Monday, December 31, 2012

ಪೊರಕೆ ಪ್ರೋಫೆಸರ್




ಪೊರಕೆ ಪ್ರೋಫೆಸರ್

      ಸಾಹಿತ್ಯದ ವಿದ್ಯಾಥರ್ಿಯಾಗಿದ್ದು ಕವನ, ಕಾದಂಬರಿ ರಚಿಸುವಾಗಲೆ ಸಮಾಜ ಕಾರ್ಯದ ಅಧ್ಯಯನ ಕೈಗೊಳ್ಳುವ ತಿರುವು ಒದಗಿಬಂದಿತು. ಪರಿಣಾಮವಾಗಿ ಅದರಲ್ಲಿ ಉನ್ನತ ವ್ಯಾಸಂಗವನ್ನು ಮಾಡಿ ಸಂಶೋಧನೆಯನ್ನು ಕೈಗೊಂಡರು. ನಂತರ ಕನರ್ಾಟಕದಲ್ಲಿ ಸಮಾಜಕಾರ್ಯ ಮತ್ತು ಅದರ ಅಧ್ಯಯನಗಳಿಗೆ ಹೊಸ ಕಸುವು ದೊರೆಕಿತು. ಮಾತ್ರವಲ್ಲ ಆ ವಿಷಯದ ಕೃತಿಗಳನ್ನು ಕನ್ನಡದಲ್ಲಿ ಬರೆದು; ಅನುವಾದಿಸಿ ವಿದ್ಯಾಥರ್ಿಗಳಿಗೆ ಮತ್ತು ಅಧ್ಯಯನಕಾರರಿಗೆ ದೊರೆಯುವಂತೆ ಮಾಡಿದ ಹೆಗ್ಗಳಿಕೆ ಡಾ. ಎಚ್.ಎಂ. ಮರುಳುಸಿದ್ಧಯ್ಯನವರದು.
1986 ರಲ್ಲಿ ನಾನು ಏಳನೇತರಗತಿಯ ವಿದ್ಯಾಥರ್ಿಯಾಗಿದ್ದೆ, ಆ ವೇಳೆ ನಮ್ಮ ಹಳ್ಳಿಗೆ ಬದಲಾವಣೆಯ ಹೊಸಗಾಳಿ ಬೀಸಲಾರಂಭಿಸಿತ್ತು. ಊರಿನ ಚರಂಡಿಗಳು, ಬಚ್ಚಲ ಗುಂಡಿಗಳು ಹಾಗೂ ಕಸ ತುಂಬಿದ ಬೀದಿಗಳು ಸ್ವಚ್ಚಗೊಳ್ಳುವುದರ ಜೊತೆಗೆ ಜನರ ಅಂತರಂಗದಲ್ಲಿ ಸಮಾಜ ಕಾರ್ಯದ ಬೀಜ ಬಿತ್ತುವ ಕೆಲಸ ನಡೆಯಿತು. ನಮ್ಮೂರನ್ನು ನಾವೇ ಶುಚಿಗೊಳಿಸಿಕೊಳ್ಳಬೇಕು ಎಂಬ ಸ್ವಾವಲಂಬನೆಯ ಪಾಠ ಹೇಳುತ್ತಿದ್ದವರು ಅದೇ ಊರವರಾದ ಮತ್ತು ಸುತ್ತಲ ಹಳ್ಳಿಯವರಿಂದ ಪೊರಕೆ ಪ್ರೋಫೆಸರ್ ಎಂದು ಕರೆಯಲ್ಪಡುತ್ತಿದ್ದ ಸಮಾಜ ವಿಜ್ಞಾನಿ ಡಾ. ಎಚ್.ಎಂ.ಎಂ ರವರು. 
ಹುಟ್ಟಿದ್ದು ಕೂಡ್ಲಿಗಿ ತಾಲ್ಲೂಕಿನ  ಹಿರೇಕುಂಬಳಕುಂಟೆ ಎಂಬ ಕುಗ್ರಾಮದಲ್ಲಿ,  ಜಾತಿಯಲ್ಲಿ ಜಂಗಮ ಕುಲವಾದರು ಅವರು ಉಸಿರಾಡಿದ್ದು ಸಮಾಜ ಕಾರ್ಯದಲ್ಲಿ. ಎಷ್ಟು ತೀವ್ರವಾಗಿ ಅದರಲ್ಲಿ ತಮ್ಮನ್ನು ತೊಡಗಿಸಿ ಕೊಡಿದ್ದರೆಂದರೆ, ಒಂದು ಸಲ ಊರಿನ ಮಧ್ಯ ಇರುವ ಪೀರ್ಲದೇವರ (ಮೋಹರಂ) ಗುಡಿಯ ಮುಂದೆ ಹಾದು ಹೋಗುತ್ತಿದ್ದರು. ಆ ವೇಳೆ ನಾಯಿಯೊಂದು ಗುಡಿಯ ಮುಂಭಾಗದಲ್ಲಿ ಮಲವಿಸರ್ಜನೆ ಮಾಡಿದ್ದು ಅವರ ಕಣ್ಣಿಗೆ ಬಿತ್ತು. ಕೂಡಲೆ ತಮ್ಮ ಎರಡೂ ಕೈಗಳಿಂದ ಅದನ್ನು ಬಾಚಿ ಎತ್ತಿಕೊಂಡು ತಿಪ್ಪೆಯ ದಾರಿ ಹಿಡಿದರು. ಗುಡಿಯಲ್ಲಿ ಹರಟುತ್ತಿದ್ದವರು, ಊರ ಬಾಗಿಲ ಕಟ್ಟೆಯ ಮೇಲೆ ಕುಳಿತವರು 'ಅಯ್ಯೋ.... ಥು., ಈ ಪ್ರೋಫೆಸರ್ ಈಗೀಗ ಏನೇನೋ ಮಾಡ್ತಿದರೆ'  ಎಂದುಕೊಳ್ಳುತ್ತಿರುವಾಗಲೆ ಅಲ್ಲೇ ನಿಂತಿದ್ದವರು 'ಛೆ... ಇಲ್ಲಿ ಹಾಕಿ' ಎಂದು ಸಗಣಿ ಪುಟ್ಟಿಯಲ್ಲಿ ಆ ಮಲವನ್ನು ಹಾಕಿಸಿಕೊಂಡರು. ಬಳಿಕ ಅವರ ಕೈಗಳಿಗೆ ನೀರು ಸುರಿದರು.
ತಾವು ಕೆಲಸ ಮಾಡುತ್ತಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ಶೌಚಾಲಯಗಳು ಒಮ್ಮೆ ಶುಚಿಗೊಳಿಸುವವರಿಲ್ಲದೆ ದುನರ್ಾತ ಹೊಡೆಯುತ್ತಿದ್ದವಂತೆ. ಆಗ ಪ್ರೋ.ಎಚ್.ಎಂ.ಎಂ ಪೊರಕೆ, ಬ್ರಷ್, ಬ್ಲೀಚಿಂಗ್ ಪೌಡರ್ಗಳನ್ನು ಹಿಡಿದು ತೊಳೆಯತೊಡಗಿದರು. ಕೂಡಲೆ ವಿದ್ಯಾಥರ್ಿಗಳೆಲ್ಲ ಅವರ ಜೊತೆ ಕೈಜೋಡಿಸಿದರು. ಇವು ಎರಡು ಉದಾಹರಣೆಗಳು ಮಾತ್ರ. ಇಂಥ ಕಾರ್ಯ ವೈಖರಿಯೇ ಅವರ ಜಾಯಮಾನವಾಗಿದೆ. ಸಮಾಜಕಾರ್ಯ ಎಂದರೆ ತರಗತಿಯ ಒಳಗೆ ಮಾತ್ರ ಕಲಿಯುವುದಲ್ಲ ಸಮುದಾಯದೊಳಗೆ ನಿಂತು ಕೈಮುಟ್ಟಿ ಕಾಯಕ ಮಾಡುವುದು ಎನ್ನುವುದನ್ನು ನಡೆದು ತೋರಿಸಿದರು. 


        ಕಸಗೂಡಿಸುವ, ಕೈಯಲ್ಲಿ ಹೊಲಸು ಎತ್ತುವ, ಶೌಚಾಲಯ ತೊಳೆಯುವ ಪ್ರೋಫೆಸರನ್ನು ಹಬ್ಬಗಳಲ್ಲಿ ಭಿನ್ನ ತೀರಿಸಲಿಕ್ಕೆ ಕರೆಯಲು ಊರಲ್ಲಿರುವ ಅಧಿಕ ಸಂಖ್ಯೆಯ ಲಿಂಗಾಯಿತರು ಹಿಂದೇಟು ಹಾಕತೊಡಗಿದರು. ಅದಾವುದಕ್ಕೂ ಹಿಂಜರಿಯದೆ ಶಾಲಾ ವಿದ್ಯಾಥರ್ಿಗಳಾದ ನಮ್ಮನ್ನು ಸೇರಿಸಿಕೊಂಡು ಮಣಿಗಾರರ ಕೇರಿಯಿಂದ ಮೇಲ್ಜಾತಿಯವರ ಕೇರಿಯವರೆಗೆ ಪೊರಕೆ ಹಿಡಿದು ಇಡೀ ಊರಿನ ಕಸವನ್ನೆಲ್ಲ ಗುಡಿಸಿಬಿಡುತ್ತಿದ್ದರು. ಚರಂಡಿಗಳನ್ನು ಶುಚಿಮಾಡಿ, ರಸ್ತೆಯ ಗುಂಡಿಗಳನ್ನೆಲ್ಲ ಮುಚ್ಚಿ ಅದರ ಇಕ್ಕೆಲಗಳಲ್ಲಿ ಗಿಡ ನೆಡುವವರೆಗೂ ಅವರು ವಿಶ್ರಮಿಸುತ್ತಿರಲಿಲ್ಲ. ಅಂದು ನಾಟಿ ಮಾಡಿದ ಗಿಡಗಳಿಂದು ಹೆಮ್ಮರವಾಗಿ ಬೆಳೆದು ನಿಂತಿವೆ.
ಅವರು ಊರಲ್ಲಿ ಇದ್ದಷ್ಟು ದಿನ ಶಾಲಾ ಹುಡುಗರಿಗೆಲ್ಲ ಹಬ್ಬದ ವಾತಾವರಣ. ಏಕೆಂದರೆ ಅವರ ಮೃದು ಹಾಸ್ಯದ ಮಾತುಗಳು ನಮ್ಮನ್ನು ಚುಂಬಕದಂತೆ ಆಕಷರ್ಿಸುತ್ತಿದ್ದವು. ಆತ್ಮೀಯವಾಗಿ ನಮ್ಮ ಹೆಗಲ ಮೇಲೆ ಕೈಹಾಕಿ ಮಾತನಾಡಿಸುತ್ತಿದ್ದುದು ಅಪ್ಯಾಯಮಾನವಾಗಿತ್ತು. ನಮಗೂ ಒಂದು ವ್ಯಕ್ತಿತ್ವ ಇದೆ; ಏನಾದರೂ ಉತ್ತಮ ಕಾರ್ಯ ಮಾಡಬಲ್ಲೆವು ಎಂಬ ಭಾವನೆ ಅವರ ಸನಿಹದಲ್ಲಿ ಇದ್ದಾಗ ಮೂಡುತ್ತಿತ್ತು. ಇಂಥ ಸಹಜ ಪ್ರೀತಿಯೆ ಅವರಿಗೆ ಇಂದು  ಅಸಂಖ್ಯಾತ ಶಿಷ್ಯ ಸಮುದಾಯವನ್ನು ತಂದುಕೊಟ್ಟದೆ. ಅವರ ಪ್ರೀತಿ-ಮಮತೆಗಳು ಕೇವಲ ತೋರಿಕೆಯವಾಗಿರದೆ ಅಂತರಂಗದ ಅಭಿವ್ಯಕ್ತಿ ಆಗಿದ್ದವು. ಆ ಸೊಗಸು ಅವರ ಕ್ರಿಯೆ ಹಾಗು ಮಾತು ಎರಡರಲ್ಲೂ ವ್ಯಕ್ತವಾಗುತ್ತಿತ್ತು.
ಸಣ್ಣಶಾಲೆಯ ಹುಡುಗರು ಮಾತ್ರವಲ್ಲ ಕಾಲೇಜಿನ ವಿದ್ಯಾಥರ್ಿಗಳು ಬೀದಿಗುಡಿಸುವ ತನ್ನ ಕಾರ್ಯಕ್ಕೆ ಜೊತೆಯಾಗಿದ್ದಾರೆ ನೋಡಿ ಎಂಬಂತೆ ಎನ್ಎಸ್ಎಸ್ ತಂಡಗಳನ್ನೆ ಕರೆತಂದು ನಮ್ಮ ಊರು ಮಾತ್ರವಲ್ಲ ಪಕ್ಕದ ಊರುಗಳಿಗೂ ಹರಡಿಬಿಟ್ಟರು ಪೊರಕೆಯ ಫರಾಕ್ನ್ನು.
ಹೀಗೆ ಪ್ರತಿದಿನ ಊರಿನಲ್ಲಿ ವಿವಿಧ ಸ್ವಚ್ಚತಾ ಕಾರ್ಯಗಳನ್ನು ಮುಗಿಸಿ ಸಂಜೆಯ ವೇಳೆ ಎನ್ಎಸ್ಎಸ್ ಶಿಬಿರಾಥರ್ಿಗಳು ಮತ್ತು ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರುತ್ತಿತ್ತು. ಆ ಕಾರ್ಯಕ್ರಮದ ಮಧ್ಯ ಬಂದಂತಹ ಅತಿಥಿಗಳ [ನನಗೆ ನೆನಪಿರುವಂತೆ ಆಗ ಬಂದ ಅತಿಥಿಗಳು ಎಂ.ವೈ.ಘೋರ್ಪಡೆ, ಎಂ.ಪಿ.ಪ್ರಕಾಶ, ಹಿರೇಹಡಗಲಿಯ ಮಾಜಿ ಶಾಸಕ ಶ್ರೀ ಅಂದಾನಪ್ಪ, ಗೋರುಚ, ಡಾ.ಚಿಮೂ, ರಾ.ನಂ.ಚಂದ್ರಶೇಖರ್ ಮುಂತಾದವರು] ಭಾಷಣ, ಕೊನೆಯಲ್ಲಿ ಪ್ರೋಫೆಸರ್ ಮಾತಾಡುತ್ತಿದ್ದರು.
ಇಂಥ ಕಾರ್ಯಕ್ರಮದಲ್ಲಿ ಒಂದು ದಿನ ಪ್ರೋ.ಎಚ್.ಎಂ.ಎಂ ಶರಣರ ವಚನಗಳು ಮತ್ತು ಅವರ ಕಾಯಕ ನಿಷ್ಠೆಯಿಂದ ಹಿಡಿದು ಮಹಾತ್ಮ ಗಾಂಧೀಜಿ, ಜಯಪ್ರಕಾಶನಾರಾಯಣರವರೆಗೆ ಮಾತನಾಡುತ್ತಿದ್ದರು. ಆ ವೇಳೆ ತಾವು ಕಂಡ ಒಂದು ಘಟನೆಯನ್ನು ವಿವರಿಸಿದರು. 
ಅವರೊಮ್ಮೆ ಸಮಾಜ ಕಾರ್ಯದ ರಾಷ್ಟ್ರೀಯ ಸಮ್ಮೇಳನಕ್ಕೆಂದು ಒಂದು ದೊಡ್ಡನಗರಕ್ಕೆ (ಹೆಸರು ನೆನಪಿಲ್ಲ) ಹೋಗಿದ್ದರಂತೆ. ಆಗ ವಾಸ್ತವ್ಯಕ್ಕಾಗಿ ಕೊಠಡಿಯೊಂದನ್ನು ನೀಡಲಾಗಿತ್ತು. ಅದರಲ್ಲಿ ಬೇರೆ ಬೇರೆ ಭಾಗಗಳಿಂದ ಬಂದ ಒಟ್ಟು ಆರು ಜನ ಸಮಾಜ ವಿಜ್ಞಾನಿಗಳು ತಂಗಿದ್ದರಂತೆ, ರಾತ್ರಿ ಊಟ ಮಾಡಿ ಎಲ್ಲರೂ ಮಲಗಿದರು. ಬೆಳಗಿನ ಜಾವ ಸುಮಾರು ನಾಲ್ಕು ಗಂಟೆಗೆ ಅವರು ಮಲಗಿದ್ದ ಕೋಣೆಯಲ್ಲಿ 'ಪರಾ...ಪರಾ...ಪರಾ.,' ಎಂದು ಸದ್ದು ಬರಲು ಶುರುವಾಯಿತು. 'ಇದೇನು? ಮುಂಗೋಳಿಯ ಕೂಗಿನ ಬದಲಿಗೆ ಹೆಗ್ಗಣ ಕೆರೆಯುತ್ತಿದೆಯೆ?' ಎಂಬ ಆತಂಕದ ಕುತೂಹಲ ಸುಖನಿದ್ರೆಯಲ್ಲಿದ್ದವರಿಗೆ ಕಾಡಿತು. ಸದ್ದು ನಮ್ಮ ಕೋಣೆಯಿಂದಲೆ ಎಂದು ಕೊಳ್ಳುತ್ತ ಮೊದಲು ಹಾಸಿಗೆಯಿಂದ ಮೇಲೆದ್ದು ಕುಳಿತ ಪ್ರೋ.ಎಚ್.ಎಂ.ಎಂ ಕಣ್ಣುಜ್ಜಿಕೊಂಡು ನೋಡುತ್ತಾರೆ ನಂಬಲಾಗದ ಆಶ್ಚರ್ಯ, ನಂಬಿದರೂ ಅದು ಈ ವೇಳೆಯಲ್ಲಿ ಏಕೆ? ಎಂಬ ಪ್ರಶ್ನೆ ಮೂಡಿತಂತೆ.
ಅದನ್ನೇ ದಿಟ್ಟಿಸುತ್ತ ಮೌನವಾಗಿ ಧ್ಯಾನಸ್ಥರಂತೆ ಕುಳಿತುಬಿಟ್ಟರಂತೆ, 'ಯಾರು ಎದ್ದರೇನು? ಯಾರು ಮಲಗಿದರೇನು? ತನ್ನ ಕೆಲಸದಲ್ಲಿ ತಾನು ತಲ್ಲಿನನಾಗಿರುವೆ' ಎಂಬಂತೆ ಗೋಡೆಯನ್ನು ಬ್ರಷ್ನಿಂದ ಉಜ್ಜುತ್ತ ಸಾಬೂನು ಮಿಶ್ರಿತ ನೀರನ್ನು ಆಗಾಗ ಸುರಿಯುತ್ತ, ಗೋಡೆಯ ಮೇಲಿನ ಕಲೆ ಮತ್ತು ಕೊಳೆಯನ್ನು ಕೆರೆಯುತ್ತಿದ್ದರು. ಬೀಡಾ, ಗುಟ್ಕಾಗಳಿಂದ ಉಗಿದು ನೋಡಲು ಅಸಹ್ಯವಾಗಿದ್ದ ಕೋಣೆಯ ಎರಡು ಮೂಲೆಗಳನ್ನು ನೋಡುತ್ತಿರುವಂತೆ ಕೆರೆದು ಕೆರೆದು ಶುಚಿಗೊಳಿಸಿಬಿಟ್ಟರು. ಆ ವೇಳೆಗೆ ಕೋಣೆಯಲ್ಲಿ ಮಲಗಿದ್ದವರೆಲ್ಲ ಎದ್ದು ಕುಳಿತು ಎವೆಯಿಕ್ಕದೆ ವಿಗ್ರಹಗಳಂತೆ ಆ ದೃಶ್ಯವನ್ನು ನೋಡುತ್ತಿದ್ದರಂತೆ.
   ಮಾತು ಯಾರಿಗೂ ಬೇಡವೆನಿಸಿ ಮೂಕರಾಗಿ ಕುಳಿತಿರುವಾಗಲೆ ಮೂಲೆಗಳ ಸ್ವಚ್ಚತೆ ಮುಗಿದು ನೆಲಕ್ಕೆ ಬ್ರಷ್ ಉಜ್ಜಿದ್ದನ್ನು ಕಂಡು ಎಲ್ಲರೂ ಗಡಿಬಿಡಿಯಿಂದ ಮೇಲೆದ್ದು ಹಾಸಿಗೆಗಳನ್ನು ಮುದುರಿ ಹೊರ ಎಸೆದು ಹಲ್ಲುಜ್ಜವ ಬದಲು ನೆಲ ಉಜ್ಜಲು ತೊಡಗಿದರಂತೆ.
ನಂತರ  ಅಂದು ಪರಾ... ಪರಾ... ಕೆರೆದ ವ್ಯಕ್ತಿ ಈಗ ನಿಮ್ಮ ಮುಂದೆಯೇ ಇದ್ದಾರೆ ಎಂದು ಬಿಟ್ಟರು. ಯಾರು ಇರಬಹುದೆಂದು ಅಲ್ಲಿ ನೆರದಿದ್ದವರಿಗೆಲ್ಲ ಆಶ್ಚರ್ಯ, ರೋಮಾಂಚನ ಒಟ್ಟಿಗೆ ಆಯಿತು. ಆಗ ಪ್ರೋ.ಎಚ್.ಎಂ.ಎಂ  ವೇದಿಕೆಯ ಮೇಲೆ ಕುಳಿತ್ತಿದ್ದ ಒಬ್ಬರ ಕಡೆ ಕೈತೋರಿಸಿ ಇವರೇ ಆ ವ್ಯಕ್ತಿ ಡಾ.ಶ್ರೀಪದರಾಯ್ ಎಂದರು. ಶ್ರೀಯುತರು ಅಮೇರಿಕಾದಲ್ಲಿ ವೈದ್ಯರಾಗಿದ್ದು ಅವಿವಾಹಿತರಾಗಿಯೇ ಬದುಕತ್ತ ತಮ್ಮ ದುಡಿಮೆಯ ಹಣವನ್ನೆಲ್ಲ ಸಮಾಜ ಸೇವೆಗೆ ವಿನಿಯೋಗಿಸುತ್ತಿದ್ದಾರೆ. ನಮ್ಮೂರಿನ ಸಮುದಾಯ ಕೇಂದ್ರಕ್ಕೆ ಇವರೆ ಬಣ್ಣದ ಟಿ.ವಿ.ಕೊಡಿಸಿರುವವರು. ಅವರ ಹೆಗಲಲ್ಲಿ ಯಾವಾಗಲೂ ಒಂದು ಜೋಳಿಗೆ ನೇತು ಹಾಕಿಕೊಂಡಿರುವುದನ್ನು ನೀವು ಗಮನಿಸಿರಬೇಕು. ಅದರೊಳಗೆ ಒಂದು ಪೊರಕೆ, ನೆಲ ಉಜ್ಜುವ ಬ್ರಷ್, ಕಸ ಎತ್ತುವ ಕೈಮರ ಇರುತ್ತವೆ ಎಂದು ಪರಿಚಯಿಸಿದರು.
ಮುಂದುವರೆದು ಅವರು ಎಲ್ಲಿಗೇ ಹೋಗಲಿ ಅಲ್ಲಿ ಕಸಕಡ್ಡಿ ಕಂಡುಬಂದರೆ ಕೂಡಲೆ ಜೋಳಿಗೆಯಿಂದ ಪೋರಕೆ ಹೊರತೆಗೆದು ಕಸಗೂಡಿಸಿ ಕೈಮರದಿಂದ ಅದನ್ನು ಕಸದ ತೊಟ್ಟಿಗೆ ಹಾಕಿ ಬರುತ್ತಾರೆ ಎಂದು ಹೇಳಿದರು. ಹುಡುಗರಾದ ನಮಗೆಲ್ಲ 'ವೈದ್ಯರಾಗಿಯೂ ಯಾಕೆ ಹೀಗೆಲ್ಲ ಬೀದಿಗುಡಿಸುತ್ತಾರೆ?' ಎಂಬುದು ಆಗ ಅರ್ಥವಾಗಿರಲಿಲ್ಲ. 
ಪ್ರೋಫೆಸರ್ ಪರಿಚಯಿಸಿದ ಮೇಲೆ ಡಾ.ಶ್ರೀಪಾದರಾಯ್ರನ್ನು ನಾವೆಲ್ಲ ಕುತೂಹಲದಿಂದ ನೋಡುತ್ತಿದ್ದೆವು. ಸುಮಾರು ಅರವತ್ತು ವರ್ಷದ ಅವರು ನೋಡಲು ಭಾರತೀಯ ಸಂತರಂತೆ ಇದ್ದರು. ಉದ್ದಕೂದಲು ಬಿಟ್ಟು ಮೀಸೆ ತಗೆದು ಸಡಿಲವಾದ ಖಾದಿ ಜುಬ್ಬ ತೊಟ್ಟಿರುತ್ತಿದ್ದರು. ಯಾರೊಡನೆಯೂ ಹೆಚ್ಚು ಮಾತಾನಾಡಿದ್ದನ್ನು, ದೀರ್ಘವಾದ ಭಾಷಣ ಮಾಡಿದ್ದನ್ನು ನಾನು ಕಂಡಿರಲಿಲ್ಲ. ಭಾಷಣಕ್ಕಿಂತಲೂ ಕ್ರಿಯೆಗೆ ಪ್ರಾಮುಖ್ಯತೆ ಕೊಡುವ ಇಂಥ ವ್ಯಕ್ತಿಗಳ ಒಡನಾಟದೊಂದಿಗೆ  ಹಿಂದುಳಿದ ಗ್ರಾಮಗಳಲ್ಲಿ ಸ್ವಚ್ಚತಾ ಕಾರ್ಯವನ್ನು ಡಾ.ಹೆಚ್.ಎಂ.ಎಂ ಒಂದು ಆಂದೋಲನದಂತೆ ಕೈಗೊಂಡದ್ದು ಅವಿಸ್ಮರಣೀಯ.
ಬಾಲ್ಯದ ಆ ಘಟನೆಗಳು ನನ್ನ ಮೇಲೆ ತುಂಬಾ ಪರಿಣಾಮವನ್ನು ಬೀರಿವೆ. ಎಷ್ಟೆಂದರೆ, ಇಂದು ನಾನು ಕೆಲಸ ಮಾಡುವ ಕಾಲೇಜಿನ ಕೊಠಡಿಗಳಲ್ಲಿ ಜಾಡು, ಕಸ ತುಂಬಿದ್ದರೆ ಪೊರಕೆ ಹಿಡಿದು ವಿದ್ಯಾಥರ್ಿಗಳ ಜೊತೆಯಲ್ಲಿ ಎಲ್ಲವನ್ನು ಸ್ವಚ್ಚಗೊಳಿಸಿಬಿಡುತ್ತೇವೆ. ಬಸ್ನಿಲ್ದಾಣ ಮತ್ತು ಊರಿನ ರಸ್ತೆಗಳಲ್ಲಿ ಹರಡಿರುವ ಕಸವನ್ನು ನೋಡಿದಾಗ ಸ್ವಚ್ಚಗೊಳಿಸುವ ಮನಸ್ಸಾಗುತ್ತದೆ. ಆದರೆ ಜನ ಏನೆಂದು ಕೊಳ್ಳುವರೊ! ಎಂಬ ಸಂಕೋಚ ಕಾಡುತ್ತದೆ. ಇಂಥ ಹಿಂಜರಿಕೆಯನ್ನು ಮೀರಿ ಪ್ರೋ.ಹೆಚ್.ಎಂ.ಎಂ ಮತ್ತು ಡಾ.ಶ್ರೀಪಾದರಾಯ್ರಂಥವರ ಎದೆಗಾರಿಕೆಯನ್ನು ಸಮಾಜಕಾರ್ಯದಲ್ಲಿ ರೂಢಿಸಿಕೊಳ್ಳುವ ಬಗೆ ಹೇಗೆ ಎಂದು ಆಲೋಚಿಸುತ್ತಲೇ ಕಾಲಹರಣ ಮಾಡಿದರೆ ಬಂದ ಭಾಗ್ಯವಾದರು ಏನು?


