COURTESY -THE WEEK
http://week.manoramaonline.com/cgi-bin/MMOnline.dll/portal/ep/theWeekContent.do?contentId=13061199&programId=1073755753&BV_ID=@@@
ಬಸ್ತಾರ್ ಬಾಲಕಿಯರ ಬಾಪು: ಧರ್ಮಪಾಲ್ ಸೇನ್
ಹಮ್ ಬಸ್ತಾರ್ ಕಿ ನಾರಿ ಹೈ
ಫೂಲ್ ನಹಿ ಚಿಂಗಾರಿ ಹೈ
(ನಾವು ಬಸ್ತಾರ್ ಬಾಲಕಿಯರು
ಹೂವುಗಳಲ್ಲ; ಬೆಂಕಿ ಜ್ವಾಲೆಗಳು)
ಸುಮಾರು ಒಂದು ದಶಕದ ಹಿಂದೆ ಛತ್ತಿಸ್ಗಡದ ಬಸ್ತಾರ್ ಜಿಲ್ಲೆಯ ಜಗ್ದಾಲ್ಪುರ್ ಬಸ್ ನಿಲ್ದಾಣದಲ್ಲಿ ಈ ಮೇಲಿನ ಘೋಷಣೆಯೊಂದಿಗೆ ಕೆಲವು ಬಾಲಕಿಯರು ಬಸ್ ಕಂಡಕ್ಟರ್ ಒಬ್ಬನನ್ನು ಎದುರಿಸುತ್ತಿರುವಾಗ ನಕ್ಸಲೈಟ್ಗಳೆಂಬ ಸಂಶಯದಿಂದ ಬಂಧಿಸಲಾಯಿತು. ಆದರೆ ಅವರು ಬಸ್ ಸಿಬ್ಬಂದಿಯ ಅನುಚಿತ ವರ್ತನೆಯ ವಿರುದ್ಧ ಪ್ರತಿಭಟಿಸುತ್ತಿರುವ ಮಾತಾ ರುಕ್ಮಿಣಿ ಆಶ್ರಮದ ವಿದ್ಯಾಥರ್ಿಗಳೆಂದು ತಿಳಿದ ಕೂಡಲೆ ಬಿಡುಗಡೆಗೊಳಿಸಲಾಯಿತು.
ಬಸ್ತಾರ್ನಲ್ಲಿ ಧರ್ಮಪಾಲಹಳ್ಳಿಯ ಮಾತಾ ರುಕ್ಮಿಣಿ ಆಶ್ರಮ ಮತ್ತು ಸಂಬಂಧಿತ ಶಾಲೆಗಳು ವಿಶೇಷ ಸ್ಥಾನಮಾನ ಹೊಂದಿವೆ. 1976ರಲ್ಲಿ ಈ ಪ್ರದೇಶದ ಸಾಕ್ಷರತೆ ಕೇವಲ 1% ಇದ್ದಾಗ ಸಂಪ್ರದಾಯವನ್ನು ಎದುರುಹಾಕಿಕೊಂಡು ಆಶ್ರಮವು ಬಾಲಕಿಯರನ್ನು ಸುಶಿಕ್ಷಿತರನ್ನಾಗಿ ಮಾಡಲು ಮೊದಲಡಿಯಿಟ್ಟಿತು. ಆರಂಭದಲ್ಲಿ ಸಣ್ಣ ತೊರೆಯಾಗಿ ಹುಟ್ಟಿಕೊಂಡು, ಹಂತ ಹಂತವಾಗಿ ಪ್ರವಾಹೋಪಾದಿಯಲ್ಲಿ ಬೆಳೆಯಿತು. ಬಸ್ತಾರ್ನ 39,000 ಚ.ಕಿ.ಮಿ, ಪ್ರದೇಶದಲ್ಲಿ 37 ವಸತಿ ಶಾಲೆಗಳನ್ನು ಸ್ಥಾಪಿಸುವುದರೊಂದಿಗೆ ಆಶ್ರಮವು 20,000 ಬಾಲಕಿಯರನ್ನು ಸುಶಿಕ್ಷಿತರನ್ನಾಗಿ ಮಾಡಿದೆ.
ಬಸ್ತಾರ್ನ ಅದೃಷ್ಟದೊಂದಿಗಿನ ಹೋರಾಟವು ಪೂಜ್ಯ ಗಾಂಧೀವಾದಿ ವಿನೋಬಾ ಭಾವೆಯವರ ಶಿಷ್ಯರಾದ ಧರ್ಮಪಾಲ ಸೈನಿಯವರ ಮೂಲಕ ಶುರುವಾಯಿತು. ಸೈನಿ 1930 ರಲ್ಲಿ ಧಾರ ಸಂಸ್ಥಾನದಲ್ಲಿ ಜನಿಸಿದರು. ಅದು ಈಗ ಮಧ್ಯಪ್ರದೇಶದ ಒಂದು ಭಾಗವಾಗಿದೆ. ಅವರ ತಂದೆ ಧಾರ್ನಲ್ಲಿ ತೋಟಗಾರಿಕೆ ಇಲಾಖೆಯ ಮುಖ್ಯಸ್ಥರಾಗಿದ್ದರು. ಸೈನಿ ನಾಲ್ಕು ಮಕ್ಕಳಲ್ಲಿ ಎರಡನೆಯವರು. ವಾಣಿಜ್ಯ ಶಿಕ್ಷಕರಾಗಿದ್ದ ವಿದ್ಯಸಾಗರ್ ಪಾಂಡೆಯವರ ಸಂಪರ್ಕಕ್ಕೆ ಬರುವವರೆಗೆ ಅವರು ಒಬ್ಬ ಸಾಮಾನ್ಯ ವಿದ್ಯಾಥರ್ಿಯಾಗಿದ್ದರು. ಪಾಂಡೆಯವರಿಂದ ಮಹಾತ್ಮ ಗಾಂಧೀ ತತ್ತ್ವಗಳಿಗೆ ಪರಿಚಯಸಲ್ಪಟ್ಟರು.
