿ ಸುದ್ದಿಮಾಧ್ಯಮಗಳು ಇಂದಿರುವಷ್ಟು ಇರಲಿಲ್ಲ. ಆದುದರಿಂದ ಅವು ನಡೆಯುವುದು ನಮ್ಮ ಗಮನಕ್ಕೆ ಬರುತ್ತಿರಲಿಲ್ಲ. ಇಂದು ಮಾಧ್ಯಮಗಳು ಇಂಥ ಸುದ್ದಿಗಳನ್ನು ಬಹು ಪ್ರಮುಖವಾಗಿ ಪ್ರಕಟಿಸುತ್ತವೆ. ನಾವು ಅವನ್ನು ಗಮನಿಸಿದಷ್ಟು ಒಳ್ಳೆಯ ಸುದ್ದಿಗಳನ್ನು ಗಮನಿಸುವುದಿಲ್ಲ. ಮನುಷ್ಯರು ಕೆಟ್ಟದನ್ನು ಗಮನಿಸಿದಷ್ಟು ಸುಲಭವಾಗಿ ಒಳ್ಳೆಯದನ್ನು ಗಮನಿಸುವುದಿಲ್ಲ, ಮಾನವರಲ್ಲಿ ಅದೊಂದು ಸಹಜ ಪ್ರವೃತ್ತಿ. ಮನೋವಿಜ್ಞಾನದಲ್ಲಿ ಅದನ್ನು ಅಪ್ರಯತ್ನಾತ್ಮಕ ಜಾಗೃತಿ (ಚಿಣಣಠಟಚಿಣಛಿ ತರಟಚಿಟಿಛಿಜ) ಎನ್ನುತ್ತಾರೆ. ನಮ್ಮ ಸುದ್ದಿಮಾಧ್ಯಮಗಳು ಇಂಥ ಘಟನೆಗಳಿಗೆ ಪ್ರಾಮುಖ್ಯತೆ ಕೊಟ್ಟು ರಂಜನೀಯವಾಗಿ ಪ್ರಕಟಿಸುವುದಕ್ಕೆ ಅವರವೇ ಆದ ಕಾರಣಗಳಿವೆ ಎಂಬುದನ್ನು ತಳ್ಳಿಹಾಕಲಾಗುವುದಿಲ್ಲ. ಇಂಥ ಸುದ್ದಿಗಳನ್ನು ಪ್ರಕಟಿಸುವಾಗ ಮಾಧ್ಯಮಗಳು ಕೊಂಚ ಸಂಯಮ ವಹಿಸುವುದು ಒಳ್ಳೆಯದು.

ವೈಜ್ಞಾನಿಕವಾಗಿ ನೋಡಿದರೆ, ಮಾನವನ ವಿಕಾಸ ಯಾವಾಗಲೂ ಪ್ರಗತಿಯ ಹಾದಿಯಲ್ಲಿಯೇ ನಡೆದು ಬಂದಿದೆ. ಇನ್ನು ಮುಂದಾದರೂ ವಿಕಾಸ ಪುರೋಗಾಮಿಯಾಗಿಯೇ ನಡೆಯುತ್ತದೆ. ಇಂದಿನ ಮಾನವ ಮುಂದೆ ಉತ್ತಮ ಮಾನವನಾಗುವ ಸಾಧ್ಯತೆಗಳಿವೆ. ಜಗತ್ತಿನಲ್ಲಿ ಕೆಟ್ಟದು ಅಳಿದು ಒಳ್ಳೆಯದು ಉಳಿಯುತ್ತದೆ. ಅದು ಪ್ರಕೃತಿ ನಿಯಮ. ಅದು ಸ್ತ್ರೀಯರ ಮೇಲಣ ಆಕ್ರಮಣಕಾರಿ ವರ್ತನೆಗೂ ಅನ್ವಯವಾಗುವುದರಲ್ಲಿ ಸಂದೇಹವಿಲ್ಲ.



Dr M Basavanna 
Rtd Professor 




























Saturday, February 9, 2013

ಸಮಾಜ ಸೇವೆಯಲ್ಲಿ ನನ್ನ ಅನುಭವಗಳು




ಸಮಾಜ ಸೇವೆಯಲ್ಲಿ ನನ್ನ ಅನುಭವಗಳು

 ಸಮಾಜ ಸೇವೆಯಲ್ಲಿ ನನ್ನ ಅನುಭವಗಳ ಬಗ್ಗೆ ಒಂದು ಲೇಖನ ಬೇಕೆಂದು ಕೇಳಿ ಶ್ರೀಮತಿ ಅನಿತ ಅವರು ದೂರವಾಣಿಯಲ್ಲಿ ಕರೆ ಮಾಡುವುದಕ್ಕೆ ಕೆಲವು ನಿಮಿಷಗಳ ಮೊದಲು ನನ್ನ ಮೊಬೈಲ್ ಫೋನ್ನಲ್ಲಿ ಒಂದು ಕರೆ ಬಂದಿತ್ತು. ಹೆಣ್ಣು ಧ್ವನಿಯೊಂದು ಕೇಳಿತ್ತು "ನೀವು ಒಂಟಿತನದಿಂದ ಬಳಲುತ್ತಿದ್ದೀರಾ?", ಎಂದು. ತಕ್ಷಣ "ಇಲ್ಲ" ಎಂದು ಹೇಳಿ ಅವಳ ಕರೆಯನ್ನು ಮುಗಿಸಿದ್ದೆ.

ಪ್ರೀತಿ ವಿಶ್ವಾಸದಿಂದ ಬದುಕಿನ ಏರುಪೇರುಗಳಲ್ಲಿ ಬೆಂಬಲವಾಗಿರುವ ನನ್ನ ಕುಟುಂಬ ಮತ್ತು ಬಂಧು ಮಿತ್ರರೊಡನೆ ಇರುತ್ತಿರಲಿಲ್ಲವಾದರೆ, ನನ್ನ ಉತ್ತರ "ಹೌದು" ಎಂದಾಗುತ್ತಿತ್ತೊ ಏನೊ. ಹಣ ಕೊಟ್ಟು ಸ್ನೇಹಜಾಲಗಳ ಸದಸ್ಯನಾಗಿ ಗೆಳೆತನವನ್ನು ಕೊಂಡುಕೊಳ್ಳುತ್ತಿದ್ದೆನೇನೊ. ನಮ್ಮ ಮನೆಯ ಎದುರಿನಲ್ಲಿದ್ದ ಆಟದ ಮೈದಾನದಲ್ಲಿ, ಬೆಂಗಳೂರು ಮಹಾನಗರ ಪಾಲಿಕೆಯು, ಕೆಳ ಸೇತುವೆ ನಿಮರ್ಿಸುವಾಗ ಉಂಟಾದ ಕಲ್ಲು ಮಣ್ಣುಗಳ ತ್ಯಾಜ್ಯವನ್ನು ಸುರಿದಿದ್ದರು. ಅದನ್ನು ನೋಡಿ ಖಾಸಗಿ ಕಟ್ಟಡಗಳ ಅವಶೇಷಗಳೂ ಅಲ್ಲಿ ಹಾಕಲ್ಪಟ್ಟಿದ್ದವು. ಜೊತೆಗೆ ಕೆಲವರು ಕಸದ ರಾಶಿಯನ್ನೂ ಅಲ್ಲಿ ಹಾಕಿ, ಸೊಳ್ಳೆಗಳ ಕಾಟ ಮತ್ತು  ದುರ್ಗಂಧದಿಂದ ಸುತ್ತುಮುತ್ತಲಿನ ಜನ ಕಂಗಾಲಾಗಿದ್ದರು. ಅವರುಗಳ ದೂರು ಅಧಿಕಾರಿಗಳ ಮೇಲೆ ಯಾವ ಪ್ರಭಾವವನ್ನೂ ಬೀರಲಿಲ್ಲ. ಸತತ ಎರಡು ವರ್ಷಗಳ ಕಾಲ, ಪತ್ರಗಳ ಮೂಲಕ, ಪತ್ರಿಕೆಗಳಲ್ಲಿ ಲೇಖನ ಬರೆದು, ಚಿತ್ರಗಳನ್ನು ಪ್ರಕಟಿಸಿ, ಅಧಿಕಾರಿಗಳನ್ನು ಭೇಟಿಮಾಡಿ, ಕಡೆಗೆ ಕನರ್ಾಟಕ ಮಾನವ ಹಕ್ಕುಗಳ ಆಯೋಗದ ಸಹಾಯದಿಂದ, ನಗರ ಪಾಲಿಕೆಯಿಂದ, ಮೈದಾನವನ್ನು ಸ್ವಚ್ಛಗೊಳಿಸಿ ಅಲ್ಲಿ ಉದ್ಯಾನವನ್ನು ಮಾಡಿಸುವಲ್ಲಿ ಫಲಪ್ರದನಾದೆ. ಇದನ್ನು ನೋಡಿ ನೆರೆಹೊರೆಯ ನಿವಾಸಿಗಳು, ಈ ಕ್ಷೇತ್ರದ ಅಭಿವೃದ್ಧಿಗೆ ಒಂದು ಸಂಘವನ್ನು ನೋಂದಾಯಿಸಿಕೊಂಡರು. ಈಗ ಇಲ್ಲಿನ ಹಿರಿಯ ನಾಗರಿಕರಿಗೆ, ಅದರಲ್ಲೂ ಸ್ತ್ರೀಯರಿಗೆ, ಬೆಳಿಗ್ಗೆ, ಸಂಜೆ ವಾಯುವಿಹಾರದ ತಾಣವಾಗಿದೆ-ಈ ಉದ್ಯಾನವನ.

ಒಂಟಿತನ, ಕಲುಷಿತ ಪರಿಸರ ಮುಂತಾದ ನಾನಾ ಸಮಸ್ಯೆಗಳು ಈಗಿನ ಸಮಾಜವನ್ನು ಕಾಡುತ್ತಿದೆ. ಇವುಗಳಿಗೆ ಸ್ಪಂದಿಸಿ, ಅವುಗಳ ನಿವಾರಣೆಗೆ ಪ್ರಯತ್ನ ಮಾಡುವುದೇ ಸಮಾಜಸೇವೆ. ಸಮಾಜಸೇವೆ, ಅನೌಪಚಾರಿಕವಾಗಿರಬಹುದು, ವ್ಯವಸ್ಥಿತವಾಗಿರಬಹುದು, ವೈಯುಕ್ತಿಕವಾಗಿರಬಹುದು, ಸಂಘಟಿತವಾಗಿರಬಹುದು, ಧರ್ಮಪ್ರೇರಿತವಾಗಿರಬಹುದು ಇಲ್ಲವೆ ವೃತ್ತಿಪರವಾಗಿರಬಹುದು. ನಾನು ಸಮಾಜಸೇವೆಯಲ್ಲಿ ತೊಡಗಿಕೊಳ್ಳುತ್ತೇನೆಂದು ಅಂದುಕೊಂಡಿರಲಿಲ್ಲ. ಆದರೆ ನನ್ನ ಶಾಲಾ ಕಾಲೇಜು ದಿನಗಳು ಆಧುನಿಕ ಭಾರತದ ಇತಿಹಾಸದ ಅಪೂರ್ವ ದಿನಗಳು, ಮಹಾತ್ಮಾ ಗಾಂಧಿ, ಗೋಖಲೆ, ತಿಲಕ್, ನೆಹರೂ, ಪಟೇಲ್, ಸುಭಾಷ್ ಚಂದ್ರ ಬೋಸ್ ಅವರುಗಳ ನೇತೃತ್ವದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಸಂಗ್ರಾಮ, ವಿಧವಾ ವಿವಾಹ, ಅಸ್ಪೃಶ್ಯತಾ ನಿವಾರಣೆ ಮುಂತಾದ ಸಾಮಾಜಿಕ ಕ್ರಾಂತಿ, ಜಗತ್ತನ್ನೇ ಆಳುತ್ತೇನೆ ಎಂದು ಹೊರಟಿದ್ದ ಹಿಟ್ಲರನ ವಿರುದ್ಧ ಜರುಗಿದ ಎರಡನೆಯ ವಿಶ್ವಯುದ್ಧ, ಈ ಆಗು ಹೋಗುಗಳೆಲ್ಲ, ನಮ್ಮ ಮೇಲೆ ಪರಿಣಾಮ ಬೀರದೆ ಇರಲಿಲ್ಲ. ಹರಿಜನ ಸೇವಾ ಸಂಘದ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಮತ್ತು ಗಾಂಧೀಜಿ, ಗೋಖಲೆ ಮುಂತಾದವರ ವಿಚಾರಗಳಲ್ಲಿ ನನಗೆ ಮನದಟ್ಟು ಮಾಡಿಸುತ್ತಿದ್ದ ನಮ್ಮ ತಂದೆಯವರ ಬದುಕೂ ನನ್ನ ಮೇಲೆ ಪ್ರಭಾವ ಬೀರಿತ್ತು.

ಶಾಲೆಯಲ್ಲಿ ಮತ್ತು ಕಾಲೇಜಿನಲ್ಲಿ ಸ್ಕೌಟ್, ರೋವರ್ ಯೂನಿವರ್ಸಿಟಿ ಟ್ರೈನಿಂಗ್ ಕೋರ್ಸ್ (ಸೈನ್ಯದ ತರಬೇತಿ) ಮತ್ತು ಇಂಡಿಯನ್ ಏರ್ ಟ್ರೈನಿಂಗ್ ಕೋರ್ಸ್ (ವೈಮಾನಿಕ ತರಬೇತಿ) , ಕೊಕೊ, ಕ್ರಿಕೆಟ್, ಟೆನ್ನಿಸ್ ಆಟಗಳು, ಸಂಘಜೀವನದ ಪ್ರಾಮುಖ್ಯತೆಯನ್ನು ತೋರಿಸಿಕೊಟ್ಟಿದ್ದುವು.