ಡಾ.ಎಂ.ಹಾಲಪ್ಪ ಕುಂಬಳಕುಂಟೆ
ಕನ್ನಡ ಉಪನ್ಯಾಸಕರು
ಸಕರ್ಾರಿ ಪದವಿ ಪೂರ್ವ ಕಾಲೇಜು
ಹುಳಿಯಾರು -ಕೆಂಕೆರೆ (ಪೋಸ್ಟ್)
ಚಿಕ್ಕನಾಯಕನಹಳ್ಳಿ (ತಾಲ್ಲೊಕು)
ತುಮಕೂರು(ಜಿಲ್ಲೆ)
ಮೊ:-9742843661


ನೀರಾಳ ಓಣಿ ಬಯಲಾಯಿತು


ನೀರಾಳ ಓಣಿ ಬಯಲಾಯಿತು
           
ರಸ್ತೆಗಳದೇ ಒಂದು ಪ್ರಪಂಚ. ಒಂದೊಂದು ರಸ್ತೆ ಒಂದೊಂದು ತೆರನಾದ ವೈಶಿಷ್ಟ್ಯದಿಂದ ಜನರ ಮನದಲ್ಲಿ ನೆಲೆ ನಿಂತಿರುತ್ತವೆ. ನಮ್ಮೂರಿನಲ್ಲಿ 'ನೀರಾಳ ಓಣಿ' ಎಂಬ ಹೆಸರಿನ ರಸ್ತೆಯೊಂದಿದೆ. ಮಳೆಗಾಲದ ವೇಳೆ ಆ ರಸ್ತೆಯಲ್ಲಿ ಸದಾ ನೀರು ಹರಿಯುತ್ತಿರುವುದರಿಂದ ಆ ಹೆಸರು ಬಂದಿದೆ. ಅಂದರೆ ಅರ್ಧ ಅಡಿಯಷ್ಟು ನೀರು ಹರಿಯುತ್ತಿರುತ್ತದೆ. ಮಳೆ ಸುರಿದಾಗ ಹರಿಯುವಿಕೆ ಅಧಿಕವಾಗಿರುತ್ತದೆ. ಜನ ಮತ್ತು ದನ ಕರುಗಳು ಆ ನೀರೊಳಗಿನ ರಸ್ತೆಯಲ್ಲಿಯೇ ಓಡಾಡಬೇಕು. ಜೊತೆಗೆ ಅದು ತುಂಬ ಕಿರಿದು, ಎತ್ತಿನಬಂಡಿ ಹೋಗುವಷ್ಟು ಮಾತ್ರ  ಅಗಲವಾಗಿದೆ. ಇಕ್ಕೆಲಗಳಲ್ಲಿ ದೊಡ್ಡದಾಗಿರುವ ಏರಿಗಳು, ಆ ಏರಿಗಳ ತುಂಬ ಬೆಳೆದು ನಿಂತಿರುವ ಹೆಮ್ಮರಗಳು, ಮುಳ್ಳುಪೊದೆಗಳು, ಬಳ್ಳಿಗಳು ಒಟ್ಟಿನಲ್ಲಿ ರಸ್ತೆಗೆ ಸೂರ್ಯನ ಕಿರಣಗಳು ಸಹ ಬೀಳದಷ್ಟು ದಟ್ಟವಾಗಿವೆ. ಒಂಟಿ ಹೆಂಗಸು, ಮಕ್ಕಳು ನಡೆದಾಡುವ ರಸ್ತೆಯಂತೂ ಅಲ್ಲ. ಅದು ಎರಡು ಜಿಲ್ಲೆಗಳನ್ನು ಸಂಧಿಸುವ ಗಡಿ ರಸ್ತೆಯೂ ಹೌದು. ನಮ್ಮ ಊರಿನಿಂದ ಪಶ್ಚಿಮ ದಿಕ್ಕಿಗೆ ಒಂದು ಕಿ.ಮೀ ದೂರದಲ್ಲಿರುವ ದಾವಣಗೆರೆ ಜಿಲ್ಲೆಯ ಬುಕ್ಕರನಹಳ್ಳಿಗೆ ಆ ರಸ್ತೆ ಹೋಗುತ್ತದೆ. ನಮ್ಮ ಊರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೋಕಿನ ಕೊನೆಯ ಗ್ರಾಮವಾದ ಹಿರೇಕುಂಬಳಕುಂಟೆ. ತಕ್ಕಮಟ್ಟಿಗೆ ದೊಡ್ಡಗ್ರಾಮ, ಪಕ್ಕದ ಬುಕ್ಕರನಹಳ್ಳಿಯವರು ಟೀ ಕುಡಿಯುವುದರಿಂದ ಹಿಡಿದು ಹಿಟ್ಟಿನ ಗಿರಣಿಯವರೆಗೂ ನಮ್ಮ ಊರಿಗೇ ಬರುತ್ತಾರೆ. 