ಮಧ್ಯಪ್ರದೇಶ ಮತ್ತು ಗುಜರಾತ್ ರಾಜ್ಯಗಳ ಭಿಲ್ ಆದಿವಾಸಿಗಳಿಗಾಗಿ ಕೆಲಸ ನಿರ್ವಹಿಸುತ್ತಿರುವ ಭಿಲ್ ಸೇವಾಸಂಘವನ್ನು ಒಳಗೊಂಡು ಅನೇಕ ಗಾಂಧಿ ಸೇವಾ ಸಂಸ್ಥೆಗಳೊಂದಿಗೆ ಸೈನಿ ಕಾರ್ಯನಿರ್ವಹಿಸಿದ್ದಾರೆ. ಆದಿವಾಸಿಗಳೊಂದಿಗೆ ಅನೇಕ ವರ್ಷಗಳನ್ನು ಕಳೆದಿರುವ ಸೈನಿ ಅವರ ಜೀವನದಲ್ಲಿ ಬದಲಾವಣೆ ತರುವ ಮಹತ್ತರವಾದದ್ದನ್ನು ಮಾಡಬೇಕೆಂಬ ಆಶಯ ಹೊಂದಿದ್ದರು. 60ರ ದಶಕದಲ್ಲಿ ಬಸ್ತಾರ್ ಬಾಲಕಿಯರ ಕುರಿತು ಹಿಂದಿ ಪತ್ರಿಕೆಯಲ್ಲಿ ಓದಿದ ಒಂದು ವರದಿ ಅವರ ಮನದಲ್ಲಿ ಉಳಿದಿತ್ತು. ದಸರಾ ಹಬ್ಬವನ್ನು ಮುಗಿಸಿ ಹಿಂದಿರುಗುತ್ತಿದ್ದ ಕೆಲವು ಬಾಲಕಿಯರ ಮೇಲೆ ಪುಂಡರು ಮಾಡಿದ ಶೋಷಣೆಯ ವರದಿ ಅದಾಗಿತ್ತು. ಬಾಲಕಿಯರು ಆ ಪುಂಡರಿಗೆ ತಕ್ಕ ಪಾಠ ಕಲಿಸಿದ್ದರು.
ಸೈನಿ ಬಸ್ತಾರ್ನ ಈ ಬಾಲಕಿಯರಿಗೆ ಸರಿಯಾದ ಮಾರ್ಗದರ್ಶನ ನೀಡಿ ರಾಷ್ಟ್ರದ ಅಭಿವೃದ್ಧಿಯಡೆಗೆ ಇವರ ಸಾಮಥ್ರ್ಯವನ್ನ ಪ್ರವಹಿಸುವ ಯೋಚನೆ ಮಾಡಿದರು. 1976ರಲ್ಲಿ ಬಸ್ತಾರ್ ಮಧ್ಯಪ್ರದೇಶದ ಒಂದು ಭಾಗವಾಗಿತ್ತು. ಕೇರಳ ಮತ್ತು ಬೆಲ್ಜಿಯಂ ಗಳಿಗಿಂತ ವಿಸ್ತಾರವಾಗಿದ್ದ ಬಸ್ತಾರ್ ಶ್ರೀಮಂತ ಖನಿಜ ಸಂಪತ್ತು ಹೊಂದಿದ್ದಾಗಿಯೂ, ಮುಖ್ಯವಾಗಿ ಅದೊಂದು ದಟ್ಟ ಅರಣ್ಯವಾಗಿತ್ತು. ನಮಗೆ ಗೊತ್ತಿರುವ ನಾಗರೀಕತೆ ದಟ್ಟ ಅರಣ್ಯದಲ್ಲಿ ತನ್ನ ಮೊದಲ ಹೆಜ್ಜೆ ಇಡುವುದರಲ್ಲಿತು.್ತ ಸ್ಥಳೀಯ ಜನರು ಬಟ್ಟೆ ಧರಿಸುತ್ತಿರಲಿಲ್ಲ. ಶಿಕ್ಷಣ, ರಸ್ತೆಗಳಂತೂ ದೂರದ ಮಾತಾಗಿದ್ದವು, ಸಕರ್ಾರಕ್ಕಂತೂ ಅಶಿಸ್ತಿನ ನೌಕರರನ್ನು ವರ್ಗಮಾಡುವ ಜಣಟಠಿಟಿರ ರಡಿಠಣಟಿಜ ಆಗಿತ್ತು ಬಸ್ತಾರ್. ಬಾಲಕಿಯರನ್ನ ಸುಶಿಕ್ಷತರನ್ನಾಗಿ ಮಾಡುವುದರ ಮೂಲಕ ಮಾತ್ರ ಬಸ್ತಾರನ್ನು ರಕ್ಷಿಸಲು ಸಾಧ್ಯ ಎಂದು ಸೈನಿ ಮನಗಂಡಿದ್ದರು. ಆದ್ದರಿಂದ ಬಾಲಕಿಯರ ಶಿಕ್ಷಣಕ್ಕಾಗಿ ಸಮಪರ್ಿಸಿಕೊಳ್ಳುವ ಒಂದು ಆಶ್ರಮ ಸ್ಥಾಪಿಸಲು ಅನುಮತಿ ಕೋರಿ ತಮ್ಮ ಗುರುಗಳ ಬಳಿಗೆ ಹೋದರು.
ಭಾವೆ ನಿರಾಕರಿಸಿದರು. ಶಿಷ್ಯ ಧೃತಿಗೆಡಲಿಲ್ಲ. ಪುನಾರಾವತರ್ಿತ ವಿನಂತಿ ಮತ್ತು ಸವಿವರ ಯೋಜನೆಗಳೊಂದಿಗೆ ಗುರುವನ್ನೊಪ್ಪಿಸುವ ತಮ್ಮ ಪ್ರಯತ್ನವನ್ನು ಮುಂದುವರಿಸಿದರು. ಅಂತಿಮವಾಗಿ ಒಂದು ಷರತ್ತಿನೊಂದಿಗೆ ಭಾವೆ ಸಮ್ಮತಿಸಿದರು. ಸೈನಿ ಕನಿಷ್ಠ ಹತ್ತು ವರ್ಷಗಳ ಕಾಲ ಆಶ್ರಮದಲ್ಲೇ ಉಳಿಯಬೇಕೆಂದು ವಚನ ತೆಗೆದುಕೊಂಡರು. ಸೈನಿ ಯಾವುದೇ ಸ್ಥಳದಲ್ಲಾದರೂ ಕೆಲವು ತಿಂಗಳಿಗಿಂತ ಹೆಚ್ಚಿಗೆ ಉಳಿದುಕೊಳ್ಳುತ್ತಿರಲಿಲ್ಲವಾದ್ದರಿಂದ ಅನೇಕರು ಈ ವಚನವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಭಾವೆಯವರಿಗೆ ತಮ್ಮ ಶಿಷ್ಯನ ಮೇಲೆ ಅಪಾರ ನಂಬಿಕೆ ಹೊಂದಿದ್ದು ಅವನಿಗೆ ಮುಖ್ಯಮಂತ್ರಿ ಶಾಮಚರಣ ಶುಕ್ಲಾರಿಗೆ ಪರಿಚಯಿಸುವ ಕೈ ಬರಹದ ಪತ್ರವನ್ನು ನೀಡಿದರು. ತಮ್ಮ ವೈಯುಕ್ತಿಕ ಬಳಕೆಗಾಗಿ ಎಂದಿಗೂ ಹಣ ಇಟ್ಟುಕೊಳ್ಳದ ಭಾವೆಯವರು ಮುದುಡಿದ ಐದು ರೂಪಾಯಿ ನೋಟನ್ನು ಸೈನಿಗೆ ನೀಡಿದರು. ಅದು ಆಶ್ರಮದ ಮೊದಲ ದೇಣಿಗೆ ಆಗಿತ್ತು.