ಮೈಸೂರು ಮಹಾರಾಜ ಕಾಲೇಜಿನಲ್ಲಿ 1947 ರಲ್ಲಿ ಬಿ.ಎ. (ಆನರ್ಸ್) ಸೋಶಿಯಲ್ ಫಿಲಾಸೊಫಿ ವ್ಯಾಸಂಗವನ್ನು ಮುಗಿಸಿ ಡಿಮ್ ಪದವಿಗೋಸ್ಕರ "ಫಿಲಾಸೊಫಿ ಆಫ್ ರೆವಲ್ಯೂಷನ್" ಎಂಬ ಪ್ರಬಂಧವನ್ನು (ಥೀಸಿಸ್) ಡಾ. ಟಿ.ಎ. ಪುರುಶೋತ್ತಮ್ ಅವರ ಮಾರ್ಗದರ್ಶನದಲ್ಲಿ ರಚಿಸುತ್ತಿರುವಾಗ, ಜೀವನೋಪಾಯಕ್ಕಾಗಿ ವ್ಯಾಸಂಗವನ್ನು ಬಿಟ್ಟು, ಹಾಸನ್ ಇಂಟರ್ ಮೀಡಿಯಟ್ ಕಾಲೇಜಿನಲ್ಲಿ ಹಂಗಾಮಿ ಲಾಜಿಕ್ ಲೆಕ್ಚರರ್ ಕೆಲಸಕ್ಕೆ ಸೇರಿದೆ. 1948 ರಲ್ಲಿ ಆ ಸಮಯದಲ್ಲಿ ನನ್ನ ಹಿತೈಶಿಯೊಬ್ಬರ ಸಲಹೆಯಂತೆ ಬೊಂಬಾಯಿಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ಗೆ (ಟಿಸ್) ಪ್ರವೇಶ ಪಡೆದೆ. ಆ ಸಂಸ್ಥೆಯಲ್ಲಿ ಆಗಿದ್ದ ಭಾರತದ ವಿವಿಧ ರಾಜ್ಯಗಳಿಂದ ತಲಾ ಇಬ್ಬರಿಗೆ ಪ್ರವೇಶ ದೊರೆಯುತ್ತಿತ್ತು. ಆದ್ದರಿಂದ ಅಲ್ಲಿನ ವ್ಯಾಸಂಗ ಕಾಲದಲ್ಲಿ ದೇಶದ ವಿವಿಧ ಸಂಸ್ಕೃತಿಗಳ, ಜೀವನ ಶೈಲಿಗಳ ಮತ್ತು ಭಾಷೆಗಳ ಪರಿಚಯವಾಯಿತು. ಪಠ್ಯಪುಸ್ತಕಗಳು ಬಹುತೇಕ ಅಮೆರಿಕ ಮತ್ತು ಇಂಗ್ಲೆಂಡ್ನ ತಜ್ಞರು ಬರೆದವುಗಳಾದರೂ, ನಮ್ಮ ಅಧ್ಯಾಪಕರು ವಿಷಯಗಳನ್ನು ನಮ್ಮ ದೇಶದ ಸನ್ನಿವೇಶಕ್ಕೆ ಸಂಬಂಧಿಸಿದಂತೆ ತಿಳಿಯ ಹೇಳುತ್ತಿದ್ದರು. ತರಗತಿಯ ಪಾಠದ ಜೊತೆಗೆ, ಸಮಾಜಕಾರ್ಯದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯರೂಪದ ತರಬೇತಿ ಕೊಡುತ್ತಿದ್ದರು. ಅವುಗಳಲ್ಲಿ ಹಾಸ್ಪಿಟಲ್ ಸೋಶಿಯಲ್ ವಕರ್್ ನನಗಿನ್ನೂ ನೆನಪಿದೆ. ಟಾಟಾ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನನ್ನ ತರಬೇತಿ, ಆಗಾಗ್ಗೆ ಕ್ಯಾನ್ಸರ್ ರೋಗದಿಂದ ರಕ್ತಸ್ರಾವವಾಗುತ್ತಿದ್ದ ಸ್ತ್ರೀರೋಗಿಗೆ ಸೀರೆಗಳನ್ನು ಒದಗಿಸುವುದು, ಗಂಟಲು ಕ್ಯಾನ್ಸರ್ ರೋಗಿಗೆ ಹಣ್ಣುಗಳನ್ನು ಒದಗಿಸುವುದು ನಾನು ಮಾಡಬೇಕಿತ್ತು. ಅದಕ್ಕಾಗಿ ಜನರಿಂದ ಹಣ  ಪಡೆಯಬೇಕಿತ್ತು. ಒಂದಾದ ಮೇಲೆ ಇನ್ನೊಂದು ಆಸ್ಪತ್ರೆಗಳಲ್ಲಿ ಶುಶ್ರೂಷೆ ಪಡೆದು ವಾಸಿಯಾಗದೆ, ಕಡೆಗೆ ಅಂದರೆ 10 ವರ್ಷಗಳ ನಂತರ ಈ ಆಸ್ಪತ್ರೆಗೆ ಸೇರಿದ್ದ ರೋಗಿಯನ್ನು ಆತ್ಮಹತ್ಯೆ ಪ್ರಯತ್ನದಿಂದ ತಪ್ಪಿಸಲು ಸಲಹೆಕೊಡುವುದು. ಎಲ್ಲ ರೋಗಿಗಳೂ, ಡಾ. ಬೋರ್ಜರ್ಸ್ ಎಂಬ ವೈದ್ಯರಿಂದಲೇ ಶಸ್ತ್ರಚಿಕಿತ್ಸೆ ಪಡೆಯಬೇಕೆಂದು ಹಾತೊರೆಯುತ್ತಿದ್ದರು. ಯಾಕೆಂದರೆ ಅವರು ಬಹಳ ಪ್ರಸಿದ್ಧ ವೈದ್ಯರು. "ಇತರ ವೈದ್ಯರೂ ಪರಿಣಿತರು, ಅವರಿಂದ ಚಿಕಿತ್ಸೆ ಮಾಡಿಸಿಕೊಳ್ಳಿ, ಏಕೆಂದರೆ ಡಾ. ಬೋರ್ಜರ್ಸ್ ಅವರು ಅತಿ ತುತರ್ು ಸ್ಥಿತಿಯ ರೋಗಿಗಳನ್ನು ಚಿಕಿತ್ಸೆ ಮಾಡಬೇಕು" ಎಂದು ಹೇಳಿ ರೋಗಿಗಳನ್ನು ಒಪ್ಪಿಸುವುದು ಕೂಡ ನಾನು ಮಾಡುತ್ತಿದ್ದೆ.
ಅಲ್ಲಿ ತರಬೇತಿ ಮುಗಿಸಿ, ಅಲ್ಲಿಗೆ ಹೋಗುವುದನ್ನು ಬಿಟ್ಟ ಮೇಲೆ, ಅಲ್ಲಿನ ಅಧಿಕಾರಿಯೊಬ್ಬರು ನನಗೆ ಹೇಳಿದರು "ರಕ್ತಸ್ರಾವವಾಗುತ್ತಿದ್ದ ಸ್ತ್ರೀ ರೋಗಿ ವಾಸಿಯಾಗಿ ಹಳ್ಳಿಗೆ ಹೋದಮೇಲೆ ಒಂದು ದಿನ ಅವಳ ಮನೆಯಲ್ಲಿ ಕಡೆದ ಬೆಣ್ಣೆಯನ್ನು ನಿನಗೆ ಕೊಡಲು ಬಂದಿದ್ದಳು" ಎಂದು. ಎಂತಹ ಕೃತಜ್ಞತೆ!
ಟಿಸ್ನ ಬಹುತೇಕ ವಿದ್ಯಾಥರ್ಿಗಳ ಗುರಿ, "ಸಿಬ್ಬಂದಿ ಆಡಳಿತ ಮತ್ತು ಕಾಮರ್ಿಕ ಹಿತ" (ಪಸರ್ೋನಲ್ ಮ್ಯಾನೇಜ್ಮೆಂಟ್ ಅಂಡ್ ಲೇಬರ್ ವೆಲ್ಫೇರ್) ಎಂಬ ವಿಷಯದಲ್ಲಿ ವಿಶಿಷ್ಟ ವ್ಯಾಸಂಗ ಮಾಡಿ, ಕೈಗಾರಿಕಾ ಕ್ಷೇತ್ರದಲ್ಲಿ ಒಳ್ಳೆಯ ಉದ್ಯೋಗವನ್ನು ಪಡೆದುಕೊಳ್ಳಬೇಕೆಂಬುದು. ಅದರಂತೆ, ಡಿಪ್ಲೊಮೊ ಇನ್ ಸೋಶಿಯಲ್ ಸವರ್ಿಸ್ ಅಡಮಿನಿಸ್ಟ್ರೇಶನ್, ಎಂಬ ಪದವಿ ಪಡೆದೆ, ಟಿಸ್ನಲ್ಲಿ ಒಟ್ಟು 21/2 ವರ್ಷಗಳ ಕಾಲ ಇದ್ದಮೇಲೆ, 1951 ರಲ್ಲಿ. 
ಕೈಗಾರಿಕಾ ಕ್ಷೇತ್ರದಲ್ಲಿ ಕೆಲಸ ಸಿಗಲಿಲ್ಲ. ಆದರೆ, ಅದೇ ವರ್ಷ ಹೈದರಾಬಾದಿನಲ್ಲಿ ಜುವೆನೈಲ್ ಕೋಟರ್ಿನಲ್ಲಿ (ಬಾಲಾಪರಾಧಿಗಳ ನ್ಯಾಯಾಲಯ) ಪ್ರೊಬೇಶನ್ ಆಫೀಸಿನವನಾಗಿ ಕೆಲಸ ಸಿಕ್ಕಿತು. ಪೋಲೀಸರು, ಕಾನೂನು ವಿರುದ್ಧವಾಗಿ ನಡೆದ ಮಕ್ಕಳನ್ನು (18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) ಈ ನ್ಯಾಯಾಲಯಕ್ಕೆ ಕರೆದು ತರುತ್ತಿದ್ದರು. ಆ ಮಕ್ಕಳ ಕೌಟುಂಬಿಕ ಮತ್ತು ಸಾಮಾಜಿಕ ಹಿನ್ನೆಲೆಯನ್ನು ತಿಳಿದುಕೊಂಡು ಜುವೆನೈಲ್ ಕೋಟರ್ಿನ ಮಹಿಳಾ ನ್ಯಾಯಾಧೀಶರಿಗೆ ನಾನು ವರದಿ ಮಾಡಬೇಕಿತ್ತು. ನನ್ನ ವರದಿಯ ಆಧಾರದ ಮೇಲೆ, ನ್ಯಾಯಾಧೀಶರು ವಿಚಾರಣೆ ನಡೆಸಿ, ಆ ಮಕ್ಕಳನ್ನು ಅವರ ಪೋಷಕರಿಗೆ ಒಪ್ಪಿಸಬೇಕೋ ಇಲ್ಲವೆ ಅಂತಹ ಮಕ್ಕಳ ಸುಧಾರಣೆಗಾಗಿಯೇ ಇರುವ ಜುವೆನೈಲ್ ಹೋಮ್ಗೆ ಸೇರಿಸಬೇಕೊ ಎಂಬುದನ್ನು ನಿರ್ಧರಿಸುತ್ತಿದ್ದರು. ಪೋಷಕರಿಗೆ ಒಪ್ಪಿಸಿದ ಮಕ್ಕಳ ಮೇಲೆ ಕೊಂಚಕಾಲ ನಿಗಾ ಇಟ್ಟು, ನ್ಯಾಯಾಲಯಕ್ಕೆ ವರದಿ ಒಪ್ಪಿಸಬೇಕಿತ್ತು. ಜುವೆನೈಲ್ ಹೋಮಿನ ಚಟುವಟಿಕೆಗಳಲ್ಲಿ ಅಲ್ಲಿನ ಸೂಪರಿಂಟೆಂಡೆಂಟ್ಗೆ ಸಹಾಯ ಮಾಡಬೇಕಿತ್ತು. ಟಿಸ್ನಲ್ಲಿನ ಕ್ಷೇತ್ರಕಾರ್ಯ (ಫೀಲ್ಡ್ ವಕರ್್) ನನಗೆ ಒತ್ತಾಸೆಯಾಗಿತ್ತು. ಕೆಲಸ ಮನಸ್ಸಿಗೆ ತೃಪ್ತಿ ಕೊಡುತ್ತಿತ್ತು. ಆದರೆ, ಬೆಂಗಳೂರು ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ನಲ್ಲಿ ವೆಲ್ಫೇರ್ ಆಫೀಸರ್ ಆಗಿ ಆರಿಸಲ್ಪಟ್ಟಾಗ, ಕೈಗಾರಿಕಾ ಕ್ಷೇತ್ರದ ಸೆಳೆತ ನನ್ನನ್ನು ಬೆಂಗಳೂರಿಗೆ ಕರೆತಂದಿತು. 
ಸಾರ್ವಜನಿಕ ವಲಯದಲ್ಲಿ (ಪಬ್ಲಿಕ್ ಸೆಕ್ಟರ್) ಕೆಲವೇ ವರ್ಷಗಳ ಹಿಂದೆ, ಸ್ಥಾಪಿತವಾಗಿದ್ದ ಐ.ಟಿ.ಐ. ಅದಕ್ಕೆ ಮೊದಲೆ ಸ್ಥಾಪಿಸಲ್ಪಟ್ಟಿದ್ದ ಎಚ್.ಎ.ಎಲ್.ನಂತೆ ತಾನು ಉತ್ಪಾದಿಸುವ ಸರಕುಗಳ ಮೇಲೆ ಏಕಸ್ವಾಮಿತ್ಯ ಹೊಂದಿತ್ತು. (ಮೊನಾಪೊಲಿ) ಜತೆಗೆ ಸಾರ್ವಜನಿಕ ಉದ್ದಿಮೆಯಾದ್ದರಿಂದ, ಅದರ ಆದ್ಯತೆ ಲಾಭವಾಗಿರಲಿಲ್ಲ. ಆಗ, ಉದ್ಯೋಗ ಸೃಷ್ಟಿ, ಕಾಮರ್ಿಕರ ವೈಯುಕ್ತಿಕ ಮತ್ತು ಸಾಮಾಜಿಕ ಹಿತಕ್ಕೆ ಒತ್ತು, ಸುಮಾರು 15 ವರ್ಷಗಳ ಕಾಲ ಕೆಲಸ ಮಾಡಿ, ಆಗತಾನೆ ಮೈಸೂರು ರಾಜ್ಯಕ್ಕೆ ವಿಸ್ತರಿಸಲ್ಪಟ್ಟಿದ್ದ, ಫ್ಯಾಕ್ಟರೀಸ್ ಆಕ್ಟ್, ಪ್ರಾವಿಡೆಂಟ್ ಫಂಡ್ ಆಕ್ಟ್, ಇ.ಎಸ್.ಐ.ಆಕ್ಟ್ ಮುಂತಾದ ಕಾಮರ್ಿಕ ಸ್ನೇಹಿ ಕಾಯಿದೆಗಳನ್ನು ಕಾಖರ್ಾನೆಯಲ್ಲಿ ಕಾರ್ಯರೂಪಕ್ಕೆ ತಂದು, ಜತೆಗೆ ಕಾಮರ್ಿಕರ ವಸತಿಗಾಗಿ ದೂರವಾಣಿ ನಗರವನ್ನು ನಿಮರ್ಿಸಿ, ದೂರವಾಣಿ ನಗರ ವಿದ್ಯಾಮಂದಿರ, ಆಸ್ಪತ್ರೆ ಮುಂತಾದ ಸೌಲಭ್ಯಗಳನ್ನು ಒದಗಿಸುವಲ್ಲಿ ಸಕ್ರಿಯ ಪಾತ್ರ ವಹಿಸಿದೆ. ಪ್ರಾಯೋಗಿಕವಾಗಿ, ಆಗ ಅಂಧ ಕೆಲಸಗಾರರನ್ನು ನೇಮಿಸಿಕೊಂಡೆವು. ಅವರಿಗೆ ಡೆಹರಾಡೂನ್ ಅಂಧರ ಶಾಲೆಯಲ್ಲಿ ಬೆತ್ತ ಹೆಣೆಯುವ ಕಸುಬಿನಲ್ಲಿ ತರಬೇತಿ ಕೊಟ್ಟಿದ್ದರು. ಆದರೆ, ಯಂತ್ರಗಳನ್ನು ಉಪಯೋಗಿಸುವುದನ್ನು ಅವರಿಗೆ ಹೇಳಿಕೊಟ್ಟು, ದೃಷ್ಟಿಯುಳ್ಳ ಕೆಲಸಗಾರರಂತೆ ಕೆಲಸ ಮಾಡಲು ನೇಮಿಸಿಕೊಂಡೆವು. ಈ ಪ್ರಯೋಗ ಫಲಪ್ರದವಾದ್ದರಿಂದ ಇನ್ನೂ ಮೂವತ್ತು ಅಂಧರಿಗೆ ಕೆಲಸ ಕೊಟ್ಟೆವು. ಅವರಲ್ಲಿ ಬಹಳ ಮಂದಿ ಮದುವೆ ಮಾಡಿಕೊಂಡು ಹೆಂಡತಿ ಮಕ್ಕಳ ಜತೆ ಬಾಳತೊಡಗಿದರು. ಖಾಸಗಿ ವಲಯದ  ಕಾಖರ್ಾನೆಯಲ್ಲಿ ಕೆಲಸ ಮಾಡಬೇಕೆಂದು 1967ರಲ್ಲಿ ಮೈಕೊಗೆ (ಮೋಟಾರ್ ಇಂಡಸ್ಟ್ರೀಸ್ ಕಂಪೆನಿ) ಸೇರಿದೆ. ಐಟಿಐ ಬಿಟ್ಟು ಹತ್ತು ವರ್ಷದ ಮೇಲೆ ನನ್ನ ಮಗನನ್ನು ಸೈಂಟ್ ಜೋಸೆಫ್ ಶಾಲೆಗೆ ಸೇರಿಸಬೇಕೆಂದು ಅಲ್ಲಿನ ಪ್ರಿನಿಪಾಲ್ ಅವರನ್ನು ನೋಡಲು ಹೋಗಿ ಕ್ಯೂನಲ್ಲಿ ನಿಂತಿದ್ದೆ. ನನ್ನ ಮುಂದೆ ಇದ್ದ ವ್ಯಕ್ತಿಯೊಡನೆ ಮಾತನಾಡುತ್ತಿದ್ದಾಗ, ದೂರದಿಂದ ಒಬ್ಬ ವ್ಯಕ್ತಿ ನನ್ನ ಹತ್ತಿರ ಬಂದ. ಆತ ಅಂಧ. "ಸಾರ್ ನೀವು ಶ್ರೀನಿವಾಸ್ ಮೂತರ್ಿಯವರಲ್ಲವೆ, ನಾನು ಮಾರ್ಗಬಂಧು ಸಾರ್. ನೀವು ನನಗೆ ಕೆಲಸ ಕೊಟ್ಟಿದ್ದಿರಿ, ಐ.ಟಿ.ಐ ನಲ್ಲಿ, ನನ್ನ ಮಗನ್ನ ಸ್ಕೂಲಿಗೆ ಸೇರಿಸೋಕೆ ಬಂದೆ ನಿಮ್ಮ ಧ್ವನಿ ಕೇಳಿ ನಿಮ್ಮನ್ನು ಮಾತನಾಡಿಸೋಣ ಅಂತ ಬಂದೆ" ಅಂದ. "ಎಂತಹ ಜ್ಞಾಪಕ ಶಕ್ತಿ, ಎಂತಹ ಪ್ರೀತಿ ವಿಶ್ವಾಸ" ಅಂದುಕೊಂಡೆ.