  ಆ ರಸ್ತೆ ಹೊಲಗಳ ಮಟ್ಟಕ್ಕಿಂತ ಕೆಳಗೆ ಇರುವುದರಿಂದ ಮಳೆಗಾಲದಲ್ಲಿ ಹೊಲಗಳ  ವಡ್ಡುಗಳಲ್ಲಿ ಸಂಗ್ರಹಗೊಂಡ ನೀರನ್ನು ರಸ್ತೆಗೆ ಹರಿಯಬಿಡುತ್ತಾರೆ, ಓಣಿಯ ಎರಡೂ ಬದಿಯ ಭೂಮಿ ಮರಳು ಮಿಶ್ರಿತವಾಗಿರುವುದರಿಂದ ಪಶ್ಚಿಮ ದಿಕ್ಕಿನ ಎಲ್ಲಾ ಹೊಲಗಳ ವಡ್ಡುಗಳಲ್ಲಿನ ನೀರಿನ ಜೊತೆಗೆ ಜೌಗು ನೀರು ಸಹ ಸೇರಿಕೊಂಡು ಕೆಲವೂಮ್ಮೆ ಎಂಟು ತಿಂಗಳುಗಳವರೆಗೂ ಪೂರ್ವ ದಿಕ್ಕಿಗೆ ಹರಿಯುತ್ತದೆ. ಹೀಗೆ ನಮ್ಮೂರ ಕಡೆಗೆ ಬರುವ ನೀರು ನಮ್ಮ ಗ್ರಾಮದ ಸಮೀಪದಲ್ಲಿ ರಸ್ತೆಯ ಎಡಭಾಗಕ್ಕೆ ನಿಮರ್ಿಸಿರುವ ಕಲ್ಲುಚಪ್ಪಡಿಗಳ ಸುರಂಗ ಮಾರ್ಗದ ಮೂಲಕ ಹರಿದು ಉತ್ತರ ದಿಕ್ಕಿಗೆ ಹೋಗುತ್ತದೆ. ವರ್ಷದಲ್ಲಿ ಕನಿಷ್ಟ ಆರು ತಿಂಗಳಾದರೂ ಆ ರಸ್ತೆಯಲ್ಲಿ ನೀರು ತೆಳುವಾಗಿ ಹರಿಯುತ್ತಿತ್ತು. ಬೇಸಿಗೆಯಲ್ಲಂತೂ ಅದು ಎ.ಸಿ ರಸ್ತೆಯಂತೆ ತಂಪಾಗಿ ಇರುತ್ತಿತ್ತು. ಕಾರಣ ಇಕ್ಕೆಲಗಳಲ್ಲಿ ವೀಳೆದೆಲೆಯ ತೋಟಗಳಿದ್ದು ರಸ್ತೆಯ ತುಂಬ ಮರಳು ಹರಡಿರುವುದು.
ಸಂಜೆ ಆರು ಗಂಟೆಯ ನಂತರ ಯಾವ ನರಪಿಳ್ಳೆಯು ಅಲ್ಲಿ ಓಡಾಡುತ್ತಿರಲ್ಲಿಲ್ಲ. ನೀರು ಕೆಸರುಗಳಿಂದ ಕೂಡಿದ ರಸ್ತೆ ಎನ್ನುವುದಕ್ಕಿಂತ ಮಿಗಿಲಾಗಿ ವಿಪರೀತ ದೆವ್ವಗಳ ಕಾಟ ಆ ವೇಳೆಯಲ್ಲಿ ಇರುತ್ತಿತ್ತು ಎನ್ನುವುದು. ಅವು ರಸ್ತೆಯ ತುಂಬ ನೆಗೆದಾಡುತ್ತ ದಾರಿಹೋಕರನ್ನೆಲ್ಲ ಪೀಡುಸುತ್ತಿದ್ದವಂತೆ. ಇಂಥ ದೆವ್ವಗಳ  ಉಪಟಳವನ್ನು ಬಗ್ಗುಬಡಿದವರು ಪ್ರೋಫೆಸರ್ರ ದೊಡ್ಡಪ್ಪನವರಾದ ಸ್ವಟೈನೋರು. ಅವರು ಮಂತ್ರ - ತಂತ್ರ ವಿದ್ಯೆಯನ್ನೆಲ್ಲ ಬಲ್ಲವರಾಗಿದ್ದರಂತೆ. ಅವರೊಮ್ಮೆ ಸಂಜೆಯ ವೇಳೆ ನೀರಾಳ ರಸ್ತೆಯಲ್ಲಿ ಹೋಗುತ್ತಾ, ಮಂತ್ರಗಳನ್ನು ಉಚ್ಚರಿಸುತ್ತ ಕಾಲ ಬೆರಳುಗಳಿಂದಲೇ ಕಲ್ಲು ಹರಳುಗಳನ್ನು ಎತ್ತಿಕೊಳ್ಳುತ್ತಾ, ಅವುಗಳಿಗೆ ಮಂತ್ರಿಸಿ ಮಾರಿಗೊಂದರಂತೆ ಎಸೆಯುತ್ತ ಎಲ್ಲಾ ದೆವ್ವಗಳನ್ನು ಗಡಿಯಾಚೆ ಓಡಿಸಿ ದಿಗ್ಭಂಧನ ರೇಖೆಯನ್ನು ಎಳೆದು ಬಂದರಂತೆ. ಅಂದಿನಿಂದ ಅವುಗಳ ಕಾಟವಿಲ್ಲ ಎಂಬ ಅಜ್ಜಿ ಕತೆಯನ್ನು ಎರಡೂ ಹಳ್ಳಿಯವರು ಈಗಲೂ ಹೇಳುತಿರುತ್ತಾರೆ.                                                       
ನಾನು ಕಂಡಂತೆ ಎತ್ತಿನ ಬಂಡಿಯೊಂದು ಪಶ್ಚಿಮಾಬಿಮುಖವಾಗಿ ಹೋಗುತ್ತಿದ್ದರೆ ಎದುರಿಗೆ ಮತ್ತೊಂದು ಬಂಡಿ ಬರುವಂತಿರಲಿಲ್ಲ. ಒಂದು ವೇಳೆ ಬಂದದ್ದೇ ಆದರೆ ಹಿಮ್ಮುಖವಾಗಿಯೇ ಚಲಿಸಬೇಕಿತ್ತು. ಆ ಕಷ್ಟ ಒದಗುವುದು ಬೇಡವೆಂದು ರಸ್ತೆಯ ಪ್ರಾರಂಭದಲ್ಲಿಯೇ 'ಹೊಯ್...ಬಂಡಿ ಬರ್ತಿದೆ, ಓ...ಹೋಯ್...ಬಂಡಿ ಬರ್ತಿದೆ' ಎಂದು ಕೂಗು ಹಾಕುತ್ತ ಸಿಳ್ಳೆ ಹೊಡೆಯುತ್ತಿದ್ದರು. ಆಗ ಎದುರಿಗೆ ಬರುವ ಎತ್ತಿನ ಬಂಡಿ ಅವಸರದಲ್ಲಿ ಕವಲು ರಸ್ತೆಯ ಜಾಗಕ್ಕೆ ಹೋಗಿ ನಿಂತುಕೊಳ್ಳುತ್ತಿತ್ತು. ಕೂಗು ಹಾಕಿದ ಬಂಡಿ ಹೋದ ಬಳಿಕ ರಸ್ತೆಗೆ ಇಳಿಯುತಿತ್ತು.
ಇಂಥ ರಸ್ತೆಯಲ್ಲಿ ನಡೆದ ಒಂದು ಘಟನೆ ಮಾತ್ರ ನನ್ನ ಮನದಲ್ಲಿ ಮರೆಯದಂತೆ ಉಳಿದುಬಿಟ್ಟದೆ. ಆಗ ನನಗೆ ಹತ್ತು ವರ್ಷ ವಯಸ್ಸು, ಘಟನೆಗೆ ಕಾರಣನಾದವನು ನಮ್ಮೂರ ಹುಡುಗರಿಗೆಲ್ಲ ಪರಮ ವೈರಿಯಾದ ಶ್ರೀ ಹಾಲಸ್ವಾಮಿ ಗುಡಿಯ ಪೂಜಾರಿ. ನಾವು ಗುಡಿಯೊಳಗೆ ಕಾಲಿಟ್ಟರೆ ಸಾಕು ಮೈಮೇಲೆ ಕೆಂಡಬಿದ್ದವನಂತೆ ಎಗರಾಡಿ ನಮ್ಮನ್ನು ಓಡಿಸಿಬಿಡುತ್ತಿದ್ದ. ಅವನ ಮೇಲಿನ ಸಿಟ್ಟಿನಿಂದ ಗುಡಿಯೊಳಗೆ ಅದೆಷ್ಟು ಬಾರಿ ಕಸ ಚೆಲ್ಲಿ ಬಂದಿದ್ದೆವೊ ಗೊತ್ತಿಲ್ಲ. ಅಂಥ ಸಿಡುಕು ಮೂತಿಯ ಪೂಜಾರಿಗೆ ಒಮ್ಮೆ ಅಜ್ಜನಗೌಡರಿಂದ ನಮ್ಮ ಹಾಗೆ ಬೈಗುಳ, ಒದೆ ತಿನ್ನುವ ಪ್ರಸಂಗ ಕೂಡಿಬಂದಿತ್ತು.
ಬ್ರಿಟಿಷರ ಕಾಲದಲ್ಲಿ ಸುತ್ತಲ ಏಳು ಹಳ್ಳಿಗಳಿಗೆ ಗೌಡನಾಗಿದ್ದವನು ನಮ್ಮೂರ ಅಜ್ಜನಗೌಡ. ಒಂದು ದಿನ ನೀರಾಳ ಓಣಿಯ ಅಕ್ಕಪಕ್ಕದ ಏರಿಗಳಲ್ಲಿ ಇರುವ ಬಾಂದ್ಲು ಕಲ್ಲುಗಳು ಇದ್ದಲ್ಲಿಯೇ ಇವೆಯಾ? ಅಥವಾ ಹಿಂದುಮುಂದು ಸರಿದಾಡಿವೆಯಾ? ಎಂಬುದನ್ನು ಪರೀಕ್ಷಿಸಲು ಊರಿನ ಇತರ ಪ್ರಮುಖರೊಂದಿಗೆ ಸಾಗುತ್ತಿದ್ದರು. ಕೆಲಸಬಗಸಿ ಇಲ್ಲದ ನಾಲ್ಕಾರು ಹುಡುಗರಾದ ನಾವೂ ಅವರ ಜೊತೆಯಲ್ಲೇ ಹೋಗುತ್ತಿದ್ದೆವು. ಅಜ್ಜನಗೌಡರಿಗೆ ಕೊನೆಗಾಲದಲ್ಲಿ ಎರಡೂ ಕಣ್ಣುಗಳಿರಲಿಲ್ಲ. ಆದರೂ ಬೆನ್ನು ಬಾಗಿರಲಿಲ್ಲ. ಸುಮಾರು 85 ವರ್ಷದ ಅವರು ಅಜಾನುಬಾಹು ಆಗಿದ್ದರು. ಗೌಡರು ಹೊರ ಹೊಂಟರೆ ಅವರ ಒಂದು ಕೈಯನ್ನು ಪೂಜಾರಿ ತನ್ನ ಹೆಗಲ ಮೇಲಿಟ್ಟುಕೊಂಡು ದಾರಿ ತೋರಿಸುವವನಾಗಿರುತ್ತಿದ್ದ. ತುಂಬ ಕೋಪಿಷ್ಟರಾದ ಗೌಡರಿಗೆ ಅಷ್ಟೇ ಕೋಪಿಷ್ಟನಾದ ಪೂಜಾರಿಯನ್ನು ಜೊತೆ ಮಾಡಿದ್ದರು.
ಎಂದಿನಂತೆ ಆ ದಿನ ಪೂಜಾರಿಯು ಗೌಡರ ಕೈಹಿಡಿದು ಮುನ್ನಡೆಸುವವನಾಗಿದ್ದ. ಗೌಡರು 'ಆ ಕಲ್ಲು ಎಲ್ಲಿದೆ? ಈ ಕಲ್ಲು ಎಲ್ಲಿದೆ'? ಎಂದು ಕೇಳುತ್ತ ತಮ್ಮ ಹೊಲದ ಕಲ್ಲುಗಳು ಕದಲದೆ ಇದ್ದಲ್ಲಿಯೆ ಇವೆಯಾ? ಎಂಬುದನ್ನು ಖಚಿತ ಪಡಿಸಿಕೊಳ್ಳುತ್ತ ಹೋಗುತ್ತಿದ್ದರು. ಹಾಗೆ ಹೋಗುತ್ತಿರುವಾಗ ಕುಳ್ಳಗಿದ್ದ ಪೂಜಾರಿಯ ತಲೆಯ ಮೇಲೆ ಹಿಪ್ಪೆ ಕಳ್ಳೆಯ ಒಂದು ರಂಬೆ ಹಾದು ಗೌಡರ ಮುಖಕ್ಕೆ ಪರಚಿಬಿಟ್ಟಿತ್ತು. ಕೂಡಲೆ ವ್ಯಗ್ರರಾದ ಗೌಡರು ಪೂಜಾರಿಯ ತಲೆಗೆ, ಕುತ್ತಿಗೆಗೆ ಪಟ ಪಟ ಚಟ ಚಟ ಅಂತ ಏಟು ಕೊಡತೊಡಗಿದರು. ಪೂಜಾರಿಗೇ ಪೂಜೆ ಆಗುವುದನ್ನು ಕಂಡ ನಮಗೆಲ್ಲ ಒಮ್ಮೆಲೆ ಕಚಗುಳಿ ಇಟ್ಟಂತಾಗಿ ಕುಲುಕುಲು ನಗಲಾರಂಭಿಸಿದೆವು. ಹಿರಿಯರು ಗದರಿಸಿದರೂ ನಗು ತುಟಿಮೀರಿ ನೆಗೆಯುತ್ತಿತ್ತು. ಒದೆ ತಿಂದ ಪೂಜಾರಿ ಪುಕ್ಕ ಮಾತ್ರ ನಾಯಿ ಮರಿ ತರ ಕುಯ್ಞಿ ಕುಯ್ಞಿ ಅನ್ನುತ್ತಿದ್ದನೇ ಹೊರತು ಬಾಯಿಬಿಡಲಿಲ್ಲ. ಇರಲಿ ಇದೆಲ್ಲ ಆ ಕಾಲದಲ್ಲಿ ನಡೆಯೋದೆ. 
ಮನುಷ್ಯರೇ ಸರಾಗವಾಗಿ ನಡೆದಾಡಲು ಸಾಧ್ಯವಾಗದಿರುವ ಆ ರಸ್ತೆಯ ಅಗಲೀಕರಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ಹಣ ಮಂಜೂರಾಗಿ ಬಂದಿತ್ತು. ಆದರೆ ರಸ್ತೆಯ ಅಕ್ಕ-ಪಕ್ಕದಲ್ಲಿ ಇರುವ ಜಮೀನುಗಳೆಲ್ಲ ಊರಿನ ಗೌಡರುಗಳವೇ ಆಗಿದ್ದರಿಂದ ಸದ್ದಿಲ್ಲದೆ ಯೋಜನೆ ಹಿಂದಕ್ಕೆ ಹೋಯಿತು. ಅಲ್ಲದೆ ಒಂದು ಕಿ.ಮೀ ರಸ್ತೆಯು ಎರಡೂ ಜಿಲ್ಲೆಗಳಿಗೆ ಸೇರಿರುವುದರಿಂದ ನಿರ್ಲಕ್ಷ್ಯತನವೂ ಅದಕ್ಕೆ ಕೂಡಿಕೊಂಡಿತ್ತು. ಆದರೂ ಆ ರಸ್ತೆ ತುಂಬ ಬೇಕಾದುದಾಗಿತ್ತು. ಏಕೆಂದರೆ ಅದರ ಮೂಲಕ ಜಗಳೂರು,ದಾವಣಗೆರೆ, ಉಜ್ಜಿನಿ, ಕೊಟ್ಟೂರು, ಗಾಣಗಟ್ಟೆ ಮುಂತಾದ ಪಟ್ಟಣಗಳಿಗೆ ಹೋಗಲು ಸನಿಹವೂ ಆಗುತ್ತಿತ್ತು.                       
ಅಂಥ ರಸ್ತೆಯ ಮೇಲೆ ಅದೇ ಊರವರಾದ ಸಮಾಜ ವಿಜ್ಞಾನಿ ಪ್ರೋ.ಎಚ್.ಎಂ. ಮರುಳುಸಿದ್ದಯ್ಯನವರ ಕಣ್ಣು ಬಿತ್ತು. ಅವರ ಚಿಕಿತ್ಸಕ ಬುದ್ಧಿ ಕೂಡಲೆ ಕಾರ್ಯಪ್ರವೃತ್ತವಾಯಿತು. ಆ ವೇಳಿಗಾಗಲೇ ಅಜ್ಜನಗೌಡರು ತೀರಿ ಹೋಗಿದ್ದರು. ಉಳಿದ ಊರ ಪ್ರಮುಖರನ್ನು ಅದರಲ್ಲೂ ರಸ್ತೆಯ ಅಕ್ಕ-ಪಕ್ಕದ ಹೊಲದವರನ್ನು ಸೇರಿಸಿ ರಸ್ತೆಯ ಅಗಲೀಕರಣಕ್ಕೆ ನೀವು ಸಹಕರಿಸಬೇಕೆಂದರು. ಮರುಮಾತಾಡದೆ ಎಲ್ಲರೂ ಒಪ್ಪಿಕೊಂಡರು. ಹಿರೇಮಠದ ಗುರುವು ಕೇಳಿದಾಗ ಯಾರು ತಾನೆ ಇಲ್ಲ ಎನ್ನಲು ಸಾಧ್ಯ! ಐನೋರು ನುಡಿದದ್ದು ನಿಜವಾಗುತ್ತೆ ಅದು ಕೇಳಿದ್ದು ಕೊಟ್ಟುಬಿಡುವುದೆ ವಾಸಿ ಎಂಬ ಮನೋಭಾವ ಈಗಲೂ ಹಳ್ಳಿಗರಲ್ಲಿ  ಬೇರೂರಿದೆ. ಈ ಬಗೆಯ ಮೂಢನಂಬಿಕೆಯು ಕೆಲವೊಮ್ಮೆ ಒಳ್ಳೆಯ ಕಾರ್ಯಕ್ಕೆ ಬಳಕೆಯಾಗುವುದುಂಟು. ಅದೇನೆ ಇರಲಿ ಪ್ರೋಫೆಸರ್ ವ್ಯಕ್ತಿತ್ವ ಎಲ್ಲರನ್ನು ಜಯಿಸಬಲ್ಲದ್ದಾಗಿತ್ತು ಎನ್ನುವುದಂತೂ ನಿಜ.
ಸರಿ ಇನ್ನೇನು ಪ್ರೋಫೆಸರ್ ಎನ್.ಎಸ್.ಎಸ್ ವಿದ್ಯಾಥರ್ಿಗಳ   ಗುಂಪನ್ನು ಊರಿಗೆ ಕರೆತಂದರು. ಮನೆಗೊಬ್ಬರು ಸಲಿಕೆ, ಗುದ್ದಲಿ, ಹಾರೆ, ಕೊಡಲಿ, ಮಣ್ಣು ಹೋರಲು ಪುಟ್ಟಿ ಇತ್ಯಾದಿಗಳನ್ನು ಹಿಡಿದು ಬರಬೇಕು ಎಂದು  ಪ್ರೀತಿಯ ಆದೇಶವನ್ನು ರವಾನಿಸಿದರು. ತಡವಿಲ್ಲದೆ ವಿದ್ಯಾಥರ್ಿಗಳ ಜೊತೆ ಊರವರು ಬಂದು ಸೇರಿದರು. ಪ್ರೋಫೆಸರ್ ತಾವೇ ಮುಂದೆ ನಿಂತು ಗುದ್ದಲಿ ಹಿಡಿದು ಹಲವು ದಶಕಗಳಿಂದ ಭೇದಿಸಲು ಸಾಧ್ಯವಾಗದಂತಹ ಗೌಡರ ಏರಿಗಳನ್ನು ಕದಲಿಸ ತೊಡಗಿದರು. ಗೌಡರ ದಬ್ಬಾಳಿಕೆಯಿಂದ ಬೇಸತ್ತಿದ್ದ ಕೆಲವರು ಜಾಸ್ತಿ ಜಾಸ್ತಿಯಾಗಿ ಜಮೀನನ್ನು ರಸ್ತೆಗೆ ಕಬಳಿಸತೊಡಗಿದರು. ಇದನ್ನು ಕಂಡ ಕೆಲವು ಭೂಮಾಲೀಕರು 'ನಮ್ಮ ಹೊಲದ ಏರಿಯನ್ನೆ ಜಾಸ್ತಿ ಕಡಿಬ್ಯಾಡ್ರಪ್ಪೊ ರಸ್ತೆ ಡೊಂಕ ಆಗುತ್ತೆ' ಎನ್ನುತ್ತಿದ್ದರು. ತಮ್ಮ ಜಮೀನನ್ನು ಜಾಸ್ತಿ ಅಗೆದುಬಿಟ್ಟಾರು ಎನ್ನುವ ಆತಂಕದಲ್ಲಿ ರಸ್ತೆ ನೇರಕ್ಕರಲಿ ಎಂಬ ಜಾಣ್ಮೆಯ ಪೂಸಿ ಮಾತು ಆಡತೊಡಗಿದರು.
ಶತಮಾನಗಳಿಂದ ರಸ್ತೆಯನ್ನೇ ಕಿರಿದಾಗಿಸಿದ್ದ ಗೌಡರ ಮೇರೆಯ ಕಲ್ಲುಗಳು ಹೇಳಹೆಸರಿಲ್ಲದಂತೆ ನೆಲಕ್ಕುರುಳಿದವು. ಹದಿನೈದು ದಿನಗಳು ಕಳೆಯುವುದರೊಳಗೆ ಪ್ರೋಫೆಸರ್ ಮುಂದಾಳತ್ವದಲ್ಲಿ ಆ ರಸ್ತೆಯು ಎರಡು ಎತ್ತಿನ ಬಂಡಿಗಳು ಓಡಾಡುವಷ್ವು ಅಗಲವಾಯಿತು. ಬುಕ್ಕರನಹಳ್ಳಿ ಮತ್ತು ಹಿರೇಕುಂಬಳಕುಂಟೆ ಊರುಗಳಿಂದ ಮಕ್ಕಳು, ಹೆಂಗಸರು, ಮುದುಕರು ಬದಲಾದ ರಸ್ತೆಯನ್ನು ನೋಡಲು ತಂಡ ತಂಡವಾಗಿ ಬರುವುದು ಸಾಮಾನ್ಯವಾಗಿತ್ತು. ಹೀಗೆ ಬಂದವರೆಲ್ಲಾ ನೀರಾಳ ಓಣಿ ಬಯಲಾಗಿದ್ದನ್ನು ಕಂಡು ಬೆರಗಾಗಿ 'ನಮ್ಮಪ್ಪ ಸ್ವಾಮಿ(ಪ್ರೋಫೆಸರ್) ನೀನಾಗತ್ಗೆ ಮಾಡಿದೆ ಕಣಪ್ಪ! ನೀನ್ ಮುಂದೆ ನಿಂತಿದ್ರಿಂತ ಗೌಡ್ರುಗಳು ಉಸಿರು ಬಿಡ್ಲಿಲ್ಲ, ನಿನ್ ಹೆಸರು ಹೇಳ್ಕೊಂಡು ಓಡಾಡ್ತಿವೊ ತಂದೆ' ಎಂದು ಸ್ಮರಿಸುವುದು, ಹೊಗಳುವುದು ಬಹುದಿನಗಳವರೆಗೂ ನಡೆದಿತ್ತು.