ಬಸ್ತಾರ್ನ ಆದಿವಾಸಿಗಳನ್ನು ಸುಶಿಕ್ಷಿತರನ್ನಾಗಿಸುವುದು ವಿನೋಬಾರವರ ಕನಸಾಗಿತ್ತು. ಆ ಕಾರಣಕ್ಕಾಗಿಯೇ ನಾನು ಅವರ ತಾಯಿ ಮಾತಾ ರುಕ್ಮಿಣಿ ಭಾವೆ' ಯವರ ಹೆಸರಿನಲ್ಲಿ ಆಶ್ರಮ ಸ್ಥಾಪಿಸಲು ವಿನಂತಿಸಿದೆ. ಅವರ ಆರಂಭಿಕ ನಿರಾಕರಣೆ ನನ್ನ ಸಹನೆಯ ಪರೀಕ್ಷೆಯಾಗಿತ್ತು ಈಗ ತೌಜಿ(ಚಿಕ್ಕಪ್ಪ) ಎಂದು ವಾತ್ಸಲ್ಯದಿಂದ ಕರೆಸಿಕೊಳ್ಳುವ ಸೈನಿ ಹೇಳುತ್ತಾರೆ.
ಸೈನಿ ಬಸ್ತಾರ್ನ ಕನಸು ಸಾಕಾರಗೊಳಿಸಲು ಆರಂಭಿಸಿದಾಗ 46 ವರ್ಷದ ಬ್ರಹ್ಮಚಾರಿ. ಆಶ್ರಮಕ್ಕಾಗಿ ಜಾಗ ಹುಡುಕುವುದು ಅವರ ಮೊದಲ ಕಾರ್ಯವಾಗಿತ್ತು. ಶಾಲೆಗಳಲ್ಲಿ ಬಾಲಕಿಯರ ದಾಖಲಾತಿಗಾಗಿ ಪರದಾಡುತ್ತಿದ್ದ ಶಿಕ್ಷಣ ಇಲಾಖೆ ಸೈನಿಯವರಿಗೆ ಬಾಲಕಿಯರ ವಸತಿ ಪ್ರಾಥಮಿಕ ಶಾಲೆಯನ್ನು ಸ್ಥಾಪಿಸಲು ಹರ್ಷದಿಂದ ಮೂಲ ಸೌಕರ್ಯವನ್ನು ಒದಗಿಸಲು ಮುಂದಾಯಿತು. ಡಿಸೆಂಬರ್ 13, 1976 ರಲ್ಲಿ ಇಬ್ಬರು ಮಹಿಳಾ ಶಿಕ್ಷಕಿಯರು ಮತ್ತು ಇಬ್ಬರು ಸಹಾಯಕ ಸಿಬ್ಬಂದಿಯೊಂದಿಗೆ ಮೊದಲ ಶಾಲೆ ಆರಂಭವಾಯಿತು. ಹೀಗಿದ್ದವು ಒಂದು ಮಹಾನ್ ಯೋಜನೆಯ ಆರಂಭಗಳು.
ಅನೇಕ ಸಮಸ್ಯೆಗಳು ಸೈನಿ ಅವರ ಮುಂದಿದ್ದವು. ಹಳ್ಳಿಗರಿಗೆ ಸಾಂಸ್ಕೃತಿಕ ಆಘಾತವೇ ದೊಡ್ಡ ಮಟ್ಟದ್ದಾಗಿತ್ತು. ಸೇವಕಿಯಾಗಿ ಸೇರಿದ ಆದಿವಾಸಿ ಮಹಿಳೆ ರವಿಕೆ ತೊಡಲು ನಿರಾಕರಿಸಿದರು. ಅದು ಅವಳನ್ನು ನಾಚಿಕೆಗೀಡು ಮಾಡಿತು. ಬಸ್ತಾರ್ನ ಆದಿವಾಸಿ ಸಂಸ್ಕೃತಿಯಲಿ,್ಲ ದೇಹದ ಮೇಲ್ಬಾಗದಲ್ಲಿ ಬಟ್ಟೆ ಧರಿಸುವುದು ಅನುಚಿತವಾದುದಾಗಿತ್ತು. ಎನ್ನುತ್ತಾರೆ ಸೈನಿ.
ಮೂರು ತಿಂಗಳು ಕಾದರೂ ಕೇವಲ ನಾಲ್ಕು ಕುಟುಂಬಗಳು ತಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ಒಪ್ಪಿದರು. ಜಗ್ಗದ ಸೈನಿ ಮಹಿಳಾ ಶಿಕ್ಷಕಿಯರೊಂದಿಗೆ ಪೋಷಕರನ್ನೊಪ್ಪಿಸಲು ಊರಿಂದೂರಿಗೆ ಅಲೆದರು. ನಾವು ಅಪಮಾನಿತರಾದೆವು ಮತ್ತು ಕೆಲವು ಬಾರಿ ಬೆದರಿಸಲ್ಪಟ್ಟೆವು ಆದರೆ ಕೆಲವು ಒಳ್ಳೆಯ ಮನಸ್ಸಿನ ಊರ ಮುಖಂಡರು ನಮ್ಮ ಕಾಳಜಿಯನ್ನು ಒಪ್ಪಿಕೊಂಡರು ಎಂದು ಸೈನಿ ಸ್ಮರಿಸುತ್ತಾರೆ.