ಖಾಸಗಿ ವಲಯದ ಉದ್ದಿಮೆಗಳ ಮುಖ್ಯ ಗುರಿ ಲಾಭ, ಪೈಪೋಟಿ, ಹೆಚ್ಚುತ್ತಿರುವ ಉತ್ಪಾದನ ವೆಚ್ಚ, ಮುಂತಾದ ಸವಾಲುಗಳನ್ನು ಎದುರಿಸಲು ಲಾಭ ಅನಿವಾರ್ಯ. (ಈಗ ಸಾರ್ವಜನಿಕ ವಲಯದ ಉದ್ದಿಮೆಗಳೂ ಲಾಭ ಮಾಡದಿದ್ದರೆ ಉಳಿಯುವುದಿಲ್ಲ) ಆದ್ದರಿಂದ ಮೈಕೊ, ಕೆಲಸಗಾರರಿಗೆ ಒಳ್ಳೆಯ ವೇತನ, ಉಚಿತ ಊಟದ ವ್ಯವಸ್ಥೆ, ಕಾನೂನು ಪ್ರಕಾರ ಕೊಡಲೇಬೇಕಾದ ಸೌಲಭ್ಯಗಳಿಗೆ ಮಾತ್ರ ಗಮನಕೊಟ್ಟಿತ್ತು. ಆದರೆ, ಆಡಳಿತ ವರ್ಗ ಮತ್ತು ಕಾಮರ್ಿಕ ನಡುವೆ ತೀವ್ರವಾದ ಕೆಲವು ಘರ್ಷಣೆಗಳು ನಡೆದಾಗ, ಕಾಮರ್ಿಕರ ಕೌಟುಂಬಿಕ ಹಿತಕ್ಕೂ ಗಮನಕೊಡುವುದು ಮುಖ್ಯ ಎಂಬ ಅರಿವು ಮೂಡಿತು. 
ಎಂ.ಎಸ್.ಡಬ್ಲ್ಯೂ ಪದವೀಧರೆಯೊಬ್ಬರನ್ನು ಸಾಮಾಜಿಕ ಕಾರ್ಯಕತರ್ೆಯಾಗಿ ನೇಮಿಸಿಕೊಂಡು, ಕಾಮರ್ಿಕರ ಕುಟುಂಬಗಳಿಗೂ, ಸಂಸ್ಥೆಗೂ ಮಧುರ ಸಂಬಂಧ ಬೆಳೆಯಲು ಬೇಕಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡೆವು. ಕುಟುಂಬದ ಸದಸ್ಯರನ್ನು ವರ್ಷಕ್ಕೆ ಒಂದು ಸಲ ಆಹ್ವಾನಿಸಿ, ಕಾಖರ್ಾನೆಯ ವಿವಿಧ ಇಲಾಖೆಗಳನ್ನು ತೋರಿಸುವುದು, `ನಮ್ಕಂಪೆನಿ' ಎಂಬ ಕಾಮರ್ಿಕರಿಗೆ ಸಂಬಂಧಿಸಿದ ಮತ್ತು ಉಪಯೋಗವಾದಂತಹ ವಿಷಯಗಳನ್ನು ಕಾಮರ್ಿಕರ ಸಂಪಾದಕೀಯ ಸಹಾಯದಿಂದ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಪ್ರಕಟಿಸುವುದು. ಕಾಮರ್ಿಕರ ಮಕ್ಕಳಿಗೆ ಕ್ರೀಡೆಗಳಲ್ಲಿ ತರಬೇತಿ, ಮದ್ಯವ್ಯಸನಿಗಳ ಸುಧಾರಣೆಗೆ `ಆಲ್ಕೋಹಾಲಿಕ್ ಅನಾನಿಮಸ್' ಕೂಟಗಳನ್ನು ಏರ್ಪಡಿಸುವುದು, ಕುಟುಂಬದ ಸಮಸ್ಯೆಗಳಲ್ಲಿ ಸಾಮಾಜಿಕ ಕಾರ್ಯಕತರ್ೆಯು ಸಹಾಯ ಮಾಡಬಲ್ಲವುದನ್ನು ಮಾಡುವುದು, ಈ ಕಾರ್ಯಕ್ರಮಗಳಲ್ಲಿ ಕೆಲವು... ಮೊಟ್ಟಮೊದಲು ನಾವು ನೇಮಿಸಿದ ರಾಧ ಎಂಬ ಎಂ.ಎಸ್.ಡಬ್ಲ್ಯೂ ಪದವೀಧರೆ, ಕಾಮರ್ಿಕರಲ್ಲಿ ಮತ್ತು ಅವರ ಕುಟುಂಬದವರಲ್ಲಿ ಎಷ್ಟು ಜನಪ್ರಿಯರಾದರೆಂದರೆ, ಎಲ್ಲರೂ ಅವರನ್ನು `ಅಮ್ಮ' ಎಂದು ಕರೆಯತೊಡಗಿದರು. ಕಾಖರ್ಾನೆಯಲ್ಲಿ ಕೆಲಸದ ವೇಳೆ ಆಗುವ ಅಪಘಾತದಿಂದಾಗಲಿ, ದೈಹಿಕ ಕಾರಣದಿಂದಾಗಲಿ, ಕಾಮರ್ಿಕರು ತಾವು ಮಾಡುತ್ತಿದ್ದ ಕೆಲಸಕ್ಕೆ ಅನರ್ಹರಾದರೆ, ಅಂತಹವರನ್ನು ಸಾಧ್ಯವಾದಷ್ಟು ಮಟ್ಟಿಗೆ ಬೇರೆ ಕೆಲಸದಲ್ಲಿ ಉಪಯೋಗಿಸಲಿಕ್ಕೆ ಆದಷ್ಟು ಪ್ರಯತ್ನ ಪಡುತ್ತಿದ್ದೆವು.
ಇಂದಿನ ಇಡೀ ವಿಶ್ವವನ್ನೇ ಅಸ್ಥಿರಗೊಳಿಸುತ್ತಿರುವ ಆಥರ್ಿಕ ಪರಿಸ್ಥಿತಿಯಲ್ಲಿ, ಸಮಾಜ ಸೇವಕರ ಮುಂದೆ ಹಲವಾರು ಸವಾಲುಗಳು ಏಳುತ್ತಿವೆ. ಮಾನವನನ್ನು ಹಿಂದಿನಕಾಲದಿಂದಲೂ ಉತ್ಪಾದಕ ಮತ್ತು ಗ್ರಾಹಕ ಎಂದು ಮಾತ್ರ ಪರಿಗಣಿಸಲಾಗಿತ್ತು. ಆದರೆ ಇಂದು ಆತ ಮುಖ್ಯವಾಗಿ ಒಂದು ಸಂಪನ್ಮೂಲ. ಸಂಪತ್ತನ್ನು ಸೃಷ್ಟಿಸುವುದಕ್ಕೆ ಬೇಕಾದ ಅಂಶಗಳಲ್ಲಿ ಅವನೂ ಒಂದು. ಈಗ ಪರ್ಸೋನೆಲ್ ಮ್ಯಾನೇಜ್ಮೆಂಟ್, ಲೇಬರ್ ವೆಲ್ಫೇರ್ ಎನ್ನುವ ಬದಲು ಎಚ್.ಆರ್. ಅಂದರೆ ಹ್ಯೂಮನ್ ರಿಸೋರ್ಸ್ ಎನ್ನುತ್ತಾರೆ. ಯಾವುದೇ ವಸ್ತುವಾಗಲಿ ಸಂಪತ್ತನ್ನು ಸೃಷ್ಟಿಸಲು ಬಳಸಲ್ಪಟ್ಟಾಗ, ಅದರ ಉಪಯೋಗ ಮುಗಿದ ಮೇಲೆ ತ್ಯಜಿಸಲ್ಪಡುವುದು. ಅದೇ ರೀತಿ ಮಾನವ ಉತ್ಪಾದನೆಗೆ ಉಪಯೋಗಿಸಲ್ಪಟ್ಟ ಮೇಲೆ, ಅವನ ಅನಾರೋಗ್ಯದಿಂದಲೂ, ಅಪಘಾತದಿಂದಲೋ, ವಯಸ್ಸಿನಿಂದಲೋ, ಬದಲಾಗುತ್ತಿರುವ ಯಾಂತ್ರಿಕ ಜ್ಞಾನಕ್ಕೆ ಇಲ್ಲ ಚಟುವಟಿಕೆಗಳಿಗೆ ಹೊಂದಿಕೊಳ್ಳಲು ಅಶಕ್ತನಾದರೆ, ಇಲ್ಲ ಅನರ್ಹನಾದರೆ, ಇತರ ಸಂಪನ್ಮೂಲಗಳಂತೆ ಅವನೂ ಸಮಾಜಕ್ಕೆ ನಿಷ್ಟ್ರಯೋಜಕನಾಗುತ್ತಾನೆಯೇ ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಸಮಾಜಸೇವಕನ ಕರ್ತವ್ಯವಾಗಿದೆ. ಹ್ಯೂಮನ್ ರಿಸೋರ್ಸ್ ಮಾತ್ರ ಎಚ್.ಆರ್. ಆಗುತ್ತದೋ ಇಲ್ಲ ಎಚ್.ಆರ್. ಅಂದರೆ ಹ್ಯೂಮನ್ ರಿಲೇಶನ್ಸ್ (ಮಾನವ ಸಂಬಂಧಗಳು), ಹ್ಯೂಮನ್ ರೈಟ್ಸ್ (ಮಾನವ ಹಕ್ಕುಗಳು) ಮತ್ತು ಹ್ಯೂಮನ್ ರಿಹ್ಯಾಬಿಲಿಟೇಶನ್ (ಮಾನವ ಪುನಾರ್ವಸತಿ) ಎಂದೂ ಆಗುತ್ತದೆ. ಈ ಎಲ್ಲ ಆಯಾಮಗಳನ್ನು ದೃಷ್ಟಿಯಲ್ಲಿಕೊಂಡರೆ ಸಮಾಜ ಸೇವೆ ಅರ್ಥಪೂರ್ಣವಾಗುತ್ತದೆ.
ಮೈಕೋ ಸೇವೆಯಿಂದ ನಿವೃತ್ತನಾದ ಮೇಲೆ, ಕೆಲವು ದಿನ ಕಿಂಗ್ ಅಂಡ್ ಪಾರ್ವ್ರಿಡ್ಜ್ ಎಂಬ ನ್ಯಾಯವಾದಿಗಳ ಸಂಸ್ಥೆಯಲ್ಲಿ ಸಲಹೆಗಾರನಾಗಿ ಕೆಲಸ ನಿರ್ವಹಿಸಿದೆ. ಐ ಟಿ ಐ ನಲ್ಲಿದ್ದಾಗ ಬಿ.ಎಲ್. ಪದವಿಯನ್ನು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪಡೆದಿದ್ದೆ. ಆ ಸಂಸ್ಥೆಯಲ್ಲಿರುವಾಗಲೆ, ಯು.ಎಸ್.ಏಡ್. ಪ್ರೋಗ್ರಾಮಿನಡಿಯಲ್ಲಿ ಅಮೆರಿಕದಲ್ಲಿ ಸಿಬ್ಬಂದಿ ಆಡಳಿತದ ಬಗ್ಗೆ ಹೆಚ್ಚಿನ ವ್ಯಾಸಂಗ  ಮಾಡಿದ್ದೆ. ಅಮೆರಿಕದಲ್ಲಿ ಲೇಬರ್ ವೆಲ್ಫೇರ್ ಅಂತ ಹೇಳಿದಾಗ, ನನ್ನನ್ನು ಕಾಮರ್ಿಕ ಸಂಘದವನು ಎಂದು ತಿಳಿದರು ಅಲ್ಲಿನ ಜನ. ನಾನು ಕಾಖರ್ಾನೆಯ ಅಧಿಕಾರಿ ಎಂದು ಅವರಿಗೆ ಹೇಳುತ್ತಿದ್ದೆ. 
ಐಟಿಐ ಮತ್ತು ಮೈಕೊ ನಲ್ಲಿ ಕೆಲಸ ಮಾಡುವಾಗಲೂ, ಭಾರತೀಯ ವಿಜ್ಞಾನ ಸಂಸ್ಥೆ (ಐ ಐ ಎಸ್ಸಿ) ಮತ್ತು ಭಾರತೀಯ ವಿದ್ಯಾಭವನದಲ್ಲಿ ಅತಿಥಿ ಅಧ್ಯಾಪಕನಾಗಿ ಸಂಜೆಯ ಹೊತ್ತು ಪಾಠ ಹೇಳಿದ್ದೆ. ನಿವೃತ್ತನಾದ ಮೇಲೆ ಭಾರತೀಯ ವಿದ್ಯಾಭವನ, ಕ್ಸೇವಿಯರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಬೆಂಗಳೂರು ವಿಶ್ವವಿದ್ಯಾನಿಲಯ, ಕಿಲರ್ೋಸ್ಕರ್ ಇನ್ಸ್ಟಿಟ್ಯೂಟ್ ಆಫ್ ಅಡವಾನ್ಸ್ಡ್ ಮ್ಯಾನೇಜ್ಮೆಂಟ್ ಸ್ಟಡೀಸ್ ಮತ್ತು ವಿವಿಧ ಕೈಗಾರಿಕಾ ಸಂಸ್ಥೆಗಳ ತರಬೇತಿ ಕೇಂದ್ರಗಳಲ್ಲಿ ಪಾಠ ಹೇಳಿದೆ. 1988 ರಲ್ಲಿ, ವಿಡಿಯಾ ಕಾಖರ್ಾನೆಯ ಆಡಳಿತದವರ ಕೋರಿಕೆ ಮೇಲೆ, ಉಡುಪಿಯ ಶ್ರೀ ಅದಮಾರು ಮಠಾದೀಶರಾಗಿದ್ದ  ದಿ. ಶ್ರೀ ವಿಭುದೇಶತೀರ್ಥ ಅವರ ನೇತೃತ್ವದಲ್ಲಿ ವಿಡಿಯಾ ಪೂರ್ಣ ಪ್ರಜ್ಞ ಶಾಲೆಯನ್ನು ಕಿಂಡರ್ ಗಾರ್ಡನ್ ತರಗತಿಯೊಡನೆ ಪ್ರಾರಂಭಿಸಲು ಕಾರಣನಾದೆ. ಸ್ವಾಮೀಜಿಯವರ ಆಣತಿಯಂತೆ ಅದರ ಗೌರವ ಕಾರ್ಯದಶರ್ಿಯಾಗಿ, ಸುಮಾರು 15 ವರ್ಷ ಸೇವೆ ಸಲ್ಲಿಸಿ, ಈ ಶಾಲೆ ಪ್ರೌಢಶಾಲೆಯಾಗಿ ಎರಡು ಮೂರು ವರ್ಷಗಳು ಕಳೆಯುವವರೆಗೆ ಸೇವೆ ಸಲ್ಲಿಸಿದೆ.
ಆ ಸಮಯದಲ್ಲಿ, ನನ್ನ ಪತ್ನಿಯೊಡನೆ, ವಿದೇಶಗಳನ್ನು ನೋಡಿಬಂದೆ. ಈಗ ನನ್ನ ಹವ್ಯಾಸಗಳಾದ ಆಟ, ಓದು, ಕನ್ನಡ ಕವನ ರಚನೆ ("ನಿನ್ನಾಚೆ ನೋಡು" ಎಂಬ ಕವನ ಸಂಗ್ರಹ ಪ್ರಕಟವಾಗಿದೆ) ಕುಟುಂಬದ ಸದಸ್ಯರೊಡನೆ ಮತ್ತು ಮಿತ್ರರೊಡನೆ ಒಡನಾಟ, ನಮ್ಮ ಕ್ಷೇತ್ರದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಮುಂತಾದವು ಜೀವನದಲ್ಲಿ ಆಸಕ್ತಿ ಕಡಿಮೆಯಾಗದಂತೆ ಮಾಡಿವೆ.
ಜೊತೆಗೆ ಸಮಾಜ ಸೇವೆಗೆ ಬೇಕಾದ ಅರಿವು, ಮನೋವೃತ್ತಿ, ಕೌಶಲ್ಯ ಮತ್ತು ಅಭ್ಯಾಸ (ಏಂಖಊ= ಏಓಔಘಐಇಆಉಇ, ಂಖಿಖಿಖಿಗಆಇ, ಖಏಐಐ, ಊಂಃಖಿ) ನನಗೆ ಸಹಾಯಕಾರಿಯಾಗಿವೆ.