 ಹೀಗೆ ಬಯಲಾದ ರಸ್ತೆಗೆ ಬಸ್ಸು ಓಡಿಸಲು ಕೆ.ಎಸ್.ಆರ್.ಟಿ.ಸಿ.ಗೆ ಮನವಿ ಮಾಡಿದ್ದು ಸಾರ್ಥಕವಾಗಲಿಲ್ಲ. ಆದರೆ ಮೂರು ವರ್ಷಗಳ ನಂತರ ಖಾಸಗಿ ಬಸ್ಸು ಒಡೆಯನಾಗಿದ್ದ ಪ್ರೋಫೆಸರ್ ವಿದ್ಯಾಥರ್ಿಯೊಬ್ಬ ನೀರಾಳ ಓಣಿಯಲ್ಲಿ ಅಂದರೆ ನಮ್ಮ ಊರಿನ ಮೂಲಕ ದಾವಣಗೆರೆಯಿಂದ ಕೂಡ್ಲಿಗಿಗೆ ಬಸ್ಸು ಓಡಿಸತೊಡಗಿದ. ಮೊದಲ ದಿನಗಳಲ್ಲಿ ಬೆಳೆದು ಚಾಚಿದ್ದ ರಂಬೆ ಕೊಂಬೆಗಳಿಂದ ಬಸ್ಸಿನ ಬಣ್ಣವೆಲ್ಲ ತರಚಿ ಹೋಯಿತು. ಮುಳ್ಳುಕೊನೆಗಳಿಂದ ಕಿಟಕಿ ಪಕ್ಕ ಕುಳಿತ್ತಿದ್ದವರ ಮೀಸೆ, ಗಡ್ಡ, ಶಟರ್ುಗಳು ಕಿತ್ತುಕೊಂಡವು ಎಂಬ ಸುದ್ದಿ ಹರಿದಾಡುತ್ತಿತ್ತು. ಟಾಪ್ ನಲ್ಲಿದ್ದ ಹೂವಿನ ಮತ್ತು ತರಕಾರಿಯ ಮೂಟೆಗಳು ಮರದ ಕೊಂಬೆಗಳಲ್ಲಿ ಸಿಕ್ಕಿಕೊಂಡು ಬೇತಾಳನಂತೆ ಜೋತಾಡುತ್ತಿದ್ದವಂತೆ ಎಂಬುದು ತಮಾಷೆಯ ಘಟನೆಗಳಾಗಿದ್ದವು.                                                        
ಹೀಗಿದ್ದರೂ ರಸ್ತೆಗೆ ಇಳಿಬಿದ್ದ, ಚಾಚಿದ ರಂಬೆ-ಕೊಂಬೆಗಳನ್ನು ಸವುರಲು ಎರಡೂ ಊರುಗಳಲ್ಲಿ ಯಾರು ಮನಸ್ಸು ಮಾಡಲಿಲ್ಲ. ಏಕೆಂದರೆ ಗೌಡರುಗಳಿಗೆ ಹೆದರಿಕೊಂಡು. ಕೊನೆಗೆ ಪ್ರೋಫೆಸರ್ ರವರೆ ಬೆಂಗಳೂರಿಂದ ಬಂದು ಊರವರ ಮತ್ತು ಶಾಲೆ ಹುಡುಗರಾದ ನಮ್ಮನ್ನು ಸೇರಿಸಿಕೊಂಡು ಆ ಕಾರ್ಯವನ್ನು ಪೂರೈಸಬೇಕಾಯಿತು.
ತಾವು ನಂಬಿರುವ ಮತ್ತು ಮಾಡಿ ತೋರಿಸಿರುವ ಗಾಂಧೀಜಿಯವರ ಮಾದರಿ ಗ್ರಾಮಗಳ ಕನಸನ್ನು ಏಕೆ ನನ್ನ ಜನರು ಅರ್ಥಮಾಡಿಕೊಳ್ಳುತ್ತಿಲ್ಲವೆಂಬ ಚಿಂತೆ ಪ್ರೋಫೆಸರನ್ನು ಬಹುವಾಗಿ ಕಾಡಿರಬೇಕು. ಅದಕ್ಕಾಗಿಯೇ ಅವರು ಪರಾವಲಂಬನೆ ಎಂಬ ಕಸವನ್ನು ಸಮಾಜಕಾರ್ಯದ ಮೂಲಕ ಗುಡಿಸಲು ನಿರಂತರವಾಗಿ ಶ್ರಮಿಸುವವರಾಗಿದ್ದಾರೆ. ಅದಕ್ಕೆ ವರವೆಂಬಂತೆ ವಿಶಾಲವಾದ ಹೃದಯ, ಪ್ರೀತಿ, ಮಮತೆ, ವಾತ್ಸಲ್ಯಗಳು ತುಂಬಿದ ಅವರ ಮಾತು ಮತ್ತು ನಡವಳಿಕೆಗಳು ಎಂಥವರಿಗೂ ಇಷ್ಟವಾಗಿಬಿಡುತ್ತವೆ. ಅಂತಹ ಸಹಜ ಪ್ರೀತಿಯೆ ನೀರಾಳೋಣಿಯಂತಹ ಸಂಕೀರ್ಣ ಕಾರ್ಯವನ್ನು ಯಶಸ್ವಿಗೊಳಿಸಿತು ಎಂದರೆ ಅತಿಶಯೋಕ್ತಿ ಆಗಲಾರದು. ಅವರ ಸಮಾಜ ಕಾರ್ಯದ ಮೂಲ ಆಶಯವೆಂದರೆ: ಸಕರ್ಾರ ಅಥವಾ ಮತ್ತಾರೋ ಮಾಡುತ್ತಾರೆ ಎಂಬ ಕಲ್ಪನೆಯಿಂದ ಹೊರಬಂದು ನಮ್ಮ ಹಳ್ಳಿಯ ಕೆಲಸವನ್ನು ನಾವೇ ಮಾಡಿಕೊಳ್ಳಬೇಕು ಎಂಬ ಸ್ವಾವಲಂಬನೆಯ ಸಂದೇಶವಾಗಿದೆ. ಆ ನಿಟ್ಟಿನಲ್ಲಿಯೇ ಅವರು ಅಸಂಖ್ಯೆ ವಿದ್ಯಾಥರ್ಿಗಳನ್ನು ತರಬೇತಿಗೊಳಿಸಿದ್ದಾರೆ. ಅಂತಹ ಶಿಷ್ಯರುಗಳ ಪರಿಶ್ರಮ ಪ್ರಸ್ತುತ ಸಮಾಜಕಾರ್ಯಕ್ಕೆ ಉತ್ತಮ ಫಸಲನ್ನು ನೀಡುತ್ತಿದೆ. ಬಹುಶಃ ಹಿರೇಮಠದ ಗುರುವಿಗೆ ದೊರೆತ ಬಹುದೊಡ್ಡ ಬಹುಮಾನವೂ ಇದೇ ಆಗಿದೆ. ಏಕೆಂದರೆ ಯಾವುದೇ ಪ್ರಶಸ್ತಿ ಮತ್ತು ಗೌರವಗಳಿಗಾಗಿ ಲಾಬಿಗಿಳಿಯದ ಇಂತಹ ನಿಸ್ವಾರ್ಥ ಸಮಾಜ ಸೇವಕ ಸಕರ್ಾರದ ಕಣ್ಣಿಗೆ ಕಾಣುವುದಾದರೂ ಯಾವಾಗ?

                                         ಡಾ.ಎಂ.ಹಾಲಪ್ಪ ಕುಂಬಳಕುಂಟೆ,
                                         ಕನ್ನಡ ಉಪನ್ಯಾಸಕರು,
                                         ಸಕರ್ಾರಿ ಪದವಿ ಪೂರ್ವ ಕಾಲೇಜು,
                                         ಹುಳಿಯಾರು-ಕೆಂಕೆರೆ (ಪೋ),
                                         ಚಿ.ನಾ.ಹಳ್ಳಿ (ತಾ),
                                         ತುಮಕೂರು (ಜಿ).
                                         ಮೊ-974284366

ಮಾದಿಗರ ಸಿದ್ಧ



ಮಾದಿಗರ ಸಿದ್ಧ


ಸಮಾಜ ವಿಜ್ಞಾನಿಗೆ ಸಮಾಜ ಕಾರ್ಯದ್ದೇ ಧ್ಯಾನ. ತಾನಿರುವ ಸ್ಥಳ, ಊರು ಅಷ್ಟೆ ಏಕೆ ಇಡೀ ರಾಷ್ಟ್ರವೇ ಸ್ವಚ್ಚವಾಗಿರಬೇಕೆಂದು ಶ್ರಮಿಸುತ್ತಾನೆ. ಅದಕ್ಕೆ ಭೂಮಿಕೆಯಾಗಿ ತನ್ನ ಅಂತರಂಗ ಬಹಿರಂಗಗಳಲ್ಲಿ ನಿಷ್ಪಕ್ಷಪಾತವನ್ನು, ನಿಸ್ವಾರ್ಥ ಸೇವೆಯ ಕಂಕೈರ್ಯವನ್ನು ಮೈಗೂಡಿಸಿಕೊಂಡು ಸಮಾನತೆಯ ಮಂತ್ರವನ್ನು ಜಪಿಸುತ್ತಾನೆ. ತನ್ನನ್ನು ತಾನು ಮೊದಲು ಬದಲಾವಣೆಗೆ ಒಡ್ಡಿಕೊಳ್ಳುತ್ತಾನೆ. ಆಗ ಮಾತ್ರ ನಿಜವಾದ ಸಮಾಜ ಸೇವಕನಾಗಲು ಶಕ್ತನಾಗುತ್ತಾನೆ. ಕೆಲಮೊಮ್ಮೆ ಪ್ರಯೋಗದ ಬಲಿಪಶುವೂ ಆಗಬೇಕಾಗುತ್ತದೆ. ಆದರೂ ಎದೆಗುಂದದೆ ಸಿಂಹ ಸದೃಶವಾದ ಗುಂಡಿಗೆಯನ್ನು ಹೊಂದಿರಬೇಕಾಗಿರುತ್ತದೆ. ಹೀಗಿದ್ದರೆ ಮಾತ್ರ ಭಯೋತ್ಪಾದನೆಯಂತೆ ವತರ್ಿಸುತ್ತಿರುವ ಜಾತಿ ವ್ಯವಸ್ಥೆಯನ್ನು, ರಸ್ತೆಗೆ ಕಸ ಎಸೆಯುತ್ತಿರುವ ನಾಗರೀಕ ಸಂಸ್ಕೃತಿಯನ್ನು, ಸಮಾಜಕಾರ್ಯವೆಂದರೆ ತರಗತಿಯಲ್ಲಿ ಬೋಧಿಸುವುದು ಎಂದು ಭ್ರಮಿಸಿರುವವರನ್ನು, ಸಂಪತ್ತನ್ನು ಕ್ರೋಡೀಕರಿಸಿಕೊಂಡು ಅಧಿಕಾರದ ಮಧವೇರಿದವರನ್ನು, ಯೋಜನೆಗಳ ನೆಪದಲ್ಲಿ ಹಣ ಸ್ವಾಹ ಮಾಡುತ್ತಿರುವ ನುಂಗಣ್ಣರನ್ನು ಈ ಮೊದಲಾದ ಎಲ್ಲಾ ವರ್ಗದವರ ಮನಸ್ಸನ್ನು ಒಳ್ಳೆಯ ಕಾರ್ಯಕ್ಕೆ ಅಣಿಗೊಳಿಸಲು ಸಾಧ್ಯವಿದೆ.


ಆ ಕಾರ್ಯ ಅಧಿಕಾರದಿಂದಾಗಲಿ, ಕಾನೂನಿನ ಭಯದಿಂದಾಗಲಿ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ವ್ಯಕ್ತಿಗಳ ಮನಸ್ಸನ್ನು ಗೆಲ್ಲುವ ಮತ್ತು ಸುತ್ತಲಿನ ಜನರನ್ನು ನಿಷ್ಕಳಂಕವಾಗಿ ಪ್ರೀತಿಸುವ ಪ್ರಕ್ರಿಯೆ ನಡೆಯಬೇಕು. ಆಗ ಮಾತ್ರ ಸಮಾಜದಲ್ಲಿ ಸುಧಾರಣಿಯನ್ನು ತರಲು ಹಾಗೂ ಎಲ್ಲರೂ ಅದಕ್ಕೆ ಕೈಜೋಡಿಸುವಂತೆ ಮಾಡಲು ಸಾಧ್ಯವಿದೆ. ಅಂತಹ ಪ್ರೀತಿ, ವಿಶ್ವಾಸಗಳನ್ನೇ ತಮ್ಮ ಹೃದಯದಲ್ಲಿ ತುಂಬಿಕೊಂಡಿರುವ ಪ್ರೋ.ಹೆಚ್.ಎಂ.ಮರುಳಸಿದ್ಧಯ್ಯನವರು ಎಲ್ಲಾ ವರ್ಗದವರ ಹೃದಯವನ್ನು ಗೆಲ್ಲುವುದು ಮಾತ್ರವಲ್ಲ, ತಾವು ಯೋಜಿಸಿದ ಕಾರ್ಯಕ್ಕೆ ಕೈ ಜೋಡಿಸುವಂತೆ ಮಾಡಿಬಿಡುವುದು ಅವರ ಜಾಯಮಾನವಾಗಿದೆ.


ಈ ಬಗೆಯ ನಿಷ್ಕಾಮ ಸೇವೆಯಿಂದಾಗಿಯೇ ಅವರಿಗೆ ನಿರ್ಮಲ ಗ್ರಾಮ, ನಿರ್ಮಲ ಕನರ್ಾಟಕ, ನಿರ್ಮಲ ಭಾರತ ಎಂಬ ಪದಪುಂಜಗಳ ಪರಿಕಲ್ಪನೆಯನ್ನು ಠಂಕಿಸಲು ಸಾಧ್ಯವಾಗಿರುವುದು. ಪ್ರೋ.ಹೆಚ್.ಎಂ.ಎಂ ಕನರ್ಾಟಕ ಕಂಡ ಒಬ್ಬ ಅಪರೂಪದ ಸಮಾಜ ವಿಜ್ಞಾನಿ. ಹಿರೇಕುಂಬಳಕುಂಟೆ ಎಂಬ ತೀರ ಹಿಂದುಳಿದಿರುವ ಗ್ರಾಮದ ಜಂಗಮ ಕುಲದಲ್ಲಿ ಹತ್ತು ಜನ ಮಕ್ಕಳೊಡನೆ ಹುಟ್ಟಿದವರಲ್ಲಿ ಕಿರಿಯವರು. ಹಳ್ಳಿಯವರ ಬಾಯಲ್ಲಿ ಪ್ರೀತಿಯ ಪ್ರೋಫೆಸರ್ ಆಗಿದ್ದಾರೆ. ಸಮಾಜ ಕಾರ್ಯದ ಮೂಲಕ ಅದರ ಪರಿವರ್ತನೆಗೆ ಪ್ರಯತ್ನಿಸುತ್ತಿರುವ ಒಬ್ಬ ಸಮಾಜ ಸುಧಾರಕರು ಹೌದು. ಇದರಿಂದಾಗಿಯೇ ಅಂತ್ಯಜರೊಡನೆ ಒಂದಾಗಿ ಬದುಕುವುದನ್ನು ಹಳ್ಳಿ ಜನತೆಗೆ ತಿಳಿಸಿಕೊಟ್ಟರು. ಅದರಂತೆ ಬದುಕುತ್ತಿರುವವರು ಕೂಡ. ಆದರೆ ಜನ ಮಾತ್ರ ಅದನ್ನು ಪೂರ್ಣವಾಗಿ ಸ್ವೀಕರಿಸುವ ಮನಸ್ಥಿತಿಯಲ್ಲಿ ಇರಲಿಲ್ಲ. ಆದರೂ ಯಾರೊಬ್ಬರು ಬಹಿರಂಗವಾಗಿ ಪ್ರತಿಭಟಿಸಲಿಲ್ಲ. ಏಕೆಂದರೆ ಪ್ರೋಫೆಸರ್ರ ಸ್ನೇಹ ಮತ್ತು ಪ್ರೀತಿ ತುಂಬಿದ ಹಸ್ತಗಳು ಎಲ್ಲರನ್ನು ಬಾಚಿಕೊಂಡಿದ್ದವು. ಹೀಗಿದ್ದರೂ ಮೇಲ್ವರ್ಗದವರು ಅದರಲ್ಲೂ ಉಳ್ಳವರು ಪ್ರೋಫೆಸರ್ರನ್ನು ಒಳಗೊಳಗೆ ಬೈಯ್ದುಕೊಳ್ಳತೊಡಗಿದರು. ಕಾರಣ, ಜಾಸ್ತಿ ಜಮೀನು ಇದ್ದವರು ಇಲ್ಲದ ಬಡವರಿಗೆ, ದಲಿತರಿಗೆ ಸ್ವಲ್ಪ ಬಿಟ್ಟುಕೊಡಿ ಎಂದದ್ದು ಅವರಿಗೆ ನುಂಗಲಾರದ ಬಿಸಿ ತುಪ್ಪವಾಗಿತ್ತು.
ಇಂತಹ ಅಸಹನೆಯ ಭಾವನೆ ತನ್ನ ಮೇಲೆ ವ್ಯಕ್ತವಾಗುತ್ತಿದೆ ಎಂದು ತಿಳಿದಾಗಲೂ ಪ್ರೋಫೆಸರ್ ಎಂದೂ ತಾಳ್ಮೆಯನ್ನು ಕಳೆದುಕೊಂಡು ನಿರಾಶರಾದವರಲ್ಲ. ಅಲ್ಲದೆ ಸಂಪ್ರದಾಯ ಮನಸ್ಸುಗಳಿಗೆ ಸಮಾನತೆಯ ಪಾಠ ಹೇಳುವುದೆಂದರೆ ಸುಲಭದ ಕಾರ್ಯವಲ್ಲ. ಸ್ವತಃ ತನ್ನ ಬಂಧುಗಳು ಮತ್ತು ಒಡಹುಟ್ಟಿದವರಿಂದಲೇ ಅನೇಕ ಬಗೆಯ ಟೀಕೆಗಳನ್ನು ಎದುರಿಸಬೇಕಾಯಿತು. ಅವರ ಹಿರಿಯ ಅಣ್ಣನವರೊಬ್ಬರು ತಮ್ಮನ ಸಮಾಜಕಾರ್ಯವನ್ನು ಕುರಿತು ನನ್ನ ದೊಡ್ಡಪ್ಪನಾದ ಮುದುಕಣ್ಣನೊಡನೆ ಹಂಚಿಕೊಂಡ ಮಾತುಗಳನ್ನು ಇಲ್ಲಿ ಪ್ರಸ್ತಾಪಿಸುವ ಮೊದಲು ದೊಡ್ಡಪ್ಪನ ಪರಿಚಯವನ್ನು ಸ್ವಲ್ಪ ಮಾಡಿಕೊಡುತ್ತೇನೆ.
ವಯಸ್ಸಾದ ನನ್ನ ದೊಡ್ಡಪ್ಪ ಮೊನ್ನೆ ಹೊರಟು ಹೋದರು. ಮುದುಕಣ್ಣ ಎಂದು ಅವರ ಹೆಸರು. ದೊಡ್ಡಮ್ಮ ಮಾತ್ರ ಗಂಡನ ಹೆಸರು ಹೇಳುವಾಗ ಮುದುಕನಗೌಡ್ರು ಎಂದೇ ಹೇಳುತ್ತಿತ್ತು. ಹುಡುಗನಿದ್ದಾಗಲೂ ಅದೇ ಹೆಸರು ಕರೆಯಿಸಿ ಕೊಂಡಿದ್ದರಿಂದಲೋ ಏನೋ ಎಂದೂ ತಮ್ಮ ಹೆಸರಿನ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣಲಿಲ್ಲ. ಅದೇನೆ ಇರಲಿ, ಅವರು ಹೇಳುತ್ತಿದ್ದ ಅನುಭವದ ಕಥನಗಳು ಮಾತ್ರ ನನ್ನ ಸ್ಮೃತಿಪಟಲದಲ್ಲಿ ಮಾಸದೆ ನಿಂತಿವೆ. ಬರಗಾಲ ಬಂದಾಗ ಅನುಭವಿಸಿದ ಕಷ್ಟಗಳು, ಇನ್ನೊಮ್ಮೆ ಮಳೆ ಅಧಿಕವಾಗಿ ಹೊಲಗಳೆಲ್ಲ ಜೌಗು ಹಿಡಿದು ಬೆಳೆಬಾರದೆ ಎದುರಿಸಿದ ತೊಂದರೆಗಳು, ಹೊಲದಲ್ಲಿ ಅಜ್ಜನು ಬೆಳಿಸಿದ್ದ ಜೀರಿಗೆ, ಸಬ್ಬಾಕ್ಸಿ ಮತ್ತು ಏಲಕ್ಕಿ ಮಾವಿನ ಮರಗಳಿಗೆ ಊರವರೆಲ್ಲಾ ಮಾರು ಹೋಗಿದ್ದು, ಧಾನ್ಯಗಳು ಹಾಗೂ ವೀಳೆದೆಲೆಗಳನ್ನು ಮಾರಾಟ ಮಾಡಲು; ಹೋರಿಗಳನ್ನು ಕೊಳ್ಳಲು ಎಪ್ಪತ್ತು ಕಿ.ಮೀ. ದೂರದ ದಾವಣಗೆರೆಗೆ ಎತ್ತಿನ ಬಂಡಿಯಲ್ಲಿ ಪ್ರಯಾಣ ಮಾಡುತ್ತಿದ್ದುದು. ವಧು ದಕ್ಷಿಣೆ ಕೊಟ್ಟು ದೊಡ್ಡಮ್ಮನನ್ನು ಮದುವೆ ಆಗಿದ್ದು ಇತ್ಯಾದಿ ಅವರ ಕಾಲದ ಘಟನೆಗಳನ್ನು ಒಂದೊಂದಾಗಿ ಹೇಳುತ್ತಿದ್ದರೆ ಸಮಯದ ಹಂಗಿಲ್ಲದೆ ಕೇಳುತ್ತಾ ಕುಳಿತು ಬಿಡುತ್ತಿದ್ದೆ.
ದೊಡ್ಡಪ್ಪ ಸರಳವಾದ ವ್ಯಕ್ತಿ ಮತ್ತು ಅಷ್ಟೇ ಸ್ನೇಹಜೀವಿ. ಯಾವ ಗತ್ತು-ಗಮ್ಮತ್ತು ಅವರಲ್ಲಿ ಇರಲಿಲ್ಲ. ಪರಿಣಾಮವಾಗಿ ಹುಡುಗರಾದ ನಮಗೆಲ್ಲ ಅವರು ಆತ್ಮೀಯರಾಗಿದ್ದರು. ವ್ಯಾಸಂಗದ ನಡುವೆ ರಜಾದಿನಗಳಲ್ಲಿ ಊರಿಗೆ ಹೋದಾಗಲೆಲ್ಲ ದೊಡ್ಡಪ್ಪನ ಮಾತುಗಳನ್ನು ಕೇಳಲು ಕಾತರನಾಗಿರುತ್ತಿದ್ದೆ. ಅವರ ಸನಿಹವು ಒಂದು ಉತ್ತಮ ಕೃತಿಯನ್ನು ಓದಿದಂತಹ ಅನುಭವವನ್ನು ತಂದು ಕೊಡುತಿತ್ತು.