ಸಾರ್ವಜನಿಕ ಬಸ್ಸುಗಳಲ್ಲಿ ಅರೆ ಬೆತ್ತಲೆಯಾಗಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನು ತಪ್ಪಿಸಲು ಶಿಕ್ಷಕರು ಮಕ್ಕಳನ್ನು ಮನೆಯಲ್ಲಿಯೇ ಸರಿಯಾಗಿ ಬಟ್ಟೆ ಧರಿಸಿ ಬರುವಂತೆ ಮಾಡಿದರು. ಹೊಸ ಬಟ್ಟೆ ಧರಿಸಿ, ಅಂದವಾಗಿ ತಲೆ ಬಾಚಿಕೊಂಡು ಶಾಲೆಗೆ ಬರುವ ಮಕ್ಕಳು ಸುಂದರವಾದ ಗೊಂಬೆಗಳಂತೆ ಕಾಣುವುದನ್ನು ನೋಡಿ ಪೋಷಕರು ಆನಂದಿತರಾದರು. ಲಚ್ಚಾಂಧೆ ನಾಗ್, ಒರ್ವ ಸಕರ್ಾರಿ ಶಾಲಾಶಿಕ್ಷಕಿ , ಮೂರು ದಶಕಗಳ ಹಿಂದೆ ಸೈನಿ ಮತ್ತವರ ತಂಡ ಅವಳನ್ನು ಶಾಲೆಗೆ ಕಳುಹಿಸಲು ಅವಳ ತಂದೆಯನ್ನು ಒಪ್ಪಿಸಿದುದನ್ನು ಸ್ಮರಿಸುತ್ತಾಳೆ. ಅವಳ ಮಗಳು ದೀಪಿಕಾ ಆಶ್ರಮದಲ್ಲಿದ್ದಾಳೆ. ನಾನು ಈ ಆಶ್ರಮ ಮತ್ತು ತೌಜಿ(ಸೈನಿ) ಯನ್ನು ಚೆನ್ನಾಗಿ ಬಲ್ಲೆ ನನ್ನ ಮಗಳು ನಾನು ಪಡೆದ ಶಿಕ್ಷಣ ಮತ್ತು ಮೌಲ್ಯಗಳನ್ನು ಅಂತಗರ್ಿಸಿಕೊಂಡು ಯಶಸ್ವಿಯಾಗಬೇಕು. ಎಂದು ಹೇಳುತ್ತಾರೆ ನಾಗ್. ತಮ್ಮ ಹೆಣ್ಣು ಮಕ್ಕಳು ಸುರಕ್ಷಿತ ಕೈಗಳಲ್ಲಿವೆ ಮತ್ತು ಅವರು ಜ್ಞಾನ ಮತ್ತು ಹೊಸ ಕೌಶಲ್ಯಗಳನ್ನು ಅಜರ್ಿಸಿಕೊಳ್ಳುತ್ತಿದ್ದಾರೆ ಎಂದು ಪೋಷಕರಿಗೆ ಅರಿವಾದೊಡನೆ ವಿದ್ಯಾಥರ್ಿಗಳ ಸಂಖ್ಯೆ ಹೆಚ್ಚಾಯಿತು. ತಕ್ಷಣ ಮತ್ತೊಂದು ಶಾಲೆ ಬಸ್ತಾರ್ನ ದಕ್ಷಿಣದ ಬಾಸರ್ೂರ್ನಲ್ಲಿ ಆರಂಭವಾಯಿತು. ಬಾಸರ್ೂರ್ ನಕ್ಸಲರ ಹಿಡಿತದಲ್ಲಿರುವ ಅನಾದರಣೀಯ ಮತ್ತು ತಲುಪಲಾಗದ ಪ್ರದೇಶ ಅಬುಜ್ಮರ್ ಬೆಟ್ಟದತಪ್ಪಲಿನಲ್ಲಿದೆ.
ಸೈನಿಯವರ ಯಶಸ್ಸಿನಿಂದ ಆಕಷರ್ಿತರಾದ ಮುಖ್ಯಮಂತ್ರಿ ಅಜರ್ುನ್ ಸಿಂಗ್ ಇಂತಹ ಮತ್ತಷ್ಟು ಶಾಲೆಗಳನ್ನು ಸ್ಥಾಪಿಸಲು ಕೋರಿದರು. ಮತ್ತೆ ನಾಲ್ಕು ಶಾಲೆಗಳನ್ನು ಸ್ಥಾಪಿಸಲು ಸಂಪನ್ಮೂಲ ಮತ್ತು ಭೂಮಿಯನ್ನು ನೀಡಿದಾಗ ಒಟ್ಟು ಶಾಲೆಗಳ ಸಂಖ್ಯೆ 6 ಆಯಿತು. ಬಸ್ತಾರ್ ಮತ್ತು ಅದರ ಸುತ್ತಮುತ್ತ ನಕ್ಸಲ್ ಪ್ರಭಾವ ಹೆಚ್ಚಾಗಿತ್ತು. ಈ ಕಾರಣಕ್ಕಾಗಿ 1988ರ ಸುಮಾರಿನಲ್ಲಿ ಯಾವ ಸಕರ್ಾರಿ ಶಿಕ್ಷಕರು ಅಲ್ಲಿಗೆ ಹೋಗಲು ಮುಂದಾಗಲಿಲ್ಲ. ಬಹಳಷ್ಟು ಶಾಲೆಗಳು ಮುಚ್ಚಿದ್ದವು. ಮತ್ತೆ ಸಕರ್ಾರ ಸೈನಿಯವರ ನೆರವಿನತ್ತ ಧಾವಿಸಿ ಇಂತಹ 30 ಶಾಲೆಗಳ ನಿಯಂತ್ರಣವನ್ನು ಅವರಿಗೆ ನೀಡಿತು. 2000ದಲ್ಲಿ ಛತ್ತೀಸ್ಗರ್ ಹೊಸ ರಾಜ್ಯವಾದಾಗಿನಿಂದ ಬಸ್ತಾರ್ ಮತ್ತು ಅದರ ಶಾಲೆಗಳು ಸಕರ್ಾರದ ಗಮನವನ್ನು ಸೆಳೆಯುತ್ತಿವೆ. ಬಾಲಕಿಯರನ್ನು ಸುಶಿಕ್ಷಿತ ಮತ್ತು ಸಬಲರನ್ನಾಗಿ ಮಾಡುವುದು ಸೈನಿಯವರ ಧ್ಯೇಯವಾಗಿದ್ದರೂ ಬಸ್ತಾರ್ನ ಬಾಲಕರನ್ನು ಅವರು ನಿರ್ಲಕ್ಷಿಸಿಲ್ಲ. ಆಶ್ರಮದಿಂದ ನಡೆಯುವ ಒಟ್ಟು 37 ಶಾಲೆಗಳಲ್ಲಿ 16 ಬಾಲಕರ ಶಾಲೆಗಳಾಗಿವೆ.
ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದಕ್ಕೆ ಈ ಶಾಲೆಗಳು ನಡೆದು ಬಂದ ಚರಿತ್ರೆಯೇ ಸಾಕ್ಷಿ. ಇವುಗಳಲ್ಲಿ ಬಹಳಷ್ಟು ಶಾಲೆಗಳು 100% ಪಲಿತಾಂಶ ಪಡೆಯುತ್ತವೆ. ದುಲರ್ಿ ಮತ್ತು ಚಿರಗಾಂವ್ ಶಾಲೆಗಳು ಕಳೆದು 12 ವರ್ಷಗಳಿಂದಲೂ 100% ಪಲಿತಾಂಶ ಪಡೆಯುತ್ತಿದ್ದು ಎಲ್ಲ ವಿದ್ಯಾಥರ್ಿಗಳು ಪ್ರಥಮ ದಜರ್ೆಯಲ್ಲಿ ಪಾಸಾಗುತ್ತಿದ್ದಾರೆ.