SOCIAL DEVELOPMENT AND SOCIAL WELFARE*


SOCIAL DEVELOPMENT AND SOCIAL  WELFARE*

Two models of social welfare are usually mentioned in historical reviews of social welfare and also in the contemporary literature on the subject. The dominant and popular model is usually referred to as the remedial or residual model which is contrasted with the other model described variously as the institutional/institutional-redistributive or developmental model of social welfare. It is frequently argued by some wellknown Western and Indian writers that the latter model is more suited to the countries of the third world which includes India.
               
Professional social work as evolved in the west, particularly in the U.S.A., and U.K., has been greatly influenced by the remedial model of social welfare for a variety of historical reasons. This in turn has moulded the nature of social work education which has the objective of preparing professional manpower for employment in the field of social welfare. We in India are completing seventy five years of social work education. It is an appropriate time for an overview of both the profession and the social work education. While it is not possible to do justice to such an assessment in this paper, a few observations would be made before taking up one or two features for discussion.

Some manpower studies carried out in a few major states in the country indicate that during this period of seventy five years the growth of the profession has been very slow. Even highly developed states do not have more than 25 per cent of the employed social welfare personnel with professional education. For most jobs in the field, professional education is not a required qualification. Salary scales are unattractive and promotional avenues are very limited, both vertically and horizontally. While official pronouncements of plans and policy, especially from the 5th Five Year Plan onwards, emphasize developmental aspects of social welfare, the financial allocations in the subsequent plans and the programmes included in them retain, with one or two exceptions, the traditional model of social welfare. The Integrated Child Development Services ( ICDS ) is one of these exceptions. But the employment potential for professionally trained social workers is practically nil because at the level of project supervisors, home science graduates are preferred and the field level jobs are not attractive or suitable to professional social workers. The other exception is the programmes of integrated rural development, though politically important and with substantial financial allocations, the employment potential for professional social workers is not any better than in the ICDS.

Social Work Education in India has been based on the traditional model of social welfare and social work practice with some modifications to suit the Indian situation. At the beginning of the decade of 1970's a few social work educators in India (including this writer) began to advocate developmental orientation to social welfare and social work education which was also the emerging new trend, both regionally and internationally. The factors responsible for this have been discussed elsewhere. An official committee endorsed this new orientation to social work practice and education by recommending that social work education should be in tune with social reality and it should have a rural bias in contrast to the prevalent urban-industrial-metropolis model (UGC 1980). While almost all social work educators publicly seem to be committed to the developmental model of social welfare and social work education, there is very little evidence of the implementation of this commitment either in social work practice or social work education. We need not go into the reasons for this here.

A brief explanation of developmental social welfare, a convenient shorthand term for the new model, will be made, before illustrating some of its features in a few selected areas of social work practice. The term 'development' and 'social development' are frequently used in the literature dealing with this model. There are no widely accepted definitions of these concepts in the disciplines concerned such as economics, sociology and social welfare.** The economist's perception of development is based on his own discipline's bias and expansiveness which has been described as economism by Nieuwenhuize, a well known Dutch sociologist. Conceptually the economists have moved from economic growth and later economic development as the central objective of planned nation-building by the newly independent countries of the third world to a broader but not significantly different concept of development. They include in it some non-economic variables which together are referred to in a residual meaning of the term 'social' as social development. It may mean either or both of the following: social prerequisites to (economic) development and social consequences of development (considered as undesirable). In U.N. literature it tends to be stated as economic development plus institutional change without clearly defining institutional change, but with occasional references to family planning and land reforms as programmes or to the objective of social justice, sometimes also referred to as redistribution or distributive justice. Gradual elimination of the mass problems of illiteracy, unemployment and poverty are included in this view of development.

The sociologists tend to take a holistic view of the term social development which includes economic development as one of the many components rather than as the dominant feature of it. In a recent major treatise on development a western sociologist defines social development as social-culturally relevant development (Van Nieuwenhuiz 1982). To conclude, while at the level of conceptual description this is done very elegantly by some, its operational discussions tend to remain vague if not quite impractical and thus vulnerable to the critical attacks by the economists (Sovani,1975). Social development, in the words of Myrdal, “is the movement upward of the entire social system” ( Myrdal 1975 ). The goal of planned social development in India is to create a secular, democratic, egalitarian society, which ensures welfare of all the members of the society. The Gandhian concept of Sarvodaya with its emphasis on the welfare of the weakest and the poorest            (Antyodaya) would be a relevant goal for this country.

The developmental functions of social welfare have been discussed by some Indian and western authors (Druckers, 1972, Gore, 1973, Kendall, 1974, Kulkarni 1974, Pathak 1981). Promotion of values necessary for social development like secularism, equality, social justice; to advocate the rights and interests of the disadvantaged; to promote social change as part of social development; to anticipate dysfunctional changes which are the inevitable part of the developmental process and to provide for the protection of vulnerable sections of the population who are affected by these; to initiate macro-level prevention of major social problems; and to participate in the formulation of social policy and social planning are stated to be the developmental tasks or functions.

In what way developmental social welfare differs in practice from the traditional remedial model? One or two illustrations are presented. It is, methodologically speaking, community oriented social work practice with the members of the family/extended family as the smallest micro-level unit of attention at one end and the change-orientated macro-level social action/social policy planning at the other end. This approach discards, to a great extent, the philosophy of individualism and the adjustment of deviant individuals and marginal, alienated groups to the existing social structure which is taken as given, unchangeable and generally beneficial to the people. Its emphasis is more on prevention from the level of the community leading to the state and national levels, of social conditions considered as harmful.

A recent survey of a slum community in Baroda revealed that most of the handicapped children suffered this physical handicap due to polio. Instead of referring them as cases to the few health agencies in the city for individualized treatment and rehabilitation, a community based programme of rehabilitation would be organized by organizations like the Baroda Citizen's Council or some other organization with the collaboration of trained health and welfare personnel. It attempts to include all the cases of children identified by the survey. Simultaneously, a community wide health education campaign would be launched with audio-visual aids to reach out to every family in the community, supported by a selective face-to-face group discussion, to prevent other children from being victims of polio or other crippling disease. This would entail vigorous immunization programme in the community by mobile teams which could be linked up with the recently launched universal national immunization programme for children below the age of 3 years. This is qualitatively and quantitatively different from the traditional medical social work practiced through institutional medical and allied services like hospitals or rehabilitation centers, whether independently operating or attached to medical institutions. The social worker works in and through the community with the support of the medical institutions. The social worker works in and through the community with the support of the medical institutions as and when necessary to deal with severe and complicated cases. It should be obvious that the traditional service infrastructures and practice approaches will not be totally irrelevant but the emphasis is markedly different.

*Reproduced from Social Work Review, 1987 M.S. University of Baroda.

** Some years earlier I had stated that the economists tend to use the term 'development' and sociologists use the other term 'Social development' for conveying an idea which was essentially similar. (Pathak 1981). This needs to be amended because  of my subsequent reading and reflection on this theme.