ಹೀಗೆ ಒಂದು ದಿನ ಅವರ ಹತ್ತಿರ ಕುಳಿತ್ತಿದ್ದಾಗ ಏನೋ ಇವತ್ತು ಪ್ರೋಫೆಸರ್ ಬಂದಿದ್ರಂತೆ! 'ಊ ಬಂದಿದರೆ', ಏನ್ ಪ್ರೋಗ್ರಾಮ್? 'ಏನು ಅಂತ ಗೊತ್ತಿಲ್ಲ' ಊರಾಗಳ ಕಸ ವಡಿಯೋದು, ಚರಂಡಿ ಬಾಚೋದು, ತಿಪ್ಪೆಗುಂಡಿ ಕ್ಲೀನ್ ಮಾಡದು ಇಂಥದ್ದು ಏನಾರ ಇಲ್ಲೇನು? 'ಏನೋ ಗೊತ್ತಿಲ್ಲ, ಆದರೆ ಅಂಥದ್ದೆಲ್ಲ ಮಾಡೋಕೆ ಈಗ ಅವರಿಗೆ ವಯಸ್ಸಾಗಿದೆ.' ಆದ್ರೂ ಸುಮ್ಮನಿರಲ್ಲ ಕಣೊ.... ಆ ಸ್ವಾಮಿ, ಐನೋರಾಗಿ ಹುಟ್ಟಿ ಗುರುವಿನ ಸ್ಥಾನದಲ್ಲಿರಬೇಕಪ್ಪ, ಅದು ಬಿಟ್ಟು ಹೊಲೆಯರಂಗೆ ಬೀದಿ ಕಸಗುಡಿಸೋದ್ಯಾಕೆ? ಎಂದ ದೊಡ್ಡಪ್ಪನ ಮಾತಿಗೆ ಸರಿಯಾದ ಪ್ರತಿಕ್ರಿಯೆ ಕೊಡಬೇಕೆನಿಸುತ್ತಿತ್ತು. ಆದರೆ ನನ್ನ ವಿಚಾರ ಅವರ ತಲೆಯೊಳಗೆ ಹೋಗುವುದಿಲ್ಲ ಮತ್ತು ಅಪಥ್ಯವಾಗುತ್ತದೆ ಎಂದು ಭಾವಿಸಿ ಸುಮ್ಮನಾಗುತ್ತಿದ್ದೆ.
 
ಆದರೂ 'ಜಾತಿ ವ್ಯವಸ್ಥೆ ನಾವು ಮಾಡಿಕೊಂಡಿರುವಂಥದ್ದು, ನಿಜಕ್ಕೂ ಇರುವುದು ಒಂದೇ ಜಾತಿ ಅದೇ ಮನುಷ್ಯ ಜಾತಿ. ಬಹಳ ಹಿಂದೆ ಕ್ಷಾತ್ರಯುಗದಲ್ಲೆ ಪಂಪಕವಿ ಹೇಳಿದ್ದು ಅದನ್ನೆ. ನಾವೀಗ ಯಾವ ಯುಗದಲ್ಲಿದ್ದೇವೆ? ಶ್ರೀಸಾಮಾನ್ಯನೂ ಈ ಪ್ರಜಾಪ್ರಭುತ್ವದಲ್ಲಿ ಶ್ರೇಷ್ಠನೇ ಅಲ್ಲವೆ? ಹೀಗಿದ್ದರೂ ನಮ್ಮಲ್ಲಿ ಏಕೆ ತಾರತಮ್ಯ ಭಾವನೆ? ಮೇಲು-ಕೀಳು ಎನ್ನುವುದೆಲ್ಲ ಬರಿ ಭ್ರಾಂತಿ, ಕಟ್ಟುಕತೆ. ಮೇಲ್ವರ್ಗದವರ ಕುತಂತ್ರದಿಂದ ಆಗಿರುವ ಅನಾಹುತವೇ ಈ ಕೊಳಕು ಸಂಕೋಲೆ'- ಇತ್ಯಾದಿಯ ವಾದಸರಣಿಯನ್ನು ಒಮ್ಮೆ ಧೈರ್ಯಮಾಡಿ ಅವರ ಮುಂದೆ ಇಟ್ಟಾಗ ಹೆ! ಅದ್ಹೆಂಗೆ ಆದೀತು! ನೀನು ಆ ಪ್ರೋಫೆಸರ್ ದಾರಿ ಹಿಡಿತಿಯಲ್ಲೋ! ಜಾಸ್ತಿ ಓದಿಸಿದ್ರೆ ಇಂಗೆ ನೋಡು ಎಡವಟ್ಟಾಗೋದು ಎಂದು ಹೇಳಿ ನನ್ನನ್ನು ಪ್ರಶ್ನಾರ್ಥಕವಾಗಿ ನೋಡುತ್ತಿದ್ದರು.
ನಂತರ ದೊಡ್ಡಪ್ಪ ಪ್ರೋಫೆಸರ್ರ ದೊಡ್ಡಣ್ಣನಾದ ಕೊಟ್ರೈನೋರು ಅಂತ ಇದೆ, ಅದು ಮಂಗಾಪುರದಲ್ಲಿ ಮೇಷ್ಟ್ರಾಗಿತ್ತು. ಮೊನ್ನೆ ನನಿಗೆ ಸಿಕ್ಕಾಗ ಏನಂತು ಗೊತ್ತ 'ಲೇ ಮುದುಕಣ್ಣ ನಮ್ಮ ಮರುಳಸಿದ್ಧ ಎಲ್ಲಾ ಸೈ ಕಣ, ಆದ್ರೆ ಈ ಮಾದಿಗರ್ನೆಲ್ಲ ಮನೆಯೊಳಕೆ ಕರ್ಕೋಳ್ಳುತ್ತಾನೆ. ಜೊತೆಯಲ್ಲೇ ಊಟ ಮಾಡ್ತಾನೆ, ಅವರ ಮನೆಗಳಿಗೂ ಹೋಗ್ತಾನೆ, ಅದು ಅಲ್ಲದೆ ಅವರ ಬೀದಿಗಳನ್ನೆಲ್ಲ ಗುಡಿಸ್ತಾನೆ. ಇಷ್ಟು ಸಾಲ್ದು ಅಂತ ಭಾಷಣದಲ್ಲಿ ಇವನಾರವ ಇವನಾರವ? ಎಂದೆಣಿಸದಿರಯ್ಯ ಇವ ನಮ್ಮವ ಇವ ನಮ್ಮವ ಎಂದೆಣಿಸಯ್ಯ... ಅಂತ ಬಸವಣ್ಣರು ವಚನ ಬರೆದರೆ,  ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೆ ಎಂದು ಸರ್ವಜ್ಞ ಹೇಳಿದರೆ, ಮಹಾತ್ಮ ಗಾಂಧೀಜಿ ಹರಿಜನರೊಡನೆ ವಾಸಮಾಡುತ್ತಿದ್ರು, ಬಾಬಾ ಅಂಬೇಡ್ಕರ್ ಜಾತಿ ವಿರುದ್ಧ ಹೋರಾಡಿದರೆ ಅಂತ ಏನೇನೋ ಹೇಳಿ ಜನರನ್ನು ಹಾದಿ ತಪ್ಪಿಸ್ತಾನೆ. ರಾಜಕೀಯದವರ್ಯಾರು ಇವನಂಗೆ ಭಾಷಣ ಮಾಡಲ್ಲ ಬಿಡು. ಆದ್ರೆ ಇವನ್ಯಾಕೆ ಇಂಗೆ ಮಾತಾಡ್ತನೊ ಗೊತ್ತಾಗಂಗಿಲ್ಲ. ಬಹಳ ಜಮೀನು ಇದ್ದೋರು ಇಲ್ಲದವರಿಗೆ ದಾನಮಾಡಿ ಅಂತಾನೆ, ಇದು ಯಾವ ನ್ಯಾಯನಪ್ಪ?
ತನ್ನ ಹಳ್ಳಿ, ಅಲ್ಲಿನ ಜನರೆಂದ್ರೆ ಅವನಿಗೆ ಬಾರಿ ಪ್ರೀತಿ, ಅಭಿಮಾನ ಕಣಯ್ಯ, ಆದ್ರೆ ನಮ್ಮನ್ನು ಮತ್ತು ಹೊಲೆರ್ನೆಲ್ಲ ಒಂದೇ ಅಂತನಲ್ಲ ಅವನು ಮರುಳುಸಿದ್ಧ ಅಲ್ಲ ಕಣೊ ಮಾದಿಗರ ಸಿದ್ಧ'  ಪ್ರೋಫೆಸರ್ನ ಹಿಂಗಂತು, ತಮ್ಮನ ಮೇಲೆ ತುಂಬ ಪ್ರೀತಿ ಕೊಟ್ರೈನೋರಿಗೆ ಆದ್ರೆ ಸಲ್ಲದ್ದನ್ನೆಲ್ಲ ಮಾಡ್ತನಲ್ಲ ಎಂದು ಬೇಸ್ರ ಮಾಡ್ಕಂಡು 'ಅವನು ಮಾದಿಗರ ಜಾತಿಯಲ್ಲಿ ಹುಟ್ಟುಬೇಕಿತ್ತು ತಪ್ಪಿ ಜಂಗಮರಲ್ಲಿ ಹುಟ್ಟಿಬಿಟ್ಟಿದನೆ' ಅಂತ ಬೈಯುತ್ತೆ ಎಂದ ದೊಡ್ಡಪ್ಪನ ಮಾತಿನಿಂದ ಕೆಲ ಸಮಯ ಮೌನ ಆವರಿಸಿದಂತಾಗಿ ಏನೂ ಪ್ರತಿಕ್ರಿಯೆ ನೀಡದೆ ಸುಮ್ಮನೆ ಕುಳಿತೆ.
ಏಕೆಂದರೆ, ಸ್ವತಃ ಅಣ್ಣನವರಿಂದಲೇ ಈ ರೀತಿಯ ಟೀಕೆಗೆ ಗುರಿಯಾದ ಪ್ರೋಫೆಸರನ್ನು ಉಳಿದ ಸಂಪ್ರದಾಯವಾದಿಗಳು ಮತ್ಯಾವ ಪರಿಯಲ್ಲಿ ಟೀಕಿಸಿರಬಹುದು! ಈ ಟೀಕೆ ಬಂದದ್ದು 1984 ರಲ್ಲಿ, ಆ ವೇಳೆ ಪ್ರೋಫೆಸರ್ ತಮ್ಮ ಹಳ್ಳಿ ಸೇರಿದಂತೆ ಸುತ್ತಲಿನ ಊರುಗಳಲ್ಲಿ ಬದಲಾವಣೆಯ ಹೊಸ ಗಾಳಿಯನ್ನು ಬೀಸಿದರು. ಅದರ ಮೊದಲ ಹೆಜ್ಜೆಯೆಂಬಂತೆ ಊರಲ್ಲಿನ ತಮ್ಮ ಮನೆಯೊಳಕ್ಕೆ ಪ್ರಥಮವಾಗಿ ಹರಿಜನರನ್ನು ಕರೆದೊಯ್ದು ಸಹಭೋಜನ ಮಾಡಿದ್ದು. ಇನ್ನು ಮುಂದೆ ಎಲ್ಲಾ ಜಾತಿಯವರು ಮುಕ್ತವಾಗಿ ತನ್ನ ಮನೆಗೆ ಬರಬೇಕೆಂದು ವಿನಂತಿಸಿಕೊಂಡದ್ದು ಆ ಸಮಯದಲ್ಲಿ ಈ ಘಟನೆ ಒಂದು ಕ್ರಾಂತಿಕಾರಕವಾಗಿತ್ತು. ಊರಿನ ಮೇಲ್ವರ್ಗದವರಿಗಂತೂ ಪ್ರೋಫೆಸರ್ ಮೇಲೆ ವಿಪರೀತ ಅಸಹನೆ. ಆದರೆ ವ್ಯಕ್ತಪಡಿಸುವಂತಿಲ್ಲ. ಏಕೆಂದರೆ ಪ್ರೋಫೆಸರ್ ಹಿರೇಮಠದ ಜಂಗಮ ಕುಲದವರು. ಎಲ್ಲಾ ವರ್ಗದವರಿಗೂ ಗುರುಗಳಾಗಿರುವಂಥವರು. ಹೀಗಾಗಿ ಯಾರೊಬ್ಬರು ಅವರ ಎದುರಿಗೆ ದನಿ ಎತ್ತಲಿಲ್ಲ.
ಪ್ರಸ್ತುತದಲ್ಲಿ ಜಾತಿಗೊಂದು ಮಠ, ಆಯಾ ಜಾತಿಯವರ ಸಮಾವೇಶ ಮತ್ತು ಗುರುತಿನ ಚೀಟಿ ನೀಡುವ ಮಟ್ಟಕ್ಕೆ ಕುಲಪ್ರಿಯರು ಬಂದು ತಲುಪಿದ್ದಾರೆ. ಇಂಥ ಸಂದರ್ಭದಲ್ಲಿ ಪ್ರೋ. ಹೆಚ್.ಎಂ. ಮರುಳಸಿದ್ಧಯ್ಯನವರು ತುಳಿದ ಹಾದಿ ಇತರರಿಗೆ ಮಾದರಿಯಾಗುವಂತಹುದು. ಊರಲ್ಲಿನ ಕಸಮಾತ್ರವಲ್ಲ ಮನದಲ್ಲಿನ ಜಾತಿ ಎಂಬ ಕಸವನ್ನು ಗುಡಿಸಿ ನಿರ್ಮಲ ಸಮಾಜವನ್ನು ಕಟ್ಟುವ ಕನಸು ಅವರದ್ದಾಗಿದೆ. ಅದಕ್ಕಾಗಿ ಅವರು ಯಾವ ತ್ಯಾಗಕ್ಕೂ ಸಿದ್ದ. ಅಪವಾದ ನಿಂದನೆಗಳಿಗೆ ಹೆದರದೆ ಮರುಳನಂತೆ ಮುಗಳು ನಗುತ್ತ ತಾನು ಹಿಡಿದ ಕಾರ್ಯವನ್ನು ಸಾಧಿಸುವ ಸಿದ್ಧಿ ಅವರಿಗೆ ಲಭಿಸಿದೆ. ಬಹುಶಃ ಅದಕ್ಕಾಗಿಯೇ ಅವರ ತಂದೆ-ತಾಯಿಗಳು ಮರುಳಸಿದ್ಧ ಎಂದು ಹೆಸರಿಟ್ಟಿರುವುದು ಸಾರ್ಥಕವಾಗಿದೆ.

ಡಾ.ಎಂ.ಹಾಲಪ್ಪ ಕುಂಬಳಕುಂಟೆ 
ಕನ್ನಡ ಉಪನ್ಯಾಸಕರು
ಸಕರ್ಾರಿ ಪದವಿ ಪೂರ್ವ ಕಾಲೇಜು
ಹುಳಿಯಾರು -ಕೆಂಕೆರೆ (ಪೋಸ್ಟ್)
ಚಿಕ್ಕನಾಯಕನಹಳ್ಳಿ (ತಾಲ್ಲೊಕು)
ತುಮಕೂರು(ಜಿಲ್ಲೆ)
ಮೊ:-9742843661


Happy New Year


Wednesday, December 26, 2012

SOCIAL WORK NEWS


TRAINING/WORKSHOP


Interview


Workshop on “Management of NGOs


Dear all,


Despite having the dream of establishing NGOs, many are not able to realize it due to lack of authentic information on establishment and management of NGO. Based on the demand from student community and general public, Niratanka has planned to conduct a workshop on "Management of NGOs". The workshop is mainly focused on:

·         Formation of NGO

·         Society, Trust and Non-Profit Company

·         Management of NGO

·         Foreign Contributions (FCRA)

·         Nature of NGO Activities

·         Taxation of Non-Profit Organizations in India (80G)

·         NGOs and Government: Govt. sponsored NGO Schemes

·         Fund rising: Project writing tips
                      Project Formats
                      Guidelines to Project Proposals
                      How to write Concept note
                      How to approach funding agencies
                      How to get FCRA

       Donor Agencies
                   How to get registration u/s 35 ac of Income tax act

We invite your valuable suggestions. Details of fees structure, resource persons, date, venue and timings of the workshp,. etc will be communicated once it is finalized.  

 

Note: Resource persons having experience predominantly in management of NGOs can contact us for leading the sessions.

 

Basavaraj Kambale,

9538557598,

080-23212309.