5 ಅಡಿ 4 ಇಂಚು ಎತ್ತರದ ಸೈನಿ ಯಾವಾಗಲೂ ಖಾದಿ ಬಟ್ಟೆಗಳಾದ ಕುತರ್ಾ ಪೈಜಾಮ ಧರಿಸುತ್ತಿದ್ದು ಪುಸ್ತಕ ಮತ್ತು ಮುಂದಿನ ಋತುವಿಗೆ ಬಿತ್ತಲು ಬೇಕಾಗಿರುವ ಬೀಜಗಳಿರುವ ಚೀಲಗಳಿಂದ ತುಂಬಿರುವ ಎರಡು ಕೋಣೆಗಳ ಕಚ್ಚಾ ಮನೆಯಲ್ಲಿ ವಾಸಿಸುತ್ತಾರೆ. ಪ್ರತಿದಿನ ಐದು ಗಂಟೆಗೆ ಎದ್ದು ಮನೆಯನ್ನು ಶುಚಿಗೊಳಿಸಿ ಪ್ರಾರ್ಥನೆಗೆ ವಿದ್ಯಾಥರ್ಿಗಳೊಂದಿಗೆ ಭಾಗವಹಿಸುತ್ತಾರೆ. ವಿದ್ಯಾಥರ್ಿಗಳೂ ಇದನ್ನೇ ಅನುಸರಿಸುತ್ತಾರೆ. ಧ್ಯಾನ, ಶ್ಲೋಕ ಮತ್ತು ಐದು ನಿಮಿಷಗಳ ಸೈನಿಯವರ ಪ್ರವಚನಗಳಿಂದ ಕೂಡಿದ ಪ್ರಾರ್ಥನೆ ಗಾಂಧೀಜಿಯವರ ಬೆಳಗಿನ ಪ್ರಾರ್ಥನೆಯನ್ನ ಹೋಲುತ್ತದೆ. ಗಾಂಧೀಜಿ ಮತ್ತು ಭಾವೆಯವರ ವಿಚಾರಗಳು ಸೈನಿಯವರ ಪ್ರವಚನದ ಪ್ರಧಾನ ಭಾಗವಾಗಿದ್ದರೂ, ಪ್ರಚಲಿತ ವಿದ್ಯಾಮಾನ ಮತ್ತು ವ್ಯಕ್ತಿಗಳ ಕುರಿತು ಚಚರ್ಿಸುತ್ತಾರೆ. ಬದಲಾಗುತ್ತಿರುವ ಸಮಯದ ಬಗ್ಗೆ ನನಗೆ ಅರಿವಿದೆ. ಹಾಗಾಗಿ ನನ್ನ ಪ್ರವಚನದಲ್ಲಿ ಹೊಸ ಅಂಶವನ್ನು ಸೇರಿಸಿದ್ದೇನೆ. ಅಲ್ಲಿ ಆಧುನಿಕ ನಾಯಕರಾದ ಕಲ್ಪನ ಚಾವ್ಲ ಮತ್ತು ಎ.ಪಿ.ಜೆ ಅಬ್ದುಲ್ ಕಲಾಂ ಮುಂತಾದವರ ಬಗ್ಗೆ ಚಚರ್ಿಸುತ್ತೇನೆ, ಎನ್ನುತ್ತಾರೆ ಸೈನಿ.
ಕ್ರೀಡೆಯನ್ನು ಉತ್ತೇಜಿಸುವ ಕಟಚಿಥಿ ಚಿಟಿಜ ಟಜಚಿಡಿಟಿ ಮಾದರಿಯ ಶಿಕ್ಷಣದಲ್ಲಿ ನಂಬಿಕೆಯಿರಿಸಿರುವ ಸೈನಿ ಆರಂಭಿಕ ವರ್ಷಗಳಲ್ಲಿ ವಿದ್ಯಾಥರ್ಿಗಳನ್ನು ಆಕಷರ್ಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೈನಿ ಸ್ವತಃ ಒಬ್ಬ ಅಥ್ಲೆಟಿಕ್ ಚಾಂಪಿಯನ್. ಕ್ರೀಡೆ ಮತ್ತು ಆಟಗಳಿಗೆ ಅವರು ನೀಡಿದ ಪ್ರಾಧಾನ್ಯತೆಯಿಂದ ಆಶ್ರಮ ಮತ್ತು ಅದರ ವಿದ್ಯಾಥರ್ಿಗಳಿಗೆ ಸಾಕಷ್ಟು ಅನುಕೂಲವಾಗಿದೆ. ಕ್ರೀಡೆಗಳಲ್ಲಿ ಬಾಲಕಿಯರು ಭಾಗವಹಿಸುವುದನ್ನು ಪ್ರೋತ್ಸಾಹಿಸಿದ ಅವರು ಬಾಸ್ತಾರ್ನ ಕೆಲವು ಅತ್ಯುತ್ತಮ ಕ್ರೀಡಾಪಟುಗಳನ್ನು ಬೆಳೆಸುವುದರಲ್ಲಿ ಕಾರಣಿಭೂತರಾಗಿದ್ದಾರೆ. ಮರಿಯಾ ಮತ್ತು ಗೊಂಡ ಆದಿವಾಸಿ ಸಮುದಾಯಗಳ ಸಾಮಥ್ರ್ಯವನ್ನು ಅರಿತಿರುವ ಅವರು, ಬಾಲಕಿಯರನ್ನ ಸಾಂಪ್ರದಾಯಕ ಶಿಸ್ತುಗಳಾದ ಮ್ಯರಾಥನ್, ಬಿಲ್ವಿದ್ಯೆ ಮತ್ತು ಕಬಡ್ಡಿಗಳಲ್ಲಿ ಬೆಳಸಿದ್ದಾರೆ. ಕೆಲವೇ ಅವಧಿಯಲ್ಲಿ ಬಾಲಕಿಯರು ಸಮರ್ಥರಾಗಿ ವಿಶೇಷವಾಗಿ ಮ್ಯಾರಥಾನ್ನಲ್ಲಿ ಬಹುಮಾನದ ಮೇಲೆ ಬಹುಮಾನ ಪಡೆದಿದ್ದಾರೆ. ಇದರಿಂದ ಪ್ರೇರಿತರಾದ ಪೋಷಕರು, ಮ್ಯಾರಥಾನ್ನಲ್ಲಿ ತಮ್ಮ ಮಕ್ಕಳು ಭಾಗವಹಿಸಲು ಅನುಮತಿಸಿದರು. ಬೆಳೆ ಕಟಾವು ಮಾಡುವುದನ್ನು ಬಿಡಿಸಿ ಅವರನ್ನ ಪ್ರೋತ್ಸಾಹಿಸಿದ್ದಾರೆ ಕೇವಲ ಮ್ಯಾರಥಾನ್ ಒಂದರಲ್ಲೇ ಬಾಲಕಿಯರು 30 ಲಕ್ಷ ಬೆಲೆಯ ಬಹುಮಾನ ಪಡೆದಿರುವುದು ಆಶ್ರಮದ ದೊಡ್ಡ ಗರಿಮೆ.