Shankar Pathak
Rtd. Professor, Deptt. of Social Work,
Delhi University

SUSTAINING SOCIAL WORK EDUCATION AND PRACTICE AT THE HIGHEST LEVEL* (A PROPOSAL AND AN APPEAL)


SUSTAINING SOCIAL WORK EDUCATION AND PRACTICE
AT THE HIGHEST LEVEL*
(A PROPOSAL AND AN APPEAL)

I express my gratitude to the organizers of the 26th Annual National Conference of the Professional Social Workers for inviting me to participate in the conference at Mangaluru, 2008. I have come here, in spite of my failing health, with a definite purpose of placing  before you certain of my thoughts and plans for maintaining highest possible standards of imparting professional social work education and guiding social work practitioners in various fields. I may sound to be parochial in my proposal as I confine in my talk to the pressing issues concerning Karnataka. I am, of course, discussing the issues not unrelated to the theme of the conference , namely, `Challenges for Social Work Education and Practice : the Changing Social Scenario'.

The problems and the challenges :
I consider that the following are the major challenges faced in Karnataka, and I feel these could be almost the same in other parts of our country :  1) Mushrooming of Departments / Schools of Social Work with no or insufficient infra-structural facilities and with not qualified faculty  (till the end of the 20th century there were only four University departments and only one private school of social work affiliated to a University and there are now more than 70 schools of social work imparting professional education at graduate as also at post-graduate level in Karnataka).
2)  A stiff competition from the MBAs, Home Science, Law and other Social Science graduates even where only the trained social workers are required to be employed.
3) The social work educators, the social work students as also the trained social workers in the field are either not organised or ill-organised.
4) Lack of production of social work literature based on original researchs on theory, social policy, etc., particularly in the regional languages. There are no social work dictionaries and encyclopedias in Kannada ( And it is the same situation with other Indian languages, I feel .)
5) No suitable field work agencies are available in required number, and the trainees do not have, by and large, supervised field work facilities.
6) The training institutions do not have extension services needed for promoting professionalism.

I am sure you agree with me that there is a need to devise suitable strategies to meet these challenges  squarely. I am therefore placing before you a proposal with a request to ponder over it seriously and to take appropriate resolve and necessary step in that direction. And I specially appeal to the social work teachers, the students of social work and the social workers in Karnataka to take keen interest in the matter. 

KASWE- ( Karnataka Association of Social Work Education )**
               
Karnataka has right now at least 70 schools of social work including the post graduate Departments under the Universities. All the teachers need to form an association called Karnataka Association of Social Work Education ( KASWE) by becoming the members of the Association.
               
The following could be the functions of the Association :
               
1) The Association may devide the state into certain zones and allot the zones to the schools for undertaking surveys and researches in the allotted zones on social problems, resources, development programmes taken up by both the government  and the voluntary organizations to prepare status reports to be shared with the other schools.  

2) Biannual seminars on Karnataka Social Work situation in different places, namely, Bengaluru, Belagavi, Bijapura, Davanagere, Dharwada, Glubarga ( Kalburgi ), Mangaluru, Mysuru, Shivamogga as also, if possible, in the headquarters of the post-graduate centers of Universities, to deliberate on conditions prevalent in Karnataka in general and on the conditions prevalent in the zone where the seminar is being held in particular. The seminar may discuss the developmental programmes based on the research data collected by the schools.

3) Undertake sponsored policy and exploratory as also experimental researches, and prepare policy-statements related to major social work areas. The policy-statements are to be submitted to the Karnataka Government  for necessary action, and take up the follow-up action to assess the action taken up by the Govt. ( Even when we fully-well know that the social work educators and social workers have no role to play in formulating policies and designing development plans we have to do something in this area )

4) Bring out a periodical News-Bulletin and a Research Journal both in Kannada and English languages to keep the social work teachers, students, workers, administrators, policy-makers and general public informed about the developments in social work  situation in Karnataka and to provide a forum for social work researchers to share their findings through the Journal.

5) KASWE may set up a Vigilance  Committee and divide it into certain subcommittees to do the following concerning the schools of social work in Karnataka : i) Curricula; 
ii) Conditions related to the infrastructural facilities of the training  institutions  
iii)  Field practice- both concurrent and block placement, and relationship with the field work agencies;
iv) Camps, educational tours
v) Teaching and other personnel-qualification, service condition, etc., ;  vi) Extramural (Extension) services such as development and counseling centers;
vii) Placement or employment guidance to the trained workers;
viii) Maintaining public relations
ix) Research and publication;
x) Relation with the University Administration, State and  Central Governments, UGC, ICSSR, CAPART, and such other bodies;
xi) Problems faced by trained
social workers in their fields;
xii) Any other matters related to social work education and practice.
               
CONCLUSION
I may sound too idealistic in presenting this proposal. But I feel strongly that there is a need to ponder over this proposal. I learn that Maharashtra Social Work Educators have been carrying on activities related to certain of the areas  I have placed with a view to strengthening social work profession in that state.

For your kind information, I mooted this strategy in the 80's itself and had discussion with Dr.Olinda Pereria ( who was then principal of Roshini Nilay School of Social Service, Mangaluru) and requested her to take up the leadership to give an appropriate shape to KASWE. She showed some interest in the proposal but due to our `legendary' apathy we could not take positive steps in the matter. When I had discussion with her there were only four University,  departments and one private school of social work where (i.e.,Mangaluru) we are holding this Conference. Now it is time for us to act.

I once again thank all of you for giving me the opportunity to place this proposal for your serious consideration and follow-up action.

Dr.H.M. Marulasiddhaiah
Rtd. Prof. Deptt of Social Work
Bangalore University

Friday, February 1, 2013

ಕ್ರಾಂತಿಕಾರಿ ಸಮಾಜಕಾರ್ಯ (ಜಯಪ್ರಕಾಶರ ದೃಷ್ಟಿಯಲ್ಲಿ)






ಕ್ರಾಂತಿಕಾರಿ ಸಮಾಜಕಾರ್ಯ (ಜಯಪ್ರಕಾಶರ ದೃಷ್ಟಿಯಲ್ಲಿ)