 

 

--
Regards 

Monday, December 24, 2012

ಬಸ್ತಾರ್ ಬಾಲಕಿಯರ ಬಾಪು: ಧರ್ಮಪಾಲ್ ಸೇನ್


COURTESY -THE WEEK

http://week.manoramaonline.com/cgi-bin/MMOnline.dll/portal/ep/theWeekContent.do?contentId=13061199&programId=1073755753&BV_ID=@@@

ಬಸ್ತಾರ್ ಬಾಲಕಿಯರ ಬಾಪು: ಧರ್ಮಪಾಲ್ ಸೇನ್



ಹಮ್ ಬಸ್ತಾರ್ ಕಿ ನಾರಿ ಹೈ
                                                             ಫೂಲ್ ನಹಿ ಚಿಂಗಾರಿ ಹೈ


                                                          (ನಾವು ಬಸ್ತಾರ್ ಬಾಲಕಿಯರು
                                                                   ಹೂವುಗಳಲ್ಲ; ಬೆಂಕಿ ಜ್ವಾಲೆಗಳು)


ಸುಮಾರು ಒಂದು ದಶಕದ ಹಿಂದೆ ಛತ್ತಿಸ್ಗಡದ ಬಸ್ತಾರ್ ಜಿಲ್ಲೆಯ ಜಗ್ದಾಲ್ಪುರ್ ಬಸ್ ನಿಲ್ದಾಣದಲ್ಲಿ  ಈ ಮೇಲಿನ ಘೋಷಣೆಯೊಂದಿಗೆ ಕೆಲವು ಬಾಲಕಿಯರು ಬಸ್ ಕಂಡಕ್ಟರ್ ಒಬ್ಬನನ್ನು ಎದುರಿಸುತ್ತಿರುವಾಗ ನಕ್ಸಲೈಟ್ಗಳೆಂಬ ಸಂಶಯದಿಂದ ಬಂಧಿಸಲಾಯಿತು. ಆದರೆ ಅವರು ಬಸ್ ಸಿಬ್ಬಂದಿಯ ಅನುಚಿತ ವರ್ತನೆಯ ವಿರುದ್ಧ ಪ್ರತಿಭಟಿಸುತ್ತಿರುವ ಮಾತಾ ರುಕ್ಮಿಣಿ ಆಶ್ರಮದ ವಿದ್ಯಾಥರ್ಿಗಳೆಂದು ತಿಳಿದ ಕೂಡಲೆ ಬಿಡುಗಡೆಗೊಳಿಸಲಾಯಿತು.
ಬಸ್ತಾರ್ನಲ್ಲಿ ಧರ್ಮಪಾಲಹಳ್ಳಿಯ  ಮಾತಾ ರುಕ್ಮಿಣಿ ಆಶ್ರಮ ಮತ್ತು ಸಂಬಂಧಿತ ಶಾಲೆಗಳು ವಿಶೇಷ ಸ್ಥಾನಮಾನ ಹೊಂದಿವೆ. 1976ರಲ್ಲಿ ಈ ಪ್ರದೇಶದ ಸಾಕ್ಷರತೆ ಕೇವಲ 1% ಇದ್ದಾಗ ಸಂಪ್ರದಾಯವನ್ನು ಎದುರುಹಾಕಿಕೊಂಡು ಆಶ್ರಮವು ಬಾಲಕಿಯರನ್ನು ಸುಶಿಕ್ಷಿತರನ್ನಾಗಿ ಮಾಡಲು ಮೊದಲಡಿಯಿಟ್ಟಿತು. ಆರಂಭದಲ್ಲಿ ಸಣ್ಣ ತೊರೆಯಾಗಿ ಹುಟ್ಟಿಕೊಂಡು, ಹಂತ ಹಂತವಾಗಿ ಪ್ರವಾಹೋಪಾದಿಯಲ್ಲಿ ಬೆಳೆಯಿತು. ಬಸ್ತಾರ್ನ 39,000 ಚ.ಕಿ.ಮಿ, ಪ್ರದೇಶದಲ್ಲಿ 37 ವಸತಿ ಶಾಲೆಗಳನ್ನು ಸ್ಥಾಪಿಸುವುದರೊಂದಿಗೆ ಆಶ್ರಮವು 20,000 ಬಾಲಕಿಯರನ್ನು ಸುಶಿಕ್ಷಿತರನ್ನಾಗಿ ಮಾಡಿದೆ.

ಬಸ್ತಾರ್ನ ಅದೃಷ್ಟದೊಂದಿಗಿನ ಹೋರಾಟವು ಪೂಜ್ಯ ಗಾಂಧೀವಾದಿ ವಿನೋಬಾ ಭಾವೆಯವರ ಶಿಷ್ಯರಾದ ಧರ್ಮಪಾಲ ಸೈನಿಯವರ  ಮೂಲಕ ಶುರುವಾಯಿತು. ಸೈನಿ 1930 ರಲ್ಲಿ ಧಾರ ಸಂಸ್ಥಾನದಲ್ಲಿ ಜನಿಸಿದರು. ಅದು ಈಗ ಮಧ್ಯಪ್ರದೇಶದ ಒಂದು ಭಾಗವಾಗಿದೆ. ಅವರ ತಂದೆ ಧಾರ್ನಲ್ಲಿ ತೋಟಗಾರಿಕೆ ಇಲಾಖೆಯ ಮುಖ್ಯಸ್ಥರಾಗಿದ್ದರು. ಸೈನಿ ನಾಲ್ಕು ಮಕ್ಕಳಲ್ಲಿ ಎರಡನೆಯವರು. ವಾಣಿಜ್ಯ ಶಿಕ್ಷಕರಾಗಿದ್ದ ವಿದ್ಯಸಾಗರ್ ಪಾಂಡೆಯವರ ಸಂಪರ್ಕಕ್ಕೆ ಬರುವವರೆಗೆ ಅವರು ಒಬ್ಬ ಸಾಮಾನ್ಯ ವಿದ್ಯಾಥರ್ಿಯಾಗಿದ್ದರು. ಪಾಂಡೆಯವರಿಂದ ಮಹಾತ್ಮ ಗಾಂಧೀ ತತ್ತ್ವಗಳಿಗೆ ಪರಿಚಯಸಲ್ಪಟ್ಟರು.

ಮಧ್ಯಪ್ರದೇಶ ಮತ್ತು ಗುಜರಾತ್ ರಾಜ್ಯಗಳ ಭಿಲ್ ಆದಿವಾಸಿಗಳಿಗಾಗಿ ಕೆಲಸ ನಿರ್ವಹಿಸುತ್ತಿರುವ ಭಿಲ್ ಸೇವಾಸಂಘವನ್ನು ಒಳಗೊಂಡು ಅನೇಕ ಗಾಂಧಿ ಸೇವಾ ಸಂಸ್ಥೆಗಳೊಂದಿಗೆ ಸೈನಿ ಕಾರ್ಯನಿರ್ವಹಿಸಿದ್ದಾರೆ. ಆದಿವಾಸಿಗಳೊಂದಿಗೆ ಅನೇಕ ವರ್ಷಗಳನ್ನು ಕಳೆದಿರುವ ಸೈನಿ ಅವರ ಜೀವನದಲ್ಲಿ ಬದಲಾವಣೆ ತರುವ ಮಹತ್ತರವಾದದ್ದನ್ನು ಮಾಡಬೇಕೆಂಬ ಆಶಯ ಹೊಂದಿದ್ದರು. 60ರ ದಶಕದಲ್ಲಿ ಬಸ್ತಾರ್ ಬಾಲಕಿಯರ ಕುರಿತು ಹಿಂದಿ ಪತ್ರಿಕೆಯಲ್ಲಿ ಓದಿದ ಒಂದು ವರದಿ ಅವರ ಮನದಲ್ಲಿ ಉಳಿದಿತ್ತು. ದಸರಾ ಹಬ್ಬವನ್ನು ಮುಗಿಸಿ ಹಿಂದಿರುಗುತ್ತಿದ್ದ ಕೆಲವು ಬಾಲಕಿಯರ ಮೇಲೆ ಪುಂಡರು ಮಾಡಿದ ಶೋಷಣೆಯ ವರದಿ ಅದಾಗಿತ್ತು. ಬಾಲಕಿಯರು ಆ ಪುಂಡರಿಗೆ ತಕ್ಕ ಪಾಠ ಕಲಿಸಿದ್ದರು.

ಸೈನಿ ಬಸ್ತಾರ್ನ ಈ ಬಾಲಕಿಯರಿಗೆ ಸರಿಯಾದ ಮಾರ್ಗದರ್ಶನ ನೀಡಿ ರಾಷ್ಟ್ರದ ಅಭಿವೃದ್ಧಿಯಡೆಗೆ ಇವರ ಸಾಮಥ್ರ್ಯವನ್ನ ಪ್ರವಹಿಸುವ ಯೋಚನೆ ಮಾಡಿದರು. 1976ರಲ್ಲಿ ಬಸ್ತಾರ್ ಮಧ್ಯಪ್ರದೇಶದ ಒಂದು ಭಾಗವಾಗಿತ್ತು. ಕೇರಳ ಮತ್ತು  ಬೆಲ್ಜಿಯಂ ಗಳಿಗಿಂತ ವಿಸ್ತಾರವಾಗಿದ್ದ ಬಸ್ತಾರ್ ಶ್ರೀಮಂತ ಖನಿಜ ಸಂಪತ್ತು ಹೊಂದಿದ್ದಾಗಿಯೂ, ಮುಖ್ಯವಾಗಿ ಅದೊಂದು ದಟ್ಟ ಅರಣ್ಯವಾಗಿತ್ತು. ನಮಗೆ ಗೊತ್ತಿರುವ ನಾಗರೀಕತೆ ದಟ್ಟ ಅರಣ್ಯದಲ್ಲಿ ತನ್ನ ಮೊದಲ ಹೆಜ್ಜೆ ಇಡುವುದರಲ್ಲಿತು.್ತ ಸ್ಥಳೀಯ ಜನರು ಬಟ್ಟೆ ಧರಿಸುತ್ತಿರಲಿಲ್ಲ. ಶಿಕ್ಷಣ, ರಸ್ತೆಗಳಂತೂ ದೂರದ ಮಾತಾಗಿದ್ದವು, ಸಕರ್ಾರಕ್ಕಂತೂ ಅಶಿಸ್ತಿನ ನೌಕರರನ್ನು ವರ್ಗಮಾಡುವ ಜಣಟಠಿಟಿರ ರಡಿಠಣಟಿಜ ಆಗಿತ್ತು ಬಸ್ತಾರ್. ಬಾಲಕಿಯರನ್ನ ಸುಶಿಕ್ಷತರನ್ನಾಗಿ ಮಾಡುವುದರ ಮೂಲಕ ಮಾತ್ರ ಬಸ್ತಾರನ್ನು ರಕ್ಷಿಸಲು ಸಾಧ್ಯ ಎಂದು ಸೈನಿ ಮನಗಂಡಿದ್ದರು. ಆದ್ದರಿಂದ ಬಾಲಕಿಯರ ಶಿಕ್ಷಣಕ್ಕಾಗಿ ಸಮಪರ್ಿಸಿಕೊಳ್ಳುವ ಒಂದು ಆಶ್ರಮ ಸ್ಥಾಪಿಸಲು ಅನುಮತಿ ಕೋರಿ ತಮ್ಮ ಗುರುಗಳ ಬಳಿಗೆ ಹೋದರು.
ಭಾವೆ ನಿರಾಕರಿಸಿದರು. ಶಿಷ್ಯ ಧೃತಿಗೆಡಲಿಲ್ಲ. ಪುನಾರಾವತರ್ಿತ ವಿನಂತಿ ಮತ್ತು ಸವಿವರ ಯೋಜನೆಗಳೊಂದಿಗೆ ಗುರುವನ್ನೊಪ್ಪಿಸುವ ತಮ್ಮ ಪ್ರಯತ್ನವನ್ನು ಮುಂದುವರಿಸಿದರು. ಅಂತಿಮವಾಗಿ ಒಂದು ಷರತ್ತಿನೊಂದಿಗೆ ಭಾವೆ ಸಮ್ಮತಿಸಿದರು. ಸೈನಿ ಕನಿಷ್ಠ ಹತ್ತು ವರ್ಷಗಳ ಕಾಲ ಆಶ್ರಮದಲ್ಲೇ ಉಳಿಯಬೇಕೆಂದು ವಚನ ತೆಗೆದುಕೊಂಡರು. ಸೈನಿ ಯಾವುದೇ ಸ್ಥಳದಲ್ಲಾದರೂ ಕೆಲವು ತಿಂಗಳಿಗಿಂತ ಹೆಚ್ಚಿಗೆ ಉಳಿದುಕೊಳ್ಳುತ್ತಿರಲಿಲ್ಲವಾದ್ದರಿಂದ ಅನೇಕರು ಈ ವಚನವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಭಾವೆಯವರಿಗೆ ತಮ್ಮ ಶಿಷ್ಯನ ಮೇಲೆ ಅಪಾರ ನಂಬಿಕೆ ಹೊಂದಿದ್ದು ಅವನಿಗೆ ಮುಖ್ಯಮಂತ್ರಿ ಶಾಮಚರಣ ಶುಕ್ಲಾರಿಗೆ ಪರಿಚಯಿಸುವ ಕೈ ಬರಹದ ಪತ್ರವನ್ನು ನೀಡಿದರು. ತಮ್ಮ ವೈಯುಕ್ತಿಕ ಬಳಕೆಗಾಗಿ ಎಂದಿಗೂ ಹಣ ಇಟ್ಟುಕೊಳ್ಳದ ಭಾವೆಯವರು ಮುದುಡಿದ ಐದು ರೂಪಾಯಿ ನೋಟನ್ನು ಸೈನಿಗೆ ನೀಡಿದರು. ಅದು ಆಶ್ರಮದ ಮೊದಲ ದೇಣಿಗೆ ಆಗಿತ್ತು.

ಬಸ್ತಾರ್ನ ಆದಿವಾಸಿಗಳನ್ನು ಸುಶಿಕ್ಷಿತರನ್ನಾಗಿಸುವುದು ವಿನೋಬಾರವರ ಕನಸಾಗಿತ್ತು. ಆ ಕಾರಣಕ್ಕಾಗಿಯೇ ನಾನು ಅವರ ತಾಯಿ  ಮಾತಾ ರುಕ್ಮಿಣಿ ಭಾವೆ' ಯವರ ಹೆಸರಿನಲ್ಲಿ ಆಶ್ರಮ ಸ್ಥಾಪಿಸಲು ವಿನಂತಿಸಿದೆ. ಅವರ ಆರಂಭಿಕ ನಿರಾಕರಣೆ ನನ್ನ ಸಹನೆಯ ಪರೀಕ್ಷೆಯಾಗಿತ್ತು  ಈಗ ತೌಜಿ(ಚಿಕ್ಕಪ್ಪ) ಎಂದು ವಾತ್ಸಲ್ಯದಿಂದ ಕರೆಸಿಕೊಳ್ಳುವ ಸೈನಿ ಹೇಳುತ್ತಾರೆ.

ಸೈನಿ ಬಸ್ತಾರ್ನ ಕನಸು ಸಾಕಾರಗೊಳಿಸಲು ಆರಂಭಿಸಿದಾಗ 46 ವರ್ಷದ ಬ್ರಹ್ಮಚಾರಿ. ಆಶ್ರಮಕ್ಕಾಗಿ ಜಾಗ ಹುಡುಕುವುದು ಅವರ ಮೊದಲ ಕಾರ್ಯವಾಗಿತ್ತು. ಶಾಲೆಗಳಲ್ಲಿ ಬಾಲಕಿಯರ ದಾಖಲಾತಿಗಾಗಿ ಪರದಾಡುತ್ತಿದ್ದ ಶಿಕ್ಷಣ ಇಲಾಖೆ ಸೈನಿಯವರಿಗೆ ಬಾಲಕಿಯರ ವಸತಿ ಪ್ರಾಥಮಿಕ ಶಾಲೆಯನ್ನು ಸ್ಥಾಪಿಸಲು ಹರ್ಷದಿಂದ ಮೂಲ ಸೌಕರ್ಯವನ್ನು ಒದಗಿಸಲು ಮುಂದಾಯಿತು. ಡಿಸೆಂಬರ್ 13, 1976 ರಲ್ಲಿ ಇಬ್ಬರು ಮಹಿಳಾ ಶಿಕ್ಷಕಿಯರು ಮತ್ತು ಇಬ್ಬರು ಸಹಾಯಕ ಸಿಬ್ಬಂದಿಯೊಂದಿಗೆ ಮೊದಲ ಶಾಲೆ ಆರಂಭವಾಯಿತು. ಹೀಗಿದ್ದವು ಒಂದು ಮಹಾನ್ ಯೋಜನೆಯ ಆರಂಭಗಳು.

ಅನೇಕ ಸಮಸ್ಯೆಗಳು ಸೈನಿ ಅವರ ಮುಂದಿದ್ದವು. ಹಳ್ಳಿಗರಿಗೆ ಸಾಂಸ್ಕೃತಿಕ ಆಘಾತವೇ ದೊಡ್ಡ ಮಟ್ಟದ್ದಾಗಿತ್ತು. ಸೇವಕಿಯಾಗಿ ಸೇರಿದ ಆದಿವಾಸಿ ಮಹಿಳೆ ರವಿಕೆ ತೊಡಲು ನಿರಾಕರಿಸಿದರು. ಅದು ಅವಳನ್ನು ನಾಚಿಕೆಗೀಡು ಮಾಡಿತು. ಬಸ್ತಾರ್ನ ಆದಿವಾಸಿ ಸಂಸ್ಕೃತಿಯಲಿ,್ಲ ದೇಹದ ಮೇಲ್ಬಾಗದಲ್ಲಿ ಬಟ್ಟೆ ಧರಿಸುವುದು ಅನುಚಿತವಾದುದಾಗಿತ್ತು. ಎನ್ನುತ್ತಾರೆ ಸೈನಿ.
ಮೂರು ತಿಂಗಳು ಕಾದರೂ ಕೇವಲ ನಾಲ್ಕು ಕುಟುಂಬಗಳು ತಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ಒಪ್ಪಿದರು. ಜಗ್ಗದ ಸೈನಿ ಮಹಿಳಾ ಶಿಕ್ಷಕಿಯರೊಂದಿಗೆ ಪೋಷಕರನ್ನೊಪ್ಪಿಸಲು ಊರಿಂದೂರಿಗೆ ಅಲೆದರು. ನಾವು ಅಪಮಾನಿತರಾದೆವು ಮತ್ತು ಕೆಲವು ಬಾರಿ ಬೆದರಿಸಲ್ಪಟ್ಟೆವು ಆದರೆ ಕೆಲವು ಒಳ್ಳೆಯ ಮನಸ್ಸಿನ ಊರ ಮುಖಂಡರು ನಮ್ಮ ಕಾಳಜಿಯನ್ನು ಒಪ್ಪಿಕೊಂಡರು ಎಂದು ಸೈನಿ ಸ್ಮರಿಸುತ್ತಾರೆ.



COURTESY -THE WEEK 

ಸಾರ್ವಜನಿಕ ಬಸ್ಸುಗಳಲ್ಲಿ ಅರೆ ಬೆತ್ತಲೆಯಾಗಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನು ತಪ್ಪಿಸಲು ಶಿಕ್ಷಕರು ಮಕ್ಕಳನ್ನು ಮನೆಯಲ್ಲಿಯೇ ಸರಿಯಾಗಿ ಬಟ್ಟೆ ಧರಿಸಿ ಬರುವಂತೆ ಮಾಡಿದರು. ಹೊಸ ಬಟ್ಟೆ ಧರಿಸಿ, ಅಂದವಾಗಿ ತಲೆ ಬಾಚಿಕೊಂಡು ಶಾಲೆಗೆ ಬರುವ ಮಕ್ಕಳು ಸುಂದರವಾದ ಗೊಂಬೆಗಳಂತೆ ಕಾಣುವುದನ್ನು ನೋಡಿ ಪೋಷಕರು ಆನಂದಿತರಾದರು. ಲಚ್ಚಾಂಧೆ ನಾಗ್, ಒರ್ವ ಸಕರ್ಾರಿ ಶಾಲಾಶಿಕ್ಷಕಿ , ಮೂರು ದಶಕಗಳ ಹಿಂದೆ ಸೈನಿ ಮತ್ತವರ ತಂಡ ಅವಳನ್ನು ಶಾಲೆಗೆ ಕಳುಹಿಸಲು ಅವಳ ತಂದೆಯನ್ನು ಒಪ್ಪಿಸಿದುದನ್ನು ಸ್ಮರಿಸುತ್ತಾಳೆ. ಅವಳ ಮಗಳು ದೀಪಿಕಾ ಆಶ್ರಮದಲ್ಲಿದ್ದಾಳೆ. ನಾನು ಈ ಆಶ್ರಮ ಮತ್ತು ತೌಜಿ(ಸೈನಿ) ಯನ್ನು ಚೆನ್ನಾಗಿ ಬಲ್ಲೆ ನನ್ನ ಮಗಳು ನಾನು ಪಡೆದ ಶಿಕ್ಷಣ ಮತ್ತು ಮೌಲ್ಯಗಳನ್ನು ಅಂತಗರ್ಿಸಿಕೊಂಡು ಯಶಸ್ವಿಯಾಗಬೇಕು. ಎಂದು ಹೇಳುತ್ತಾರೆ ನಾಗ್. ತಮ್ಮ ಹೆಣ್ಣು ಮಕ್ಕಳು ಸುರಕ್ಷಿತ ಕೈಗಳಲ್ಲಿವೆ ಮತ್ತು ಅವರು ಜ್ಞಾನ ಮತ್ತು ಹೊಸ ಕೌಶಲ್ಯಗಳನ್ನು ಅಜರ್ಿಸಿಕೊಳ್ಳುತ್ತಿದ್ದಾರೆ ಎಂದು ಪೋಷಕರಿಗೆ ಅರಿವಾದೊಡನೆ ವಿದ್ಯಾಥರ್ಿಗಳ ಸಂಖ್ಯೆ ಹೆಚ್ಚಾಯಿತು. ತಕ್ಷಣ ಮತ್ತೊಂದು ಶಾಲೆ ಬಸ್ತಾರ್ನ ದಕ್ಷಿಣದ ಬಾಸರ್ೂರ್ನಲ್ಲಿ ಆರಂಭವಾಯಿತು. ಬಾಸರ್ೂರ್ ನಕ್ಸಲರ ಹಿಡಿತದಲ್ಲಿರುವ ಅನಾದರಣೀಯ ಮತ್ತು ತಲುಪಲಾಗದ ಪ್ರದೇಶ ಅಬುಜ್ಮರ್ ಬೆಟ್ಟದತಪ್ಪಲಿನಲ್ಲಿದೆ.