ಆಶ್ರಮದಲ್ಲಿ ಆದಿವಾಸಿ ನಂಬಿಕೆಗಳನ್ನು ಗೌರವಿಸಲಾಗುತ್ತಿದ್ದು, ಹಳೆಯದರೊಂದಿಗೆ ಹೊಸ ವಿಚಾರಗಳನ್ನು ಪ್ರಯತ್ನಿಸಲು ಮತ್ತು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಲಾಗುತ್ತದೆ. ಸೈನಿ ಒಂದು ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ. ಒಂದು ಸಲ ಒಬ್ಬ ವಿದ್ಯಾಥರ್ಿಯ ತಂದೆ ಅನಾರೋಗ್ಯಕ್ಕೀಡಾದರು. ದೇವರ ಆಜ್ಞೆ ಆಗುವವರೆಗೂ ಅವನು ಏನನ್ನು ಸೇವಿಸುತ್ತಿರಲಿಲ್ಲ. ನಾನು ಹೇಗೊ ಮಾಡಿ ಪ್ಯಾರಸೆಟಮಾಲ್ ಮಾತ್ರೆ ಕರಗಿಸಿದ ನೀರನ್ನು ಪ್ರಸಾದವಾಗಿ ಕುಡಿಸಿದೆ. ಅದು ಪರಿಣಾಮ ಬೀರಿತು. ಆರಂಭಿಕ ವರ್ಷಗಳಲ್ಲಿ ಸೈನಿ ವಿದ್ಯಾಥರ್ಿಗಳಿಗೆ ಶಾಲೆಯಿಂದ ರಜೆ ಪಡೆದು ಬೆಳೆಕಟಾವು ಮಾಡುವಲ್ಲಿ ಪೋಷಕರಿಗೆ ನೆರವಾಗಲು ಬಿಡುತ್ತಿದ್ದರು. ಇವರ ಸಹಾಯ ಕೃಷಿಗೆ ಅವಶ್ಯವಾಗಿತ್ತು. ಇದು ಪರಸ್ಪರ ನಂಬುಗೆಯ ವಾತಾವರಣವನ್ನು ಸೃಷ್ಟಿಸಲು ಕಾರಣವಾಯಿತು. ಇದು ಆಶ್ರಮವನ್ನು ದೂರದ ಪ್ರದೇಶಗಳಿಗೆ ಕರೆದೊಯ್ಯಿತು ಎನ್ನುತ್ತಾರೆ ಸೈನಿ.
ಪ್ರಾಯೋಗಿಕ ನೆಲೆಯಲ್ಲಿ ಆಶ್ರಮ ಶಾಲೆಗಳಿಗೆ ಶಿಕ್ಷಕರ ನೇಮಕಾತಿ ಮಾಡಲಾಗುತ್ತದೆ, ಆಯ್ಕೆ ಸಮಿತಿ ಅಭ್ಯಥರ್ಿಗಳ ಪಟ್ಟಿ ತಯಾರಿಸಿದ ಮೇಲೆ ಅವರು ಕೆಲವು ದಿನಗಳವರೆಗೆ ತರಗತಿ ತೆಗೆದುಕೊಳ್ಳಲು ಮತ್ತು ಮಕ್ಕಳೊಂದಿಗೆ ಸಮಯ ಕಳೆಯಲು ಸೂಚಿಸಲಾಗುತ್ತದೆ. ಅಭ್ಯಥರ್ಿಗಳ ಭೋದನೆಯಿಂದ ತೃಪ್ತರಾಗಿರುವುದನ್ನು ವಿದ್ಯಾಥರ್ಿಗಳಿಂದ ಕೇಳಿ ತಿಳಿಯುತ್ತೇವೆ ಎನ್ನುತ್ತಾರೆ ಸೈನಿ. ವಿದ್ಯಾಥರ್ಿಗಳ ತೀಪರ್ು ಶಿಕ್ಷಕರ ಅಂತಿಮ ನೇಮಕಾತಿಯಲ್ಲಿ ಪ್ರಧಾನವಾಗಿರುತ್ತದೆ.
ಸೈನಿಯವರ ಶಿಸ್ತು ಮತ್ತು ಸಂಯಮಗಳಿಗೆ ಬಹಳಷ್ಟು ಶಿಕ್ಷಕರಿಗೆ ಸುಲಭವಾಗಿ ಒಗ್ಗಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ (ಅವರು ಕೆಲಸ ಶುರುಮಾಡಿದಾಗ). ಉದಾಹರಣೆಗೆ ಆಶ್ರಮದ ಸಿಬ್ಬಂದಿಗಳು ವಿದ್ಯಾಥರ್ಿಗಳು ಬಳಸಿದ ಬ್ರಾಂಡ್ನ ವಸ್ತುವನ್ನು ಬಳಸುವಂತಿರಲಿಲ್ಲ. ಒಂದು ನಿದರ್ಿಷ್ಟ ಬ್ರಾಂಡಿನ ಸೋಪನ್ನು ವಿದ್ಯಾಥರ್ಿಗಳು ಬಳಸಿದರೆ, ಸಿಬ್ಬಂದಿ ಬೇರೆ ಬ್ರಾಂಡಿನ ಸೋಪ್ ಬಳಸಬೇಕಾಗಿತ್ತು. ವಿದ್ಯಾಥರ್ಿಗಳಿಗಾಗಿ ಇಟ್ಟಿರುವ ವಸ್ತುಗಳು ದುರ್ಬಳಕೆಯಾಗಬಾರದೆಂಬ ಕಾರಣಕ್ಕಾಗಿ ಈ ನಿಯಮ ಮಾಡಲಾಗಿತ್ತು.
ಸೈನಿಯವರ ಪ್ರಯತ್ನಗಳಿಗೆ ಸಕರ್ಾರದ ಬೆಂಬಲವಿದ್ದಾಗ್ಯೂ ತಮ್ಮ ಪಾಲಿನ ಖಚಿಡಿಜಗೆ ತೊಂದರೆಯಾಗುತ್ತದೆ ಎಂದು ಕೆಳ ಮತ್ತು ಮಧ್ಯಮ ವರ್ಗದ ಆಡಳಿತಶಾಹಿ ಅವರನ್ನ ಮತ್ತು ಅವರ ಶಾಲೆಗಳನ್ನು ವಿರೋಧಿಸುತ್ತಿದ್ದರು. ಭ್ರಷ್ಟಾಚಾರದ ವಿರುದ್ಧ ಅವರ ಕಠಿಣ ನಿಲುವು ಅವರನ್ನ ಸಿಟ್ಟಿಗೇಳಿಸುತ್ತಿದ್ದವು.