ಯಾವಾಗಲಾದರೂ ನಾನು ಅಧಿಕೃತ ಅಜರ್ಿಯನ್ನು ತುಂಬುವಾಗ, ನನ್ನ ಉದ್ಯೋಗವನ್ನು ಅದರಲ್ಲಿ ನಮೂದಿಸುವಾಗ, ನಾನು 'ಸಮಾಜಕಾರ್ಯಕರ್ತ' ಎಂಬ ಶಬ್ದವನ್ನು ಉಪಯೋಗಿಸುತ್ತೇನೆ. ಇಷ್ಟೇ ನನಗಿರುವ ಅಧಿಕಾರ ನಿಮ್ಮ ಮಧ್ಯೆ ನಾನಿರುವುದಕ್ಕೆ. ನಾನು ಸಮಾಜವಿಜ್ಞಾನಿಗಳ ಈ ಶಾಖೆಯ ವಿದ್ಯಾಥರ್ಿಯೂ ಅಲ್ಲ, 'ಸಮಾಜಕಾರ್ಯಕರ್ತ' ಎಂಬ ಶಬ್ದವನ್ನು ನೀವೆಲ್ಲರೂ ಅರ್ಥಮಾಡಿಕೊಂಡಿರುವ ಪ್ರಕಾರ ನಾನು ತಾಂತ್ರಿಕವಾಗಿ ಸಾಮಾಜಕಾರ್ಯಕರ್ತನೂ ಅಲ್ಲ. ಹೆಚ್ಚು ಸೂಕ್ತವಾಗಿ ಹೇಳುವುದಾದರೆ ನನ್ನನ್ನು ನಾನು ರಚನಾತ್ಮಕ ಕಾರ್ಯಕರ್ತನೆಂದು ಕರೆದುಕೊಳ್ಳಬೇಕು.  ಗಾಂಧೀಯುಗದಿಂದಲೂ ಸುಪರಿಚಿತವಾದದ್ದು ಈ ಶಬ್ದ; ಆ ಯುಗದ ಅನೇಕ ಶಬ್ದಗಳಂತೆ ಈ ಶಬ್ದವೂ ಅನುಪಯೋಗಿಯಾಗುತ್ತಿದೆಯೆನ್ನಿ.
ನಾನು ಅರ್ಥಮಾಡಿಕೊಂಡಂತೆ, ಗಾಂಧೀಯ ಪರಿಕಲ್ಪನೆಯ ಸಮಾಜಕಾರ್ಯ ಅಥವಾ ರಚನಾತ್ಮಕ ಕಾರ್ಯ ಇದರ ಬಗ್ಗೆ ನಿಮ್ಮೊಂದಿಗೆ ಸಂಕ್ಷಿಪ್ತವಾಗಿ ಪ್ರಸ್ತಾಪಿಸಬಯಸುತ್ತೇನೆ. ಈ ದೇಶದಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಚಲಿತದಲ್ಲಿರುವ ಗಾಂಧೀಯ ರಚನಾತ್ಮಕ ಕಾರ್ಯಕ್ಕೂ ತಾಂತ್ರಿಕವಾಗಿ ಅಥರ್ೈಸಲ್ಪಡುವ ಸಮಾಜಕಾರ್ಯಕ್ಕೂ ಸೇತುವೆಯನ್ನು ನಿಮರ್ಿಸಬೇಕೆಂಬ ಆಸಕ್ತಿಯನ್ನು ನಿಮ್ಮಲ್ಲಿ ಕೆಲವರಾದರೂ ಹೊಂದಿ ಈ ಕಾರ್ಯವನ್ನು ಮುಂದುವರಿಸುತ್ತೀರೆಂದು ನಾನು ನಂಬಿದ್ದೇನೆ.
ರಾಷ್ಟ್ರೀಯ ಅಂದೋಲನ
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ರಚನಾತ್ಮಕ ಕಾರ್ಯಕ್ರಮವು ಗಾಂಧೀಜಿಯವರಿಂದ ರಾಷ್ಟ್ರೀಯ ಕ್ರಾಂತಿಕಾರೀ ಆಂದೋಲನದ ಭಾಗವಾಗಿ ಸೃಷ್ಟಿಸಲ್ಪಟ್ಟು ಪೋಷಿಸಲ್ಪಟ್ಟಿತು. ಅನೇಕ ವೇಳೆ ಇದನ್ನು ರಚನಾತ್ಮಕ ಕಾರ್ಯದ ಮೂಲಕ ನಡೆಸುವ ಸಾಮಾಜಿಕ ಕ್ರಾಂತಿ ಅಥವಾ ರಾಷ್ಟ್ರೀಯ ಕ್ರಾಂತಿ ಎಂದು ನಾವು ಬಗೆಯುತ್ತೇವೆ. ರಾಷ್ಟ್ರೀಯ ಆಂದೋಲನದಲ್ಲಿ ಭಾಗವಹಿಸಿದ ನಮ್ಮಲ್ಲಿನ ಕೆಲವರು ಅದರ ಯಶಸ್ಸಿಗೆ ರಚನಾತ್ಮಕ ಕಾರ್ಯಕ್ರಮ ಅಥವಾ ರಚನಾತ್ಮಕ ಚಟುವಟಿಕೆಗಳ ಕಾರಣ ಅಥವಾ ಕೊನೆಗೆ, ಬಿಡುಗಡೆಯ ಹೋರಾಟದ ಅಹಿಂಸೆಯ ಭಾಗಕ್ಕಾದರೂ ರಚನಾತ್ಮಕ ಕಾರ್ಯಕ್ರಮ ಅಥವಾ ರಚನಾತ್ಮಕ ಚಟುವಟಿಕೆಗಳು ಬಹುಮಟ್ಟಿನ ಕಾಣಿಕೆಯನ್ನು ನೀಡಿದವೆಂದರೆ ನನ್ನೊಡನೆ ನೀವು ದನಿಗೂಡಿಸುತ್ತೀರೆಂಬುದನ್ನು ನಾನು ಬಲ್ಲೆ. ಈ ರಚನಾತ್ಮಕ ಕಾರ್ಯದ ಮೂಲಕವೆ ರಾಷ್ಟ್ರೀಯ ನಾಯಕರಿಗೆ ಭಾರತೀಯ ಜನಸಮ್ಮರ್ದದೊಡನೆ ಸಂಪರ್ಕವನ್ನು ಸ್ಥಾಪಿಸಲು ಸಾಧ್ಯವಾದದ್ದು; ರಚನಾತ್ಮಕ ಕಾರ್ಯದ ಮೂಲಕವೇ ಜನರಿಗೆ ಸೇವೆಯನ್ನು ಒದಗಿಸಲು ಸಾಧ್ಯವಾದದ್ದು; ರಚನಾತ್ಮಕ ಕಾರ್ಯಕ್ರಮವು ನೆರವೇರಿಸಿದ ಶೈಕ್ಷಣಿಕ ಕ್ರಿಯೆಯಿಂದಲೇ ಬೃಹತ್ ಪ್ರಮಾಣದಲ್ಲಿ ಜನರಾಶಿಯನ್ನು ರಾಷ್ಟ್ರೀಯ ಆಂದೋಲನದೆಡೆಗೆ ಆಕಷರ್ಿಸಲು ಸಾಧ್ಯವಾದದ್ದು.
ರಾಷ್ಟ್ರೀಯ ಆಂದೋಲನದ ರಾಜಕೀಯ ಅಂಗವು ರಚನಾತ್ಮಕ ಕಾರ್ಯಕರ್ತರ ಮತ್ತು ರಚನಾತ್ಮಕ ಕಾರ್ಯಕ್ರಮದ ಮೇಲೆಯೇ ಬಹುವಾಗಿ ಅವಲಂಬಿತವಾಗಿದ್ದುದು. ಕೆಲವೊಮ್ಮೆ ಅವರಲ್ಲಿ ಕೆಲವರು ರಾಜಕೀಯ ಕಾರ್ಯಕರ್ತರೂ ಆಗಿರುತ್ತಿದ್ದರು; ರಚನಾತ್ಮಕ ಕಾರ್ಯಕರ್ತರೂ ಆಗಿರುತ್ತಿದ್ದರು. ಆದರೆ ಬಹುಮಟ್ಟಿಗೆ ಕಾರ್ಯವಿಭಜನೆಯಿತ್ತು ಅವರವರೊಳಗೆ. ಆದಾಗ್ಯೂ ಅಹಿಂಸೆಯಲ್ಲಿನ ಶಿಸ್ತು ಮತ್ತು ರಚನಾತ್ಮಕ ಕಾರ್ಯದ ಮೂಲಕ ಸಿದ್ಧವಾದ ತಯಾರಿ- ಈ ಎರಡಿಲ್ಲದಿದ್ದರೆ ಜನರಾಶಿಯ ಸತ್ಯಾಗ್ರಹವು ಸಾಧ್ಯವಾಗುತ್ತಲೇ ಇರಲಿಲ್ಲ, ಎಂಬುದು ಅವರೆಲ್ಲರಿಗೂ ಮನವರಿಕೆಯಾಗಿತ್ತು.
ಈಗಿನ ಪ್ರಶ್ನೆ
ಸ್ವಾತಂತ್ರ್ಯಾನಂತರದಲ್ಲಿ ಒಂದು ಪ್ರಶ್ನೆ ಉದ್ಭವವಾಗಿದೆ. ಸಾಮಾಜಿಕ ಅಭಿವೃದ್ಧಿ, ರಾಷ್ಟ್ರೀಯ ಅಭಿವೃದ್ಧಿ, ರಾಷ್ಟ್ರೀಯ ಪುನರುತ್ಥಾನ, ಆಥರ್ಿಕ ಅಭಿವೃದ್ಧಿ, ಸಾಂಸ್ಕೃತಿಕ ಹಾಗೂ ಮಾನವ ಅಭಿವೃದ್ಧಿ- ಈ ಇಡಿಯ ಕಾರ್ಯದೊಡನೆ ರಚನಾತ್ಮಕ ಕಾರ್ಯಕ್ಕಿರುವ ಸಂಬಂಧವೇನು, ಅದರ ಸ್ಥಾನ ಹಾಗೂ ವ್ಯಾಪ್ತಿಯೇನು, ಇತ್ಯಾದಿ. ಗಾಂಧೀಯವರ ಮರಣಾನಂತರ ಅವರ ಕಾರ್ಯದಶರ್ಿ ಶ್ರೀ ಪ್ಯಾರೇಲಾಲ್ ಗಾಂಧೀಜಿಯವರ ಕೊನೆಯ ಉಯಿಲು ಮತ್ತು ಒಡಂಬಡಿಕೆ, ಎಂದು ವಣರ್ಿಸಲಾಗಿರುವ ಒಂದು ದಾಖಲೆಯನ್ನು ಪ್ರಕಟಿಸಿದ್ದುದು ನಿಮಗೆಲ್ಲರಿಗೂ, ಕೊನೆಗೆ ಭಾರತೀಯ ಪ್ರತಿನಿಧಿಗಳಿಗಾದರೂ ಗೊತ್ತಿದೆ, ಎಂದು ನನಗೆ ಖಾತ್ರಿಯಿದೆ. ಅದನ್ನು ಗಾಂಧೀಜಿಯವರು ಅಖಿಲ  ಭಾರತೀಯ ಕಾಂಗ್ರೆಸ್ ಸಮಿತಿಯ ನಿರ್ಣಯದ ಕರಡು, ಎಂದು ಸಿದ್ಧಗೊಳಿಸಿದ್ದರು; ನಾನಂದುಕೊಳ್ಳುತ್ತೇನೆ,  ಅದನ್ನು ಅವರು ಇನ್ನೂ ಪರಿಷ್ಕರಿಸುತ್ತಿದ್ದರು. ಸ್ವಾತಂತ್ರ್ಯೋತ್ತರದ ಸಮಾಜಸೇವೆ ಎನ್ನಿ, ರಚನಾತ್ಮಕ ಕಾರ್ಯವೆನ್ನಿ, ಸಮಾಜಕಾರ್ಯವೆನ್ನಿ, ಯಾವ ಪದಗುಚ್ಛವನ್ನೇ ಉಪಯೋಗಿಸಿರಿ, ಅದರ ಇಡೀ ಪರಿಕಲ್ಪನೆಯನ್ನು ಈ ದಾಖಲೆಯು ಎಷ್ಟು ಸಾಧ್ಯವೊ ಅಷ್ಟು ಕಿರಿದಾಗಿ ನಮ್ಮಿದಿರು ಇರಿಸುತ್ತದೆ. ಅದರ ಆ ಭಾಗವನ್ನು ನಿಮ್ಮಿದಿರು ಓದಿದರೆ ಅದು ಉಪಯೋಗವಾದೀತು, ನಿಮ್ಮ ನೆನಪಿಗೊಂದು ಹೊಗರು ಒದಗೀತು, ಎಂದು ಭಾವಿಸುತ್ತೇನೆ. ಅವರು ಹೇಳಿದರು :
ಎರಡು ತುಂಡಾದರೂ ಭಾರತವು ರಾಜಕೀಯ ಸ್ವಾತಂತ್ರ್ಯವನ್ನು ಪಡೆದದ್ದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಸಾಧನೆಗಳ ಮೂಲಕ. ಆದರೆ, ತನ್ನ ಇಂದಿನ ರೂಪ ಮತ್ತು ಆಕಾರಗಳಿಂದ, ಅಂದರೆ, ಪ್ರಚಾರದ ಮತ್ತು ಪಾಲರ್ಿಮೆಂಟರಿಯ ಯಂತ್ರವಾಗಿ, ಅದು ಮುಂದುವರಿಯುವುದು ನಿರುಪಯುಕ್ತ.  ತನ್ನ ನಗರ ಮತ್ತು ಪಟ್ಟಣಗಳಿಂದ ಪ್ರತ್ಯೇಕವಾಗಿರುವ ಏಳು ಲಕ್ಷ ಹಳ್ಳಿಗಳ ದೃಷ್ಟಿಯಲ್ಲಿ ಭಾರತವು ಸಾಮಾಜಿಕ, ನೈತಿಕ ಹಾಗೂ ಆಥರ್ಿಕ ಸ್ವಾತಂತ್ರ್ಯವನ್ನು ಇನ್ನೂ ಪಡೆಯಬೇಕಾಗಿದೆ. ಪ್ರಜಾಪ್ರಭುತ್ವದ ಗುರಿಯೆಡೆಗೆ ಸಾಗುವ ಭಾರತದ ಪ್ರಗತಿಪಥದಲ್ಲಿ ಸೈನಿಕ ಶಕ್ತಿಯ ಮೇಲೆ ನಾಗರಿಕ ಶಕ್ತಿಯು ಪ್ರಭುತ್ವವನ್ನು ಗಳಿಸತಕ್ಕಂಥ ಹೋರಾಟಕ್ಕೆ ಸ್ಥಾನ ದೊರೆಯಬೇಕು. ರಾಜಕೀಯ ಪಕ್ಷಗಳು ಮತ್ತು ಜಾತೀಯ ಸಂಸ್ಥೆಗಳೊಡನೆ ಅದು ಅನಾರೋಗ್ಯಕರವಾದ ಸ್ಪಧರ್ೆಯನ್ನು ಹೂಡಕೂಡದು. ಈ ಮತ್ತು ಇಂತಹ ಕಾರಣಗಳಿಗಾಗಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್ ಸಂಸ್ಥೆಯನ್ನು ವಿಸಜರ್ಿಸಲೂ, ಕೆಳಗೆ ನಮೂದಿಸಿರುವ ನಿಯಮಗಳಿಗೆ ಅನುಗುಣವಾಗಿ ಮತ್ತು ಸಂದರ್ಭಕ್ಕನುಗುಣವಾಗಿ ಮಾರ್ಪಡುವ ಒಂದು ಲೋಕಸೇವಕ ಸಂಘವಾಗಿ ಅರಳಬೇಕೆಂತಲೂ ಏ.ಐ.ಸಿ.ಸಿ.ಯು ನಿರ್ಣಯಿಸುತ್ತದೆ.