ಸೈನಿಯವರ  ಯಶಸ್ಸಿನಿಂದ ಆಕಷರ್ಿತರಾದ ಮುಖ್ಯಮಂತ್ರಿ ಅಜರ್ುನ್ ಸಿಂಗ್ ಇಂತಹ ಮತ್ತಷ್ಟು ಶಾಲೆಗಳನ್ನು ಸ್ಥಾಪಿಸಲು ಕೋರಿದರು. ಮತ್ತೆ ನಾಲ್ಕು ಶಾಲೆಗಳನ್ನು ಸ್ಥಾಪಿಸಲು ಸಂಪನ್ಮೂಲ ಮತ್ತು ಭೂಮಿಯನ್ನು ನೀಡಿದಾಗ ಒಟ್ಟು ಶಾಲೆಗಳ ಸಂಖ್ಯೆ 6 ಆಯಿತು. ಬಸ್ತಾರ್ ಮತ್ತು ಅದರ ಸುತ್ತಮುತ್ತ ನಕ್ಸಲ್ ಪ್ರಭಾವ ಹೆಚ್ಚಾಗಿತ್ತು.  ಈ ಕಾರಣಕ್ಕಾಗಿ 1988ರ ಸುಮಾರಿನಲ್ಲಿ ಯಾವ ಸಕರ್ಾರಿ ಶಿಕ್ಷಕರು ಅಲ್ಲಿಗೆ ಹೋಗಲು ಮುಂದಾಗಲಿಲ್ಲ. ಬಹಳಷ್ಟು ಶಾಲೆಗಳು ಮುಚ್ಚಿದ್ದವು. ಮತ್ತೆ ಸಕರ್ಾರ ಸೈನಿಯವರ ನೆರವಿನತ್ತ ಧಾವಿಸಿ ಇಂತಹ 30 ಶಾಲೆಗಳ ನಿಯಂತ್ರಣವನ್ನು ಅವರಿಗೆ ನೀಡಿತು. 2000ದಲ್ಲಿ ಛತ್ತೀಸ್ಗರ್ ಹೊಸ ರಾಜ್ಯವಾದಾಗಿನಿಂದ ಬಸ್ತಾರ್ ಮತ್ತು ಅದರ ಶಾಲೆಗಳು ಸಕರ್ಾರದ ಗಮನವನ್ನು ಸೆಳೆಯುತ್ತಿವೆ. ಬಾಲಕಿಯರನ್ನು ಸುಶಿಕ್ಷಿತ ಮತ್ತು ಸಬಲರನ್ನಾಗಿ ಮಾಡುವುದು ಸೈನಿಯವರ ಧ್ಯೇಯವಾಗಿದ್ದರೂ ಬಸ್ತಾರ್ನ ಬಾಲಕರನ್ನು ಅವರು ನಿರ್ಲಕ್ಷಿಸಿಲ್ಲ.  ಆಶ್ರಮದಿಂದ ನಡೆಯುವ ಒಟ್ಟು 37 ಶಾಲೆಗಳಲ್ಲಿ 16 ಬಾಲಕರ ಶಾಲೆಗಳಾಗಿವೆ.

ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದಕ್ಕೆ ಈ ಶಾಲೆಗಳು ನಡೆದು ಬಂದ ಚರಿತ್ರೆಯೇ ಸಾಕ್ಷಿ. ಇವುಗಳಲ್ಲಿ ಬಹಳಷ್ಟು ಶಾಲೆಗಳು 100% ಪಲಿತಾಂಶ ಪಡೆಯುತ್ತವೆ. ದುಲರ್ಿ ಮತ್ತು ಚಿರಗಾಂವ್ ಶಾಲೆಗಳು ಕಳೆದು 12 ವರ್ಷಗಳಿಂದಲೂ 100% ಪಲಿತಾಂಶ ಪಡೆಯುತ್ತಿದ್ದು ಎಲ್ಲ ವಿದ್ಯಾಥರ್ಿಗಳು ಪ್ರಥಮ ದಜರ್ೆಯಲ್ಲಿ ಪಾಸಾಗುತ್ತಿದ್ದಾರೆ.

5 ಅಡಿ 4 ಇಂಚು ಎತ್ತರದ ಸೈನಿ ಯಾವಾಗಲೂ ಖಾದಿ ಬಟ್ಟೆಗಳಾದ ಕುತರ್ಾ ಪೈಜಾಮ ಧರಿಸುತ್ತಿದ್ದು ಪುಸ್ತಕ ಮತ್ತು ಮುಂದಿನ ಋತುವಿಗೆ ಬಿತ್ತಲು ಬೇಕಾಗಿರುವ ಬೀಜಗಳಿರುವ ಚೀಲಗಳಿಂದ ತುಂಬಿರುವ ಎರಡು ಕೋಣೆಗಳ ಕಚ್ಚಾ ಮನೆಯಲ್ಲಿ ವಾಸಿಸುತ್ತಾರೆ. ಪ್ರತಿದಿನ ಐದು ಗಂಟೆಗೆ ಎದ್ದು ಮನೆಯನ್ನು ಶುಚಿಗೊಳಿಸಿ ಪ್ರಾರ್ಥನೆಗೆ ವಿದ್ಯಾಥರ್ಿಗಳೊಂದಿಗೆ ಭಾಗವಹಿಸುತ್ತಾರೆ. ವಿದ್ಯಾಥರ್ಿಗಳೂ ಇದನ್ನೇ ಅನುಸರಿಸುತ್ತಾರೆ. ಧ್ಯಾನ, ಶ್ಲೋಕ ಮತ್ತು ಐದು ನಿಮಿಷಗಳ ಸೈನಿಯವರ ಪ್ರವಚನಗಳಿಂದ ಕೂಡಿದ ಪ್ರಾರ್ಥನೆ  ಗಾಂಧೀಜಿಯವರ ಬೆಳಗಿನ ಪ್ರಾರ್ಥನೆಯನ್ನ ಹೋಲುತ್ತದೆ. ಗಾಂಧೀಜಿ ಮತ್ತು ಭಾವೆಯವರ ವಿಚಾರಗಳು ಸೈನಿಯವರ ಪ್ರವಚನದ ಪ್ರಧಾನ ಭಾಗವಾಗಿದ್ದರೂ, ಪ್ರಚಲಿತ ವಿದ್ಯಾಮಾನ ಮತ್ತು ವ್ಯಕ್ತಿಗಳ ಕುರಿತು ಚಚರ್ಿಸುತ್ತಾರೆ. ಬದಲಾಗುತ್ತಿರುವ ಸಮಯದ ಬಗ್ಗೆ ನನಗೆ ಅರಿವಿದೆ. ಹಾಗಾಗಿ ನನ್ನ ಪ್ರವಚನದಲ್ಲಿ ಹೊಸ ಅಂಶವನ್ನು ಸೇರಿಸಿದ್ದೇನೆ. ಅಲ್ಲಿ ಆಧುನಿಕ ನಾಯಕರಾದ ಕಲ್ಪನ ಚಾವ್ಲ ಮತ್ತು ಎ.ಪಿ.ಜೆ ಅಬ್ದುಲ್ ಕಲಾಂ ಮುಂತಾದವರ ಬಗ್ಗೆ ಚಚರ್ಿಸುತ್ತೇನೆ, ಎನ್ನುತ್ತಾರೆ ಸೈನಿ.

ಕ್ರೀಡೆಯನ್ನು ಉತ್ತೇಜಿಸುವ ಕಟಚಿಥಿ ಚಿಟಿಜ ಟಜಚಿಡಿಟಿ ಮಾದರಿಯ ಶಿಕ್ಷಣದಲ್ಲಿ ನಂಬಿಕೆಯಿರಿಸಿರುವ ಸೈನಿ ಆರಂಭಿಕ ವರ್ಷಗಳಲ್ಲಿ ವಿದ್ಯಾಥರ್ಿಗಳನ್ನು ಆಕಷರ್ಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೈನಿ ಸ್ವತಃ ಒಬ್ಬ ಅಥ್ಲೆಟಿಕ್ ಚಾಂಪಿಯನ್. ಕ್ರೀಡೆ ಮತ್ತು ಆಟಗಳಿಗೆ ಅವರು ನೀಡಿದ ಪ್ರಾಧಾನ್ಯತೆಯಿಂದ ಆಶ್ರಮ ಮತ್ತು ಅದರ ವಿದ್ಯಾಥರ್ಿಗಳಿಗೆ ಸಾಕಷ್ಟು ಅನುಕೂಲವಾಗಿದೆ. ಕ್ರೀಡೆಗಳಲ್ಲಿ ಬಾಲಕಿಯರು ಭಾಗವಹಿಸುವುದನ್ನು ಪ್ರೋತ್ಸಾಹಿಸಿದ ಅವರು ಬಾಸ್ತಾರ್ನ ಕೆಲವು ಅತ್ಯುತ್ತಮ ಕ್ರೀಡಾಪಟುಗಳನ್ನು ಬೆಳೆಸುವುದರಲ್ಲಿ ಕಾರಣಿಭೂತರಾಗಿದ್ದಾರೆ. ಮರಿಯಾ ಮತ್ತು ಗೊಂಡ ಆದಿವಾಸಿ ಸಮುದಾಯಗಳ ಸಾಮಥ್ರ್ಯವನ್ನು ಅರಿತಿರುವ ಅವರು, ಬಾಲಕಿಯರನ್ನ ಸಾಂಪ್ರದಾಯಕ ಶಿಸ್ತುಗಳಾದ ಮ್ಯರಾಥನ್, ಬಿಲ್ವಿದ್ಯೆ ಮತ್ತು ಕಬಡ್ಡಿಗಳಲ್ಲಿ ಬೆಳಸಿದ್ದಾರೆ. ಕೆಲವೇ ಅವಧಿಯಲ್ಲಿ ಬಾಲಕಿಯರು ಸಮರ್ಥರಾಗಿ ವಿಶೇಷವಾಗಿ ಮ್ಯಾರಥಾನ್ನಲ್ಲಿ ಬಹುಮಾನದ ಮೇಲೆ ಬಹುಮಾನ ಪಡೆದಿದ್ದಾರೆ. ಇದರಿಂದ ಪ್ರೇರಿತರಾದ ಪೋಷಕರು, ಮ್ಯಾರಥಾನ್ನಲ್ಲಿ  ತಮ್ಮ ಮಕ್ಕಳು ಭಾಗವಹಿಸಲು ಅನುಮತಿಸಿದರು. ಬೆಳೆ ಕಟಾವು ಮಾಡುವುದನ್ನು ಬಿಡಿಸಿ ಅವರನ್ನ ಪ್ರೋತ್ಸಾಹಿಸಿದ್ದಾರೆ ಕೇವಲ ಮ್ಯಾರಥಾನ್ ಒಂದರಲ್ಲೇ ಬಾಲಕಿಯರು 30 ಲಕ್ಷ ಬೆಲೆಯ ಬಹುಮಾನ ಪಡೆದಿರುವುದು ಆಶ್ರಮದ ದೊಡ್ಡ ಗರಿಮೆ.

ಆಶ್ರಮದಲ್ಲಿ ಆದಿವಾಸಿ ನಂಬಿಕೆಗಳನ್ನು ಗೌರವಿಸಲಾಗುತ್ತಿದ್ದು, ಹಳೆಯದರೊಂದಿಗೆ ಹೊಸ ವಿಚಾರಗಳನ್ನು ಪ್ರಯತ್ನಿಸಲು ಮತ್ತು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಲಾಗುತ್ತದೆ. ಸೈನಿ ಒಂದು ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ. ಒಂದು ಸಲ ಒಬ್ಬ ವಿದ್ಯಾಥರ್ಿಯ ತಂದೆ ಅನಾರೋಗ್ಯಕ್ಕೀಡಾದರು. ದೇವರ ಆಜ್ಞೆ ಆಗುವವರೆಗೂ ಅವನು ಏನನ್ನು ಸೇವಿಸುತ್ತಿರಲಿಲ್ಲ. ನಾನು ಹೇಗೊ ಮಾಡಿ ಪ್ಯಾರಸೆಟಮಾಲ್ ಮಾತ್ರೆ  ಕರಗಿಸಿದ ನೀರನ್ನು ಪ್ರಸಾದವಾಗಿ ಕುಡಿಸಿದೆ. ಅದು ಪರಿಣಾಮ ಬೀರಿತು. ಆರಂಭಿಕ ವರ್ಷಗಳಲ್ಲಿ ಸೈನಿ ವಿದ್ಯಾಥರ್ಿಗಳಿಗೆ ಶಾಲೆಯಿಂದ ರಜೆ ಪಡೆದು ಬೆಳೆಕಟಾವು ಮಾಡುವಲ್ಲಿ ಪೋಷಕರಿಗೆ ನೆರವಾಗಲು ಬಿಡುತ್ತಿದ್ದರು. ಇವರ ಸಹಾಯ ಕೃಷಿಗೆ ಅವಶ್ಯವಾಗಿತ್ತು. ಇದು ಪರಸ್ಪರ ನಂಬುಗೆಯ ವಾತಾವರಣವನ್ನು ಸೃಷ್ಟಿಸಲು ಕಾರಣವಾಯಿತು. ಇದು ಆಶ್ರಮವನ್ನು ದೂರದ ಪ್ರದೇಶಗಳಿಗೆ ಕರೆದೊಯ್ಯಿತು ಎನ್ನುತ್ತಾರೆ ಸೈನಿ.
ಪ್ರಾಯೋಗಿಕ ನೆಲೆಯಲ್ಲಿ ಆಶ್ರಮ ಶಾಲೆಗಳಿಗೆ ಶಿಕ್ಷಕರ ನೇಮಕಾತಿ ಮಾಡಲಾಗುತ್ತದೆ, ಆಯ್ಕೆ ಸಮಿತಿ ಅಭ್ಯಥರ್ಿಗಳ ಪಟ್ಟಿ ತಯಾರಿಸಿದ ಮೇಲೆ ಅವರು ಕೆಲವು ದಿನಗಳವರೆಗೆ ತರಗತಿ ತೆಗೆದುಕೊಳ್ಳಲು ಮತ್ತು ಮಕ್ಕಳೊಂದಿಗೆ ಸಮಯ ಕಳೆಯಲು ಸೂಚಿಸಲಾಗುತ್ತದೆ. ಅಭ್ಯಥರ್ಿಗಳ ಭೋದನೆಯಿಂದ ತೃಪ್ತರಾಗಿರುವುದನ್ನು ವಿದ್ಯಾಥರ್ಿಗಳಿಂದ ಕೇಳಿ ತಿಳಿಯುತ್ತೇವೆ ಎನ್ನುತ್ತಾರೆ ಸೈನಿ. ವಿದ್ಯಾಥರ್ಿಗಳ ತೀಪರ್ು  ಶಿಕ್ಷಕರ ಅಂತಿಮ ನೇಮಕಾತಿಯಲ್ಲಿ ಪ್ರಧಾನವಾಗಿರುತ್ತದೆ.