ಒಂದು ಬಾರಿ ಗಟಿಠಟಿ ಅಠಟಿಜಿಜಡಿಜಟಿಛಿಜಗಾಗಿ ಅಶ್ರಮದ ಅಕ್ಕಿ, ಸಕ್ಕರೆ ಮತ್ತು ಅಡುಗೆ ಎಣ್ಣೆ ಕೊಡಬೇಕೆಂದು ಆದಿವಾಸಿ ಇಲಾಖೆಯ ಒಬ್ಬ ಆಜಠಿಣಣಥಿ ಆಡಿಜಛಿಣಠಡಿ ಕೇಳಿದಾಗ, ಸೈನಿ ಹೀಗೆ ನೇರವಾಗಿ ವಿದ್ಯಾಥರ್ಿಗಳನ್ನೇ ಕೇಳಿ ಎಂದು ಅಧಿಕಾರಿಗೆ ಪ್ರಶ್ನಿಸಿದರು.
ಕೆಲವು ಸಲ ಅಕೌಂಟ್ ನಿರ್ವಹಣೆಯ ಸಿಬ್ಬಂದಿಯ ಅನನುಭವದಿಂದಾಗಿ ಅಧಿಕಾರಿಗಳಿಂದ ತೊಂದರೆಗಳನ್ನು ಆಶ್ರಮ ಅನುಭವಿಸಬೇಕಾಯಿತು. ಇಂಥ ಸಂದರ್ಭಗಳಲ್ಲಿ ಸೈನಿ ಅಲಕ್ಷಿತ ಅಚಾತುರ್ಯಗಳ ವಿರುದ್ಧ ಅನೇಕ ದಿನಗಳ ಉಪವಾಸ ಮಾಡಿದ್ದಾರೆ. ಅವರು ಇಂಥ ಉಪವಾಸಗಳ ಕುರಿತು ಎಲ್ಲೂ ಬಹಿರಂಗಪಡಿಸಿಲ್ಲ, ಬಹಳಸ್ಟು ಸಲ ಇವು ಮೌನವ್ರತಗಳಾಗಿದ್ದವು ಎನ್ನುತ್ತಾರೆ ಸೈನಿಯವರ ಮೊದಲ ಬ್ಯಾಚ್ ವಿದ್ಯಾಥರ್ಿಗಳಲ್ಲೊಬ್ಬರು ಮತ್ತು ಈಗ ಚಿರಗಾಂವ್ ಶಾಲೆಯ ಅಧೀಕ್ಷಕರು ಆಗಿರುವ ಮಮತ ಬಿಸ್ತ.
ಆದಿವಾಸಿ ಇಲಾಖೆಯಿಂದ ಅನುದಾನ ಪಡಿಯುತ್ತಿದ್ದ ಆಶ್ರಮ ನಿರಂತರ ಆಡಿಟ್ಗಳಿಗೆ ಒಳಗಾಗುತ್ತಿದ್ದು ಅವುಗಳಲ್ಲಿ ಅನೇಕ ಆಡಿಟ್ಗಳು ಆಶ್ರಮದ ಸಿಬ್ಬಂದಿಗಳ ಶೋಷಣೆಯೊಂದಿಗೆ ಮುಕ್ತಾಯಗೊಂಡಿದೆ ಆರಂಭದ ದಿನಗಳಲ್ಲಿ ತುಂಬಾ ತೊಂದರೆ ನೀಡಲಾಗುತ್ತಿತ್ತು, ಆದರೆ ನಾವು ಪಾರದರ್ಶಕ ವ್ಯವಸ್ಥೆಯಿಂದ ಆರೋಪ ಮುಕ್ತರಾಗಿದ್ದೇವೆ ಎನ್ನುತ್ತಾರೆ ಆಶ್ರಮದ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಪುನೀತ್ ಶಮರ್ಾ.
ಶಾಲೆ ಮತ್ತು ಹಾಸ್ಟೆಲ್ಗಳಿಗೆ 13 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ಕಟ್ಟಡಗಳನ್ನು ನಿಮರ್ಿಸಲು ಆಧಿಕಾರಿಗಳು ಮುಂದಾದಾಗ ಸೈನಿ ನಿರಾಕರಿಸಿದರು. ಅವರು ತಮ್ಮ ಮೌಲ್ಯ ಮತ್ತು ಕಾರ್ಯ ವಿಧಾನಗಳಲ್ಲಿ ರಾಜಿಯಾಗಲು ಸಿದ್ಧರಿರಲಿಲ್ಲ. ಅದರಲ್ಲೂ ಮಣ್ಣಿನ ಮನೆಗಳು ಮತ್ತು ಕಚ್ಚಾ ಮೇಲ್ಠಾವಣೆಗಳು ಪ್ರಕೃತಿಗೆ ಹತ್ತಿರವಾದುದ್ದಾಗಿದ್ದವು. ಬಿಸಿ ರಕ್ತ ಮತ್ತು ಆಧುನಿಕ ದೃಷ್ಟಿಕೋನ ಹೊಂದಿರುವ ಅವರ ಹೊಸ ತಂಡದ ಸಲಹೆ ಮೇರೆಗೆ ಅವರು ಈಗ ತಮ್ಮ ಶಾಲೆ ಮತ್ತು ಹಾಸ್ಟಲ್ಗಳನ್ನು ಕಾಂಕ್ರಿಟ್ ಕಟ್ಟಡಗಳಾಗಿ ಪರಿವತರ್ಿಸಲು ಸಿದ್ಧರಾಗಿದ್ದಾರೆ.
1990 ರಲ್ಲಿ ಕೆಲವು ಭ್ರಷ್ಟ ಆಧಿಕಾರಿಗಳು ಆಶ್ರಮದ ಕಟ್ಟುನಿಟ್ಟಿನ ವ್ಯವಹಾರದಿಂದ ಅತೃಪ್ತರಾಗಿ, ಕೆಲವು ತಿಂಗಳುಗಳ ವರೆಗೆ ಸಿನಿಮೀಯ ರೀತಿಯಲ್ಲಿ ಅನುದಾನ ನೀಡುವುದನ್ನು ನಿಲ್ಲಿಸಿದರು. 6 ತಿಂಗಳುಗಳ ವರೆಗೆ ನಮ್ಮ ಸಿಬ್ಬಂದಿ ಸಂಬಳವಿಲ್ಲದೆ ಕಾರ್ಯ ನಿರ್ವಹಿಸಿದರು. ಯೂರೊಬ್ಬರೂ ದೂರು ಹೇಳಲಿಲ್ಲ. ಅಂಗಡಿಯವರು ಅಗತ್ಯ ವಸ್ತುಗಳನ್ನು ಕ್ರೆಡಿಟ್ ರೂಪದಲ್ಲಿ ನೀಡಿದರು ಎಂದು ಸ್ಮರಿಸುತ್ತಾರೆ ಶಮರ್ಾ. ಜಗ್ದಾಲ್ಪುರದ ಅಂಗಡಿಯವರು ನಮ್ಮ ಆಥರ್ಿಕ ಸ್ಥಿತಿ ಬಗ್ಗೆ ಗೊತ್ತಿದ್ದೂ ನಮಗೆ ದಿನಸಿ ಪದಾರ್ಥಗಳನ್ನ ನೀಡುವುದನ್ನು ಮುಂದುವರೆಸಿದರು. ಒಬ್ಬ ವ್ಯಾಪಾರಿ ಉದ್ಧಾತ ಕಾರಣಕ್ಕಾಗಿ ತನ್ನ ಹೆಂಡತಿಯ ಆಭರಣಗಳನ್ನು ಒತ್ತೆ ಇಡುವುದಾಗಿ ಹೇಳಿದ ಎಂದು ಕಣ್ತುಂಬಿಸಿಕೊಂಡು ಹೇಳುತ್ತಾರೆ ಸೈನಿ.