ಈ ಗಾಂಧೀಯ ಅರ್ಥದಲ್ಲಿ ಸಮಾಜಸೇವೆಯು ('ಲೋಕಸೇವಾ') ಭಾರತೀಯರ ಸಾಮಾಜಿಕ, ನೈತಿಕ ಮತ್ತು ಆಥರ್ಿಕ ಸ್ವಾತಂತ್ರ್ಯಕ್ಕಿಂತ ಕಡಿಮೆಯಲ್ಲದ ಗುರಿಯನ್ನು ಹೊಂದಿದೆ. ಜೊತೆಗೆ ನಾಗರಿಕ ಶಕ್ತಿಯು ಸೈನಿಕ ಶಕ್ತಿಯ ಮೇಲೆ ಸಾರ್ವಭೌಮತ್ವವನ್ನು ಸ್ಥಾಪಿಸಿರುವಂಥ ಸ್ಥಿತಿಗೆ ಭಾರತವನ್ನು ಕೊಂಡೊಯ್ಯುವ ಗುರಿಯನ್ನೂ ಅದು ಹೊಂದಿದೆ.
ನಾನು ಈಗ ತಾನೇ ಓದಿದ ಗಾಂಧೀಜಿಯವರ ಮಾತುಗಳ ಮೇರೆಗೆ ಅವರು ಕಲ್ಪಿಸಿದ್ದುದು ರಾಜಕೀಯ ಕ್ರಿಯೆಯಲ್ಲ. ಆದರೆ ಸಾಮಾಜಿಕ ಕ್ರಿಯೆ, ಅಂದರೆ, ರಚನಾತ್ಮಕ ಕಾರ್ಯ ಅಥವಾ ಸಮಾಜಕಾರ್ಯ, ಇದರ ಮೂಲಕ ಕ್ರಾಂತಿ, ಎಂಬುದೇ ಅವರ ಮಾತಿನ ಅರ್ಥ. ಇದು ಈ ವಿಚಾರ ಸಂಕಿರಣದ ವಿಶೀಷ ಆಸಕ್ತಿ ಆಗಿರಬೇಕಾಗಿದೆ.
ಚೈತನ್ಯಹೀನ ಜನ
ನಾನೀಗ ಈ ವಿಚಾರಸಂಕಿರಣದ ವಿಷಯದ ಬಗ್ಗೆ, ಅಂದರೆ, ಅಭಿವೃದ್ಧಿಶೀಲ ಆಥರ್ಿಕತೆಯಲ್ಲಿ ಸಮಾಜಕಾರ್ಯದ ಅಥವಾ ಸಮಾಜಕಲ್ಯಾಣದ ಸ್ಥಾನವೇನು, ಎಂಬುದರ ಬಗ್ಗೆ ಕೆಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಇಚ್ಛಿಸುತ್ತೇನೆ. ನನ್ನ ಅನುಭವವು ಮುಖ್ಯವಾಗಿ ಹಳ್ಳಿಗಾಡಿಗೆ ಸಂಬಂಧಿಸಿದೆ. ಯಾವ ತೆರನ ಸಹಕಾರೀ ಪ್ರಯತ್ನವೊ ಒಂದಿಷ್ಟೂ ಅಲ್ಲಿ ಕಾಣುತ್ತಿಲ್ಲ. ಆ ಗ್ರಾಮ ಸಮುದಾಯದಲ್ಲಿ ಪ್ರತಿಯೊಂದು ಕುಟುಂಬವೂ ತನ್ನ ಜೀವನ ನಿರ್ವಹಣೆಗಾಗಿ ಕಠಿಣ ಶ್ರಮವಹಿಸುತ್ತಿದೆಯೆಂಬುದೇನೊ ನಿಜವೇ. ಆದರೇ, ಅಲ್ಲಿ ಸಾಮೂಹಿಕ ಅಥವಾ  ಸಹಕಾರೀ ಕ್ರಿಯೆಯ ಚೈತನ್ಯ ಇಲ್ಲ. ನಾವು ಸಾಮಾಜಿಕ ಅಭಿವೃದ್ಧಿಯ ಯಾವುದೇ ವಲಯವನ್ನು ದೃಷ್ಟಿಯಲ್ಲಿರಿಸಿಕೊಂಡಿರಲಿ ಈ ದೇಶದಲ್ಲಿ ಸಾಮೂಹಿಕ ಅಥವಾ ಸಹಕಾರೀ ಪ್ರಯತ್ನವನ್ನು ಅಭಿವೃದ್ಧಿಪಡಿಸದೇ ಇದ್ದರೆ ಬಹು ಮುಂದೆ ಸಾಗಲು ಇಂತಿಷ್ಟೂ ಸಾಧ್ಯವಿಲ್ಲ.
ಪ್ಲಾಸ್ಟರ್ ಆಫ್ ಪ್ಯಾರಿಸ್ ಕವಚದಲ್ಲಿ ಹುದುಗಿಸಿ ಕಟ್ಟಿ ಬಹುಕಾಲ ಚಲನೆಯಿಲ್ಲದಂತೆ ಇರಿಸಿಕೊಂಡಿರುವ ಮಾನವ ಶರೀರದ ಅಂಗವು ಬತ್ತಿ ಹೋಗುವ ಸ್ಥಿತಿಗೆ ಈ ನಮ್ಮ ದೇಶದ ಸ್ಥಿತಿಯನ್ನು ಅನೇಕ ವೇಳೆ ನಾನು ಹೋಲಿಸುತ್ತೇನೆ. ವ್ಯಕ್ತಿಯ ಬತ್ತಿಹೋದ ಅಂಗವು ಅವನ ಪ್ರಜ್ಞೆಗೆ ಪ್ರತಿ ಸ್ಫಂದಿಸುವುದಿಲ್ಲ. ಅದೇ ತೆರನಾಗಿ ಒಂದು ಶತಮಾನಕ್ಕಿಂತಲೂ ಹೆಚ್ಚು ಸಮಯವಿದ್ದ ರಾಷ್ಟ್ರೀಯ ದಾಸ್ಯವು ಈ ದೇಶದ ಜನರನ್ನು ಚೈತನ್ಯಹೀನರನ್ನಾಗಿಸಿದೆ; ಆದುದರಿಂದಲೇ ಮೇಲಿನಿಂದ ಬರುವ ಆಜ್ಞೆಗಳಿಗೆ ಅವರು  ಪ್ರತಿಸ್ಪಂದಿಸುವಲ್ಲಿ ಅಶಕ್ತರಾಗಿದ್ದಾರೆ. ಯೋಜನಾ ಆಯೋಗದ ಮಟ್ಟದಲ್ಲಿ ಅಥವಾ ಕೇಂದ್ರ ಸರಕಾರದ ಹಂತದಲ್ಲಿ, ಅಥವಾ ಸರಕಾರದ, ಜಿಲ್ಲಾ ಪರಿಷತ್ತಿನ ಮತ್ತಿತರ ಮಟ್ಟಗಳಲ್ಲಿ ರೂಪಿಸಿದ ಯಾವ ಧ್ಯೇಯ-ಧೋರಣೆಗಳೇ ಆಗಲೀ, ಯಾವ ಕಾರ್ಯಕ್ರಮಗಳೇ ಆಗಲಿ ಜನರು ಜೊತೆಗೂಡಿ ತಮ್ಮ ಸಾಮಾನ್ಯ ಸಮಸ್ಯೆಗಳನ್ನು ಇದಿರಿಸುವ ಶಕ್ತಿಯನ್ನು ಸಂಪಾದಿಸುವಂಥ ಸಾಮೂಹಿಕ ಯತ್ನವನ್ನು ಅಭಿವೃದ್ಧಿಗೊಳಿಸದಿದ್ದರೆ ಆ ಯಾವ ಧ್ಯೇಯ-ಧೋರಣೆಗಳೂ, ಕಾರ್ಯಕ್ರಮಗಳೂ ಸಂಪೂರ್ಣವಾಗಿ ಮತ್ತು ತೃಪ್ತಿಕರವಾಗಿ ಅನುಷ್ಠಾನಗೊಳ್ಳುವುದಿಲ್ಲ, ಎಂಬುದು ನನಗೆ ಖಾತ್ರಿಯಿದೆ.
ಸರಕಾರ ಮತ್ತು ಯೋಜನಾ ಆಯೋಗದ ಮಟ್ಟದಲ್ಲಿ ಸಾರ್ವಜನಿಕ ಸಹಕಾರ, ಸಾರ್ವಜನಿಕ ಸಹಕಾರದ ಅಭಾವ, ಇತ್ಯಾದಿ ಹೇಳಿಕೆಗಳನ್ನು ನಾವೆಲ್ಲ ಕೇಳುತ್ತಿದ್ದೇವೆ. ನನಗನ್ನಿಸಿದಂತೆ, ನಾನೀಗ ಹೇಳಿದ ರೀತಿಯ ಸಮಾಜಕಾರ್ಯವು ಸೇವೆ, ಶಿಕ್ಷಣ ಮತ್ತು ಜನರೊಡನೆ ಸತತವಾಗಿ ಹೊಂದಿದ ಸಂಪರ್ಕದ ಮೂಲಕ ನೀಡುವ ಕಾಣಿಕೆ. ಈ ಯೋಜನೆಯನ್ನೋ ಅಥವಾ ಆ ಯೋಜನೆಯನ್ನೋ ಕಾರ್ಯಗತಗೊಳಿಸಲು ಬರಿಯ ಹಣ ಖಚರ್ುಮಾಡುವುದರಿಂದ, ತಾಂತ್ರಿಕ ಸಲಹೆಯನ್ನು ನೀಡುವುದರಿಂದ ಮತ್ತು ಆಡಳಿತ ಯಂತ್ರವೊಂದನ್ನು ನಿಮರ್ಿಸುವುದರಿಂದ ಈ ಶಕ್ತಿಯನ್ನು ಸೃಜಿಸಲು ಸಾಧ್ಯವಿಲ್ಲ.
ಗ್ರಾಮಗಳ ನಡುವೆ
ಆದುದರಿಂದ ನಾನು ಹೇಳುತ್ತಿರುವುದು ರಾಷ್ಟ್ರೀಯ ಅಭಿವೃದ್ಧಿಯ ಬುನಾದಿಯಲ್ಲಿಯೇ, ಮುಖ್ಯವಾಗಿ ಎಲ್ಲಿ ಶೇಖಡಾ 82ಕ್ಕಿಂತಲೂ ಹೆಚ್ಚು ಜನರು ವಾಸಿಸುತ್ತಿದ್ದಾರೊ ಅಂಥ ಗ್ರಾಮೀಣ ಕ್ಷೇತ್ರಗಳ ಅಭಿವೃದ್ಧಿಯ ಬುನಾದಿಯಲ್ಲಿಯೇ ಜನರು ಜೊತೆಗೂಡಿ ಆಲೋಚಿಸುವ ಮತ್ತು ಕ್ರಿಯಾಶೀಲರಾಗಿ ದುಡಿಯುವ ಶಕ್ತಿಯನ್ನು ಸೃಜಿಸುವ ಮಹತ್ಕಾರ್ಯ ಇರುವುದು. ಯಾಕೆಂದರೆ ಅಲ್ಲಿನ ಜನರ ಪ್ರಯತ್ನಗಳನ್ನು ಉಪಯೋಗಿಸದೆ, ಅವರ ಸಂಪನ್ಮೂಲಗಳನ್ನು ರೂಢಿಸದೆ, ಅವರ ಸಾಮಥ್ರ್ಯಗಳನ್ನು ವ್ಯವಸ್ಥೆಗೊಳಿಸದೆ ನಾವು ಬಹು ಮುಂದೆ ಹೋಗಲಾರೆವು. ನನ್ನ ನಂಬುಗೆಯ ಪ್ರಕಾರ, ವ್ಯಾಪಕವಾದ ಮತ್ತು ಗಾಢ ತೆರನ ಸಾಮಾಜಿಕ ಅಥವಾ ರಚನಾತ್ಮಕ ಕಾರ್ಯದ ಮತ್ತು ಸೇವೆಯ ಮೂಲಕವೇ ಇದನ್ನು ಸಾಧಿಸಲು ಶಕ್ಯ. ಬೇರೆ ದೇಶಗಳಲ್ಲಿನ ಪರಿಸ್ಥಿತಿಯು- ಇಲ್ಲಿರುವ ನಿಮ್ಮಲ್ಲಿನ ಕೆಲವರು ಬೇರೆಬೇರೆ ದೇಶಗಳಿಂದ ಬಂದಿದ್ದೀರಿ- ಭಿನ್ನವಾಗಿರಬಹುದು. ನಾನರಿಯೆ. ನಾನು ಹೇಳುತ್ತಿರುವ ಶಕ್ತಿಯು ಅಲ್ಲಿ ಈಗಾಗಲೇ ಇದ್ದಿರಬಹುದು. ಅಂಥ ಪರಿಸ್ಥಿತಿಯಲ್ಲಿ ಅಲ್ಪಸ್ವಲ್ಪ ವಿಜ್ಞಾನದ ಉಪಯೋಗದಿಂದ, ಅಲ್ಪಸ್ವಲ್ಪ ಮಾರ್ಗದರ್ಶನದಿಂದ ಆ ಸಮುದಾಯಗಳು ತೀವ್ರಗತಿಯ ಪ್ರಗತಿಯನ್ನು ಸಾಧಿಸಬಹುದು. ಆದರೆ, ನನಗೆ ಖಾತ್ರಿಯಿದೆ ಭಾರತದಲ್ಲಿನ ಸ್ಥಿತಿಯು ಭಿನ್ನವಾಗಿದೆ.
ಈ ದೇಶದಲ್ಲಿರುವ ಪರಿಸ್ಥಿತಿಯನ್ನು ಗಮನಿಸಿದರೆ, ಅವರು ಯಾರೇ ಆಗಿರಲಿ, ಅವರು ಜಡಸ್ಥಿತಿಯಲ್ಲಿರುವ ಜನರೆಡೆಗೆ ಹೋಗಬೇಕು. ಸಮಾಜಕಾರ್ಯದ ಮೂಲಕ, ಸೇವೆಯ ಮಾರ್ಗವಾಗಿ, ಶಿಕ್ಷಣದ ಮೂಲಕ, ಅವರ ಜೀವನದೊಡನೆ ಬೆರೆಯುವುದರ ಮೂಲಕ, ಅವರನ್ನು ಚೇತನಗೊಳಿಸಬೇಕು, ಹುರಿದುಂಬಿಸಬೇಕು. ನಾನು ಮೇಲಿಂದ ಮೇಲೆ ಹೇಳುತ್ತಿರುವಂತೆ ಸರಕಾರದಿಂದಾಗಲಿ ಅಥವಾ ಅದರ ವಿಭಾಗಗಳಿಂದಾಗಲಿ ಅಥವಾ ಅದರ ನಿಯೋಗಗಳಿಂದಾಗಲಿ,  ರಾಜಕೀಯ ಪಕ್ಷಗಳಿಂದಾಗಲಿ, ಅಥವಾ ರಾಜಕೀಯ ಕ್ರಿಯೆಗಳಿಂದಾಗಲಿ ಈ ಕೆಲಸ ಸಾಧ್ಯವಾಗದು. ಜನರನ್ನು ಹುರಿದುಂಬಿಸಬೇಕು. ಏನಾದರೂ ಕೇಳಲೆಂದು ಅವರನ್ನು ದಿಲ್ಲಿಗೊ ಮತ್ತೆಲ್ಲಿಗೊ ದೌಡಾಯಿಸಿ ತಮಗೆ ಇದನ್ನೊ ಅಥವಾ ಮತ್ತೊಂದನ್ನೊ ಮಾಡಿಕೊಡಬೇಕೆಂದು ಒತ್ತಾಯಿಸಬೇಕೆಂದು ನಾನು ಹೇಳತ್ತಲಿಲ್ಲ. ನಾನು ಹೇಳುತ್ತಿರುವುದು, ಜನರು ತಮಗೆ ತಾವೇ ತಮ್ಮ ಕೆಲಸಗಳನ್ನು ಮಾಡಿಕೊಳ್ಳಬೇಕು, ಎಂಬುದಾಗಿ. ಜನರು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಮತ್ತು ಕರ್ತವ್ಯಗಳನ್ನು ತಾವು ತಮ್ಮ ಬುದ್ಧಿ, ಹೃದಯ ಮತ್ತು ಕೈಗಳನ್ನು ಸಂಮೇಳಗೊಳಿಸಿ ದುಡಿಯದಿದ್ದರೆ ಪರಿಹರಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಳ್ಳಬೇಕಾಗಿದೆ. ದೇಶದ ಸಮಾಜಕಾರ್ಯಕರ್ತರ ಮುಂದಿರುವುದು ಈ ಆಹ್ವಾನ. ಅಂದರೆ, ನಾವು ಕರೆಯುತ್ತಿರುವ ಜನಶಕ್ತಿ ಅಥವಾ ಲೋಕಶಕ್ತಿಗಳನ್ನು ಸೃಜಿಸಿ, ಸಮೃದ್ಧಗೊಳಿಸಲು ತೊಡಗಿ ನಿರತರಾಗಿರುವುದು.