ಸೈನಿಯವರ ಶಿಸ್ತು ಮತ್ತು ಸಂಯಮಗಳಿಗೆ ಬಹಳಷ್ಟು ಶಿಕ್ಷಕರಿಗೆ ಸುಲಭವಾಗಿ ಒಗ್ಗಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ (ಅವರು ಕೆಲಸ ಶುರುಮಾಡಿದಾಗ). ಉದಾಹರಣೆಗೆ ಆಶ್ರಮದ ಸಿಬ್ಬಂದಿಗಳು ವಿದ್ಯಾಥರ್ಿಗಳು ಬಳಸಿದ ಬ್ರಾಂಡ್ನ ವಸ್ತುವನ್ನು ಬಳಸುವಂತಿರಲಿಲ್ಲ. ಒಂದು ನಿದರ್ಿಷ್ಟ ಬ್ರಾಂಡಿನ ಸೋಪನ್ನು ವಿದ್ಯಾಥರ್ಿಗಳು ಬಳಸಿದರೆ, ಸಿಬ್ಬಂದಿ ಬೇರೆ ಬ್ರಾಂಡಿನ ಸೋಪ್ ಬಳಸಬೇಕಾಗಿತ್ತು. ವಿದ್ಯಾಥರ್ಿಗಳಿಗಾಗಿ  ಇಟ್ಟಿರುವ ವಸ್ತುಗಳು ದುರ್ಬಳಕೆಯಾಗಬಾರದೆಂಬ ಕಾರಣಕ್ಕಾಗಿ ಈ ನಿಯಮ ಮಾಡಲಾಗಿತ್ತು.
ಸೈನಿಯವರ ಪ್ರಯತ್ನಗಳಿಗೆ ಸಕರ್ಾರದ ಬೆಂಬಲವಿದ್ದಾಗ್ಯೂ ತಮ್ಮ ಪಾಲಿನ ಖಚಿಡಿಜಗೆ ತೊಂದರೆಯಾಗುತ್ತದೆ ಎಂದು ಕೆಳ ಮತ್ತು ಮಧ್ಯಮ ವರ್ಗದ ಆಡಳಿತಶಾಹಿ ಅವರನ್ನ ಮತ್ತು ಅವರ ಶಾಲೆಗಳನ್ನು ವಿರೋಧಿಸುತ್ತಿದ್ದರು. ಭ್ರಷ್ಟಾಚಾರದ ವಿರುದ್ಧ ಅವರ ಕಠಿಣ ನಿಲುವು ಅವರನ್ನ ಸಿಟ್ಟಿಗೇಳಿಸುತ್ತಿದ್ದವು.
ಒಂದು ಬಾರಿ ಗಟಿಠಟಿ ಅಠಟಿಜಿಜಡಿಜಟಿಛಿಜಗಾಗಿ ಅಶ್ರಮದ ಅಕ್ಕಿ, ಸಕ್ಕರೆ ಮತ್ತು ಅಡುಗೆ ಎಣ್ಣೆ ಕೊಡಬೇಕೆಂದು ಆದಿವಾಸಿ ಇಲಾಖೆಯ ಒಬ್ಬ ಆಜಠಿಣಣಥಿ ಆಡಿಜಛಿಣಠಡಿ ಕೇಳಿದಾಗ, ಸೈನಿ ಹೀಗೆ ನೇರವಾಗಿ ವಿದ್ಯಾಥರ್ಿಗಳನ್ನೇ ಕೇಳಿ ಎಂದು ಅಧಿಕಾರಿಗೆ ಪ್ರಶ್ನಿಸಿದರು.
ಕೆಲವು ಸಲ ಅಕೌಂಟ್ ನಿರ್ವಹಣೆಯ ಸಿಬ್ಬಂದಿಯ ಅನನುಭವದಿಂದಾಗಿ ಅಧಿಕಾರಿಗಳಿಂದ ತೊಂದರೆಗಳನ್ನು ಆಶ್ರಮ ಅನುಭವಿಸಬೇಕಾಯಿತು. ಇಂಥ  ಸಂದರ್ಭಗಳಲ್ಲಿ ಸೈನಿ ಅಲಕ್ಷಿತ ಅಚಾತುರ್ಯಗಳ ವಿರುದ್ಧ ಅನೇಕ ದಿನಗಳ ಉಪವಾಸ ಮಾಡಿದ್ದಾರೆ. ಅವರು ಇಂಥ ಉಪವಾಸಗಳ ಕುರಿತು ಎಲ್ಲೂ ಬಹಿರಂಗಪಡಿಸಿಲ್ಲ, ಬಹಳಸ್ಟು ಸಲ ಇವು ಮೌನವ್ರತಗಳಾಗಿದ್ದವು ಎನ್ನುತ್ತಾರೆ   ಸೈನಿಯವರ ಮೊದಲ ಬ್ಯಾಚ್ ವಿದ್ಯಾಥರ್ಿಗಳಲ್ಲೊಬ್ಬರು ಮತ್ತು ಈಗ  ಚಿರಗಾಂವ್ ಶಾಲೆಯ ಅಧೀಕ್ಷಕರು ಆಗಿರುವ ಮಮತ ಬಿಸ್ತ.
ಆದಿವಾಸಿ ಇಲಾಖೆಯಿಂದ ಅನುದಾನ ಪಡಿಯುತ್ತಿದ್ದ ಆಶ್ರಮ ನಿರಂತರ ಆಡಿಟ್ಗಳಿಗೆ ಒಳಗಾಗುತ್ತಿದ್ದು ಅವುಗಳಲ್ಲಿ ಅನೇಕ ಆಡಿಟ್ಗಳು ಆಶ್ರಮದ ಸಿಬ್ಬಂದಿಗಳ ಶೋಷಣೆಯೊಂದಿಗೆ ಮುಕ್ತಾಯಗೊಂಡಿದೆ ಆರಂಭದ ದಿನಗಳಲ್ಲಿ ತುಂಬಾ ತೊಂದರೆ ನೀಡಲಾಗುತ್ತಿತ್ತು, ಆದರೆ ನಾವು ಪಾರದರ್ಶಕ ವ್ಯವಸ್ಥೆಯಿಂದ ಆರೋಪ ಮುಕ್ತರಾಗಿದ್ದೇವೆ ಎನ್ನುತ್ತಾರೆ ಆಶ್ರಮದ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಪುನೀತ್ ಶಮರ್ಾ.
ಶಾಲೆ ಮತ್ತು ಹಾಸ್ಟೆಲ್ಗಳಿಗೆ 13 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ಕಟ್ಟಡಗಳನ್ನು ನಿಮರ್ಿಸಲು ಆಧಿಕಾರಿಗಳು ಮುಂದಾದಾಗ ಸೈನಿ ನಿರಾಕರಿಸಿದರು. ಅವರು ತಮ್ಮ ಮೌಲ್ಯ ಮತ್ತು ಕಾರ್ಯ ವಿಧಾನಗಳಲ್ಲಿ ರಾಜಿಯಾಗಲು ಸಿದ್ಧರಿರಲಿಲ್ಲ. ಅದರಲ್ಲೂ ಮಣ್ಣಿನ ಮನೆಗಳು ಮತ್ತು ಕಚ್ಚಾ ಮೇಲ್ಠಾವಣೆಗಳು ಪ್ರಕೃತಿಗೆ ಹತ್ತಿರವಾದುದ್ದಾಗಿದ್ದವು. ಬಿಸಿ ರಕ್ತ ಮತ್ತು ಆಧುನಿಕ ದೃಷ್ಟಿಕೋನ ಹೊಂದಿರುವ ಅವರ ಹೊಸ ತಂಡದ ಸಲಹೆ ಮೇರೆಗೆ ಅವರು ಈಗ  ತಮ್ಮ ಶಾಲೆ ಮತ್ತು ಹಾಸ್ಟಲ್ಗಳನ್ನು ಕಾಂಕ್ರಿಟ್ ಕಟ್ಟಡಗಳಾಗಿ ಪರಿವತರ್ಿಸಲು ಸಿದ್ಧರಾಗಿದ್ದಾರೆ.
1990 ರಲ್ಲಿ ಕೆಲವು ಭ್ರಷ್ಟ ಆಧಿಕಾರಿಗಳು ಆಶ್ರಮದ ಕಟ್ಟುನಿಟ್ಟಿನ ವ್ಯವಹಾರದಿಂದ ಅತೃಪ್ತರಾಗಿ, ಕೆಲವು ತಿಂಗಳುಗಳ ವರೆಗೆ ಸಿನಿಮೀಯ ರೀತಿಯಲ್ಲಿ ಅನುದಾನ ನೀಡುವುದನ್ನು ನಿಲ್ಲಿಸಿದರು. 6 ತಿಂಗಳುಗಳ ವರೆಗೆ ನಮ್ಮ  ಸಿಬ್ಬಂದಿ ಸಂಬಳವಿಲ್ಲದೆ ಕಾರ್ಯ ನಿರ್ವಹಿಸಿದರು. ಯೂರೊಬ್ಬರೂ ದೂರು ಹೇಳಲಿಲ್ಲ. ಅಂಗಡಿಯವರು ಅಗತ್ಯ ವಸ್ತುಗಳನ್ನು ಕ್ರೆಡಿಟ್ ರೂಪದಲ್ಲಿ ನೀಡಿದರು  ಎಂದು ಸ್ಮರಿಸುತ್ತಾರೆ ಶಮರ್ಾ. ಜಗ್ದಾಲ್ಪುರದ ಅಂಗಡಿಯವರು ನಮ್ಮ ಆಥರ್ಿಕ ಸ್ಥಿತಿ ಬಗ್ಗೆ ಗೊತ್ತಿದ್ದೂ ನಮಗೆ ದಿನಸಿ ಪದಾರ್ಥಗಳನ್ನ ನೀಡುವುದನ್ನು ಮುಂದುವರೆಸಿದರು. ಒಬ್ಬ ವ್ಯಾಪಾರಿ ಉದ್ಧಾತ ಕಾರಣಕ್ಕಾಗಿ ತನ್ನ ಹೆಂಡತಿಯ ಆಭರಣಗಳನ್ನು ಒತ್ತೆ ಇಡುವುದಾಗಿ ಹೇಳಿದ ಎಂದು ಕಣ್ತುಂಬಿಸಿಕೊಂಡು ಹೇಳುತ್ತಾರೆ ಸೈನಿ.

    ತರುಣ ಜಿಲ್ಲಾಧಿಕಾರಿ ಸುದೀಪ್ ಬ್ಯಾನಜರ್ಿ ಅವರ ಗಮನಕ್ಕೆ ಆಶ್ರಮದ ವಿಷಯವನ್ನು ತಂದಾಗ ಆಶ್ರಮದ ಆಥರ್ಿಕ ಸಮಸ್ಯೆ ಬಗೆಹರಿಯಿತು. ಅವರು ತಾವೇ ಸ್ವಂತ ಆಶ್ರಮಕ್ಕೆ ಬೇಟಿ ನೀಡಿ ವಸ್ತುಸ್ಥಿತಿ ಪರಿಶೀಲಿಸಿ, ಸೈನಿ ಮತ್ತು ಆಶ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.  1991ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಸೈನಿಯವರ ಹೆಸರನ್ನು ಉಲ್ಲೇಖಿಸುವ ಪ್ರಕ್ರಿಯೆಯಲ್ಲಿ ಮುಂದಾಳತ್ವ ವಹಿಸಿದರು. 1992 ರಲ್ಲಿ ಸೈನಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದರು.

 ಒಂದು ಕಾಲದಲ್ಲಿ ಹೊರಗಿನವರು ಯಾರೂ ಕೆಲಸ ಮಾಡಲು ಸಿದ್ಧರಿರದ ಪ್ರದೇಶವಾಗಿತ್ತು ಬಸ್ತಾರ್. ಅಲ್ಲದೇ  ಕೆಲಸ ಮಾಡಲು ಅರ್ಹ ಸುಶಿಕ್ಷಿತ ಆದಿವಾಸಿಗಳ ಸಂಖ್ಯೆಯು ಕಡಿಮೆ ಇತ್ತು. ಆದರೆ ಆ ಸ್ಥಿತಿ ಈಗ ಬದಲಾಗಿದೆ. ಸಾವಿರಾರು ಸುಶಿಕ್ಷಿತ ಆದಿವಾಸಿ ಬಾಲಕಿಯರು ಬಸ್ತಾರ್ನ ಸಕರ್ಾರಿ ಮತ್ತು ಅರೆಸಕರ್ಾರಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ವೃತ್ತಿಶಕ್ತಿಯ ಹೆಚ್ಚಿನ ಭಾಗವಾಗಿದ್ದಾರೆ, ಯಾರೊಬ್ಬರಲ್ಲಿ ಅಲ್ಲಿ ಕೆಲಸ ನಿರ್ವಹಿಸಲು ಸಿದ್ಧರಿರದಿದ್ದದ್ದು ಪರಿಸ್ಥಿತಿ ಬದಲಾಗೆದೆ. ಆಶ್ರಮದಲ್ಲಿ ತರಬೇತಿ ಪಡೆದ ಬಾಲಕಿಯರು ಬಸ್ತಾರ್ನ ಬದಲಾವಣೆಯ ಹರಿಕಾರರಾಗಿ ಹಿರಿಯರು ಹೆಮ್ಮೆ ಪಡುವಂತೆ ಮಾಡಿದ್ದಾರೆ.
ಸೈನಿ ಈಗ ಹೊಗಳಿಕೆಗಳಿಗೆ ತೃಪ್ತರಾಗದೇ ಅವರು ತಮ್ಮ ವಿದ್ಯಾಥರ್ಿಗಳು ವೃತ್ತಿಪರ ಪರೀಕ್ಷೆಗಳಲ್ಲೂ ಉನ್ನತ ತೇರ್ಗಡೆ ಪಡೆದು ಇಂಜಿನಿಯರ್, ವೈದ್ಯರು ಮತ್ತು ಆಡಳಿತಾಧಿಕಾರಿಗಳಾಬೇಕೆಂದು ಕನಸು ಕಾಣುತ್ತಾರೆ. ಆಧುನಿಕ ಕೆಲಸಗಳ ಆಗತ್ಯಕ್ಕೆ ತಕ್ಕಂತೆ ನಮ್ಮ ಶಿಕ್ಷಣ ಗುಣಮಟ್ಟದಲ್ಲೂ ಬದಲಾವಣೆ ತರಲು ಪ್ರಯತ್ನಿಸುತ್ತಿದ್ದೇವೆ.ಎನ್ನುತ್ತಾರೆ ಸೈನಿ. ನಮ್ಮ ಬಹಳಷ್ಟು ವಿದ್ಯಾಥರ್ಿಗಳು ಒಃಃಖ, ಇಟಿರಟಿಜಜಡಿಟಿರ ಪರೀಕ್ಷೆಗಳಿಗೆ ಸಿದ್ಧರಾಗುತ್ತಿದ್ದಾರೆ. ಮಾನವಿಕ ವಿಷಯಗಳಿಗೆ  ಆಶ್ರಮಕ್ಕೆ ಸೇರುವ ವಿದ್ಯಾಥರ್ಿಗಳ ಸಂಖ್ಯೆ ತುಂಬ ವಿರಳ.

ಸೈನಿ ಕನಿಷ್ಟ 10 ವರ್ಷಗಳ ಕಾಲ ಬಸ್ತಾರ್ ನಲ್ಲಿ ಉಳಿದುಕೊಳ್ಳುವುದಾಗಿ ಭಾವೆಯವರಿಗೆ ಪ್ರಮಾಣ ಮಾಡಿದ್ದರು. ಆದರೆ 36 ವರ್ಷಗಳನ್ನು ಬಸ್ತಾರ್ನಲ್ಲಿ  ಕಳೆದಿರುವ ಬಸ್ತಾರ್ನ 'ತೌಜಿ' ತಮ್ಮ ಕೆಲಸ ಇನ್ನು ಮುಗಿದಿಲ್ಲ ಎನ್ನುತ್ತಾರೆ ಮತ್ತು ಬಸ್ತಾರ್ ಕೂಡ ಅವರನ್ನ ಅಲ್ಲಿಂದ ಬಿಟ್ಟು ಕೊಡಲು ಸಿದ್ಧವಿಲ್ಲ.

SOCIAL WORK NET EXAM

Saturday, September 22, 2012

Request to refer the book “Social Work and Social Welfare” to your institute and social work fraternity































Sub : Request to refer the book “Social Work and Social Welfare” to your institute and social work fraternity          

Niratanka is pleased to announce that a commendable book written by Prof. Shankar Pathak, titled “Social Work and Social Welfare” has been published by Niruta Publications, a branch of Niratanka.

Prof. Shankar Pathak, of the Department of Social Work, Delhi University has made a commendable innovative attempt to study the growth and development of social welfare in India from the lowest rung of the ladder of civilization to its present plans of attainment. This book will certainly fill the gap of dearth of indigenous literature on social work. It’s a must reading for teachers, students, research scholars, academicians in social work, and practitioners of professional social work.

Niratanka, hereby, Request to refer the book “Social Work and Social Welfare” to your institute and social work fraternity. Please suggest your friends, colleagues, students, lectures, libraries, and colleges to have a copy of it.

For more details visit the below link:

Contact for copies of the book:
Ramesha M H,
Office No: 080-23212309

Wednesday, May 30, 2012

Employee Retention Mohan. V. T.


Employee Retention
Mohan. V. T.
Lecturer, Hemadri college of 
management.  Tumkur

Employee retention is a process in which the employees are encouraged to remain with the organization for the maximum period of time or until the completion of the project. Employee retention is beneficial for the organization as well as for the employee. Employees today are different. They are not the ones who don’t have good opportunities in hand. As soon as they feel dissatisfied with the current employer or the job, they switch over to the next job. It is the responsibility of the employer to retain their best employees. If they don’t, they would be left with no good employees. A good employer should know how to attract and retain its employees. Employee retention would require lots of efforts, energy, and resources but the results are worth it.

Retention involves five major things:
            Compensation: Compensation constitutes the largest part of the employee retention process. The employees always have high expectations regarding their compensation packages. Compensation packages vary from industry to industry. So an attractive compensation package plays a critical role in retaining the employees. Compensation includes salary and wages, bonus, benefits, prerequisites, stock options, bonus, vacations, etc.
            A.Growth and Career: Growth and Development are the integral part of every individual’s career. If an employee cannot foresee his path of career development in his current organization, there are chances that he’ll leave the organization as soon as he gets an opportunity. The important factors in employee growth that an employee looks for himself are: Work profile, Personal Growth & Dreams, Training & Development.
           
            B. Support: Lack of support from management can sometimes serve as a reason for employee retention .Supervisor should support his subordinates in a way so that each one of them reaches their success. Management should try to focus on its employees and support them not only in their difficult times at work but also through the times of personal crisis.

            C. Importance of Relationship in Employee Retention Program: Sometimes the relationship with the management and the peers becomes the reason for an employee to leave the organization. The management is sometimes not able to provide an employee a supportive work culture and environment in terms of personal or professional relationships. To enhance good professional relationships at work, the management should keep the following points in mind: Respect for the individual, Relationships with the immediate managers, relationship with colleagues, promotes an employee based culture, individual development, etc.

            D. Organization Environment: If an organization manages people well, employee retention will take care of itself. Organizations should focus on managing the work environment to make better use of the available human assets. People want to work for an organization which provides, appreciation for work done, ample opportunities to grow, A friendly and cooperative environment, etc.
            Types of environment the employee needs in an organization: Learning environment, support environment, work environment.
2. Importance of Employee Retention
            Now a days  so much is being done by organizations to retain its employees, why is retention so important? Is it just to reduce the turnover costs? Well, the answer is a definite. It’s not only the cost incurred by a company that emphasizes the need of retaining employees but also the need to retain talented employees from getting poached.
           
            3. What Makes Employee Leave?
            Employees do not leave an organization without any significant reason. There are certain circumstances that lead  them leaving the organization. The most common reasons can be: Job is not what the employee expected to be, job & person mismatch, no growth opportunities, lack of appreciation, lack of trust & support in co-workers, seniors & management, stress from overwork & work life imbalance, better pay packages offered by other companies, new job offer.

4. Employee Retention Strategies
            The basic practices which should be kept in mind in the employee retention strategies are:
Hire the right people in the first place.
Empower the employees by giving them the authority to get things done.
Make employees realize that they are the most valuable asset of the organization.
Have faith in employees, trust them and respect them.
Provide them information and knowledge.
Keep providing them feedback on their performance.
Recognize and Appreciate their achievements.
Keep their morale high.
Create an environment where the employees want to work and have fun. 

These practices can be categorized in 3 levels:
            Low level: Appreciating and recognizing a well done job, Personalized well done and thank-you cards from supervisors, Congratulations e-cards or cards sent to spouses/families, Voicemails or messages from top management, Periodic days off for good performance, Rewards (gift, certificates, monetary and non monetary rewards), Recognizing professional as well as personal significant events ,etc.
            Medium level: Appreciating and recognizing a well done job, Special bonus for successfully completing firm-sponsored certifications, Benefit programs for family support, Flexible benefits, Dependents care assistance, Medical care reimbursement, Providing training and development and personal growth opportunities, Professional skills development, Individualized career guidance, etc.
            High level: Develop flexible schedules, part time schedules, and extended leaves of absences, develop support services, and understand employee needs, listen to the employee & show interest to their ideas, appreciate new ideas & reward risk taking, show support for individual initiatives, encourage employees creativity, encouraging professional training and development/personal growth opportunities, provide an environment of trust, regular feedbacks on organization’s goals & activities.

5. Retention Myths
            The process of retention is not as easy as it seems. There are so many tactics and strategies used in retention of employees by the organizations. There are many myths related to the employee retention process. These myths exist because the strategies being used are either wrong or are being used from a long time. They are as follows,   Employee leave organization for more pay, incentives can increase productivity, and employee runs away from the responsibilities, taking measures to increase the employees’ satisfaction will be expensive for the organizations.

6. Retention success MANTRAS
I.          Transparent Work Culture
II.        Quality of Work
III.       Supporting Employees
IV.       Feedback
V.        Communication between employee & employer
           
CONCLUSION:
            Finally, No doubt  retention levels are proving to be a serious problem for organizations. Concerted efforts to keep retention on tight leash will definitely help. In this context, attrition management has become the strategic focus and compelling necessity of businesses today. Thus, ignoring the problem of mounting attrition level can have devastating consequences for the business.  Organization can afford to ignore the problem at own peril. n