ತರುಣ ಜಿಲ್ಲಾಧಿಕಾರಿ ಸುದೀಪ್ ಬ್ಯಾನಜರ್ಿ ಅವರ ಗಮನಕ್ಕೆ ಆಶ್ರಮದ ವಿಷಯವನ್ನು ತಂದಾಗ ಆಶ್ರಮದ ಆಥರ್ಿಕ ಸಮಸ್ಯೆ ಬಗೆಹರಿಯಿತು. ಅವರು ತಾವೇ ಸ್ವಂತ ಆಶ್ರಮಕ್ಕೆ ಬೇಟಿ ನೀಡಿ ವಸ್ತುಸ್ಥಿತಿ ಪರಿಶೀಲಿಸಿ, ಸೈನಿ ಮತ್ತು ಆಶ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. 1991ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಸೈನಿಯವರ ಹೆಸರನ್ನು ಉಲ್ಲೇಖಿಸುವ ಪ್ರಕ್ರಿಯೆಯಲ್ಲಿ ಮುಂದಾಳತ್ವ ವಹಿಸಿದರು. 1992 ರಲ್ಲಿ ಸೈನಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದರು.
ಒಂದು ಕಾಲದಲ್ಲಿ ಹೊರಗಿನವರು ಯಾರೂ ಕೆಲಸ ಮಾಡಲು ಸಿದ್ಧರಿರದ ಪ್ರದೇಶವಾಗಿತ್ತು ಬಸ್ತಾರ್. ಅಲ್ಲದೇ ಕೆಲಸ ಮಾಡಲು ಅರ್ಹ ಸುಶಿಕ್ಷಿತ ಆದಿವಾಸಿಗಳ ಸಂಖ್ಯೆಯು ಕಡಿಮೆ ಇತ್ತು. ಆದರೆ ಆ ಸ್ಥಿತಿ ಈಗ ಬದಲಾಗಿದೆ. ಸಾವಿರಾರು ಸುಶಿಕ್ಷಿತ ಆದಿವಾಸಿ ಬಾಲಕಿಯರು ಬಸ್ತಾರ್ನ ಸಕರ್ಾರಿ ಮತ್ತು ಅರೆಸಕರ್ಾರಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವೃತ್ತಿಶಕ್ತಿಯ ಹೆಚ್ಚಿನ ಭಾಗವಾಗಿದ್ದಾರೆ, ಯಾರೊಬ್ಬರಲ್ಲಿ ಅಲ್ಲಿ ಕೆಲಸ ನಿರ್ವಹಿಸಲು ಸಿದ್ಧರಿರದಿದ್ದದ್ದು ಪರಿಸ್ಥಿತಿ ಬದಲಾಗೆದೆ. ಆಶ್ರಮದಲ್ಲಿ ತರಬೇತಿ ಪಡೆದ ಬಾಲಕಿಯರು ಬಸ್ತಾರ್ನ ಬದಲಾವಣೆಯ ಹರಿಕಾರರಾಗಿ ಹಿರಿಯರು ಹೆಮ್ಮೆ ಪಡುವಂತೆ ಮಾಡಿದ್ದಾರೆ.
ಸೈನಿ ಈಗ ಹೊಗಳಿಕೆಗಳಿಗೆ ತೃಪ್ತರಾಗದೇ ಅವರು ತಮ್ಮ ವಿದ್ಯಾಥರ್ಿಗಳು ವೃತ್ತಿಪರ ಪರೀಕ್ಷೆಗಳಲ್ಲೂ ಉನ್ನತ ತೇರ್ಗಡೆ ಪಡೆದು ಇಂಜಿನಿಯರ್, ವೈದ್ಯರು ಮತ್ತು ಆಡಳಿತಾಧಿಕಾರಿಗಳಾಬೇಕೆಂದು ಕನಸು ಕಾಣುತ್ತಾರೆ. ಆಧುನಿಕ ಕೆಲಸಗಳ ಆಗತ್ಯಕ್ಕೆ ತಕ್ಕಂತೆ ನಮ್ಮ ಶಿಕ್ಷಣ ಗುಣಮಟ್ಟದಲ್ಲೂ ಬದಲಾವಣೆ ತರಲು ಪ್ರಯತ್ನಿಸುತ್ತಿದ್ದೇವೆ.ಎನ್ನುತ್ತಾರೆ ಸೈನಿ. ನಮ್ಮ ಬಹಳಷ್ಟು ವಿದ್ಯಾಥರ್ಿಗಳು ಒಃಃಖ, ಇಟಿರಟಿಜಜಡಿಟಿರ ಪರೀಕ್ಷೆಗಳಿಗೆ ಸಿದ್ಧರಾಗುತ್ತಿದ್ದಾರೆ. ಮಾನವಿಕ ವಿಷಯಗಳಿಗೆ ಆಶ್ರಮಕ್ಕೆ ಸೇರುವ ವಿದ್ಯಾಥರ್ಿಗಳ ಸಂಖ್ಯೆ ತುಂಬ ವಿರಳ.
ಸೈನಿ ಕನಿಷ್ಟ 10 ವರ್ಷಗಳ ಕಾಲ ಬಸ್ತಾರ್ ನಲ್ಲಿ ಉಳಿದುಕೊಳ್ಳುವುದಾಗಿ ಭಾವೆಯವರಿಗೆ ಪ್ರಮಾಣ ಮಾಡಿದ್ದರು. ಆದರೆ 36 ವರ್ಷಗಳನ್ನು ಬಸ್ತಾರ್ನಲ್ಲಿ ಕಳೆದಿರುವ ಬಸ್ತಾರ್ನ 'ತೌಜಿ' ತಮ್ಮ ಕೆಲಸ ಇನ್ನು ಮುಗಿದಿಲ್ಲ ಎನ್ನುತ್ತಾರೆ ಮತ್ತು ಬಸ್ತಾರ್ ಕೂಡ ಅವರನ್ನ ಅಲ್ಲಿಂದ ಬಿಟ್ಟು ಕೊಡಲು ಸಿದ್ಧವಿಲ್ಲ.