ಭೂದಾನ
ಗಾಂಧೀಜಿಯವರು ಕ್ರಾಂತಿಕಾರೀ ಪರಿಕಲ್ಪನೆಯ ಸಮಾಜಕಾರ್ಯದ ಕಡೆಗೆ ಸ್ವಲ್ಪ ಹಿಂದಿರುಗೋಣ. ಈ ಪರಿಕಲ್ಪನೆಯನ್ನು ಸಾಧಿಸಲು ವಾಸ್ತವವಾಗಿ ಏನು ನಡೆಯುತ್ತಲಿದೆ, ಎಂಬುದರ ಬಗ್ಗೆ ಸಂಕ್ಷಿಪ್ತವಾಗಿ ಪ್ರಸ್ತಾಪಿಸಲು ನಿಮ್ಮ ಕ್ಷಮೆ ಕೋರುತ್ತೇನೆ, ಉದಾಹರಣೆಗಾಗಿ, ಭೂಹಿಡುವಳಿ ಅಥವಾ ಭೂ-ಒಡೆತನದ ಮೂಲಕ ಆಗುತ್ತಿರುವ ಶೋಷಣೆಯನ್ನು  ಪ್ರತಿಬಂಧಿಸಬೇಕಾದರೆ ಗ್ರಾಮೀಣ ಭಾರತದಲ್ಲಿ ಕೆಲವು ವರ್ಗಗಳ ನಡುವೆ ಈಗ ಅಸ್ತಿತ್ವದಲ್ಲಿರುವ ಕೆಲವು ತೆರನ ಸಂಬಂಧಗಳನ್ನು ನಾವು ಬದಲಿಸಬೇಕು. ಗಾಂಧೀಯ ಪರಿಕಲ್ಪನೆಯ ಸಮಾಜಕಾರ್ಯದ ಮೂಲಕ ಆ ಸಂಬಂಧಗಳಲ್ಲಿ ಪರಿವರ್ತನೆಯನ್ನು ತರಲಾಗುತ್ತಿದೆ. ಇದು ವಿನೋಬಾಜಿಯವರ ಗ್ರಾಮದಾನ ಆಂದೋಲನ; ಇದರ ಮೂಲಕ ವೈಯಕ್ತಿಕ ಭೂಒಡೆತನವನ್ನೇ ಸ್ವಯಂಸ್ಫೂತರ್ಿಯಿಂದ ಸಾಮುದಾಯಿಕ ಒಡೆತನಕ್ಕೆ ಪರಿವತರ್ಿಸಲಾಗುತ್ತಿದೆ.
ಈ ಆಂದೋಲನವು ಏನೋ ಮಹತ್ತನ್ನು ಸಾಧಿಸುತ್ತಲಿದೆ ಎಂದು ತೋರಿಸಲು ನಾನು ಇಚ್ಛಿಸುತ್ತಿಲ್ಲ್ಲ; ನನ್ನ ಅಭಿಪ್ರಾಯವನ್ನು ಬಿಂಬಿಸಲು ಇದರ ಪ್ರಸ್ತಾಪವಷ್ಟೇ. ಗ್ರಾಮದಾನ ಆಂದೋಲನವಲ್ಲ; ಅದು ರಚನಾತ್ಮಕ ಆಂದೋಲನ, ಅದು ಸಮಾಜಕರ್ಾಯದ ಆಂದೋಲನ, ಒಂದು ಶೈಕ್ಷಣಿಕ ಆಂದೋಲನ; ಭೂ ರಹಿತರನ್ನಾಗಲಿ, ಸಣ್ಣ ಭೂ-ಹಿಡುವಳಿದಾರರನ್ನಾಗಲಿ ದೊಡ್ಡ ದೊಡ್ಡ ಭೂ ಮಾಲೀಕರ ವಿರುದ್ಧ ಸಂಘಟಿಸುವುದರ ಮೂಲಕ ವೈಯಕ್ತಿಕ ಒಡೆತನದಿಂದ ಸಾಮುದಾಯಿಕ ಒಡೆತನಕ್ಕೆ ಸ್ಥಿತ್ಯಂತರವನ್ನು ಮಾಡಲಾಗುತ್ತಲಿಲ್ಲ. ಇದನ್ನು ಯಾವುದೇ ಸಮಾಜವಾದಿ ಅಥವಾ ಕಮ್ಯುನಿಷ್ಟ್ ರಾಜಕೀಯ ಚಟುವಟಿಕೆಯ ಮೂಲಕವಲ್ಲ. ಆದರೆ, ರಾಜಕೀಯದಲ್ಲಿನ ಮಾರ್ಗದೃಷ್ಟಿಯ ಮತ್ತು ಕ್ರಿಯೆಯ ಮೂಲಕವೇ ಸಾಧಿಸಲಾಗುತ್ತಿದೆ. ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಯೋಜಿಸಿದ, ಮನೋ - ನೈತಿಕ ಮಾರ್ಗದೃಷ್ಟಿಯೆಂದು ಬೇಕಾದರೂ ಇದನ್ನು ನೀವು ಕರೆಯಬಹುದು; ಇದು ಸೇವೆಯ ಮೂಲಕ ನಡೆಯುವ ಮಾರ್ಗದೃಷ್ಟಿ, ಬರಿಯ ಸುತ್ತಾಡುತ್ತಾ ಉಪದೇಶ ಮಾಡುತ್ತ ಪೂರೈಸುವ ಕಾರ್ಯವು ಇದಲ್ಲ. ಆದರೆ, ಜನರಿಗೆ ನೆರೆವಾಗುವುದಕ್ಕೆ ಏನಾದರೂ ಕೈಕೊಳ್ಳುವುದರ ಮೂಲಕ ಹಳ್ಳಿಯಲ್ಲಿನ ಜೀವನವನ್ನು ಹೇಗೆ ಉತ್ತಮವಾಗಿ ವ್ಯವಸ್ಥೆಗೊಳಿಸಬಹುದೆಂಬುದನ್ನೂ ಅಂತಾಸಂಘರ್ಷಣೆಗಳನ್ನು ಹೇಗೆ ಹೋಗಲಾಡಿಸಬಹುದು ಅಥವಾ ಸರಳಗೊಳಿಸಬಹುದು ಎಂಬುದನ್ನೂ ಸೇವೆಯ ಮೂಲಕ ಅವರಿಗೆ ತೋರಿಸುವುದು. ಗ್ರಾಮದ ಭೂಮಿಯು ಸಮುದಾಯದ ಸ್ವತ್ತಾದರೆ ಸಹಕಾರೀ ಯತ್ನವು ಸುಲಭ ಸಾಧ್ಯವಾಗುತ್ತದೆ; ಆಥರ್ಿಕ ಅಭಿವೃದ್ಧಿಗೆ ಹಾದಿಮಾಡಿಕೊಡುತ್ತದೆ.
ವೈಜ್ಞಾನಿಕ ತರಬೇತಿ
ಇದರಲ್ಲಿ ನಿಮಗೆ ಆಸಕ್ತಿಯಿದೆಯೋ, ನನಗೆ ಗೊತ್ತಿಲ್ಲ. ಆದರೆ ನನಗೆ ಇದರಲ್ಲಿ ಆಸಕ್ತಿಯಿದೆ, ಮತ್ತು ಈ ತೆರೆನ ಕೆಲಸದಲ್ಲಿ ವಾಸ್ತವವಾಗಿ ನಿರತರಾಗಿರುವ ಸಹಸ್ರಾರು ಜನರು ಈ ದೇಶದಲ್ಲಿದ್ದಾರೆ. ಆದುದರಿಂದ, ನಾನು ನನ್ನೀ ಮಾತನ್ನು ಮುಗಿಸುವ ಮುನ್ನ ಒಂದು ಪ್ರಶ್ನೆಯನ್ನು ಎತ್ತಲು ಇಚ್ಛಿಸುತ್ತೇನೆ: ನಮ್ಮ ನಿಮ್ಮ ನಡುವೆ, ಅಂದರೆ, ಗಾಂಧೀಕಾರ್ಯಕರ್ತ, ಸಮಾಜಕಾರ್ಯಕರ್ತರ ನಡುವೆ ಯಾವುದಾದರೂ ಒಂದು ರೀತಿಯ ಸೇತುವೆಯು ಇರಲು ಸಾಧ್ಯವಿಲ್ಲವೇ? ಈ ವಿಚಾರ ಸಂಕಿರಣದಲ್ಲಿ ಸಾದರ ಪಡಿಸಿದ ಕೆಲವು ಪ್ರಬಂಧಗಳನ್ನು ನಾನು ಓದುತ್ತಿರುವಂತೆ, ನನಗೆ ಅರಿವಾಗುತ್ತಿದೆ, ಸವರ್ೋದಯ ಅಥವಾ ಗಾಂಧೀ ಕ್ಷೇತ್ರದಲ್ಲಿನ ನಮ್ಮಲ್ಲಿನ ಅನೇಕರಿಗೆ, ಏಕೆ, ನಮ್ಮಲ್ಲಿನ ಯಾರಿಗೂ, ನೀವು ಅತ್ಯಗತ್ಯವೆಂದು ಪರಿಗಣಿಸುತ್ತಿರುವ ವೈಜ್ಞಾನಿಕ ತರಬೇತಿ ಇಲ್ಲ; ಗಾಂಧೀಜಿಯವರು ಅನೇಕ ಸ್ಥಳಗಲ್ಲಿ ರಚನಾತ್ಮಕ ಕಾರ್ಯಕರ್ತರಿಗೆ ವೈಜ್ಞಾನಿಕ ತರಬೇತಿ ಬೇಕು, ಎಂದು ಹೇಳಿದ್ದಾರೆ. ನಮಗೆ ಏನೊಂದೂ ತರಬೇತಿಯಿಲ್ಲ. ಯಾವುದಾದರೂ ಒಂದು ತೆರೆನ ತರಬೇತಿಯನ್ನು ನಾವು ಪಡೆದಿದ್ದರೆ ಅದು ಕೇವಲ ಗಾಂಧೀ ಅಥವಾ ವಿನೋಬಾ ಅಥವಾ ಸವರ್ೋದಯ ತತ್ತ್ವದ ಬಗ್ಗೆ ಯಾವ ತರಬೇತಿಯೂ ಇಲ್ಲ. ಇಲ್ಲಿ ನಿಮ್ಮ ನಮ್ಮ ನಡುವೆ ಒಂದು ಪ್ರಕಾರದ ಸೇತುವೆಯನ್ನು ನಿಮರ್ಿಸುವ ಸಾಧ್ಯತೆ ಇದೆ. ಈ ವೈಜ್ಞಾನಿಕ ತರಬೇತಿಯನ್ನು ನೀವು ನಮಗೆ ಒದಗಿಸಬಹುದು.
ಬಹುಶಃ ಇನ್ನೊಂದು ಸೇತುವೆಯ ಸಾಧ್ಯತೆಯಿದೆ; ಅಥವಾ ಇನ್ನೊಂದು ಕೊನೆಯಿಂದ ಸೇತುವೆಯೆಂಬುದನ್ನು ನಿಮರ್ಿಸಲು ಸಾಧ್ಯವಿದೆ. ನಿಮ್ಮಲ್ಲಿ ಕೆಲವರಿಗಾದರೂ ಇಡಿಯ ಗಾಂಧೀಯ ಪರಿಕಲ್ಪನೆಯ ಸಮಾಜಕಾರ್ಯವನ್ನು ಅಥವಾ ರಚನಾತ್ಮಕ ಕಾರ್ಯವನ್ನು ಬರಿಯ ಅದರ ಪರಿಕಲ್ಪನೆಯನ್ನು ಮಾತ್ರವಲ್ಲ, ಆದರೆ, ಅದರ ಅನುಷ್ಠಾನವನ್ನೂ, ಅಭ್ಯಸಿಸುವ ಆಸಕ್ತಿಯಿದ್ದಿರಬಹುದು, ನಿಮಗೆ ಉಪಯೋಗವಾಗುವಂತಹ ನಿರ್ಣಯಗಳಿಗೆ ನೀವು ಬರಬಹುದು. ಇದು ಎಷ್ಟರಮಟ್ಟಿಗೆ ಸಾಧ್ಯವೆಂಬುದು ನನಗೆ ಗೊತ್ತಿಲ್ಲ. ವೃತ್ತಿಪರ ಸಮಾಜಕಾರ್ಯಕರ್ತನಿಗೆ ಸಮಾಜಕಾರ್ಯದ ಮೂಲಕವಾಗಿ ನಡೆಯುವ ಸಾಮಾಜಿಕ ಕ್ರಾಂತಿಯ ತತ್ತ್ವದಲ್ಲಿ ನಿಜವಾದ ಆಸಕ್ತಿ ಇದೆಯೇ, ಎಂಬುದನ್ನು ನಾನರಿಯೆ.
ಮೂಲಭೂತ ಬದಲಾವಣೆ
ಈ ವಿಚಾರ ಸಂಕಿರಣದ ಕೆಲವು ಸಂಪ್ರಬಂಧಗಳಲ್ಲಿ ಮಾನವನಲ್ಲಿ ತೊಡಗಿಸಿದ ಬಂಡವಾಳ ಮತ್ತು ಮಾನವ ಮೌಲ್ಯಗಳ ಅಭಿವೃದ್ಧಿಯ ಬಗೆಗೆ ನಡೆಸಿದ ಚಚರ್ೆಯ ಪ್ರಸ್ತಾಪವಿದೆ. ರಚನಾತ್ಮಕ ಕಾರ್ಯದ ಮೂಲಕ ನಡೆಸುವ ಸಾಮಾಜಿಕ ಕ್ರಾಂತಿಯ ಇಡಿಯ ಗಾಂಧೀಯ ಪರಿಕಲ್ಪನೆಯು ಆವೊಂದು ಸಿದ್ಧಾಂತದ ಮೇಲೆ ಅವಲಂಬನೆಗೊಂಡಿದೆ. ಹೀಗೆಂದರೆ, ಸಾಮಾಜಿಕ ಪರಿವರ್ತನೆಯನ್ನು ಸಾಧಿಸಬೇಕಾದರೆ, ಬೇಡ, ಕೇವಲ ಒಂದು ಬದಲಾವಣೆಯನ್ನು, ಉದಾಹರಣೆಗೆ, ಭೂ ಒಡೆತನದ ವ್ಯವಸ್ಥೆಯಲ್ಲಿ, ಗೇಣಿ ಪದ್ಧತಿಯಲ್ಲಿ, ಇತ್ಯಾದಿ, ಅಥವಾ ಇಂಥ ಯಾವುದರಲ್ಲಿಯೇ ಆಗಲಿ, ತರಬೇಕಾದರೆ, ಅದಕ್ಕೆ ಮೊದಲು ಸಂಬಂಧಿಸಿದ ಮಾನವರಲ್ಲಿ ಬದಲಾವಣೆ ಆಗಿರಬೇಕು; ಅವರ ಹೃನ್ಮನಗಳಲ್ಲಿ ಪರಸ್ಪರರ ಬಗೆಗೆ ಹಾಗೂ ಭೂಮಿ ಮತ್ತಿತರ ವಸ್ತುಗಳನ್ನೂಳಗೊಡ ಇಡಿಯ ಪರಿಸರದ ಬಗೆಗೆ ಅವರಿಗಿರುವ ಮನೋದೃಷ್ಟಿಗಳಿಲ್ಲಿ ಪರಿವರ್ತನೆಯಾಗಿರಬೇಕು. ಗಾಂಧೀಯ ಸಮಾಜಕಾರ್ಯ ಅಥವಾ ಸಮಾಜಸೇವೆಯು ಪ್ರತಿಕ್ರಿಯೆಯ ಅಂತರಂಗ ಹಾಗೂ ಬಹಿರಂಗ ಪರಿಣಾಮಗಳೆರಡರ ಗುರಿಯನ್ನು ಇರಿಸಿಕೊಂಡಿದೆ. ಅಂದರೆ, ಮಾನವನನ್ನು ಹಾಗೂ ಸಮಾಜವನ್ನು ಪರಿವತರ್ಿಸುವ ಗುರಿಯು ಅದಕ್ಕಿದೆ. ಸಾಂಪ್ರದಾಯಿಕ ಸಮಾಜಕಾರ್ಯವು ಈ ಇಡಿಯ ತತ್ತ್ವವನ್ನು, ಈ ಇಡಿಯ ಕ್ರಿಯಾವಲಯವನ್ನು ತನ್ನಲ್ಲಿ ಅಡಗಿಸಿಕೊಳ್ಳುವಂತೆ, ವಿಸ್ತೃತವಾಗುವುದಾದರೆ ಅದು ಗಾಂಧೀಯ ಮತ್ತು ಪಾಶ್ಚಾತ್ಯ ಪರಿಕಲ್ಪನೆಗಳ ನಡುವೆ ಆದ ವಿವಾಹದಲ್ಲಿ ಪರ್ಯವಸನವಾಗಿರುತ್ತದೆ, ಎಂದು ನಾನು ಊಹಿಸುತ್ತೇನೆ. ನಾನು ಧೈರ್ಯವಾಗಿ ಆಲೋಚಿಸುವಂತೆ ಈ ವಿವಾಹವು ಕೇವಲ ಈ ದೇಶಕ್ಕೆ ಮಾತ್ರವೇ ಅಲ್ಲ, ಬೇರೆ ಇತರ ದೇಶಗಳಿಗೂ ಅತ್ಯಂತ ಫಲಕಾರಿಯಾಗುತ್ತದೆ.
('ಅಭಿವೃದ್ಧಿಯಶೀಲ ಆಥರ್ಿಕತೆಯಲ್ಲಿ ಸಮಾಜ ಕಲ್ಯಾಣ' ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಶ್ರೀ ಜಯಪ್ರಕಾಶ ನಾರಾಯಣ ಅವರು ಮಾಡಿದ ಭಾಷಣದ (26ನೆಯ ಸೆಪ್ಪೆಂಬರ್, 1963, ನವದೆಹಲಿ) ಅನುವಾದ. ಜನವರಿ 1980ರ ಸುಧಾ, ವಾರಪತ್ರಿಕೆಯಲ್ಲಿ ಪ್ರಕಟವಾದದ್ದು.)

ಡಾ.ಎಚ್.ಎಂ. ಮರುಳಸಿದ್ಧಯ್ಯ
'ಈಶಕೃಪೆ' ನಂ. 62, ಮಂಜುನಾಥ ಕಾಲನಿ, ಜೆಪಿನಗರ 2ನೆಯ ಹಂತ, ಬೆಂಗಳೂರು-560 078
ಚರವಾಣಿ: 9480611307